ಅಯೋಧ್ಯಾ: ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್ (Arun Yogiraj) ಕೆತ್ತಿರುವ ಕಪ್ಪು ಶಿಲೆಯ ರಾಮಲಲ್ಲಾ ಮೂರ್ತಿ (Ram Lalla Idol) ಅಯೋಧ್ಯೆಯ ಭವ್ಯ ಮಂದಿರದ ಗರ್ಭಗುಡಿಯಲ್ಲಿ ವಿರಾಜಮಾನವಾಗಿದೆ(ayodhya ram Mandir). ಪ್ರಾಣ ಪ್ರತಿಷ್ಠಾಪನೆಗಾಗಿ ಒಟ್ಟು ಮೂರು ಮೂರ್ತಿಗಳನ್ನು ಅಂತಿಮಗೊಳಿಸಲಾಗಿತ್ತು. ಈ ಪೈಕಿ ಇನ್ನುಳಿದ ಎರಡು ದೇವಾಲಯದ ಇತರ ಭಾಗಗಳಲ್ಲಿ ಪ್ರತಿಷ್ಠಾಪನೆ ಮಾಡಲು ಟ್ರಸ್ಟ್ ನಿರ್ಧರಿಸಿದೆ. ಇವುಗಳಲ್ಲಿ ಒಂದಾದ ರಾಜಸ್ಥಾನದ ಸತ್ಯನಾರಾಯಣ ಪಾಂಡೆ (Rajasthan Sculptor) ಕೆತ್ತಿದ ಬಿಳಿ ಅಮೃತಶಿಲೆಯ ವಿಗ್ರಹವೂ ಗಮನ ಸೆಳೆಯುತ್ತಿದೆ. ಈ ವಿಗ್ರಹದ ಫೋಟೋ ಬಹಿರಂಗವಾಗಿದ್ದು, ವೈರಲ್ ಆಗುತ್ತಿದೆ(white marble ram lalla idol).
ಬಿಳಿ ಅಮೃತಶಿಲೆಯ ವಿಗ್ರಹವು ಪ್ರಸ್ತುತ ಟ್ರಸ್ಟ್‌ನಲ್ಲಿದೆ. ಈ ವಿಗ್ರಹದ ಕೈಯಲ್ಲಿ ಚಿನ್ನದ ಬಿಲ್ಲು ಮತ್ತು ಬಾಣವಿದೆ. ದೇವತೆಯ ಹಿಂದೆ ಕಮಾನಿನಂತಿರುವ ರಚನೆಯು ವಿಷ್ಣುವಿನ ವಿವಿಧ ಅವತಾರಗಳನ್ನು ಚಿತ್ರಿಸುವ ಸಣ್ಣ ಶಿಲ್ಪಗಳನ್ನು ಒಳಗೊಂಡಿದೆ. ರಾಮ ಅಲಂಕರಿಸುವ ಆಭರಣಗಳು ಮತ್ತು ಬಟ್ಟೆಗಳ ಕೆತ್ತನೆಯು ವಿಗ್ರಹವು ಗಮನಾರ್ಹವಾದ ಕುಶಲತೆಗೆ ಸಾಕ್ಷಿಯಾಗಿದೆ. ವಿಗ್ರಹದ ಮಾನದಂಡಗಳು, ದೇವಾಲಯದ ನಿರ್ಮಾಣದ ಮೇಲ್ವಿಚಾರಣೆಯ ಟ್ರಸ್ಟ್‌ನಿಂದ ನಿಗದಿಪಡಿಸಿದ ಮಾನದಂಡಗಳಿಗೆ ಅನುಗುಣವಾಗಿಯೇ ಇವೆ.
