ಮುಂಬೈ, ಮಹಾರಾಷ್ಟ್ರ: ರಿಲಯನ್ಸ್ ಫೌಂಡೇಷನ್ (Reliance Foundation) ಬೆಂಬಲ ಇರುವಂಥ ಎನ್‌ಜಿಒಗಳ 3,400 ಅಶಕ್ತ ಮಕ್ಕಳು ಮತ್ತು ಹಿರಿಯ ನಾಗರಿಕರ ಪಾಲಿಗೆ ಬಾಂಧವ್ಯ ಹಾಗೂ ನಗುವನ್ನು ಬೆಸೆಯುವಂಥ ಸಮಯ ಅದಾಗಿತ್ತು. ಅಂತಾರಾಷ್ಟ್ರೀಯ ಬ್ರಾಡ್‌ವೇ ಸಂಗೀತ ‘ದಿ ಸೌಂಡ್ ಆಫ್ ಮ್ಯೂಸಿಕ್’ನ (The Sound of Music) ವಿಶೇಷ ಪ್ರದರ್ಶನಗಳನ್ನು ಅವರು ಆನಂದಿಸಿದರು. ನೀತಾ ಮುಕೇಶ್ ಅಂಬಾನಿ ಸಾಂಸ್ಕೃತಿಕ ಕೇಂದ್ರದಲ್ಲಿ (Nita Mukesh Ambani cultural Center – NMACC) ಅಶಕ್ತರು ಹಾಗೂ ಹಿರಿಯ ನಾಗರಿಕರಿಗಾಗಿಯೇ ನೀತಾ ಅಂಬಾನಿ ಅವರು ಕಾರ್ಯಕ್ರಮವನ್ನು ಆಯೋಜಿಸಿದ್ದರು.
ವಿಶೇಷ ಚೇತನ ಮಕ್ಕಳು ಒಳಗೊಂಡಂತೆ ಮುಂಬೈನ ವಿವಿಧ ಸ್ಥಳಗಳಿಂದ 3,400 ಮಕ್ಕಳು ಮತ್ತು ಹಿರಿಯ ನಾಗರಿಕರಿಗಾಗಿ ವಾರಾಂತ್ಯದಲ್ಲಿ ನಡೆದ ಈ ಎರಡು ವಿಶೇಷ ಪ್ರದರ್ಶನಗಳನ್ನು ರಿಲಯನ್ಸ್ ಫೌಂಡೇಷನ್ ಆಯೋಜಿಸಿತು. ಈ ಉಪಕ್ರಮವನ್ನು 18 ಎನ್‌ಜಿಒಗಳು ಬೆಂಬಲಿಸಿದ್ದು, ಅದರ (Education and Sports for All) ಶಿಕ್ಷಣ ಮತ್ತು ಎಲ್ಲರಿಗೂ ಕ್ರೀಡೆ (ಇಎಸ್‌ಎ) ಕಾರ್ಯಕ್ರಮದಿಂದ ಬೆಂಬಲಿತವಾಗಿತ್ತು. ಪ್ರತಿಯೊಬ್ಬರೂ ಆರಾಮದಾಯಕ ಮತ್ತು ಈ ಮಾಂತ್ರಿಕ ಅನುಭವವನ್ನು ಪಡೆದರು ಎಂಬುದನ್ನು ರಿಲಯನ್ಸ್ ಉದ್ಯೋಗಿ ಸ್ವಯಂಸೇವಕರು ಖಚಿತಪಡಿಸಿಕೊಂಡರು. ತನ್ನ ಇಎಸ್ಎ ಕಾರ್ಯಕ್ರಮ ಹಾಗೂ ರಿಲಯನ್ಸ್ ಫೌಂಡೇಷನ್ ಹಲವಾರು ವರ್ಷಗಳಿಂದ ವಿವಿಧ ಶಿಕ್ಷಣ ಮತ್ತು ಕ್ರೀಡಾ ಉಪಕ್ರಮಗಳ ಮೂಲಕ ಮಕ್ಕಳ ಆಕಾಂಕ್ಷೆಗಳನ್ನು ಬೆಂಬಲಿಸಿದೆ. ಈ ವಿಶೇಷ ಪ್ರದರ್ಶನಗಳು ಎನ್‌ಜಿಒಗಳ ಸಹಯೋಗದೊಂದಿಗೆ ಮಕ್ಕಳನ್ನು ಪ್ರೇರೇಪಿಸುವ ರಿಲಯನ್ಸ್ ಫೌಂಡೇಷನ್‌ನ ನಿರಂತರ ಪ್ರಯತ್ನಗಳ ಕಡೆಗೆ ಮತ್ತೊಂದು ಹೆಜ್ಜೆಯಾಗಿದೆ.
