Site icon Vistara News

BBK SEASON 10: ಬಾಯಲ್ಲಿ ಆಟ ಆಡೋದಲ್ಲ, ಪ್ರೂವ್‌ ಮಾಡು; ತನಿಷಾ ವಿರುದ್ಧ ನಮ್ರತಾ ಗರಂ!

namratha tanisha war in bbk 10

ಬೆಂಗಳೂರು: ಬಿಗ್‌ ಬಾಸ್‌ ಸೀಸನ್‌ 10 (BBK SEASON 10) ಹನ್ನಂದನೇ ವಾರಕ್ಕೆ ಕಾಲಿಟ್ಟಿದೆ. ಈ ವಾರದ ʻಕೊಳೆ ಒಳ್ಳೇದಲ್ಲ’ ಟಾಸ್ಕ್‌ನಲ್ಲಿ ಸ್ಪರ್ಧಿಗಳ ಮಧ್ಯೆ ವಾರ್‌ಗಳೇ ನಡೆದು ಹೋಗಿದೆ. ಒಂದು ಕಡೆ ಅವಿನಾಶ್‌ ಹಾಗೂ ವಿನಯ್‌ ಕುಸ್ತಿ ಮಾಡಿದರೆ, ತನಿಷಾ ಹಾಗೂ ನಮ್ರತಾ ನಡುವೆ ಇನ್ನೊಂದು ರೀತಿಯ ಜಗಳ ಆಯಿತು. ಮೊದಲಿಂದಲೂ ನಮ್ರತಾ ಅವರಿಗೆ ತನಿಷಾ ಅವರನ್ನು ಕಂಡರೆ ಅಷ್ಟಕಷ್ಟೆ ಆಗಿತ್ತು. ʻಕೊಳೆ ಒಳ್ಳೇದಲ್ಲ’ ಟಾಸ್ಕ್‌ನಲ್ಲಿಯೂ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ. ಎದುರಾಳಿ ತಂಡದ ಮಾಲೀಕರಾದ ತನಿಷಾ ವಿರುದ್ಧ ಸಿಟ್ಟಾದ ನಮ್ರತಾ ‘’ಐ ಆಮ್ ಗೋಯಿಂಗ್ ಟು ಸ್ಲಾಪ್ ಹರ್‌. ಎ ಟೈಟ್‌ ಸ್ಲಾಪ್ ಆನ್ ಹರ್ ಫೇಸ್‌’’ ಎಂದು ಕಿಡಿಕಾರಿದ್ದಾರೆ.

ಟಾಸ್ಕ್‌ ಏನು?

‘ಕೊಳೆ ಒಳ್ಳೇದಲ್ಲ’ ಎಂಬ ಟಾಸ್ಕ್ ಬಿಗ್‌ ಬಾಸ್‌ ನೀಡಿದ್ದರು. ಪ್ರತಿ ತಂಡದ ಆಟಗಾರರು ಎದುರಾಳಿ ತಂಡದ ಆಟಗಾರರಿಂದ ತಮಗೆ ಮೀಸಲಾಗಿರುವ ಬಟ್ಟೆಗಳನ್ನು ರಕ್ಷಿಸಿ, ಶುಭ್ರಗೊಳಿಸಬೇಕಿತ್ತು. ಪ್ರತಿ ತಂಡದಲ್ಲಿ ಇಬ್ಬರು ಬಟ್ಟೆ ಒಗೆದರೆ, ಇಬ್ಬರು ತಮ್ಮ ತಂಡದ ಬಟ್ಟೆಗಳನ್ನು ರಕ್ಷಿಸಿ, ಎದುರಾಳಿ ತಂಡದ ಬಟ್ಟೆಗಳಿಗೆ ಬಣ್ಣ ಎರಚಬೇಕಿತ್ತು. ಮೂರು ಸುತ್ತಿನಲ್ಲಿ ಈ ಟಾಸ್ಕ್‌ ನಡೆಯಲಿದ್ದು, ಪ್ರತಿ ಸುತ್ತಿನಲ್ಲಿ ಅತೀ ಹೆಚ್ಚು ಬಟ್ಟೆಗಳನ್ನು ಶುಭ್ರಗೊಳಿಸುವ ತಂಡ ಈ ಟಾಸ್ಕ್ ಗೆದ್ದಂತೆ ಎಂದು ಬಿಗ್ ಬಾಸ್‌ ಘೋಷಿಸಿದ್ದರು. ಈ ವೇಳೆ ಸ್ಪರ್ಧಿಗಳ ಮಧ್ಯೆ ಮಾರಾ ಮಾರಿಯಾಗಿದೆ.

