Site icon Vistara News

Varthur Santhosh: ಹೇಳಿಕೆ ತಿರುಚಿ ತೇಜೋವಧೆ ಎಂದು ಕಿಡಿಗೇಡಿಗಳ ವಿರುದ್ಧ ನಟ ಜಗ್ಗೇಶ್ FIR!

Actor Jaggesh FIR against Tiger Claw Statement Issue

ಬೆಂಗಳೂರು: ಕೆಲವು ದಿನಗಳ ಹಿಂದೆಯಷ್ಟೇ ಜಗ್ಗೇಶ್‌ ಅವರು ‘ರಂಗನಾಯಕ’ ಸಿನಿಮಾ ಕಾರ್ಯಕ್ರಮದಲ್ಲಿ ʻಯಾವನೋ ಕಿತ್ತೋದ್‌ ನನ್ಮಗ ರಿಯಲ್ ಆಗಿ ಹುಲಿ ಉಗುರು ಹಾಕ್ಕೊಂಡʼ ಎಂದು ಹೇಳಿದ್ದರು. ಈ ಮಾತಿಗೆ ಸೋಷಿಯಲ್‌ ಮೀಡಿಯಾದಲ್ಲಿ ಹಲವರು ಆಕ್ರೋಶ ವ್ಯಕ್ತಪಡಿಸಿದ್ದರು. ವರ್ತೂರ್‌ (Varthur Santhosh) ಕೂಡ ಮಾಧ್ಯಮವೊಂದಕ್ಕೆ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದರು. ಇದಾದ ಬಳಿಕ ಕೆಲವು ಮುಖಂಡರು ಆಕ್ಷೇಪ ವ್ಯಕ್ತಪಡಿಸಿ ಜಗ್ಗೇಶ್‌ ಕೂಡಲೇ ಕ್ಷಮೆ ಕೇಳಬೇಕು ಎಂದು ಎಚ್ಚರಿಕೆ ನೀಡಿದ್ದರು. ಆದರೀಗ ಆ ಕಿಡಿಗೇಡಿಗಳ ವಿರುದ್ಧ ನಟ ಜಗ್ಗೇಶ್ ಎಫ್‌ಐಆರ್‌ ದಾಖಲಿಸಿದ್ದಾರೆ. ವಿಚಾರ ತಿರುಚಿ ಸಾಮಾಜಿಕ ಜಾಲತಾಣದಲ್ಲಿ ತಮ್ಮ ವಿರುದ್ಧ ಮಾತನಾಡುತ್ತಿರುವವರ ಮೇಲೆ ಜಗ್ಗೇಶ್ ಕ್ರಮಕೈಗೊಳ್ಳುವಂತೆ ದೂರು ದಾಖಲಿಸಿದ್ದಾರೆ.

ಉತ್ತರ ವಿಭಾಗದ ಡಿಸಿಪಿಗೆ ಲಿಖಿತ ರೂಪದಲ್ಲಿ ನಟ ಜಗ್ಗೇಶ್ ದೂರು ನೀಡಿದ್ದು ಪೊಲೀಸರು ಎಫ್ಐಆರ್ ದಾಖಲಿಸಿಕೊಂಡಿದ್ದಾರೆ. ಜಗ್ಗೇಶ್‌ ದೂರಿನಲ್ಲಿ ʻʻರಂಗನಾಯಕ ಸಿನಿಮಾ ಕಾರ್ಯಕ್ರಮ ಇತ್ತು. ಹಿಂದೆ ಹುಲಿ ಉರುರಿನ ಬಗ್ಗೆ ಆದ ಘಟನೆಯನ್ನು ಮಾಧ್ಯಮದಲ್ಲಿ ತೋರಿಸಿದ್ದ ಬಗ್ಗೆ ಹಾಗೂ ಯಾರೊ ಒಬ್ಬ ಕಿತ್ತೋದವನು (ಗ್ರಾಮೀಣ ಭಾಷೆ) ಸಿಕ್ಕಿದ ಕಾರಣ ಅಂದರೆ ಈ ಹುಲಿ ಉಗುರಿನ ಘಟನೆಯಲ್ಲಿ ನೂರಾರು ಮಂದಿ ಸಮಸ್ಯೆ ಅನುಭವಿಸಿದ್ದಾರೆ ಎನ್ನುವ ಅರ್ಥದಲ್ಲಿ ಹಾಸ್ಯವಾಗಿ ಮಾಧ್ಯಮ ಮಿತ್ರರ ಜತೆ ಮಾತನಾಡಿದ್ದೆ. ಆದರೆ ಕೆಟ್ಟ ಪ್ರಚಾರದ ಉದ್ದೇಶದಿಂದ ನನ್ನ ಸಂಪೂರ್ಣ ವಿಚಾರ ತಿರುಚಿ ಜಾತಿ ನಿಂದನೆ, ವ್ಯಕ್ತಿ ನಿಂದನೆ ಎಂದು ಪ್ರಚಾರ ಪಡೆದು ನನ್ನ ತೇಜೋವಧೆಗೆ ಕೆಲ ಕಿಡಿಗೇಡಿಗಳು ಯತ್ನಿಸಿದ್ದಾರೆ” ಎಂದು ಜಗ್ಗೇಶ್ ದೂರಿನಲ್ಲಿ ತಿಳಿಸಿದ್ದಾರೆ. ಜತೆಗೆ ʻʻಇತ್ತೀಚಿನ ದಿನಗಳಲ್ಲಿ ಹಲವರು ಪ್ರಚಾರಕ್ಕೆಂದು ಕಾಯುತ್ತಿರುತ್ತಾರೆ. ನಾನು ಯಾರ ಬಗ್ಗೆ ಆಗಲಿ, ಜಾತಿ ಬಗ್ಗೆ ಆಗಿ ಮಾತನಾಡಿಲ್ಲ. ನನ್ನ ವೈಯಕ್ತಿಕ ಅನುಭವವನ್ನು ಮಾಧ್ಯಮದ ಮುಂದೆ ಹೇಳಿದ್ದೇನೆ. ಜಾತಿ ಗಲಭೆ, ತಪ್ಪು ಸಂದೇಶ, ಹಲ್ಲೆಯ ಬೆದರಿಕೆ ಮಾಡಿರುವ ಹೆಬ್ಬಗೋಡಿ ನಾರಾಯಣ ಸ್ವಾಮಿ ಹಾಗೂ ಆತನ ಮಾತು ಅನುಸರಿಸಿ ವಿಡಿಯೋ ಮಾಡಿದ ಮತ್ತೊಬ್ಬರ ಮೇಲೆ ಕ್ರಮ ಕಾನೂನು ಕ್ರಮಕ್ಕೆ ಒತ್ತಾಯ” ಎಂದು ಜಗ್ಗೇಶ್ ದೂರಿನಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ: Varthur Santhosh: ‘ಯಾವನೋ ಕಿತ್ತೋದ್‌ ನನ್ಮಗ’ ಹೇಳಿಕೆ; ಕ್ಷಮೆ ಕೇಳಿದ್ರೆ ಸರಿ ಎಂದು ಜಗ್ಗೇಶ್​ಗೆ ಎಚ್ಚರಿಕೆ!

