Site icon Vistara News

BBK SEASON 10: ʻಬಿಗ್‌ ಬಾಸ್‌ʼ ಮನೆಯಲ್ಲಿ ʻಮುಟ್ಟಿನ ಕಪ್ʼ ಬಗ್ಗೆ ಜಾಗೃತಿ ಮೂಡಿಸಿದ ನಟಿ ಸಪ್ತಮಿ ಗೌಡ

Actress Sapthami Gowda has raised awareness about 'menstrual cup' in 'Bigg Boss' house

ಬೆಂಗಳೂರು: ಕರ್ನಾಟಕ ಸರ್ಕಾರವು (Government of Karnataka) ‘ಮೈತ್ರಿ ಮುಟ್ಟಿನ ಕಪ್’ (Maitri MUttina Cup Yojana) ಯೋಜನೆಯನ್ನು ಜಾರಿ ಮಾಡಿದೆ. ಯೋಜನೆಯ ರಾಯಭಾರಿ ʻಕಾಂತಾರʼ ಖ್ಯಾತಿಯ ನಟಿ ಸಪ್ತಮಿ ಗೌಡ. ಇದೀಗ ನಟಿ ಬಿಗ್‌ ಬಾಸ್‌ ಮನೆಗೆ ಎಂಟ್ರಿ ಕೊಟ್ಟು ಈ ʻಮುಟ್ಟಿನ ಕಪ್ʼ ಯೋಜನೆಯ ಕುರಿತಂತೆ ಮಾತನಾಡಿದರು. ಸಿನಿಮಾ ಜತೆಗೆ ನಟಿ ಸರ್ಕಾರ ಯೋಜನೆಯಲ್ಲೂ ಭಾಗಿಯಾಗಿ, ಮಹಿಳೆಯರ ಮುಟ್ಟಿನ ಸಮಸ್ಯೆಯ ಕುರಿತಂತೆ ಜಾಗೃತಿಗೆ ಮುಂದಾಗಿದ್ದಾರೆ.

ʻಈಗಾಗಲೇ ಶೇ. 80ರಷ್ಟು ಹೆಣ್ಣು ಮಕ್ಕಳು ಈ ʻಮುಟ್ಟಿನ ಕಪ್‌ʼವನ್ನು ಬಳಕೆ ಮಾಡುತ್ತಿದ್ದಾರೆ. ಪ್ಯಾಡ್ಸ್‌ನಿಂದ ಈ ಕಪ್‌ ಕಡೆಗೆ ಹೆಣ್ಣು ಮಕ್ಕಳಿಗೆ ಅರಿವು ಮೂಡಿಸಬೇಕು. ಇಲ್ಲಿ ಕೂಡ ಹೆಣ್ಣು ಮಕ್ಕಳು ಇದ್ದೀರಾ. ಆರೋಗ್ಯ ಮತ್ತ ಕುಟುಂಬ ಕಲ್ಯಾಣ ಅವರ ಕಡೆಯಿಂದ ಈ ಕಪ್‌ ನಿಮಗಾಗಿʼʼ ಎಂದು ನಟಿ ಮಹಿಳಾ ಸ್ಪರ್ಧಿಗಳಿಗೆ ʻಮುಟ್ಟಿನ ಕಪ್‌ʼ ನೀಡಿದರು.

ಇದನ್ನೂ ಓದಿ: BBK SEASON 10: ಮನೆಯವರು ಬಂದು ಹೋಗಾಯ್ತು, ನಮ್‌ ಮಾತು ಶುರು ಮಾಡೋಣ್ವಾ? ಕಿಚ್ಚನ ಮುನ್ಸೂಚನೆ!

ಕಿಚ್ಚನ ಮುನ್ಸೂಚನೆ!

ಡಿಸೆಂಬರ್ 23ರಂದು ಕಿಚ್ಚ ಸುದೀಪ್ (BBK SEASON 10) ಮುಂದಾಳತ್ವದಲ್ಲಿ ನಡೆದಿದ್ದ ಕೆಸಿಸಿ ಕಪ್‌ ಸೀಸನ್‌ 4 ನಿಂದಾಗಿ ವೀಕೆಂಡ್‌ ಪಂಚಾಯ್ತಿಗೆ ಗೈರಾಗಿದ್ದರು. ಇದೀಗ ಈ ವಾರ ಕಿಚ್ಚ ಕಮ್‌ ಬ್ಯಾಕ್‌ ಆಗಿದ್ದಾರೆ. ಮನೆಯಲ್ಲಿ ಎಂಟ್ರಿ ಕೊಟ್ಟ ಬಳಿಕ ಮತ್ತೆ ಮೊದಲಿನ ಆಟ ಶುರುವಾಗಲಿದೆ ಎಂದು ಸ್ಪರ್ಧಿಗಳಿಗೆ ಪರೋಕ್ಷವಾಗಿ ಎಚ್ಚರಿಕೆ ಕೊಟ್ಟಿದ್ದಾರೆ. ಈಗಾಗಲೇ ಮನೆಯಲ್ಲಿ ಹಿಂದಿನ ವಾರ ಪೂರ್ತಿ ಮನೆಯವರೊಂದಿಗೆ ಸಖತ್‌ ಚಿಲ್‌ ಆಗಿದ್ದರು ಸ್ಪರ್ಧಿಗಳು. ಇದರಿಂದ ಹೊರ ಬರುವಂತೆ ಸುದೀಪ್ (Sudeep) ಪರೋಕ್ಷವಾಗಿ ಸೂಚಿಸಿದ್ದಾರೆ.

ಬಂದ ಕೂಡಲೇ ಎಲ್ಲರ ಕೈಗೆ ಕಾಫಿ ಕಪ್‌ ಕೊಟ್ಟು ಇದರ ಅರ್ಥ ಏನು ಎಂಬುದನ್ನು ಸುದೀಪ್ ವಿವರಿಸಿದ್ದಾರೆ. ‘ಮನೆಯವರು ಬಂದರು ಹೋದರು. ನಾವು ಮೊದಲಿನ ರೀತಿ ಮಾತು ಆರಂಭಿಸೋಣ’ ಎಂದು ಸುದೀಪ್ ಹೇಳಿದ್ದಾರೆ.

ಬಿಗ್​ಬಾಸ್ ಜಿಯೋ ಸಿನಿಮಾಸ್​ನಲ್ಲಿ ಪ್ರತಿದಿನ ಲೈವ್ ಪ್ರಸಾರವಾಗುತ್ತಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಮೆಂಟ್ ಮೂಲಕ ತಿಳಿಸಿ

Exit mobile version