ಮೊದಲ ಸುತ್ತಿನಲ್ಲಿ ಡ್ರೋನ್‌ ಪ್ರತಾಪ್‌, ನಮ್ರತಾ ಅವರು ಸಂಗೀತಾ ಟೀಂನಿಂದ ಬಟ್ಟೆ ಒಗೆದರೆ, ಮೈಕಲ್ ಮತ್ತು ಅವಿನಾಶ್‌ ಶೆಟ್ಟಿ ರಕ್ಷಿಸಿಕೊಳ್ಳಬೇಕಿತ್ತು. ತನಿಷಾ ತಂಡದಲ್ಲಿ ವರ್ತೂರ್‌ ಹಾಗೂ ತುಕಾಲಿ ಬಟ್ಟೆ ಒಗೆದರೆ, ಬಟ್ಟೆ ರಕ್ಷಿಸಲು ವಿನಯ್ ಮತ್ತು ಕಾರ್ತಿಕ್ ಇದ್ದರು. ಮೊದಲ ಸುತ್ತಿನಲ್ಲಿ ಸಂಗೀತಾ ತಂಡ ಗೆಲುವು ಸಾಧಿಸಿತು. ಎರಡನೇ ಸುತ್ತಿನಲ್ಲಿ ತನಿಷಾ ತಂಡ ಗೆದ್ದರೆ, ಮೂರನೇ ಸುತ್ತಿನಲ್ಲಿ ಸಂಗೀತಾ ತಂಡ ಗೆಲುವು ಸಾಧಿಸಿತು.

ಇದನ್ನೂ ಓದಿ: BBK SEASON 10: ಬಿಗ್‌ ಬಾಸ್‌ ಸೀಸನ್‌ 10ರ ಸ್ಪರ್ಧಿಗಳು ನಟಿಸಿರುವ ಧಾರಾವಾಹಿಗಳು ಯಾವವು?

ತನಿಷಾ ಹೇಳೋದೆಲ್ಲಾ ಕರೆಕ್ಟ್

ಈ ವೇಳೆ ನಮ್ರತಾ ಹಾಗೂ ತನಿಷಾ ನಡುವೆ ಮಾತಿನ ಚಕಮಕಿ ನಡೆಯಿತು. ಮೊದಲಿಗೆ ತನಿಷಾ ಅವರು ಸಂಗೀತಾ ತಂಡದ ವಿಚಾರವಾಗಿ ʻʻಒಂದನ್ನೇ ಒಗೆದು ಒಗೆದು ಒಗೆದು ಅಲ್ಲೇ ಇಟ್ಟುಕೊಂಡಿದ್ದಾರೆ’ ;ಎಂದರು. ಈ ವೇಳೆ ನಮ್ರತಾಗೆ ತನಿಷಾ ಅವರ ಮಾತು ಕೋಪ ಬರಿಸಿದೆ. ʻʻತನಿಷಾ ಹೇಳೋದೆಲ್ಲಾ ಕರೆಕ್ಟ್. ನಮ್ಮ ಹಾರ್ಡ್‌ ವರ್ಕ್ ಏನೂ ಇಲ್ಲ. ಐ ಆಮ್ ಗೋಯಿಂಗ್ ಟು ಸ್ಲಾಪ್ ಹರ್‌. ಟೈಟ್ ಸ್ಲಾಪ್ ಆನ್ ಹರ್ ಫೇಸ್ʼʼಎಂದು ಕಿರುಚಾಡಿದರು. ಮೂರನೇ ಸುತ್ತಿನಲ್ಲಿ ತನಿಷಾ ಅವರು ಮತ್ತೆ ಸಂಗೀತಾ ತಂಡದವರು ಸುಮ್ಮನೆ ಒಣ ಹಾಕಿದ್ದಾರೆ ಎಂದಾಗ ಮತ್ತೆ ನಮ್ರತಾ ರೊಚ್ಚಿಗೆದ್ದರು. ’ಏಯ್.. ಸುಮ್ ಸುಮ್ನೆ ಹಾಗೆ ಮಾತನಾಡಬಾರದು. ಒಗೆದಿದ್ದೇನೆ ಎಲ್ಲಾ’’ ಎಂದು ಗರಂ ಆಗಿ ನಮ್ರತಾ ಹೇಳಿದರು.

