Site icon Vistara News

JSS Hospital : ಅಯೋಧ್ಯಾ ಸಂಭ್ರಮೋತ್ಸವ; ಜೆಎಸ್‌ಎಸ್‌ ಆಸ್ಪತ್ರೆಯಲ್ಲಿ ಗರ್ಭಿಣಿಯರಿಗೆ ಫ್ರೀ ಟ್ರೀಟ್ಮೆಂಟ್‌

Ram Mandir Consecration Free treatment for pregnant women at JSS Hospital

ವಿಜಯಪುರ: ಇಡೀ ದೇಶವೇ ರಾಮನ ಜಪ ಮಾಡುತ್ತಿದೆ. ಅಯೋಧ್ಯಾ ಸಂಭ್ರಮೋತ್ಸವ (Ram Mandir Consecration) ರಾಜ್ಯದಲ್ಲೂ ಮೊಳಗಿದೆ. ಸದ್ಯ ವಿಜಯಪುರದ ಜೆಎಸ್‌ಎಸ್‌ ಆಸ್ಪತ್ರೆಯು (JSS Hospital) ವಿನೂತನವಾಗಿ ಈ ಸಂಭ್ರಮವನ್ನು ಆಚರಿಸಲಾಗುತ್ತಿದೆ. ಹೆರಿಗೆಗಾಗಿ ದಾಖಲಾಗುವ ಗರ್ಭಿಣಿಯರಿಗೆ ಉಚಿತವಾಗಿ ಹೆರಿಗೆ (Free Delivery) ಮಾಡಿಸಲಾಗುತ್ತಿದೆ. ಇದಕ್ಕಾಗಿ ಯಾವುದೇ ಚಿಕಿತ್ಸಾ ವೆಚ್ಚ ಇರುವುದಿಲ್ಲ.

ಅಯೋಧ್ಯಾ ರಾಮಮಂದಿರ ಪ್ರಾಣ ಪ್ರತಿಷ್ಠಾಪನಾ ಹಿನ್ನಲೆಯಲ್ಲಿ ವಿಜಯಪುರದ ಜೆಎಸ್‌ಎಸ್‌ ಆಸ್ಪತ್ರೆಯಲ್ಲಿ ಅಯೋಧ್ಯಾ ಸಂಭ್ರಮೋತ್ಸವ ಜೋರಾಗಿದೆ. ಗರ್ಭಿಣಿರಿಗೆ ಐದು ದಿನ ಸಂಪೂರ್ಣ ಉಚಿತ ಚಿಕಿತ್ಸೆ ನೀಡಲಾಗುತ್ತಿದೆ. ಗಂಡು ಹುಟ್ಟಿದರೆ ರಾಮನೆಂದು ಹೆಣ್ಣು ಹುಟ್ಟಿದರೆ ಸೀತೆ ಎಂಬ ಭಾವನೆಯಿಂದ ಆಸ್ಪತ್ರೆಯು ಸಮಾಜಸೇವೆ ಕಾರ್ಯಕ್ಕೆ ಮುಂದಾಗಿದೆ.

ಅಯೋಧ್ಯಾ ರಾಮಮಂದಿರ ಉದ್ಘಾಟನೆ ಮತ್ತು ಪ್ರಾಣಪ್ರತಿಷ್ಠಾಪನೆ ದಿನ ಹತ್ತಿರವಾಗುತ್ತಿದ್ದಂತೆ ದೇಶಾದ್ಯಂತ ಕೋಟಿ ಕೋಟಿ ಭಕ್ತರಲ್ಲಿ ರಾಮನಾಮ ಮೂಡುತ್ತಿದೆ ಎನ್ನಬಹುದು. ಈ ಹಿನ್ನೆಲೆಯಲ್ಲಿ ನಗರ ಶಾಸಕ ಬಸನಗೌಡ ಪಾಟೀಲ್‌ಯತ್ನಾಳರ ವಿಜಯಪುರದ ಜೆಎಸ್‌ಎಸ್ ಆಸ್ಪತ್ರೆಯಲ್ಲಿ ಅಯೋಧ್ಯಾ ಸಂಭ್ರಮೋತ್ಸವವನ್ನ ಐದು ದಿನಗಳ ಕಾಲ ಆಚರಿಸಲಾಗುತ್ತಿದೆ.

