Site icon Vistara News

BBK SEASON 10: ಅವಿನಾಶ್‌ ಈಗ ಮಾವುತನಾ ಮೇಕೆಯಾ? ಏನಯ್ಯ ನಿನ್ನ ಕಥೆ ಹೀಗಾಗೋಯ್ತು!

Avinash Shetty Becomes Comedy Piece

ಬೆಂಗಳೂರು: ರಕ್ಕಸ-ಗಂಧರ್ವರ (BBK SEASON 10) ನಡುವಿನ ಗುದ್ದಾಟ ತಾರಕಕ್ಕೆ ಏರಿರುವ ಹೊತ್ತಿನಲ್ಲಿಯೇ ನಡುನಡುವೆ ನಗೆಬುಗ್ಗೆಯುಕ್ಕಿಸುವಂಥಹ ಕಾಮಿಡಿ ಸನ್ನಿವೇಶಗಳಿಗೂ ಬಿಗ್‌ಬಾಸ್ ಸಾಕ್ಷಿಯಾಗುತ್ತಿದೆ. ಇಂಥದ್ದೊಂದು ಕಾಮಿಡಿ ದೃಶ್ಯದ ಝಲಕ್‌ ಜಿಯೋ ಸಿನಿಮಾ ಬಿಡುಗಡೆ ಮಾಡಿರುವ ಪ್ರೋಮೊದಲ್ಲಿ ಕಾಣಿಸಿಕೊಂಡಿದೆ.

“ಆನೆಯನ್ನು ಪಳಗಿಸುವ ಮಾವುತನಾಗುತ್ತೇನೆ’ ಎಂದು ಹೇಳಿಕೊಂಡೇ ಅವಿನಾಶ್‌ ಶೆಟ್ಟಿ ಮನೆಯೊಳಗೆ ಬಂದಿದ್ದರು. ಮನೆಯೊಳಗೂ ಹಲವು ಸದಸ್ಯರು ಅವರನ್ನು ಮಾವುತ ಎಂದೇ ಕರೆಯುತ್ತಿದ್ದಾರೆ. ಆದರೆ ಈ ಗಂಧರ್ವ-ರಕ್ಕಸರ ಗುದ್ದಾಟದಲ್ಲಿ ಈ ಮಾವುತ ಮೇಕೆಯಾಗಿದ್ದಾನೆ.

ತುಕಾಲಿ ಸಂತೋಷ್ ಮತ್ತು ವರ್ತೂರು ಅವರು ‘ನೀನು ಮಾವುತನಾ? ಮೇಕೆಯಾ?’ ಎಂದು ಕೇಳಿದಾಗ ಅವಿನಾಶ್‌, ‘ನಾನು ಮೇಕೆಯಾಗುವುದಿಲ್ಲ’ ಎಂದು ಗಂಧರ್ವರ ಶೈಲಿಯಲ್ಲಿಯೇ ಉತ್ತರಿಸಿದ್ದಾರೆ ಅವಿನಾಶ್. ಆದರೆ ಅದರ ಮರುಕ್ಷಣವೇ ಅವರು ಮೇಕೆಯ ಗೆಟಪ್‌ನಲ್ಲಿ ಮ್ಯಾ… ಎಂದು ಕೂಗುತ್ತ ಓಡಾಡುವ ದೃಶ್ಯಗಳೂ ಇವೆ.

ವರ್ತೂರು ಸಂತೋಷ್, ಅವಿನಾಶ್ ಒಳಗಡೆ ರೋಷದ ಕಿಚ್ಚನ್ನು ಹೊತ್ತಿಸಲು ಇನ್ನಿಲ್ಲದಂತೆ ಪ್ರಯತ್ನಿಸುತ್ತಿದ್ದಾರೆ. ‘ನೀವು ವೀರನಾಗಬೇಕು’ ಎಂದು ಮೋಟಿವೇಷನಲ್ ಸ್ಪೀಚ್ ಕೂಡ ಕೊಟ್ಟಿದ್ದಾರೆ! ಇದರಿಂದ ಸ್ಫೂರ್ತಿಗೊಂಡ ಅವಿನಾಶ್‌, ‘ವೀರನಾ… ಧೀರನಾ…’ ಎಂದು ಹೇಳುತ್ತ ಎದ್ದುನಿಂತಿದ್ದಾರೆ. ಎದುರಾಳಿ ತಂಡದ ಸದಸ್ಯನನ್ನು ವಶಪಡಿಸಿಕೊಳ್ಳುವ ಪ್ರಯತ್ನ ನಡೆಸುತ್ತಿದ್ದಾರೆಯೇ ವರ್ತೂರು? ಇದಕ್ಕೆ ಅವಿನಾಶ್ ಮರುಳಾಗುತ್ತಾರಾ?ಎಂಬುದು ಇಂದಿನ ಸಂಚಿಕೆಯಲ್ಲಿ ಗೊತ್ತಾಗಲಿದೆ.

ಇದನ್ನೂ ಓದಿ; BBK SEASON 10: ನಮ್ರತಾ ಹೇಳಿದ ತಕ್ಷಣ ನಿರ್ಧಾರವೇ ಬದಲಾಯ್ತು; ಸ್ನೇಹಿತ್‌ಗೆ ಛೀಮಾರಿ ಹಾಕಿದ ಸಂಗೀತಾ, ತನಿಷಾ!

ಬಿಗ್‌ ಬಾಸ್‌ ಮನೆಯಲ್ಲಿ ಅವಿನಾಶ್‌ ಅವರು ಮೊದ ಮೊದಲು ಸ್ಟ್ರಾಂಗ್‌ ಆಗಿಯೇ ಇದ್ದರು. ಇನ್ನು ವಿನಯ್‌ ಕೂಡ ಅವಿನಾಶ್‌ ಅವರಿಗೆ ಗೋಳು ಕೊಡುತ್ತಲೇ ಇದ್ದಾರೆ. ಕಳೆದ ಸಂಚಿಕೆಯಲ್ಲಿ ವಿನಯ್‌ ಅವರು ಅವಿನಾಶ್‌ಗೆ ʻʻನಾನು ಮಾವುತ ಅಲ್ಲ. ಹುಚ್ಚು ಕುದುರೆʼʼ ಎಂದು ಹೇಳಿಸಿದರು. ಇದಕ್ಕೂ ಮುಂಚೆ ವಿನಯ್‌ ಅವರು ಮನೆಮಂದಿ ಜತೆಗೆ ಅವಿನಾಶ್‌ ಕುರುತು ತುಂಬಾ ಕೀಳಾಗಿ ಮಾತನಾಡಿದ್ದೂ ಇದೆ. ಆಗಾಗ ವರ್ತೂರ್‌ ಹಾಗೂ ತುಕಾಲಿ ಅವಿನಾಶ್‌ ಅವರಿಗೆ ವಿನಯ್‌ ವಿರುದ್ಧ ತಿರುಗಿ ಬೀಳುವಂತೆ ಪ್ರಚೋದನೆಯನ್ನು ಕೊಟ್ಟಿದ್ದೂ ಇದೆ. ಅವಿನಾಶ್‌ ಕೂಡ ಈ ಬಗ್ಗೆ ತುಕಾಲಿ ಜತೆ ʻʻಪದೇ ಪದೇ ಮಾವುತ ಎಂದು ಹೇಳಬೇಡಿʼʼಎಂದಿದ್ದರು.

Exit mobile version