Site icon Vistara News

BBK Season 10: ಇಂದು ಎಲಿಮಿನೇಶನ್‌ ಬಳಿಕ ಕಿಚ್ಚನ ಪಂಚಾಯ್ತಿ! ಯಾರು ಹೊರಗೆ?

After the elimination today, Kicchan Panchayati! Who's out

ಬೆಂಗಳೂರು: ಬಿಗ್‌ ಬಾಸ್‌ ಸೀಸನ್‌ 10ರ (BBK Season 10) ಆರನೇ ವಾರ ಕಿಚ್ಚ ಸುದೀಪ್‌ ಶನಿವಾರವೇ ಎಲಿಮಿನೇಶನ್‌ ಇರುವ ಬಗ್ಗೆ ಹೇಳಿಕೊಂಡಿದ್ದಾರೆ. ಈಗಾಗಲೇ ಜಿಯೋ ಹಾಗೂ ಕಲರ್ಸ್‌ ಪ್ರೋಮೊ ಹಂಚಿಕೊಂಡಿದ್ದು, ಶನಿವಾರವೇ ಒಬ್ಬ ಸ್ಪರ್ಧಿ ಮನೆಯಿಂದ ಹೊರಗೆ ಹೋಗುತ್ತಿರುವುದು ಖಾತ್ರಿಯಾದಂತಿದೆ.

ಹೋದವಾರ ಕಿಚ್ಚ ಸುದೀಪ್‌ ಅವರು ವರ್ತೂರ್‌ ಸಂತೋಷ್‌ ಅವರು ತಾವಾಗಿಯೇ ಮನೆಯಿಂದ ಆಚೆ ಹೋಗುತ್ತೇನೆ ಎಂದಾಗ ವರ್ತೂರ್‌ ಅವರಿಗೆ ವೋಟ್‌ ಬಗ್ಗೆ ಮಾಹಿತಿ ಹಂಚಿಕೊಂಡು ಕಿಚ್ಚ ಅಲ್ಲಿಂದ ಹೊರಟು ನಿಂತಿದ್ದರು. ಆದರೀಗ ವೇದಿಕೆಯಲ್ಲಿ ಕಿಚ್ಚ ಈ ವಾರ ಶನಿವಾರವೇ ಎಲಿಮಿನೇಶನ್‌ ಇದೆ ಎನ್ನುವ ಮಾಹಿತಿ ಹಂಚಿಕೊಂಡರು. ಕಿಚ್ಚ ಮಾತನಾಡಿʻʻಲಾಸ್ಟ್‌ ವರೆಗೂ ಎಲಿಮಿನೇಶನ್‌ ಬರುವ ಬದಲು. ಈ 10 ಸೀಸನ್‌ನಲ್ಲಿ ಮೊಟ್ಟ ಮೊದಲ ಬಾರಿಗೆ , ವಾರದ ಕಥೆ ಮೊದಲ್‌ ಸೆಗ್‌ಮೆಂಟ್‌ ಮುಂಚೆ, ಎಲಿಮಿನೇಶನ್‌ ಮಾಡಿದ ನಂತರ ಪಂಚಾಯ್ತಿ ಮುಂದುವರಿಸುತ್ತೇನೆʼʼ ಎಂದರು. ಹೀಗಾಗಿ ಇಂದಿನ ಸಂಚಿಕೆಯಲ್ಲಿ ಯಾರು ಮನೆಯಿಂದ ಆಚೆ ಹೋಗಲಿದ್ದಾರೆ ಎಂಬ ಮಾಹಿತಿ ರಿವೀಲ್‌ ಆಗಲಿದೆ.

