ಬೆಂಗಳೂರು: ಬಿಗ್ ಬಾಸ್ ಸೀಸನ್ 10ರ (BBK Season 10: ) ಮೊದಲ ನಾಮಿನೇಶನ್ ಪ್ರಕ್ರಿಯೆ ಅ.10ರಂದು ನಡೆಯಿತು. ಸಮರ್ಥರು ಹಾಗೂ ಅಸಮರ್ಥರ ನಡುವೆ ಎರಡು ನಾಮಿನೇಶನ್ ವಿಧಾನಗಳು ನಡೆದವು. ಅಸಮರ್ಥರ ವಿಭಾಗದಲ್ಲಿ ತನಿಷಾ ಕುಪ್ಪುಂಡ ನಾಮಿನೇಟ್ ಆದ ಸ್ಪರ್ಧಿಯಾಗಿದ್ದಾರೆ. ಇದಕ್ಕೂ ಮೊದಲು ನಮ್ರತಾ, ಸಿರಿ, ಭಾಗ್ಯಾಶ್ರೀ ಹಾಗೂ ಇಶಾನಿ ಅವರು ತನಿಷಾ ಅವರ ಅಡುಗೆಯ ಬಗ್ಗೆ ಚರ್ಚಿಸಿದ್ದರು. ರ್ಯಾಪರ್ ಇಶಾನಿ ಹೆಚ್ಚಾಗಿ ತನಿಷಾ ಕುರಿತು ಅಸಮಾಧಾನ ಹೊರಹಾಕಿದ್ದರು. ಆದರೀಗ ನಮ್ರತಾ ಹಾಗೂ ತನಿಷಾ ನಡುವೆ ಟೀಕೆಗಳ ವಿಮರ್ಶೆ ಜೋರಾದಂತೆ ಕಾಣುತ್ತಿದೆ. ಬಿಗ್ ಬಾಸ್ ಇದೀಗ ಈ ಪ್ರೋಮೊ ಹಂಚಿಕೊಂಡಿದೆ.
ನಮ್ರತಾ ಅವರು ತನಿಷಾ ಅವರನ್ನು ನಾಮಿನೇಟ್ ಮಾಡಿದ್ದಾರೆ. ಮಾಡುವಾಗ ಕಾರಣ ಕೂಡ ತಿಳಿಸಿದ್ದರು. ʻನಾವೆಲ್ಲರೂ ಏನಾದರೂ ಒಂದು ಚಟುವಟಿಕೆ ಮಾಡಬೇಕಾದರೆ ಅಥವಾ ಯಾವುದೇ ಒಂದು ಇನ್ಸ್ಟ್ರಕ್ಷನ್ ಫಾಲೋ ಮಾಡಬೇಕಾದರೆ, ತನಿಷಾ ಬೇರೆ ಸ್ಟ್ಯಾಂಡ್ ತೆಗೆದುಕೊಳ್ಳುತ್ತಾರೆʼʼ ಎಂದು ಕಾರಣ ತಿಳಿಸಿದ್ದರು. ಇದೀಗ ಈ ವಿಚಾರವಾಗಿ ತನಿಷಾ ಮತ್ತು ನಮ್ರತಾ ನಡುವೆ ವಾಗ್ವಾದ ಉಂಟಾಗಿದೆ. ತನಿಷಾ ಮಾತನಾಡಿ ʻʻನನ್ನ ಧ್ವನಿ ಜೋರಾಗಿಯೇ ಇದೆ. ಟಾಸ್ಕ್ ಬಂದಾಗ ನನಗೆ ಅದು ಬೇಕು ಇದು ಬೇಕು ಎಂದು ನಾನು ಹೇಳಿಲ್ಲ. ನನಗೆ ಯಾರಾಗಾದ್ರೂ ಇರಿಟೇಟ್ ಮಾಡಿ ಎನೂ ಸಿಗಬೇಕಿಲ್ಲʼʼ ಎಂದು ಬಿಗ್ ಬಾಸ್ ಕ್ಯಾಮೆರಾ ಮುಂದೆ ಕಣ್ಣೀರು ಹಾಕಿದ್ದಾರೆ. ನಮ್ರತಾ ಕೂಡ ಮಾತನಾಡಿ ʻʻನಿಮ್ಮ ಧ್ವನಿ ಡಾಮಿನೇಟ್ ಆಗಿತ್ತು. ಟಾಸ್ಕ್ ಬಂದಾಗ ನನಗೆ ಅದು ಬೇಕು. ಇದು ಬೇಕು ಅನ್ನುವುದಲ್ಲ. ನೀವು ವಿಷಯವನ್ನು ತಿರುಚುತ್ತಿದ್ದೀರಿ. ನನ್ನ ಮುಖದ ಮೇಲೆ ಬಂದು ಮಾತನಾಡುವಾಗ, ಕಿರಿ ಕಿರಿಯಾಗುತ್ತದೆ. ಎಲ್ಲ ಫ್ರಸ್ಟ್ರೇಶನ್ವನ್ನು ನನ್ನ ಮೇಲೆ ಅಥವಾ ಬೇರೆಯವರ ಮೇಲೆ ಹಾಕೋಕಾಗಲ್ಲʼ ʼಎಂದಿದ್ದಾರೆ.
ಇದನ್ನೂ ಓದಿ: BBK Season 10: ಹೆಣ್ತನ ಒಪ್ಪಿಕೊಳ್ಳಲು, ಒಪ್ಪಿಸಲು ಪಟ್ಟ ಪಾಡು ನೆನೆದು ಕಣ್ಣೀರಿಟ್ಟ ನೀತು!
ಈ ವಾರ ನಾಮಿನೇಟ್ ಆದವರು ಯಾರು?
ಆರು ಅಸಮರ್ಥರಿಗೆ ನಾಮಿನೇಶನ್ ಮಾಡುವ ಅಧಿಕಾರ ಬಿಗ್ ಬಾಸ್ ನೀಡಿರಲಿಲ್ಲ. ಹನ್ನೊಂದು ಸಮರ್ಥರಷ್ಟೇ ನಾಮಿನೇಶನ್ ಮಾಡಬೇಕಿತ್ತು. ಅಸಮರ್ಥರಲ್ಲಿ ಅತಿ ಹೆಚ್ಚು ಬಾರಿ ನಾಮಿನೇಟ್ ಆದವರು, ಡ್ರೋನ್ ಪ್ರತಾಪ್, ಸಂತೋಷ್ , ಕಾರ್ತಿಕ್ ಗೌಡ, ತನಿಷಾ ಕುಪ್ಪುಂಡ. ನಾಮಿನೇಶನ್ನ ಎರಡನೇ ಹಂತದ ಸಮರ್ಥರ ವಿಭಾಗದಲ್ಲಿ ಸ್ನೇಕ್ ಶ್ಯಾಮ್, ಮೈಕಲ್, ನೀತು, ಸಿರಿ ನಾಮಿನೇಟ್ ಆದರು.