Site icon Vistara News

BBK SEASON 10: ಈ ವಾರ ಎಂಟು ಮಂದಿ ನಾಮಿನೇಟ್‌; ಪ್ರತಾಪ್‌ ಸೇಫ್‌!

8 Contestants Nominated For Elimination in 12th week

ಬೆಂಗಳೂರು: ಈ ವಾರ ಬಿಗ್‌ ಬಾಸ್‌ (BBK SEASON 10) ಮನೆಯಲ್ಲಿ ಎಂಟು ಮಂದಿ ನಾಮಿನೇಟ್‌ ಆಗಿದ್ದಾರೆ. ಸಂಗೀತಾ, ವಿನಯ್‌, ವರ್ತೂರ್‌ ಸಂತೋಷ್‌, ಮೈಕಲ್‌, ಕಾರ್ತಿಕ್‌, ಸಿರಿ, ತನಿಷಾ, ತುಕಾಲಿ ಸಂತೋಷ್‌ ನಾಮಿನೇಟ್‌ ಆದರು. ಈ ವಾರ ಬಿಗ್‌ ಬಾಸ್‌ ವಿಶೇಷ ರೀತಿಯಲ್ಲಿ ನಾಮಿನೇಶನ್‌ ಪ್ರಕ್ರಿಯೆ ಮಾಡಿದರು. ಈ ವಾರ ಸ್ಪರ್ಧಿಗಳಿಗೆ ನಾಮಿನೇಶನ್‌ ಅಧಿಕಾರ ಇರುತ್ತದೆ. ಆದರೆ ಅಧಿಕಾರ ತಾವೇ ಉಯೋಗಿಸುವಂತಿಲ್ಲ. ನಾಮಿನೇಶನ್‌ ಅಧಿಕಾರವನ್ನು ಬೇರೊಬ್ಬರಿಗೆ ನೀಡಬೇಕು. ಅಧಿಕಾರ ಪಡೆದವರು ಮುಂದೆ ಬಂದು ತಮ್ಮ ಇಚ್ಛೆಯ ಇಬ್ಬರನ್ನು ನಾಮಿನೇಟ್ ಮಾಡಬೇಕಿತ್ತು. ಅಷ್ಟೇ ಅಲ್ಲದೇ ಡ್ರೋನ್‌ ಪ್ರತಾಪ್‌ ಅವರನ್ನು ನಮ್ರತಾ ಸೇಫ್‌ ಮಾಡಿದ್ದಾರೆ.

ಈ ಹಂತದಲ್ಲಿ ತುಕಾಲಿ ಸಂತು ಅವರು ಕಾರ್ತಿಕ್‌ ಅವರಿಗೆ ಅಧಿಕಾರ ಕೊಟ್ಟರು. ತನಿಷಾ – ಮೈಕಲ್‌ ಅವರಿಗೆ, ವರ್ತೂರು ಸಂತೋಷ್ – ತುಕಾಲಿ ಸಂತು ಅವರಿಗೆ ಕಾರ್ತಿಕ್ ಅವರು – ಡ್ರೋನ್ ಪ್ರತಾಪ್, ವಿನಯ್ ಅವರು- ಸಂಗೀತಾ ಅವರಿಗೆ, ಮೈಕಲ್ ಅವರು – ವಿನಯ್ ಅವರಿಗೆ, ಸಂಗೀತಾ – ಡ್ರೋನ್ ಪ್ರತಾಪ್ ಅವರಿಗೆ, ಸಿರಿ – ವರ್ತೂರು ಸಂತೋಷ್ ಅವರಿಗೆ, ಡ್ರೋನ್ ಪ್ರತಾಪ್ – ಕಾರ್ತಿಕ್ ಅವರಿಗೆ ನೀಡಿದರು.

ಸ್ಪರ್ಧಿಗಳಿಗಾಗಿ ಬಿಗ್ ಬಾಸ್‌ ಪ್ರಶ್ನೋತ್ತರ ಚಟುವಟಿಕೆ ನಡೆಸಿದ್ದರು. ಈ ಟಾಸ್ಕ್‌ನಲ್ಲಿ ಗೆದ್ದ ಸಂಗೀತಾ ತಂಡಕ್ಕೆ ತನಿಷಾ ತಂಡದಿಂದ ಒಬ್ಬರನ್ನ ನೇರವಾಗಿ ನಾಮಿನೇಟ್ ಮಾಡುವ ಅಧಿಕಾರ ಲಭಿಸಿತು. ಆಗ ಡ್ರೋನ್ ಪ್ರತಾಪ್, ಸಂಗೀತಾ ಹಾಗೂ ಸಿರಿ, ಮೈಕಲ್‌ ಹೆಸರನ್ನ ಹೇಳಿದರು. ನಮ್ರತಾ ಹಾಗೂ ತುಕಾಲಿ ಸಂತು ಅವರು ತನಿಷಾ ಹೆಸರನ್ನು ತಗೊಂಡರು. ಬಳಿಕ ಬಹುಮತದಲ್ಲಿ ಮೈಕಲ್‌ ಅವರನ್ನು ಸಂಗೀತಾ ತಂಡ ನೇರವಾಗಿ ನಾಮಿನೇಟ್ ಮಾಡಿದರು.