“ಭಾರತ ಮತ್ತು ವಿಶ್ವದ ಅತ್ಯುತ್ತಮವಾದದ್ದನ್ನು ಪ್ರದರ್ಶಿಸುವ ನೀತಾ ಮುಕೇಶ್ ಅಂಬಾನಿ ಸಾಂಸ್ಕೃತಿಕ ಕೇಂದ್ರದ ದೃಷ್ಟಿಕೋನವನ್ನು ಸೌಂಡ್ ಆಫ್ ಮ್ಯೂಸಿಕ್‌ಗೆ ಸಿಕ್ಕ ಅಗಾಧ ಪ್ರತಿಕ್ರಿಯೆಯು ಮತ್ತೊಮ್ಮೆ ಖಾತ್ರಿ ಪಡಿಸಿದೆ. ದೇಶಾದ್ಯಂತದ ಕುಟುಂಬಗಳು ಒಗ್ಗೂಡಿ ಈ ಮಾಂತ್ರಿಕ ಅನುಭವವನ್ನು ಆನಂದಿಸುವುದನ್ನು ನೋಡುವುದು ನಿಜವಾಗಿಯೂ ಹೃದಯವನ್ನು ಬೆಚ್ಚಗಾಗಿಸಿದೆ. 3,400 ಆಶಕ್ತ ಮಕ್ಕಳು ಮತ್ತು ಹಿರಿಯ ನಾಗರಿಕರಿಗೆ ಎರಡು ಪ್ರದರ್ಶನಗಳು ಅರ್ಪಿಸಿದ್ದಕ್ಕಾಗಿ ನಾವು ವಿನಮ್ರರಾಗಿದ್ದೇವೆ. ಸಾಂಪ್ರದಾಯಿಕ ಸಂಗೀತದ ಮಹತ್ವಪೂರ್ಣ ಪ್ರದರ್ಶನವನ್ನು ಈ ವಿಶೇಷ ಪ್ರೇಕ್ಷಕರೊಂದಿಗೆ ಹಂಚಿಕೊಂಡಿದ್ದಕ್ಕಿಂತ ಹೆಚ್ಚಿನ ಉತ್ತೇಜಕ ಸಂಗತಿ ಇನ್ನೊಂದಿರಲಿಲ್ಲ. ನಮ್ಮ ಸಂಸ್ಥೆಯ ಶಿಕ್ಷಣ ಮತ್ತು ಎಲ್ಲರಿಗೂ ಕ್ರೀಡೆ ಕಾರ್ಯಕ್ರಮ ಮುಂದುವರಿಸಲು, ಕಲೆಯು ಎಲ್ಲರನ್ನೂ ತಲುಪುವುದಂತೆ ಮಾಡಲು ನಾವು ಬದ್ಧರಾಗಿದ್ದೇವೆ,” ಎಂದು ರಿಲಯನ್ಸ್ ಫೌಂಡೇಷನ್‌ನ ಸಂಸ್ಥಾಪಕಿ ಮತ್ತು ಅಧ್ಯಕ್ಷೆ ನೀತಾ ಅಂಬಾನಿ ಹೇಳಿದ್ದಾರೆ.