ಆಗಿದ್ದೇನು ?


ಕೆಲವು ದಿನಗಳ ಹಿಂದೆಯಷ್ಟೇ ಜಗ್ಗೇಶ್‌ ಅವರು ‘ರಂಗನಾಯಕ’ ಸಿನಿಮಾ ಕಾರ್ಯಕ್ರಮದಲ್ಲಿ ಮಾತನಾಡಿ ʻʻನಾನು ಹುಲಿ ತರ ಬದುಕಬೇಕು ಎಂದು ನನ್ನ ತಾಯಿ ಹುಲಿ ಉಗುರನ್ನು ಕೊಟ್ಟಳು. ಆದರೆ ಯಾವನೋ ಕಿತ್ತೋದ್‌ ನನ್ಮಗ ರಿಯಲ್ ಆಗಿ ಹುಲಿ ಉಗುರು ಹಾಕ್ಕೊಂಡು, ಯಾವುದೋ ಟಿವಿಯಲ್ಲಿ ತಗಲಾಕ್ಕೊಂಡ ಬಳಿಕ ದೊಡ್ಡ ಸುದ್ದಿ ಆಯಿತು”ಎಂದು ಹೇಳಿದ್ದರು. ಈ ಮಾತಿಗೆ ಸೋಷಿಯಲ್‌ ಮೀಡಿಯಾದಲ್ಲಿ ಹಲವರು ಆಕ್ರೋಶ ವ್ಯಕ್ತಪಡಿಸಿದ್ದರು.

ತೂಕಕ್ಕೆ ತೂಕ ಸರಿ ಇರಬೇಕು

ಈ ಬಗ್ಗೆ ಬಿಗ್‌ಬಾಸ್ ಸ್ಪರ್ಧಿ ವರ್ತೂರು ಸಂತೋಷ್ ಮಾತನಾಡಿʻʻಅವರು ದೊಡ್ಡವರು. ನಾನು ಏನು ಹೇಳುತ್ತೇನೆ ಅಂದರೆ ಕಾಲೈ ತಸ್ಮೈ ನಮಃ ಅಷ್ಟೆ. ಕೆಲವೊಂದಕ್ಕೆ ಉತ್ತರ ಕೊಟ್ಟರೆ, ಇನ್ನು ಕೆಲವೊಂದಕ್ಕೆ ಸುಮ್ಮನಿರಬೇಕು. ಸುದೀಪಣ್ಣ ಅವರು ಹೇಳಿದಾಗೆ, ಕೆಲವೊಂದು ಜಾಗದಲ್ಲಿ ಮಾತನಾಡಬೇಕು. ಕೆಲವೊಮ್ಮೆ ಮಾತನಾಡದೇ ಸುಮ್ಮನಿದ್ದರೆ ಆ ಸೈಲೆಂಟ್ ಉತ್ತರ ಕೊಡುತ್ತೆ ಎಂದು. ತೂಕದ ಜತೆ ತೂಕವನ್ನು ಅಳೆಯಬೇಕಾದರೆ ತೂಕಕ್ಕೆ ತೂಕ ಸರಿ ಇರಬೇಕುʼʼಎಂದಿದ್ದರು.

Exit mobile version