Site icon Vistara News

BBK Season 10: ಗಡ ಗಡ ನಡುಗಿ ಹೋದ ವಿನಯ್‌-ಕಾರ್ತಿಕ್‌; ಬೀಸಿ ಬೀಸಿ ಹೊಡಿತ್ತಿದ್ದೆ ಎಂದ ಸಂಗೀತಾ!

A shaken Vinay-Karthik For Bigg boss Punishment

ಬೆಂಗಳೂರು: ಬಿಗ್‌ಬಾಸ್‌ ಮನೆಯಲ್ಲಿ (BBK Season 10) ರೂಲ್ಸ್‌ ರೂಲ್ಸ್‌ ಎನ್ನುತ್ತಿದ್ದ ವಿನಯ್‌ ಇದೀಗ ಹಾದಿ ತಪ್ಪಿರುವಂತಿದೆ. ಕುಚಿಕು ಫ್ರೆಂಡ್ಸ್‌ ವಿನಯ್‌ ಹಾಗೂ ಕಾರ್ತಿಕ್‌ ಅವರಿಗೆ ಬಿಗ್‌ ಬಾಸ್‌ ಖಡಕ್‌ ಶಿಕ್ಷೆಯನ್ನು ನೀಡಿದ್ದಾರೆ. ವಿನಯ್‌ ಹಾಗೂ ಕಾರ್ತಿಕ್‌ ಲೈಟ್ಸ್‌ ಆಫ್‌ ಆಗುವ ಮುನ್ನ ಮಲಗಿದ್ರು. ಇನ್ನೂ ಈ ಮನೆಯ ಮಹತ್ವಗಳನ್ನು ಅರಿಯದೆ ಬದುಕುತ್ತಿರುವ ವಿನಯ್‌ ಹಾಗೂ ಕಾರ್ತಿಕ್‌ಗೆ ಬಿಗ್‌ ಬಾಸ್‌ ಶಿಕ್ಷೆ ವಿಧಿಸಿದೆ. ಮನೆಯ ಸದಸ್ಯರು ಜೋರಾಗಿ ವಿನಯ್‌ ಹಾಗೂ ಕಾರ್ತಿಕ್‌ ಅವರ ಮುಖಕ್ಕೆ ನೀರು ಎರಚಿದ್ದಾರೆ. ಈ ವೇಳೆ ಸಂಗೀತಾ ಅವರು ಕಾರ್ತಿಕ್‌ ಮುಂದೆ ವಿನಯ್‌ ಬಗ್ಗೆ ಅಸಮಾಧಾನ ಹೊರ ಹಾಕಿದಂತಿದೆ. ಕಲರ್ಸ್‌ ಕನ್ನಡ ಪ್ರೋಮೊ ಹಂಚಿಕೊಂಡಿದೆ.

ವಿನಯ್‌ ಮತ್ತು ಕಾರ್ತಿಕ್ ಮೊದಲಿನಿಂದಲೂ ತಮ್ಮ ಸ್ನೇಹಸಂಬಂಧವನ್ನು ಉಳಿಸಿಕೊಂಡು ಬಂದವರು. ಪರಸ್ಪರ ವಿರುದ್ಧ ತಂಡಗಳಲ್ಲಿ ಆಡುವಾಗಲೂ, ಜಿದ್ದಾಜಿದ್ದಿನ ಸ್ಪರ್ಧೆ ಇದ್ದಾಗಲೂ, ಟಾಸ್ಕ್‌ ಕಾರಣಕ್ಕೆ ಮನೆಯೊಳಗೆ ಪರಸ್ಪರ ಮಾತಿಗೆ ಮಾತು ಬೆಳೆದಾಗಲೂ ಇವರಿಬ್ಬರೂ ನಂತರ ಅದನ್ನು ಮರೆತು ಒಂದಾಗಿದ್ದರು. ಭುಜಕ್ಕೆ ಭುಜ ಡಿಕ್ಕಿ ಹೊಡೆದು ನಕ್ಕಿದ್ದರು. ಇದೀಗ ಈ ಸ್ನೇಹದ ಜೋಡಿ ಜತೆಜತೆಯಲ್ಲಿಯೇ ಶಿಕ್ಷೆ ಅನುಭವಿಸುವ ಸಂದರ್ಭವೂ ಬಂದಿದೆ.