ಈ ವಾರ ನಮ್ರತಾ ಅವರು ಕ್ಯಾಪ್ಟನ್‌ ಆಗಿರುವುದು ಗೊತ್ತೇ ಇದೆ. ಡ್ರೋನ್‌ ಪ್ರತಾಪ್‌ ಅವರ ತ್ಯಾಗ ಹಾಗೂ ಹೆಚ್ಚು ಪಾಯಿಂಟ್ಸ್ ಕೊಟ್ಟು ಕ್ಯಾಪ್ಟನ್ಸಿಗೆ ಸಂಗೀತಾ ಅವಕಾಶ ಮಾಡಿಕೊಟ್ಟು ಅಂತೂ ನಮ್ರತಾ ಅವರ ಕನಸು ನನಸಾಗಿತ್ತು. ಆಗ ಡ್ರೋನ್‌ ಪ್ರತಾಪ್‌ ಅವರು ನಮ್ರತಾ ಅವರಿಗೆ ಸೇವ್‌ ಮಾಡಿದ್ದಕ್ಕೆ ಈಗ ನಮ್ರತಾ ಅವರು ಡ್ರೋನ್‌ ಪ್ರತಾಪ್‌ ಅವರನ್ನು ಸೇವ್‌ ಮಾಡಿದ್ದಾರೆ.

ಇದನ್ನೂ ಓದಿ: BBK SEASON 10: ಅಮ್ಮ ಎಂದರೆ ಏನೋ ಹರುಷವು! ಫ್ಯಾಮಿಲಿ ಕಂಡು ಸ್ಪರ್ಧಿಗಳು ಭಾವುಕ!

ಇನ್ಮುಂದೆ ಅಗ್ರೆಸ್ಸಿವ್ ಆಗಿ ಆಡಲ್ಲ

ಶೈನ್‌ ಶೆಟ್ಟಿ ಬಂದು ಹೋದ ಬಳಿಕ ವಿನಯ್‌ ಗೌಡ ಅವರು ಹೊಸ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ. ಮೊದಲಿನಿಂದಲೂ ತಾನೇ ವಿನ್‌ ಆಗಬೇಕು ಎಂದು ವಿನಯ್‌ ಅವರು ಡೆಡಿಕೆಟೆಡ್‌ ಆಗಿ ಆಟ ಆಡಿದ್ದರು. ಅವರು ಅಗ್ರೆಸ್ಸಿವ್ ಆಗಿ ಆಡಿದ್ದರಿಂದ ಸಾಕಷ್ಟು ಹಿನ್ನಡೆ ಆಯಿತು. ಅವರಿಗೆ ಹಾಗೂ ಎದುರಾಳಿ ತಂಡದವರಿಗೆ ಗಾಯಗಳಾಗಿತ್ತು. ಆದರೆ ಶೈನ್‌ ಶೆಟ್ಟಿ ಅವರು ಮನೆಗೆ ಬಂದು ಬಿಗ್ ಬಾಸ್ ಸ್ಟ್ರಿಕ್ಟ್ ಆಕ್ಷನ್ ತಗೊಳ್ಬೇಕಾಗುತ್ತೆ. ಅದರಿಂದ ನೀವು ಡೈರೆಕ್ಟ್ ಎಲಿಮಿನೇಟ್ ಕೂಡ ಆಗಬಹುದು ಎಂದು ಹೇಳಿದ್ದರು. ಇದೀಗ ವಿನಯ್‌ ಅವರು ʻತಾನು ಇನ್ನು ಮುಂದೆ ಅಗ್ರೆಸ್ಸಿವ್ ಆಗಿ ಆಡಲ್ಲ, ನಾನು ಹೊಡೆದಾಡಲ್ಲ. ಎಷ್ಟು ನೀಟಾಗಿ ಆಡೋಕೆ ಆಗುತ್ತೋ, ಅಷ್ಟು ನೀಟ್ ಆಗಿ ಆಡ್ತೀನಿʼ ಎಂದು ಶಪಥ ಮಾಡಿದ್ದಾರೆ.

Exit mobile version