ರಾಮ ಮಂದಿರ ಗರ್ಭ ಗುಡಿಯಲ್ಲಿ ಪ್ರಾಣ ಪ್ರತಿಷ್ಠಾಪನೆ ಮಾಡಲಾಗಿರುವ 51 ಇಂಚಿನ ಕಪ್ಪು ಶಿಲೆಯ ವಿಗ್ರಹವನ್ನು, 2.5 ಶತಕೋಟಿ ಹಳೆಯ ಕಲ್ಲಿನಿಂದ ಕೆತ್ತಲಾಗಿದೆ ಎಂದು ನ್ಯಾಷನಲ್ ಇನ್ಸ್‌ಟಿಟ್ಯೂಟ್ ಆಫ್ ರಾಕ್ ಮೆಕಾನಿಕ್ಸ್‌ನ ಎಚ್ ಎಸ್ ವೆಂಕಟೇಶ್ ಅವರು ಹೇಳಿದ್ದಾರೆ. ಈ ಶಿಲೆಯು ಹೆಚ್ಚು ಬಾಳಿಕೆ ಬರುತ್ತದೆ ಮತ್ತು ಹವಾಮಾನ ಬದಲಾವಣೆಯಿಂದ ನಷ್ಟವಾಗುವುದಿಲ್ಲ. ಕನಿಷ್ಠ ನಿರ್ವಹಣೆಯೊಂದಿಗೆ ಈ ಉಪೋಷ್ಣವಲಯದ ವಲಯದಲ್ಲಿ ಸಾವಿರಾರು ವರ್ಷಗಳ ಕಾಲ ಉಳಿಯುತ್ತದೆ ಎಂದು ಅವರು ಹೇಳಿದ್ದಾರೆ.
ಬಾಲ ರಾಮನ ವಿಗ್ರಹಕ್ಕೆ ಕೃಷ್ಣ ಶಿಲೆಯನ್ನೇ ಏಕೆ ಬಳಸಿದ್ದು?
ರಾಮ ಮಂದಿರ (Ram Mandir) ಉದ್ಘಾಟನೆ ಸಮಾರಂಭವು ಭಾರೀ ಅದ್ಧೂರಿಯಿಂದ ನಡೆದಿದೆ. ರಾಮ ಲಲ್ಲಾ (Ram Lalla) ವಿಗ್ರಹವನ್ನು ಭಕ್ತರು ಕಣ್ತುಂಬಿಕೊಳ್ಳುತ್ತಿದ್ದಾರೆ. ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್ ಅವರು ಕೆತ್ತಿರುವ ಈ ರಾಮ ಲಲ್ಲಾ ವಿಗ್ರಹದಲ್ಲಿನ ದೈವಿ ಕಳೆ ಭಕ್ತರನ್ನು ಮನಸೂರೆಗೊಳ್ಳುತ್ತಿದೆ. ಈ ಮಧ್ಯೆ, ರಾಮ ಲಲ್ಲಾ ವಿಗ್ರಹಕ್ಕೆ ಕಪ್ಪು ಶಿಲೆ ಅಥವಾ ಕೃಷ್ಣ ಶಿಲೆಯನ್ನು (Krishna Shila) ಯಾಕೆ ಬಳಸಲಾಗಿದೆ ಎಂಬ ಪ್ರಶ್ನೆ ಭಕ್ತರಲ್ಲಿ ಎದುರಾಗಿದೆ. ಈ ಶಿಲೆ ಬಳಸುವುದಕ್ಕೂ ಕಾರಣವಿದೆ.
ರಾಮಲಲ್ಲಾ ವಿಗ್ರಹಕ್ಕೆ ಚಾಮರಾಜನಗರ ಜಿಲ್ಲೆಯ ಎಚ್.ಡಿ. ಕೋಟೆ ತಾಲೂಕಿನ ಬುಜ್ಜೆಗೌಡನಪುರ ಗ್ರಾಮದ ಕೃಷ್ಣ ಶಿಲೆ ಬಳಕೆ ಮಾಡಲಾಗಿದೆ. ಕೃಷ್ಣ ಶಿಲೆ ಅತ್ಯಂತ ಶಕ್ತಿಶಾಲಿಯಾಗಿದ್ದು ಆಸಿಡ್ ಹಾಕಿದರೂ ಏನೂ ಆಗುವುದಿಲ್ಲ. ಇದಕ್ಕೆ ಬೆಂಕಿ ತಗುಲುವುದಿಲ್ಲ, ತುಕ್ಕು ಹಿಡಿಯುವುದಿಲ್ಲ. ಮಳೆ, ಗಾಳಿ, ಬಿಸಿಲನ್ನೂ ತಡೆದುಕೊಳ್ಳುವ ಶಕ್ತಿಯ ಕಲ್ಲು ಇದು. ಹಿಂದೆ ಶಂಕರಾಚಾರ್ಯರ ಮೂರ್ತಿಯನ್ನು ಮಾಡಿದ ಎಚ್.ಡಿ.ಕೋಟೆಯ ಕೃಷ್ಣ ಶಿಲೆಯಲ್ಲೇ ಇದನ್ನು ರಚಿಸಲಾಗಿದೆ. ಈ ಎಲ್ಲ ಕಾರಣದಿಂದ ರಾಮಲಲ್ಲಾ ವಿಗ್ರಹಕ್ಕೆ ಕೃಷ್ಣ ಶಿಲೆಯನ್ನು ಬಳಸಲಾಗಿದೆ.
ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್ ಅವರ ಕೆತ್ತನೆಯ ರಾಮ ಲಲ್ಲಾ ವಿಗ್ರಹವು ಆಯ್ಕೆಯಾಗಲು ಕಾರಣವಿದೆ. ಈ ವಿಗ್ರಹದ ಮುಖದಲ್ಲಿನ ತೇಜಸ್ಸು ಮುಖ್ಯ ಕಾರಣವಾಗಿದೆ. ಅದರಲ್ಲಿ ಹೆಚ್ಚು ದೈವಿಕ ಭಾವವಿದೆ ಎಂಬುದನ್ನು ತೀರ್ಪುಗಾರರು ಮನಗಂಡಿದ್ದಾರೆ. ಪ್ರಾಣಪ್ರತಿಷ್ಠೆಯಾಗಿರುವ ವಿಗ್ರಹವು ಬಾಲ ರಾಮನಾಗಿದೆ ಎಂಬುದು ಇಲ್ಲಿ ಗಮನಾರ್ಹ. ಅಂತೆಯೇ ಅರುಣ್ ಅವರ ಕೆತ್ತನೆಯ ವಿಗ್ರಹದಲ್ಲಿ ಮುಗ್ಧ ಮಗುವಿನ ಸುಂದರ ನೋಟವಿದೆ. ಬಾಲ ರಾಮದೇವರು ಸಾಕ್ಷಾತ್ ಮಂದೆ ನಿಂತಿರುವಂತೆ ಕಾಣುವ ಮೂರ್ತಿಯನ್ನು ಅವರು ಕೆತ್ತಿದ್ದಾರೆ. ಅಲ್ಲದೆ ಹೆಚ್ಚು ನೈಜತೆಯಿಂದ ಕೂಡಿದೆ.
ಅರುಣ್ ಅವರು ಕೆತ್ತಿರುವ ಐದು ವರ್ಷದ ಬಾಲ ರಾಮನ ಮೂರ್ತಿಯ ಕೈಯಲ್ಲಿ ಧನಸ್ಸು ಹಾಗೂ ಬಾಣವಿದೆ. ರಾಮನ ಮೂರ್ತಿಯು 51 ಇಂಚು ಎತ್ತರವಿದ್ದರೆ ಪ್ರಭಾವಳಿ ಸೇರಿದಂತೆ ಒಟ್ಟು ವಿಗ್ರಹ 8 ಅಡಿ ಎತ್ತರ ಹಾಗೂ ಮೂರುವರೆ ಅಡಿ ಅಗಲವಿದೆ. ಇದು ತೇಜಸ್ಸಿನಿಂದ ಕಂಗೊಳಿಸುತ್ತಿದೆ. ಒಟ್ಟಾರೆಯಾಗಿ ಕೋಟ್ಯಂತರ ರಾಮಭಕ್ತರ ಪೂಜೆಗೆ ಅರ್ಹವಾಗಿದೆ ಎಂದು ತೀರ್ಪುಗಾರರು ಅದನ್ನೇ ಆಯ್ಕೆ ಮಾಡಿದ್ದಾರೆ.
ಈ ಸುದ್ದಿಯನ್ನೂ ಓದಿ: Ayodhya Ram Mandir: ಹಳೆಯ ರಾಮ ಲಲ್ಲಾ ಮೂರ್ತಿ ಏನಾಗಲಿದೆ? ಇನ್ನೆರಡು ಮೂರ್ತಿಗಳ ಕತೆ ಏನು?