Site icon Vistara News

Bigg Boss 17: ಬಿಗ್‌ ಬಾಸ್‌ ಮನೆಯಲ್ಲಿ ಹೊಡೆದಾಟ; ನೇರವಾಗಿ ಎಲಿಮಿನೇಟ್‌ ಆದ್ರು ಸ್ಪರ್ಧಿ!

Abhishek Kumar Slaps Samarth Jurel Bigg Boss 17

ಬೆಂಗಳೂರು: ಬಿಗ್ ಬಾಸ್ 17ರ (Bigg Boss 17) ಮನೆಯಲ್ಲಿ ಜಗಳಗಳು ಆಗುವುದು ಕಾಮನ್‌. ಆದರೆ ಮನೆಯಲ್ಲಿ ಅದರದ್ದೇ ಆದ ಒಂದು ರೂಲ್ಸ್‌ ಎನ್ನುವುದು ಇದೆ. ಒಂದು ವೇಳೆ ಸ್ಪರ್ಧಿಗಳು ಹೊಡೆದಾಡಿಕೊಂಡರೆ ಅವರು ನೇರವಾಗಿ ಎಲಿಮಿನೇಟ್‌ ಆಗುತ್ತಾರೆ. ಇದೀಗ ‘ಬಿಗ್ ಬಾಸ್ ಹಿಂದಿ ಸೀಸನ್ 17’ನಲ್ಲಿ ಈ ರೀತಿಯ ಘಟನೆ ನಡೆದಿದೆ ಎನ್ನಲಾಗುತ್ತಿದೆ. ಅಭಿಷೇಕ್ ಕುಮಾರ್ ಅವರು ಸಮರ್ಥ್​​ಗೆ ಹೊಡೆದ ಪರಿಣಾಮ ಅಭಿಷೇಕ್ ಅವರನ್ನು ಮನೆಯಿಂದ ಹೊರಕ್ಕೆ ಹಾಕಲಾಗಿದೆ ಎನ್ನಲಾಗುತ್ತಿದೆ. ಮನೆಯ ನಿಯಮವನ್ನು ಉಲ್ಲಂಘಿಸಿರುವ ಪರಿಣಾಮ ಈ ʻಬಿಗ್‌ ಬಾಸ್‌ʼ ಈ ನಿರ್ಧಾರವನ್ನು ಕೈಗೊಂಡಿದ್ದಾರೆ ಎನ್ನಲಾಗುತ್ತಿದೆ.

ಇಶಾ ಮಾಳವಿಯಾ ಅವರು ನಾಮಿನೇಷನ್‌ ಮಾಡುವ ಸಂದರ್ಭದಲ್ಲಿ ಈ ಜಗಳ ತಾರಕಕ್ಕೇರಿದೆ. ಜಗಳದ ಮಧ್ಯೆ ಪೋಷಕರನ್ನು ತಂದು ಎಳೆದ ಪರಿಣಾಮ ಸ್ಪರ್ಧಗಳ ಮಧ್ಯೆ ಜಗಳ ತಾರಕ್ಕೇರಿತ್ತು. ಅಭಿಷೇಕ್ ಅವರನ್ನು ಮನೆಯಲ್ಲಿ ಉಳಿಸಿಕೊಳ್ಳಬೇಕೆ ಅಥವಾ ಬೇಡವೇ ಎನ್ನುವ ನಿರ್ಧಾರವನ್ನು ಮನೆಯ ಕ್ಯಾಪ್ಟನ್ ಅಂಕಿತಾ ತೆಗೆದುಕೊಳ್ಳುವಂತೆ ಬಿಗ್ ಬಾಸ್ ಆದೇಶ ನೀಡಿದರು ಎನ್ನಲಾಗಿದೆ. ಅಂಕಿತಾ ಅವರು ಅಭಿಷೇಕ್​ ಅವರನ್ನು ಎಲಿಮಿನೇಟ್ ಮಾಡುವ ನಿರ್ಧಾರ ತೆಗೆದುಕೊಂಡರು. ಈ ಮೂಲಕ ಅವರನ್ನು ಬಿಗ್ ಬಾಸ್​ನಿಂದ ಹೊರಕ್ಕೆ ಕಳುಹಿಸಲಾಗಿದೆ ಎನ್ನಲಾಗುತ್ತಿದೆ. ಈ ಬಗ್ಗೆ ಟ್ವಿಟರ್​ನಲ್ಲಿ ಚರ್ಚೆ ಜೋರಾಗಿದೆ. ಅವರನ್ನು ಮನೆಯಿಂದ ಎಲಿಮಿನೇಟ್ ಮಾಡಬಾರದಿತ್ತು ಎಂದು ಅನೇಕರು ಅಭಿಪ್ರಾಯಪಟ್ಟಿದ್ದಾರೆ.