ಒಟ್ಟು 8 ಮಂದಿ ನಾಮಿನೇಟ್‌

ಬಿಗ್‌ ಬಾಸ್‌ ಸೀಸನ್‌ 10ರ (BBK SEASON 10) ಆರನೇ ವಾರ ಒಟ್ಟು 8 ಮಂದಿ ನಾಮಿನೇಟ್‌ ಆಗಿದ್ದಾರೆ. ಈ ಬಾರಿ ಕೂಡ ಮನೆಯಲ್ಲಿ ಗ್ರೂಪಿಸಂ ನಡೆದಿದ್ದು ಬಿಗ್‌ ಬಾಸ್‌ ಅಸ್ತ್ರದಿಂದ ಮನೆಮಂದಿಯ ಪ್ಲ್ಯಾನ್‌ಗಳು ತಲೆ ಕೆಳಗಾಗಿದೆ. ಈ ವಾರ ಭಾಗ್ಯಶ್ರೀ ಅವರನ್ನು ಮೈಕಲ್‌ ನೇರವಾಗಿ ನಾಮಿನೇಟ್‌ ಮಾಡಿದರೆ, ಉಳಿದವರು ಲುಡೋ ಗೇಮ್‌ನಿಂದಾಗಿ ನಾಮಿನೇಟ್‌ ಆದರು. ಲುಡೋ ಗೇಮ್‌ ಅನುಸಾರ ವಿನಯ್ ಗೌಡ, ಇಶಾನಿ, ನಮ್ರತಾ ಗೌಡ, ತನಿಷಾ ಕುಪ್ಪಂಡ, ತುಕಾಲಿ ಸಂತು, ಕಾರ್ತಿಕ್ ಮಹೇಶ್ ಹಾಗೂ ನೀತು ನಾಮಿನೇಟ್ ಆದರು.

ಇದನ್ನೂ ಓದಿ: BBK Season 10: ಬಿಗ್‌ ಬಾಸ್‌ ಟಿಆರ್‌ಪಿಯಲ್ಲಿ ಹಳೆಯ ರೆಕಾರ್ಡ್ ಎಲ್ಲ ಪುಡಿ ಪುಡಿ! ಇಂಟರೆಸ್ಟಿಂಗ್ ವಿಷಯಗಳು ಏನು?

ವರ್ತೂರ್‌ ಸಂತೋಷ್‌ ಹೋಗ್ತಾರಾ?

ವರ್ತೂರ್‌ ಅವರು ʻʻಮನೆಯಲ್ಲಿ ಇರಲು ಕಷ್ಟವಾಗುತ್ತಿದೆ. ಹೊರಗಡೆ ಒಂದು ಇನ್ಸಿಡೆಂಟ್‌ ನಡೆಯಿತು. ನಾನು ಅದರಿಂದ ಹೊರಗಡೆ ಬಂದು ಆಡಬೇಕು ಅಂದರೂ ಕೂಡ ನನಗೆ ಆಡಲು ಆಗುತ್ತಿಲ್ಲ. ನಾನು ಹೊರಗಡೆ ಇರಬೇಕು ಎಂದು ಇಷ್ಟ ಪಡುತ್ತೇನೆʼʼಎಂದಿದ್ದರು. ಸುದೀಪ್‌ ಕೂಡ ಗರಂ ಆಗಿ ʻʻನಿಮಗೆ ಬಂದಿರುವಂತಹ ವೋಟ್ಸ್‌ 34,15, 472. ಜನಗಳ ವಿರುದ್ಧ ನಾನು ಹೋಗೋದಕ್ಕೆ ಆಗಲ್ಲ. ಹೋಗೋದು ಇಲ್ಲ. ನನಗೆ ಸ್ವಲ್ಪ ನಿರಾಸೆಯಾಯ್ತುʼʼಎಂದು ವೇದಿಕೆಯಿಂದ ಹೊರಟೇ ಬಿಟ್ಟಿದ್ದರು. ಈ ವಾರದ ಸಂಚಿಕೆಯಲ್ಲಿ ವರ್ತೂರ್‌ ಅವರು ಈ ಬಗ್ಗೆ ಮಾತನಾಡುವ ʻʻನನಗೆ ಇಂಟ್ರೆಸ್ಟ್‌ ಇಲ್ಲʼʼಎಂದು ಸುದೀಪ್‌ ಅವರು ವರ್ತೂರ್‌ ಮಾತನ್ನು ಕೇಳಲು ರೆಡಿಯಿರಲಿಲ್ಲ.

ಬಿಗ್​ಬಾಸ್ ಜಿಯೋ ಸಿನಿಮಾಸ್​ನಲ್ಲಿ ಪ್ರತಿದಿನ ಲೈವ್ ಪ್ರಸಾರವಾಗುತ್ತಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version