ಮುಂಬೈ: ರಾಷ್ಟ್ರ ಮತ್ತು ಸಮಾಜಕ್ಕೆ ತಮ್ಮ ನಿಸ್ವಾರ್ಥ ಸೇವೆಗಾಗಿ ಪ್ರಧಾನಿ ಮೋದಿ ಅವರು ಮೊದಲ “ಲತಾ ದೀನನಾಥ್ ಮಂಗೇಶ್ಕರ್” ಪ್ರಶಸ್ತಿಯನ್ನು ಭಾನುವಾರ ಸ್ವೀಕರಿಸಿದ್ದಾರೆ.
ಲತಾ ದೀದಿ ಎಂದು ಪ್ರೀತಿಯಿಂದ ಕರೆಯಲ್ಪಡುವ ಪ್ರಸಿದ್ಧ ಗಾಯಕಿ ಲತಾ ಮಂಗೇಶ್ಕರ್ ಅವರ ಸ್ಮರಣಾರ್ಥ ಮತ್ತು ಗೌರವಾರ್ಥವಾಗಿ ಲತಾ ದೀನನಾಥ್ ಮಂಗೇಶ್ಕರ್ ಪ್ರಶಸ್ತಿಯನ್ನು ಫೆಬ್ರವರಿ 6 ರಂದು ಸ್ಥಾಪಿಸಲಾಯಿತು. ತಮ್ಮ 92ನೇ ವಯಸ್ಸಿನಲ್ಲಿ ನಿಧನರಾದ ಗಾನಕೋಗಿಲೆಯ ಹೆಸರಿನ ಮೊದಲ ಪ್ರಶಸ್ತಿಯನ್ನು ಪ್ರಧಾನಿ ಮೋದಿ ಸ್ವೀಕರಿಸಿದರು.
80ನೇ ವಾರ್ಷಿಕ ಮಾಸ್ಟರ್ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಮೋದಿ, ಈ ಪ್ರಶಸ್ತಿಯನ್ನು ದೇಶದ ಎಲ್ಲಾ ನಾಗರಿಕರಿಗೆ ಅರ್ಪಿಸುತ್ತೇನೆ ಎಂದು ಹೇಳಿದರು. ಸಂಗೀತವು ಮಾತೃತ್ವ ಮತ್ತು ಪ್ರೀತಿಯ ಭಾವನೆಯನ್ನು ನೀಡುತ್ತದೆ. ಸಂಗೀತವು ನಿಮ್ಮನ್ನು ದೇಶಭಕ್ತಿ ಮತ್ತು ಕರ್ತವ್ಯದ ಪರಾಕಾಷ್ಠೆಗೆ ಕೊಂಡೊಯ್ಯಬಹುದು. ಈ ಸಂಗೀತದ ಶಕ್ತಿಯನ್ನು, ಲತಾ ದೀದಿಯ ರೂಪದಲ್ಲಿ ನೋಡಿರುವುದು ನಾವೆಲ್ಲರೂ ಅದೃಷ್ಟವಂತರು ಎಂದರು.
ಜಮ್ಮು ಕಾಶ್ಮೀರ ಪ್ರವಾಸದಲ್ಲಿ ಸುಮಾರು ₹20,000 ಕೋಟಿ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡಿ ನೇರವಾಗಿ ಮುಂಬೈಗೆ ಆಗಮಿಸಿ ಮಾತನಾಡಿದ ಮೋದಿ, ಸಂಗೀತದಂತಹ ವಿಷಯದ ಬಗ್ಗೆ ಅವರಿಗೆ ಜ್ಞಾನವಿಲ್ಲ ಎಂದು ತಿಳಿಸಿದ ಮೋದಿ, ಸಾಂಸ್ಕೃತಿಕ ತಿಳುವಳಿಕೆಯಿಂದ, ಸಂಗೀತವೂ ಒಂದು ಸಾಧನ ಮತ್ತು ಭಾವನೆ ಎಂದು ನಾನು ಭಾವಿಸುತ್ತೇನೆ. ಲತಾ ದೀದಿ ಅವರು ದಶಕಗಳ ಕಾಲ ಭಾರತೀಯ ಚಲನಚಿತ್ರ ಪ್ರಪಂಚದ ಬೆಳವಣಿಗೆಯನ್ನು ಹತ್ತಿರದಿಂದ ನೋಡಿದ್ದಾರೆ. ಚಲನಚಿತ್ರಗಳ ಆಚೆಗೆ ಅವರು ಯಾವಾಗಲೂ ಭಾರತದ ಬೆಳವಣಿಗೆಯ ಬಗ್ಗೆ ಉತ್ಸುಕರಾಗಿದ್ದರು. ಅವರು ಎಂದಿಗೂ ಬಲಿಷ್ಠ ಮತ್ತು ಅಭಿವೃದ್ಧಿ ಹೊಂದಿದ ಭಾರತವನ್ನು ನೋಡಲು ಬಯಸುತ್ತಿದ್ದರು ಎಂದು ಮೋದಿ ತಿಳಿಸಿದರು.
ಇದನ್ನೂ ಓದಿ: ಪಾಟಿದಾರ್ ನಾಯಕನ ʼಹಾರ್ದಿಕʼ ಸ್ವಾಗತಕ್ಕೆ ಸಜ್ಜಾದ BJP? : ಮೋದಿ ನಾಡಿನಲ್ಲಿ ಚುನಾವಣಾ ವರ್ಷದ ಅಚ್ಚರಿ