ಬೆಂಗಳೂರು: ʻಹಳ್ಳಿಕಾರ್ʼ ವರ್ತೂರ್ ಸಂತೋಷ್ (Varthur Santhosh) ಅವರು ʻಬಿಗ್ ಬಾಸ್ ಸೀಸನ್ ಹತ್ತರʼ 4ನೇ ರನ್ನರ್ ಅಪ್ ಆಗಿದ್ದರು. ಹೊರಗೆ ಬಂದ ಮೇಲೆ ರೇಸ್ ಮಾಡುವುದಕ್ಕೆ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದಾರೆ. ವೇದಿಕೆ ಮೇಲೆ ವರ್ತೂರ್ ಅವರು ಕಿಚ್ಚ ಸುದೀಪ್ ಅವರಿಗೆ ರೇಸ್‌ಗೆ ಆಹ್ವಾನ ನೀಡಿದ್ದರು. ಸುದೀಪ್ ಕೂಡ ರೇಸ್‌ಗೆ ಬರುವುದಾಗಿ ಹೇಳಿದ್ದರು. ಕಿಚ್ಚ ಸುದೀಪ್ ಕೂಡ ಬಿಗ್‌ಬಾಸ್ ಮುಗಿದ ಮೇಲೆ ಸ್ಪರ್ಧಿಗಳನ್ನು ಭೇಟಿಯಾಗಿ, ವಿಶೇಷವಾದ ಉಡುಗೊರೆ ಕಳುಹಿಸಿ ಕೊಟ್ಟಿದ್ದಾರೆ. ಹಾಗೇ ವರ್ತೂರು ಸಂತೋಷ್ ಅವರಿಗೂ ಸ್ಪೆಷಲ್ ಗಿಫ್ಟ್‌ವೊಂದನ್ನು ಕಳುಹಿಸಿಕೊಟ್ಟಿದ್ದಾರೆ. ಈ ಬಗ್ಗೆ ವರ್ತೂರ್ ಮಾಧ್ಯಮದ ಮುಂದೆ ಹೇಳಿಕೊಂಡರು.
ವರ್ತೂರ್ ಸಂತೋಷ್ ಅವರಿಗೆ ಸುದೀಪ್ ಅವರು ಜಾಕೆಟ್ ಗಿಫ್ಟ್ ಆಗಿ ಕೊಟ್ಟಿದ್ದಾರೆ. ಇದನ್ನು ಕಿಚ್ಚ ಸುದೀಪ್ ಅವರು ಶೋನಲ್ಲಿ ಧರಿಸಿದ್ದರು. ಕ್ಯಾಮೆರೆ ಮುಂದೆ ಜಾಕೆಟ್ ತೋರಿಸಿ ವರ್ತೂರ್ ಮಾತನಾಡಿ ʻʻನಾನು ಈ ಜಾಕೆಟ್ ಅನ್ನು ಇನ್ನೂ ಹಾಕಿಲ್ಲ. ಸುದೀಪ್ ಅವರು ಬಂದ ದಿನ ಹಾಕಿಕೊಳ್ಳೋಣ ಎಂದು. ತುಂಬಾ ಚೆನ್ನಾಗಿದೆ. ಅವರೇ ಹಾಕಿರುವಂತಹ ಜಾಕೆಟ್ ಇದು. ಕಲರ್ ತುಂಬಾ ಚೆನ್ನಾಗಿದೆ. ಎಲ್ಲ ಕಾರ್ಯಕ್ರಮಗಳಿಗೂ ಸೂಟ್ ಆಗುತ್ತೆ. ಎಲ್ಲರಿಗೂ ಬೇರೆ ಬೇರೆ ಗಿಫ್ಟ್ ಕೊಟ್ಟಿದ್ದಾರೆ. ಮನೆಯಲ್ಲಿ ಮೀಟ್ ಆಗಿದ್ದಾರೆ. ಕಾರಣಾಂತರಗಳಿಂದ ನನಗೆ ಸಾಧ್ಯವಾಗಿರಲಿಲ್ಲ. ನಮ್ಮ ರೇಸ್‌ಗೆ ಬರುತ್ತೇನೆ ಎಂದಿದ್ದೇ ನಮಗೆ ಖುಷಿ. ಅಣ್ಣನ ಕೈಯಿಂದ ಮನೆಯಲ್ಲಿ ಇಡುವಂತಹದ್ದು ಏನಾದರೂ ಗಿಫ್ಟ್ ಕೊಟ್ಟರೆ ನನಗೆ ಇನ್ನೂ ತುಂಬಾನೇ ಖುಷಿʼʼ ಎಂದು ಮಾತನಾಡಿದರು.
ವರ್ತೂರು ಸಂತೋಷ್ ಹಳ್ಳಿಕಾರ್ ರೇಸ್‌ಗೆ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದಾರೆ. ತಮ್ಮನ್ನು ವಿರೋಧಿಸುವ ಬಗ್ಗೆನೂ ವರ್ತೂರು ಸಂತೋಷ್ ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ. ಈಗಾಗಲೇ ವೈಯಕ್ತಿಕ ಜೀವನ ಬಗ್ಗೆ ಪ್ರಶ್ನೆ ಕೇಳಿದ್ದಕ್ಕೆ ವರ್ತೂರ್ ಅವರು ʻʻಇದು ಪರ್ಸನಲ್ ವಿಚಾರ. ಇದನ್ನು ಪಬ್ಲಿಕ್ನಲ್ಲಿ ಹೇಳುವ ಮುಠಾಳ ನಾನಲ್ಲ. ಯಾರೋ ಮುಠಾಳರು, ಅಂಥ ಕೆಲಸ ಮಾಡಿದ್ದಾರೆ ಎಂದರೆ ಅವರ ಮಟ್ಟಕ್ಕೆ ಇಳಿಯಲು ನಾವು ರೆಡಿ ಇಲ್ಲ. ಎಲ್ಲರ ಮನೆಯ ದೋಸೆ ಕೂಡ ತೂತು. ಕೆಲವರ ಮನೆ ಹಂಚೇ ತೂತಾಗಿರುತ್ತದೆ. ನಿಮಗೆ ಅರ್ಥ ಆಗಿದೆ ಎಂದು ಭಾವಿಸುತ್ತೇನೆʼʼ ಎಂದು ಗರಂ ಆಗಿಯೇ ಹೇಳಿದ್ದರು.