ಮೂರು ಸುತ್ತು ಆದ ಬಳಿಕ ಉತ್ತಮ ಪ್ರದರ್ಶನ ನೀಡಿದ್ದು ಯಾರು ಎಂದು ಒಮ್ಮತದ ನಿರ್ಧಾರ ಘೋಷಿಸಿ ಎಂದು ಬಿಗ್‌ ಬಾಸ್‌ ಆದೇಶ ಹೊರಡಿಸಿದರು. ಆಗ ತನಿಷಾ ಅವರು ʻʻಜಾಸ್ತಿ ಬಟ್ಟೆಗಳನ್ನ ಒಗೆದವರು ವರ್ತೂರು ಸಂತೋಷ್. ಪ್ರತಾಪ್ ಇದ್ದಾಗ ತುಂಬಾ ಚೆನ್ನಾಗಿ ಬಟ್ಟೆಗಳನ್ನ ಒಗೆಯುತ್ತಿದ್ದರು. ನಮ್ರತಾಗೆ ಹೋಲಿಸಿದರೆ ವರ್ತೂರು ಸಂತೋಷ್‌ ತುಂಬಾ ಚೆನ್ನಾಗಿ ಬಟ್ಟೆಗಳನ್ನ ಒಗೆಯುತ್ತಿದ್ದರುʼಎಂದರು.

ಇದನ್ನೂ ಓದಿ: BBK SEASON 10: ತನಿಷಾ VS ಸಂಗೀತಾ; ಒಂದೇ ಟೀಂನಲ್ಲಿ ಜೋಡೆತ್ತುಗಳು!

ನಮ್ರತಾ ಕೆಂಡ!

ಪ್ರತಿ ಬಾರಿ ತನಿಷಾ ಅವರು ಮಾಡಿದ ಆರೋಪ ಹಾಗೂ ಈ ಮಾತುಗಳನ್ನು ಕೇಳುತ್ತಿದ್ದಂತೆ ನಮ್ರತಾ ಅವರು ತಾಳ್ಮೆಯನ್ನು ಕಳೆದುಕೊಂಡರು. ʻʻನಿಮ್ಮ ವ್ಯಾಲಿಡೇಶನ್‌ ನನಗೆ ಬೇಕಿಲ್ಲ. ನನ್ನ ಹೆಸರು ತೆಗೆದುಕೊಳ್ಳುವ ಅವಶ್ಯಕತೆ ಇಲ್ಲ. ಕಂಪೇರ್‌ ಮಾಡಬೇಡಿ.‘ಮೂರು ವಾರಗಳಿಂದ ಬಾಯಲ್ಲಿ ಆಟ ಆಡೋದಲ್ಲ. ಅಲ್ಲಿ ಇಳಿದು ಆಟವಾಡಬೇಕು. ಮೂರು ವಾರಗಳಿಂದ ಆಡಿ ಪ್ರೂವ್ ಮಾಡೋಕೆ ಆಗಲಿಲ್ಲ. ಮಾತಾಡಿ ಪ್ರೂವ್ ಮಾಡೋದು ಅಂದ್ರೆ ಇದೇʼʼಎಂದು ಅಬ್ಬರಿಸಿದರು. ಅತ್ತ ತನಿಷಾ ಕೂಡ ಪ್ರೂವ್‌ ಮಾಡ್ತೀನಿ ಎಂದು ಕೂಗಿದ್ದಾರೆ. ‌

ತನಿಷಾ ಹಾಗೂ ಸಂಗೀತಾ ಅವರು ಒಮ್ಮತದ ನಿರ್ಧಾರ ಹೇಳುವಲ್ಲಿ ಸೋತರು. ಹೀಗಾಗಿ ಬಿಗ್‌ ಬಾಸ್‌ 500 ರೂ. ಹಿಂಪಡೆದರು.

ಬಿಗ್​ಬಾಸ್ ಜಿಯೋ ಸಿನಿಮಾಸ್​ನಲ್ಲಿ ಪ್ರತಿದಿನ ಲೈವ್ ಪ್ರಸಾರವಾಗುತ್ತಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಮೆಂಟ್ ಮೂಲಕ ತಿಳಿಸಿ

Exit mobile version