ಮನೆಯವರೆಲ್ಲರೂ ಅಚ್ಚರಿ

ಬೆಳಗ್ಗೆ ಎದ್ದಾಗ ಸ್ಪರ್ಧಿಗಳಿಗೆ ಬಿಗ್‌ಬಾಸ್‌ ಧ್ವನಿ ಕೇಳಿಸಿದೆ. ಆ ಧ್ವನಿ ಯಾವುದೋ ಸೂಚನೆ ನೀಡುವುದಕ್ಕಾಗಲಿ, ಶುಭಾಶಯ ಕೋರುವುದಕ್ಕಾಗಿ ಅಥವಾ ಟಾಸ್ಕ್‌ ನೀಡುವುದಕ್ಕಾಗಲಿ ಬಂದಿದ್ದಲ್ಲ. ಬದಲಿಗೆ ಶಿಕ್ಷೆ ನೀಡುವುದಕ್ಕೆ!
‘ವಿನಯ್‌ ಹಾಗೂ ಕಾರ್ತಿಕ್ ಇಬ್ಬರೂ ರಾತ್ರಿ ಲೈಟ್‌ ಆಫ್ ಆಗುವ ಮೊದಲೇ ಮಲಗಿದ್ದರು. ಇನ್ನೂ ಮನೆಯ ಮಹತ್ವಗಳನ್ನು ಅರಿಯದೇ ಬದುಕುತ್ತಿರುವ ವಿನಯ್ ಹಾಗೂ ಕಾರ್ತಿಕ್ ಅವರಿಗೆ ಶಿಕ್ಷೆ ವಿಧಿಸಲಾಗುತ್ತಿದೆ’ -ಬಿಗ್‌ಬಾಸ್‌ ಧ್ವನಿ ಹೀಗೆ ಹೇಳುತ್ತಿರುವ ಹಾಗೆಯೇ ಮನೆಯವರೆಲ್ಲರೂ ಅಚ್ಚರಿಗೊಂಡಿದ್ದಾರೆ. ಬಿಗ್‌ಬಾಸ್‌ ವಿಧಿಸಿದ ಶಿಕ್ಷೆಯೂ ಅಷ್ಟೇ ಪ್ರಖರವಾಗಿತ್ತು. ವಿನಯ್‌ ಮತ್ತು ಕಾರ್ತಿಕ್ ಅವರನ್ನು ಗಾರ್ಡನ್‌ ಏರಿಯಾದಲ್ಲಿ ಕುರ್ಚಿಯಲ್ಲಿ ಕೂಡಿಸಿ, ಮನೆಯವರೆಲ್ಲರೂ ಅವರ ಮುಖದ ಮೇಲೆ ತಣ್ಣೀರು ಎರಚಿ, ‘ಎದ್ದೇಳಿ ವಿನಯ್, ಎದ್ದೇಳಿ ಕಾರ್ತಿಕ್’ ಎಂದು ಹೇಳಿದ್ದಾರೆ. ಬೆಳಗಿನ ಚಳಿಯಲ್ಲಿ ಮೊದಲೇ ಮುದುರಿದ್ದ ವಿನಯ್ ಮತ್ತು ಕಾರ್ತಿಕ್ ತಣ್ಣೀರ ಸ್ನಾನದಿಂದ ಗಡಗಡ ನಡುಗಿಹೋಗಿದ್ದಾರೆ.

ಇದನ್ನೂ ಓದಿ: BBK Season 10: ಕಾರ್ತಿಕ್‌ಗೆ ರಾಖಿ ಕಟ್ಟಿದ ಸಂಗೀತಾ; ಎಲ್ಲ ಸೇರಿ ಸ್ನೇಹಿತ್‍‍ನ ಹೆಂಗ್ ಗೋಳಾಡಿಸ್ತಿದಾರೆ ಪಾಪ!  

ಶಿಕ್ಷೆ ಮುಗಿದ ಮೇಲೆ ಕಾರ್ತಿಕ್ ಅವರ ಒದ್ದೆ ತಲೆಯನ್ನು ಸಂಗೀತಾ ತಮ್ಮ ಕೈಯಾರೆ ಒರೆಸಿಕೊಟ್ಟಿದ್ದು ಇನ್ನೊಂದು ವಿಶೇಷ. ಶಿಕ್ಷೆಯನ್ನು ಅನುಭವಿಸಿದ ಮೇಲೂ ನಗುನಗುತ್ತಲೇ ಭುಜಕ್ಕೆ ಭುಜ ಢೀ ಹೊಡೆದು ‘ಶಿಕ್ಷೆ ಆಗಿದೆ’ ಎಂದು ಗಹಗಹಿಸಿ ನಕ್ಕಿದ್ದಾರೆ. ಸಂಗೀತಾ ‘ʻನಾನು ಬೀಸಿ ಬೀಸಿ ಹೊಡಿತ್ತಿದ್ದೆ ಇಬ್ರರಿಗೂ. ನಾಚೆಕೆಯಾಗಲ್ವಾ? ಇದೆಲ್ಲ ಸಹವಾಸ ದೋಷ. ಇನ್ನಾದರೂ ಎದ್ದೇಳಿ ಕಾರ್ತಿಕ್‌ʼʼ’ ಎಂದು ಕೇಳಿದ್ದಾರೆ. ಕಾರ್ತಿಕ್ ಮಾತ್ರ, ‘ಪ್ರೀತಿ ತೋರಿಸ್ತೀಯಾ ಸರಿ… ಹಂಗಾ ತೋರಿಸೋದು?’ ಎಂದು ಸಂಗೀತಾಳನ್ನು ಹುಸಿಮುನಿಸಿನಿಂದಲೇ ಪ್ರಶ್ನಿಸಿದ್ದಾರೆ.

ಇಂದಿನ ಬೆಳಗ್ಗೆಯೇ ತಣ್ಣೀರ ಅಭಿಷೇಕದಿಂದ ಶುರುವಾಗಿದೆ. ಮುಂದೆ ಬಿಸಿನೀರಿನ ಹೊಗೆಯೂ ಆಡಲಿದೆಯೇ ಎಂಬ ಪ್ರಶ್ನೆಯೊಂದು ಪ್ರೇಕ್ಷಕರ ಮನಸಲ್ಲಿ ಮೂಡಿದೆ.

ಬಿಗ್​ಬಾಸ್ ಕನ್ನಡ ಕಲರ್ಸ್ ವಾಹಿನಿಯಲ್ಲಿ ಪ್ರತಿರಾತ್ರಿ 9:30ಕ್ಕೆ ಹಾಗೂ ಜಿಯೋ ಸಿನಿಮಾಸ್​ನಲ್ಲಿ ಪ್ರತಿದಿನ ಲೈವ್ ಪ್ರಸಾರವಾಗುತ್ತಿದೆ.

Exit mobile version