‘ದಿ ಸೌಂಡ್ ಆಫ್ ಮ್ಯೂಸಿಕ್’ ಈ ವರ್ಷ ಮೇ ತಿಂಗಳಲ್ಲಿ ದಿ ಗ್ರ್ಯಾಂಡ್ ಥಿಯೇಟರ್‌ನಲ್ಲಿ ಐತಿಹಾಸಿಕ ಎಂಟು ವಾರಗಳ ಪ್ರದರ್ಶನದೊಂದಿಗೆ ತನ್ನ ಪದಾರ್ಪಣೆ ಮಾಡಿತು – ಇದು ಏಷ್ಯಾದಲ್ಲೇ ಅತ್ಯಂತ ದೀರ್ಘವಾದದ್ದು ಮತ್ತು ದೇಶದಲ್ಲಿ ಮೊದಲ ಬಾರಿಗೆ ಇಂಥದ್ದೊಂದು ದಾಖಲೆ ಬರೆದಿದೆ.
ವಾನ್ ಟ್ರ್ಯಾಪ್ ಕುಟುಂಬದಲ್ಲಿ ತೆರೆದುಕೊಳ್ಳುವ ನಾಟಕಕ್ಕೆ ಜೀವ ತುಂಬುವ ಅದ್ಭುತ ಪ್ರದರ್ಶನಗಳಿಂದ ರೋಮಾಂಚನಗೊಂಡ ಮಕ್ಕಳು ಮತ್ತು ಹಿರಿಯ ನಾಗರಿಕರು ‘ಮೈ ಫೇವರಿಟ್ ಥಿಂಗ್ಸ್’ ಮತ್ತು ‘ಡು-ರೀ-ಮಿ’ನಂತಹ ಹಾಡುಗಳಿಗೆ ಹುರಿದುಂಬಿಸಿದರು – ಲೈವ್ ಜೊತೆಗೆ ಬೀಟ್ ಅನ್ನು ಹೊಂದಿಸಿದ ಆರ್ಕೆಸ್ಟ್ರಾ ಸಂಗೀತದ ನಂತರ, ವಾನ್ ಟ್ರ್ಯಾಪ್ ಕುಟುಂಬವನ್ನು ನಿರ್ವಹಿಸುವ ನಟರನ್ನು ಭೇಟಿಯಾದಾಗ ವಿಶೇಷ ಪ್ರೇಕ್ಷಕರು ತುಂಬಾ ಸಂತೋಷಪಟ್ಟರು.
ನೀತಾ ಮುಕೇಶ್ ಅಂಬಾನಿ ಸಾಂಸ್ಕೃತಿಕ ಕೇಂದ್ರವು ಸಮುದಾಯ ಪೋಷಣೆ ಕಾರ್ಯಕ್ರಮಗಳಿಗೆ ಬದ್ಧವಾಗಿದ್ದು, ಇದರಲ್ಲಿ ಶಾಲೆ ಮತ್ತು ಕಾಲೇಜು ಕಾರ್ಯಕ್ರಮಗಳು ಹಾಗೂ ಸ್ಪರ್ಧೆಗಳು, ವಯಸ್ಕರಿಗೆ ಕಲಾ ಸಾಕ್ಷರತಾ ಕಾರ್ಯಕ್ರಮಗಳು ಮತ್ತು ಹೆಚ್ಚಿನವು ಸೇರಿವೆ. ಕೆಲವು ತಿಂಗಳ ಹಿಂದೆ ಪ್ರಾರಂಭವಾದಾಗಿನಿಂದ ನೀತಾ ಮುಕೇಶ್ ಅಂಬಾನಿ ಸಾಂಸ್ಕೃತಿಕ ಕೇಂದ್ರ ಮಕ್ಕಳು, ವಿದ್ಯಾರ್ಥಿಗಳು, ಹಿರಿಯ ನಾಗರಿಕರು ಮತ್ತು ವಿಶೇಷಚೇತನರಿಗೆ ದಿ ಸೌಂಡ್ ಆಫ್ ಮ್ಯೂಸಿಕ್, ಸಂಗಮ್ ಮತ್ತು ಇಂಡಿಯಾ ಇನ್ ಫ್ಯಾಷನ್ ನಂಥ ಪ್ರದರ್ಶನಗಳನ್ನು ಆನಂದಿಸಲು ಉಚಿತ ಪ್ರವೇಶ ಒದಗಿಸಿದೆ.