ಇದನ್ನೂ ಓದಿ:ವಾಗ್ದೇವಿ ವಿಲಾಸ ಶಾಲೆಯಲ್ಲಿ ಜ. 22ರಂದು ಸಂಪೂರ್ಣ ರಾಮಾಯಣ ಪ್ರದರ್ಶನ, ಶ್ರೀರಾಮ ಜಯಂ ಪುಸ್ತಕ ಬಿಡುಗಡೆ

ಜ.18ರಿಂದ ರಾಮ ಮಂದಿರ ಉದ್ಘಾಟನೆವರೆಗೆ ಅಂದರೆ 22ರವರೆಗೆ ಗರ್ಭಿಣಿಯರಿಗೆ ಫ್ರೀ ಟ್ರೀಟ್ಮೆಂಟ್‌ ಹಾಗೂ ಉಚಿತವಾಗಿಯೇ ಹೆರಿಗೆ ಮಾಡಿಸಲಾಗುತ್ತಿದೆ. ಓಪಿಡಿ, ಐಪಿಡಿ, ನಾರ್ಮಲ್ ಡೆಲಿವರಿ, ಸಿಸೇರಿಯನ್ , ಮೆಡಿಕಲ್, ಲ್ಯಾಬ್, ವೈದ್ಯಕೀಯ ತಪಾಸಣೆ, ಸ್ಕ್ಯಾನಿಂಗ್ ಎಲ್ಲವೂ ಫ್ರೀ ಇರಲಿದೆ.

ಜ್ಞಾನಯೋಗಿ ಶ್ರೀ ಸಿದ್ಧೇಶ್ವರ ಮಲ್ಟಿಸ್ಪೆಷಾಲಿಟಿ ಹಾಸ್ಪಿಟಲ್‌ನಲ್ಲಿ (JSS Hospital) ಗರ್ಭಿಣಿಯರಿಗೆ ಮಾತ್ರ ಈ ಅವಕಾಶ ಕಲ್ಪಿಸಲಾಗಿದೆ. ಖಾಸಗಿ ಆಸ್ಪತ್ರೆಯಲ್ಲಿ ಹೆರಿಗೆ ಮಾಡಿಸಿಕೊಂಡರೆ ಲಕ್ಷಾಂತರ ರೂಪಾಯಿ ಖರ್ಚಾಗುವ ಈ ಸಮಯದಲ್ಲಿ ಜೆಎಸ್‌ಎಸ್ ಆಸ್ಪತ್ರೆಯಲ್ಲಿ ಸಂಪೂರ್ಣ ಉಚಿತವಾಗಿ ಹೆರಿಗೆ ಮಾಡಿಸಲಾಗುತ್ತದೆ. ಇದಕ್ಕೆ ಯಾವುದೇ ಚಿಕಿತ್ಸಾ ವೆಚ್ಚ ಇರುವುದಿಲ್ಲ.

ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಅಧ್ಯಕ್ಷತೆಯಲ್ಲಿರುವ ಜೆಎಸ್‌ಎಸ್ ಆಸ್ಪತ್ರೆ ಇದಾಗಿದ್ದು, ತಮ್ಮ ಆಸ್ಪತ್ರೆಯಲ್ಲಿ ಐದು ದಿನಗಳ ಕಾಲ ಉಚಿತ ಚಿಕಿತ್ಸೆ ಎಂದು ಘೊಷಿಸಿದ್ದಾರೆ.

ಇದನ್ನೂ ಓದಿ: ಬಂದೇ ಬರ್ತಾನೋ ರಾಮ; ಜರ್ಮನಿ ಗಾಯಕಿ ಹಾಡಿಗೆ ಜನ ಫಿದಾ, ನೀವೂ ಕೇಳಿ

ಮನೆ ಮನೆಗೂ “ಜೈ ಶ್ರೀರಾಮ್” ಪೇಂಟ್ ಸೀಲ್ ಅಭಿಯಾನ

ವಿಜಯಪುರದಲ್ಲಿ ಉಚಿತ ಚಿಕಿತ್ಸೆ ಒಂದು ಕಡೆಯಾದರೆ ಮತ್ತೊಂದು ಕಡೆ ಮನೆ ಮನೆಗೂ ಜೈ ಶ್ರೀರಾಮ್‌ ಪೇಂಟ್‌ ಸೀಲ್‌ ಅಭಿಯಾನ ನಡೆಯುತ್ತಿದೆ. ಗುಮ್ಮಟನಗರ ವಿಜಯಪುರದಲ್ಲಿ ವಿಶಿಷ್ಟವಾಗಿ ಸಂಭ್ರಮಾಚರಣೆ ನಡೆಯುತ್ತಿದೆ. ವಿಜಯಪುರದಲ್ಲಿ ರಾಮ ಭಕ್ತರಿಂದ ವಿಶೇಷ ಅಭಿಯಾನ ನಡೆಯುತ್ತಿದೆ.

ಮನೆ ಮನೆಗೂ “ಜೈ ಶ್ರೀರಾಮ್” ಪೇಂಟ್ ಸೀಲ್ ಹಾಕುತ್ತಿದ್ದಾರೆ. ನಗರದ ಜೋರಾಪುರ ಪೇಟ್, ಅಡಕಿ ಗಲ್ಲಿಗಳಲ್ಲಿ ಪ್ರತಿ ಮನೆಯ ಗೋಡೆಗಳಿಗೆ ಜೈ ಶ್ರೀರಾಮ್ ಸೀಲ್ ಹಾಕುತ್ತಿದ್ದಾರೆ. ಜತೆಗೆ ರಾಮ ಮಂದಿರದ ಅಕ್ಷತೆ ವಿತರಣೆ ಮಾಡುತ್ತಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version