Site icon Vistara News

Narendra Modi : ಕಲಾವಿದನ ಕುಂಚ, ಕೃತಕ ಬುದ್ಧಿಮತ್ತೆ ಸೇರಿಕೊಂಡರೆ ಪ್ರಕೃತಿಯಲ್ಲೇ ಕಾಣುತ್ತದೆ ಮೋದಿ ಮುಖ

Narendra modi image

ನವ ದೆಹಲಿ: ಸೃಜನಶೀಲತೆಯ ಎಲ್ಲೆ ಮೀರುವುದಕ್ಕೆ ಕೃತಕ ಬುದ್ಧಿಮತ್ತೆ ನೆರವಾಗುತ್ತಿದೆ. ಅಚ್ಚರಿ ಮೂಡಿಸುವಂಥ ಚಿತ್ರಗಳನ್ನು ರಚಿಸಲು ಕಲಾವಿದರು ವಿಭಿನ್ನ ಎಐ-ಚಾಲಿತ ಸಾಧನಗಳನ್ನು ಹೆಚ್ಚಾಗಿ ಬಳಸಲು ಆರಂಭಿಸಿದ್ದಾರೆ. ಮಾಧವ್ ಕೊಹ್ಲಿ ಅಂತಹ ಕಲಾವಿದರಲ್ಲಿ ಒಬ್ಬರು, ಅವರು ಆಗಾಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಮೋಡಿಮಾಡುವ ದೃಶ್ಯಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಇತ್ತೀಚಿನ ಸೃಷ್ಟಿಗಳಲ್ಲಿ ಒಂದು ದ್ವೀಪದ ಚಿತ್ರದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ (Narendra Modi) ಅವರ ಮುಖವನ್ನು ತೋರಿಸಲಾಗಿದೆ. ಆದಾಗ್ಯೂ, ತಂತ್ರಜ್ಞಾನವನ್ನು ತಮ್ಮ ಕಲಾತ್ಮಕ ಅಭಿವ್ಯಕ್ತಿಯೊಂದಿಗೆ ಹೇಗೆ ಬೆರೆಸಿದರು ಮತ್ತು ನರೇಂದ್ರ ಮೋದಿಯವರ ಮುಖದ ರೂಪರೇಖೆಯನ್ನು ರೂಪಿಸುವ ರೀತಿಯಲ್ಲಿ ಚಿತ್ರವನ್ನು ಹೇಗೆ ರಚಿಸಿದರು ಎಂಬುದು ವಿಸ್ಮಯವೇ ಸರಿ.

ಕೊಹ್ಲಿ ತಮ್ಮ ಸೃಷ್ಟಿಯನ್ನು ಎಕ್ಸ್​ನಲ್ಲಿ ಹಂಚಿಕೊಂಡಿದ್ದು, ನೀವು ಅವರನ್ನು ಸಹ ನೋಡುತ್ತೀರಾ? ಎಂಬ ಒಂದು ಸಾಲಿನ ಶೀರ್ಷಿಕೆಯೊಂದಿಗೆ ಹಂಚಿಕೊಂಡಿದ್ದಾರೆ. ಚಿತ್ರವು ಅಸ್ತಮಿಸುವ ಸೂರ್ಯನ ಕಿರಣಗಳು ಸಾಗಿ ಬರುವ ಆಕಾಶದ ಹಿನ್ನೆಲೆಯಲ್ಲಿ ಸಣ್ಣ ಮತ್ತು ಸುಂದರ ದ್ವೀಪವನ್ನು ತೋರಿಸುತ್ತದೆ. ಮೊದಲ ನೋಟದಲ್ಲಿ, ನೋಡುಗನಿಗೆ ಪ್ರಧಾನಿಯ ಮುಖವನ್ನು ಕಾಣದಿರಬಹುದು. ಆಧರೆ ಸೂಕ್ಷ್ಮವಾಗಿ ನೋಡಿದರೆ ಮುಖ ಕಾಣುವುದು ಸ್ಪಷ್ಟ.

ಇದನ್ನೂ ಓದಿ : Women’s Reservation Bill : ಮಹಿಳಾ ಮೀಸಲಾತಿ ವಿರೋಧಿಸಿದವರಿಗೆ ಭೀತಿ ಶುರುವಾಗಿದೆ; ಮೋದಿ ಲೇವಡಿ

ಈ ಟ್ವೀಟ್ ಅನ್ನು ಕೆಲವು ಗಂಟೆಗಳ ಹಿಂದೆ ಹಂಚಿಕೊಳ್ಳಲಾಗಿದೆ. ಪೋಸ್ಟ್ ಮಾಡಿದಾಗಿನಿಂದ ಅದು 2,500 ವೀಕ್ಷಣೆಗಳನ್ನು ಕಂಡಿದೆ. ಎಕ್ಸ್ ಬಳಕೆದಾರರೊಬ್ಬರು ಪೋಸ್ಟ್​ಗೆ ಪ್ರತಿಕ್ರಿಯಿಸುವಾಗ ಇದು ಅದ್ಭುತ ಎಂದು ಬರೆದಿದ್ದಾರೆ. ಚಿತ್ರವನ್ನು ರಚಿಸಲು ಯಾವ ಅಪ್ಲಿಕೇಶನ್ ಅನ್ನು ಬಳಸಲಾಗಿದೆ ಎಂದು ಇನ್ನೊಬ್ಬ ವ್ಯಕ್ತಿ ಕೇಳಿದ್ದಾರೆ. ಇದಕ್ಕೆ ಉತ್ತರಿಸಿದ ಕೊಹ್ಲಿ, Stable diffusion ಎಂದು ಉತ್ತರಿಸಿದ್ದಾರೆ.

ಇದು ಕೃತಕ ಬುದ್ಧಿಮತ್ತೆ ಪ್ಲಾಟ್ ಫಾರ್ಮ್ ಆಗಿದ್ದು, ಬಳಕೆದಾರರು ವಿವರಣಾತ್ಮಕ ಚಿತ್ರಗಳನ್ನು ರಚಿಸಬಹುದು. ಪ್ಲಾಟ್​ಫಾರ್ಮ್​​ನ ಅಧಿಕೃತ ವೆಬ್ಸೈಟ್ ಪ್ರಕಾರ, ಬಳಕೆದಾರರು ಎಐ ಚಿತ್ರಗಳನ್ನು “ಸಣ್ಣ ಪ್ರಾಂಪ್ಟ್​ಗಳೊಂದಿಗೆ ರಚಿಸಬಹುದು. ಚಿತ್ರಗಳೊಳಗೆ ಪದಗಳನ್ನು ರಚಿಸಬಹುದು.

Exit mobile version