ಬೆಂಗಳೂರು: `ರಂಗೋಲಿ’, ‘ಮನೆಯೊಂದು ಮೂರು ಬಾಗಿಲು’, ‘ಬದುಕು’ ಮುಂತಾದ ಧಾರಾವಾಹಿಗಳನ್ನು ಪ್ರೇಕ್ಷಕರು ಮನಗೆದ್ದ ಸಿರಿ ಬಿಗ್ ಬಾಸ್ (BBK Season 10) ಈಗ ಮದುವೆಯಾಗಿರುವುದು ಗೊತ್ತೇ ಇದೆ. ಇನ್ನೂ (Actress Siri) ಯಾಕೆ ಮದುವೆ ಆಗಿಲ್ಲ? ಎಂಬ ಪ್ರಶ್ನೆಗಳನ ನಡುವೆ ಅವರು ಸದ್ದಿಲ್ಲದೇ, ಸಿಂಪಲ್ ಆಗಿ ಹಸೆ ಮಣೆ ಏರಿದ್ದರು. ಇದೀಗ ವಿಸ್ತಾರದೊಂದಿಗೆ ಮದುವೆ ಬಗ್ಗೆ ಹಲವು ವಿಚಾರಗಳನ್ನು ಹೇಳಿಕೊಂಡಿದ್ದಾರೆ. ʻʻನಾನು ಯಾವತ್ತೂ ಮದುವೆ ಬೇಡ ಎಂದು ಅಂದುಕೊಂಡಿರಲಿಲ್ಲ. ನನ್ನನ್ನು ಅರ್ಥ ಮಾಡಿಕೊಳ್ಳುವವರು ಸಿಗಬೇಕು ಎಂದು ಇತ್ತುʼಎಂದು ಸಿರಿ ಮಾತನಾಡಿದರು.
ಸಿರಿ ಮಾತನಾಡಿ ʻʻಇಷ್ಟು ವರ್ಷ ನನಗೆ ಮದುವೆ ಬಗ್ಗೆ ಏನೂ ಅನ್ನಿಸುತ್ತಿರಲಿಲ್ಲ. ನಮ್ಮ ತಾಯಿ ಬಿಟ್ಟರೆ ನಾನು ಮದುವೆ ಬಗ್ಗೆ ತಲೆ ಕೆಡಿಸಿಕೊಂಡಿರಲಿಲ್ಲ. ನಾನು ನನ್ನ ತಾಯಿಗೆ ಒಂದು ಮಾತು ಹೇಳುತ್ತ ಇದ್ದೆ. ನಿನ್ನ ಮಗಳು ಖುಷಿಯಾಗಿ ಇರಬೇಕು. ಅದೇ ಮುಖ್ಯ ಅಂದರೆ ನೋಡು ಅಂತಿದ್ದೆ. ಆದರೆ ಬಿಗ್ ಬಾಸ್ ಆದ ಬಳಿಕ ಆಗಬೇಕು ಎಂಬ ಮನಸ್ಸು ಬಂತು. ಆದರೆ ಒತ್ತಡ ಅಂತೇನಿಲ್ಲ. ಹೀಗೆ ಆಗಬೇಕು ಎಂದು ಅನ್ನಿಸಿತ್ತು. ಹೊರಗೆ ಬಂದ ಮೇಲೆ ಈ ಬಗ್ಗೆ ನಿರ್ಧಾರ ಮಾಡಿದೆ. ಬಳಿಕ ಇವರನ್ನ ಮದುವೆ ಆಗಬಹುದು ಎಂದು ಅನ್ನಿಸಿದ ಮೇಲೆ ನಾನು ಮದುವೆಯಾದೆʼʼಎಂದರು.