ಜನವರಿ 28ರಂದು ಅಂತಿಮ ಸಂಚಿಕೆ

ಈ ವರ್ಷ ಅಕ್ಟೋಬರ್‌ನಲ್ಲಿ ಪ್ರದರ್ಶನಗೊಂಡ ʻಬಿಗ್ ಬಾಸ್ 17ʼ (Bigg Boss 17) ಮುಂದಿನ ತಿಂಗಳು ಪೂರ್ಣಗೊಳ್ಳಲು ರೆಡಿಯಾಗಿ ನಿಂತಿದೆ. ಹಿಂದಿ ಬಿಗ್‌ ಬಾಸ್‌ ಆರಂಭದಲ್ಲಿ ಶೋ ವಿಸ್ತರಣೆಯಾಗಲಿದೆ ಎಂದು ವರದಿಯಾಗಿತ್ತು. ಆದರೀಗ ವರದಿಯ ಪ್ರಕಾರ 100 ದಿನಕ್ಕೆ ಶೋ ಪೂರ್ಣಗೊಳ್ಳುತ್ತಿದ್ದು, ಸಂಚಿಕೆ ವಿಸ್ತರಣೆಯಾಗುತ್ತಿಲ್ಲ ಎನ್ನಲಾಗಿದೆ. ಬಿಗ್ ಬಾಸ್ 17 ಜನವರಿಯಲ್ಲಿ ಮುಕ್ತಾಯಗೊಳ್ಳಲಿದೆ. ʻಬಿಗ್ ಬಾಸ್ 17ʼ ಜನವರಿ 28ರಂದು ಅಂತಿಮ ಸಂಚಿಕೆ ಪ್ರಸಾರವಾಗಲಿದೆ.

ಇದನ್ನೂ ಓದಿ: Bigg Boss 17: ಈ ದಿನ ʻಬಿಗ್‌ ಬಾಸ್‌ʼ ಫಿನಾಲೆ; ಇದು ವಿಸ್ತರಣೆಯಾಗುತ್ತಿಲ್ಲ!

ಕಿರುತೆರೆಯ ಅತ್ಯಂತ ಜನಪ್ರಿಯ ಮತ್ತು ಅಷ್ಟೇ ವಿವಾದಾತ್ಮಕ ರಿಯಾಲಿಟಿ ಶೋ ಎಂದರೆ ಅದು ‘ಬಿಗ್ ಬಾಸ್’. ಕನ್ನಡ ಮಾತ್ರವಲ್ಲದೆ ಹಿಂದಿ, ತಮಿಳು ಮೊದಲಾದ ಭಾಷೆಗಳಲ್ಲೂ ಈ ಶೋ ಪ್ರಸಾರ ಕಾಣುತ್ತಿದೆ. ಈಗಾಗಲೇ ʻತೆಲುಗು ಬಿಗ್‌ ಬಾಸ್‌ʼ ವಿನ್ನರ್‌ ಘೋಷಿಸಿದ್ದಾಗಿದೆ. ʻಕನ್ನಡ ಬಿಗ್‌ ಬಾಸ್‌ʼ (Bigg Boss) ಈ ಬಾರಿ 100 ದಿನಕ್ಕೆ ಪೂರ್ಣಗೊಳ್ಳುತ್ತಿಲ್ಲ. ಎಂಟನೇ ಸೀಸನ್ 117 ದಿನಗಳ ಕಾಲ ಇತ್ತು. ಏಳನೇ ಸೀಸನ್ 112 ದಿನ ನಡೆದಿತ್ತು. ಈ ಸೀಸನ್​ನಲ್ಲೂ ಎರಡು ವಾರ ಹೆಚ್ಚುವರಿಯಾಗಿ ನಡೆಸಲು ವಾಹಿನಿ ನಿರ್ಧರಿಸಿದೆ ಎನ್ನಲಾಗುತ್ತಿದೆ.

ಆದರೆ ಕಳೆದ ಎರಡು ವಾರಗಳಲ್ಲಿ ‘ಬಿಗ್ ಬಾಸ್ ಹಿಂದಿ ಸೀಸನ್ 17’ರ ಟಿಆರ್​ಪಿ ಹೆಚ್ಚಾಗಿದೆ. ಆದರೆ, ಟಾಪ್ 10 ಪಟ್ಟಿಯಲ್ಲಿ ಸ್ಥಾನ ಪಡೆಯುವಲ್ಲಿ ವಿಫಲವಾಗಿದೆ. ಹೀಗಾಗಿ, ಕಳೆದ ಐದು ವರ್ಷಗಳಲ್ಲಿ ಮೊದಲ ಬಾರಿಗೆ ಈ ಶೋನ 100 ದಿನಕ್ಕೆ ಪೂರ್ಣಗೊಳಿಸಲು ನಿರ್ಧರಿಸಾಗಿದೆ. ‘ಬಿಗ್ ಬಾಸ್ 17′ ಮುಗಿದ ನಂತರ ಕಲರ್ಸ್ ಟಿವಿಯಲ್ಲಿ ‘ಡ್ಯಾನ್ಸ್ ದೀವಾನೆ’ ಹೆಸರಿನ ಡ್ಯಾನ್ಸ್ ಶೋ ಆರಂಭವಾಗಲಿದೆ. ಕಾರ್ಯಕ್ರಮದ ಗ್ರ್ಯಾಂಡ್ ಪ್ರೀಮಿಯರ್ 2024ರ ಫೆಬ್ರವರಿ 3ರಂದು ನಡೆಯಲಿದೆ.

Exit mobile version