Site icon Vistara News

ಖ್ಯಾತ ಚಿತ್ರಸಾಹಿತಿ ಪುರುಷೋತ್ತಮ ಕಣಗಾಲ್ ನಿಧನ

ಪುರುಷೋತ್ತಮ ಕಣಗಾಲ್

ಬೆಂಗಳೂರು: ಖ್ಯಾತ ಚಿತ್ರಸಾಹಿತಿ ಪುರುಷೋತ್ತಮ ಕಣಗಾಲ್ (69) ಜೂನ್‌ 8ರಂದು ಅಮೆರಿಕದ ತಮ್ಮ ಮಗಳ ಮನೆಯಲ್ಲಿ ನಿಧನರಾಗಿದ್ದಾರೆ. ಅವರಿಗೆ ಒಬ್ಬ ಮಗ ಹಾಗೂ ಒಬ್ಬ ಮಗಳಿದ್ದಾರೆ.

ಪುರುಷೋತ್ತಮ ಕಣಗಾಲ್ ಅವರು ಹೆಸರಾಂತ ಸಾಹಿತಿ ಕಣಗಾಲ್ ಪ್ರಭಾಕರ ಶಾಸ್ತ್ರಿ ಅವರ ಪುತ್ರ. ಖ್ಯಾತ ನಿರ್ದೇಶಕ ಪುಟ್ಟಣ್ಣ ಕಣಗಾಲ್ ಅವರ ಅಣ್ಣನ ಮಗ.‌ ಪುರುಷೋತ್ತಮ ಕಣಗಾಲ್ ಅವರು ಕನ್ನಡದ ಸಾಕಷ್ಟು ಚಿತ್ರಗಳಿಗೆ ಗೀತರಚನೆ ಮಾಡಿದ್ದಾರೆ. ಕಣಗಾಲ್ ನೃತ್ಯಾಲಯ ಹಾಗೂ ಪುಟ್ಟಣ್ಣ ಕಣಗಾಲ್ ಟ್ರಸ್ಟ್ ನ ಮುಖ್ಯಸ್ಥರಾಗಿ ಇವರು ಕಾರ್ಯ ನಿರ್ವಹಿಸಿದ್ದರು. ಮಗಳ ಜೊತೆ ನೆಲೆಸಿದ್ದ ಪುರುಷೋತ್ತಮ ಕಣಗಾಲ್ ಅವರ ಅಂತ್ಯ ಸಂಸ್ಕಾರ ಅಮೆರಿಕದಲ್ಲಿಯೇ ನಡೆಸಲು ಕುಟುಂಬ ವರ್ಗ ನಿರ್ಧರಿಸಿದೆ.

ಇದನ್ನೂ ಓದಿ| ಕಿರಣ್ ಮಜುಂದಾರ್ ಶಾ ತಾಯಿ ಯಾಮಿನಿ ಮಜುಂದಾರ್ ನಿಧನ

Exit mobile version