Site icon Vistara News

Ram Mandir: ರಾಮಲಲ್ಲಾ ಮೂರ್ತಿ ಕೆತ್ತನೆಗೆ ನನಗೆ ಆಹ್ವಾನವೇ ಇರಲಿಲ್ಲ! ಶಿಲ್ಪಿ ಅರುಣ್‌ ಯೋಗಿರಾಜ್‌ ಮನದಾಳದ ಮಾತು

Sculptor Arun Yogiraj and Ram Lalla idol

ಬೆಂಗಳೂರು: ಕರ್ನಾಟಕದ ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್ (Sculptor Arun Yogiraj) ಅವರು ಇಂದು ದೇಶ-ವಿದೇಶಗಳಲ್ಲಿ ಹೆಸರು ಮಾಡಿರುವ ಶಿಲ್ಪಕಲಾಕಾರರಾಗಿದ್ದಾರೆ. ಅವರು ಕೆತ್ತಿದ ಶ್ರೀರಾಮ ದೇವರ ಮೂರ್ತಿ ಈಗ ಅಯೋಧ್ಯೆ ರಾಮ ಮಂದಿರದಲ್ಲಿ (Ram Mandir) ಪ್ರತಿಷ್ಠಾಪನೆಯಾಗಿ ವಿರಾಜಮಾನವಾಗಿದೆ. ಒಟ್ಟು ಮೂವರು ಶಿಲ್ಪಿಗಳು ರಚಿಸಿದ ಮೂರು ಮೂರ್ತಿಯಲ್ಲಿ ಅರುಣ್ ಯೋಗಿರಾಜ್ ಅವರು ರಚಿಸಿದ ಕೃಷ್ಣಶಿಲೆಯ ಶ್ರೀರಾಮ ಮೂರ್ತಿಯು ಆಯ್ಕೆಯಾಗಿದ್ದರ ಬಗ್ಗೆ ಅವರು ಮನದಾಳದ ಮಾತುಗಳನ್ನು ಹೇಳಿದ್ದಾರೆ. ಎಲ್ಲವೂ ಶ್ರೀರಾಮನಿಂದಲೇ ಆಗಿದ್ದು ಎಂದು ಹೇಳಿಕೊಂಡಿದ್ದಾರೆ.

ಅಯೋಧ್ಯೆ‌ ಶ್ರೀರಾಮ ಮಂದಿರಕ್ಕೆ ಮೂರ್ತಿ ಕೆತ್ತನೆ ಸಂಬಂಧ ಜನವರಿಯಲ್ಲಿ ಆಯ್ಕೆ ಪ್ರಕ್ರಿಯೆ ಶುರುವಾಯಿತು. ಈ ಪ್ರಕ್ರಿಯೆಯಲ್ಲಿ ನಮ್ಮ ಕರ್ನಾಟಕದ ಶಿಲ್ಪಿಗಳು ಸಹ ಭಾಗಿಯಾಗಿದ್ದರು. ನನಗೆ ಯಾಕೆ ಆಹ್ವಾನ ಬಂದಿಲ್ಲ ಎಂದು ನಾನು ಚಿಂತಿಸಿದ್ದೆ. ಅಷ್ಟರಲ್ಲಾಗಲೇ ನಾನು 2 ಕಡೆ ಪ್ರಮುಖ ಪ್ರಾಜೆಕ್ಟ್‌ಗಳನ್ನು ಮಾಡಿದ್ದೇನೆ. ಕೇದಾರನಾಥದಲ್ಲಿ ಶಂಕರಾಚಾರ್ಯರದ್ದು, ಇಂಡಿಯಾ ಗೇಟ್‌ನಲ್ಲಿ ನೇತಾಜಿ ಸುಭಾಶ್‌ ಚಂದ್ರ ಬೋಸ್‌ ಅವರ ಶಿಲ್ಪವನ್ನು ಕೆತ್ತಿದ್ದೇನೆ. ಇಷ್ಟಾದರೂ ನನಗೆ ಏಕೆ ಕರೆ ಇಲ್ಲ ಎಂದು ಯೋಚನೆ ಮಾಡಿದ್ದೆ. ಆದರೆ, ದೇವರ ನಿರ್ಣಯ ಬೇರೆಯೇ ಇತ್ತು. ಐಜಿಎನ್‌ಸಿಯಲ್ಲಿ ಸಚೀಂದರ್‌ ಜೋಶಿ ಎಂಬ ಚೇರ್‌ಮೆನ್‌ ಇದ್ದಾರೆ. ಅವರ ಮೂಲಕ ನನ್ನನ್ನು ಶ್ರೀರಾಮ ಕರೆಸಿಕೊಂಡಿದ್ದಾನೆ. ಏಪ್ರಿಲ್‌ನಲ್ಲಿ ನನಗೆ ಪತ್ರ ಬರೆದು ಕಲ್ಲು ಆಯ್ಕೆ ಮಾಡಲು ಅಯೋಧ್ಯೆಗೆ ಬನ್ನಿ ಎಂದು ತಿಳಿಸಲಾಗಿತ್ತು. ಹೀಗಾಗಿ ಹೋಗಿ ಕಲ್ಲು ಸೆಲೆಕ್ಟ್‌ ಮಾಡಿದ್ದೆ. ಬಳಿಕ ರಾಮಲಲ್ಲಾ ಮೂರ್ತಿ ನಿರ್ಮಾಣ ಮಾಡಿರುವುದಾಗಿ ಅರುಣ್‌ ಯೋಗಿರಾಜ್‌ ಮಾಹಿತಿ ನೀಡಿದ್ದಾರೆ.

ಅರುಣ್‌ ಯೋಗಿ ಅವರು ವಿಸ್ತಾರ ನ್ಯೂಸ್‌ಗೆ ಸಂದರ್ಶನ ನೀಡಿದ್ದು, ಅವರ ಮನದಾಳದ ಮಾತುಗಳ ಸಂಪೂರ್ಣ ವಿವರಗಳುಳ್ಳ ವಿಡಿಯೊವನ್ನು ಇಲ್ಲಿ ನೀಡಲಾಗಿದೆ.

ಬಾಲರಾಮನ ಮೂರ್ತಿ ಕೆತ್ತನೆ ಹಿಂದಿನ ಕಥೆ ಏನು? ಈ ವಿಡಿಯೊ ನೋಡಿ

ರಾಮನ ವಿಗ್ರಹ ಕೆತ್ತನೆ ಸಂದರ್ಭದ ಸನ್ನಿವೇಶ ಹೇಗಿತ್ತು? ಇಲ್ಲಿದೆ ವಿಡಿಯೊ

ವಿಗ್ರಹಕ್ಕೆ ನೇಪಾಳದ ಶಿಲೆ ಬೇಡವೇ ಬೇಡ ಎಂದು ಹೇಳಿದ್ದ ಶಿಲ್ಪಿ ಅರುಣ್

‌‌

ಇದನ್ನೂ ಓದಿ: Ayodhya Ram Mandir: ಶಿಲ್ಪಿ ಅರುಣ್ ಯೋಗಿರಾಜ್‌ ಕೆತ್ತಿದ ಶ್ರೀ ರಾಮನ ಮುಖದ ಮಂದಹಾಸದ ರಹಸ್ಯವೇನು?

ಕರೆಯದೇ ಇದ್ದಿದ್ದಕ್ಕೆ ಸಂಕಟ ಆಗಿತ್ತು ಅಂದರು ಅರುಣ್

Exit mobile version