ʻʻನಾನು ಯಾವತ್ತೂ ಮದುವೆ ಬೇಡ ಎಂದು ಅಂದುಕೊಂಡಿಲ್ಲ. ನನ್ನ ಅರ್ಥ ಮಾಡಿಕೊಳ್ಳುವವರು ಸಿಗಬೇಕು ಎಂದೇ ಇತ್ತು. ಮದುವೆ ವಿರುದ್ಧನೂ ಅಲ್ಲ ನಾನು. ನನ್ನ ಹಣೆಬರಹದಲ್ಲಿ ಈಗ ಬರ್ದಿದೆ. ಮನೆಯಲ್ಲಿ ಪ್ರಯತ್ನ ಮಾಡಿದ್ದರು. ಆದರೆ ಈಗ ಆ ಕಾಲ ಕೂಡಿ ಬಂದಿದೆ. ಮದುವೆ ಬೇಗ ಆಗಿ ಏನಾದರೂ ಸಮಸ್ಯೆ ಮಾಡಿಕೊಳ್ಳುವುದಿಕ್ಕಿಂತ , ನಾನು ರೆಡಿ ಇದ್ದೀನಿ.. ಎಂದು ರೆಡಿ ಆದ ಮೇಲೆ ಮದುವೆ ಮದುವೆಯಾಗೋದು ಸರಿ. ಯಾರಿಗಾದರೂ ಇದು ದೊಡ್ಡ ನಿರ್ಧಾರ. ನನಗೆ ನನ್ನ ಪತಿ ಬದುಕು ಸೀರಿಯಲ್ ನಿಂದ ಪರಿಚಯ. ಇಬ್ಬರು ಸ್ನೇಹಿತರಾಗಿದ್ದೇವು. ಬಳಿಕ ಮತ್ತೆ ವರ್ಷಗಳ ನಂತರ ಟಚ್‌ನಲ್ಲಿ ಬಂದೆವು. ನಂತರ ಇಬ್ಬರು ಮದುವೆಯಾಗೋಣ ಎಂದು ನಿರ್ಧಾರ ಮಾಡಿದೆವು. ಈಗಲೂ ಫ್ರೆಂಡ್ ಜತಗೆ ಇದ್ದೇನೆ ಎಂದು ಅನ್ನಿಸುತ್ತೆ. ಇಬ್ಬರಲ್ಲೂ ಪ್ರಪೋಸ್ ಏನೂ ಆಗಿಲ್ಲ. ಮಾತುಕತೆ ಆಯ್ತು. ಹಾಗೇ ಮದುವೆ ಆದೆವುʼʼಎಂದರು.
ಇದನ್ನೂ ಓದಿ: Actress Siri: ಪ್ರೀತಿ ಏನೆಂದು ನನಗೆ ತಿಳಿದಿದ್ದರೆ ಅದಕ್ಕೆ ಕಾರಣ ನೀವೆ; ಪತಿಯನ್ನು ಬಣ್ಣಿಸಿದ ಸಿರಿ!
ಜೂನ್ 13ರಂದು ಸಿರಿ ಹಾಗೂ ಪ್ರಭಾಕರ್ ಬೋರೇಗೌಡ ಅವರ ಮದುವೆ ನೆರವೇರಿತ್ತು. ಚಿಕ್ಕಬಳ್ಳಾಪುರ ಬಳಿ ಇರುವ ಭೋಗ ನಂದೀಶ್ವರ ದೇವಾಲಯದಲ್ಲಿ ಈ ವಿವಾಹ ಜರುಗಿತ್ತು. ಸಿರಿ ಅವರಿಗೆ ಈಗ 40 ವರ್ಷ ವಯಸ್ಸು ಎನ್ನಲಾಗಿದೆ. ಕೆಲವು ದಿನಗಳ ಹಿಂದೆ ಕಲರ್ಸ್ ಕನ್ನಡದ ʻರಾಮಾಚಾರಿʼ ಧಾರಾವಾಹಿಯಲ್ಲಿ ನಟಿ ಬಣ್ಣ ಹಚ್ಚಿದ್ದರು. ಈಗ ಪರಭಾಷೆಯ ಕಿರುತೆರೆಯಲ್ಲಿಯೂ ಮಿಂಚುತ್ತಿದ್ದಾರೆ. ಕೆಲ ಸಿನಿಮಾಗಳಲ್ಲಿ ಕೂಡ ಸಿರಿ ಅವರು ನಟಿಸಿದ್ದಾರೆ. 30 ವರ್ಷಗಳ ಕಾಲ ಕನ್ನಡ ಕಿರುತೆರೆಯಲ್ಲಿ ಸಿರಿವಂತೆಯಾಗಿ ಮೆರೆದ ಸಿರಿ ಯಾಕೆ ಮದುವೆಯಾಗಲಿಲ್ಲ ಎಂದು ನೆಟ್ಟಿಗರು ನಟಿಗೆ ಹಲವು ಬಾರಿ ಪ್ರಶ್ನೆ ಮಾಡಿದ್ದೂ ಇದೆ.