ಈ ಸುದ್ದಿಯನ್ನೂ ಓದಿ: NMACC: ನೀತಾ ಮುಕೇಶ್ ಅಂಬಾನಿ ಸಾಂಸ್ಕೃತಿಕ ಕೇಂದ್ರದಲ್ಲಿ ಸೊಗಸಾದ ಬನಾರಸಿ ನೇಯ್ಗೆ ಸ್ವದೇಶ್ ಪ್ರದರ್ಶನ
2010 ರಿಂದ, ರಿಲಯನ್ಸ್ ಫೌಂಡೇಷನ್‌ನ ಶಿಕ್ಷಣ ಮತ್ತು ಎಲ್ಲರಿಗೂ ಕ್ರೀಡೆ (ESA) ಕಾರ್ಯಕ್ರಮವು ಮಕ್ಕಳ ಸಮಗ್ರ ಮತ್ತು ಅಂತರ್ಗತ ಅಭಿವೃದ್ಧಿಯ ಕಡೆಗೆ ನಿರಂತರ ಉಪಕ್ರಮಗಳನ್ನು ಒದಗಿಸಿದೆ, ಅವರ ಆಕಾಂಕ್ಷೆಗಳನ್ನು ರೂಪಿಸಲು ಮತ್ತು ಅವರ ಸಾಮರ್ಥ್ಯವನ್ನು ಸಾಧಿಸಲು ಅನುವು ಮಾಡಿಕೊಡುತ್ತದೆ. ಇಎಸ್‌ಎ ಕಾರ್ಯಕ್ರಮದ ಭಾಗವಾಗಿ ಪ್ರತಿ ವರ್ಷವೂ ರಿಲಯನ್ಸ್ ಫೌಂಡೇಷನ್ ಐಪಿಎಲ್ ಪಂದ್ಯವನ್ನು ವೀಕ್ಷಿಸುವುದು, ಧೀರೂಭಾಯಿ ಅಂಬಾನಿ ಸ್ಕ್ವೇರ್ ಫೌಂಟೇನ್ ಶೋ ಮತ್ತು ಜಿಯೋ ವಂಡರ್‌ಲ್ಯಾಂಡ್‌ನಲ್ಲಿ ಒಂದು ದಿನ ಕಳೆಯುವುದು ಸೇರಿದಂತೆ ವಿವಿಧ ಕಾರ್ಯಕ್ರಮಗಳು ಮತ್ತು ಸಂತೋಷ ಮತ್ತು ಸಂಭ್ರಮದ ಅನುಭವಗಳಿಗಾಗಿ ಅಶಕ್ತ ಮಕ್ಕಳಿಗೆ ಆತಿಥ್ಯ ವಹಿಸುತ್ತದೆ.
ಕಲೆ, ಸಂಸ್ಕೃತಿ ಮತ್ತು ಪರಂಪರೆಯ ಮೇಲೆ ಗಮನ ಕೇಂದ್ರೀಕರಿಸುವ ಮೂಲಕ ರಿಲಯನ್ಸ್ ಫೌಂಡೇಷನ್ ಭವಿಷ್ಯದ ಭಾರತದ ಸಾಂಸ್ಕೃತಿಕ ಪರಂಪರೆಯನ್ನು ಸಂರಕ್ಷಿಸಲು ಮತ್ತು ಅಭಿವೃದ್ಧಿಪಡಿಸಲು ಯುವ ಪೀಳಿಗೆಯ ಭಾರತೀಯ ಕಲಾವಿದರನ್ನು ಪ್ರೇರೇಪಿಸಲು ಬದ್ಧವಾಗಿದೆ.
ದೇಶದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.