Site icon Vistara News

BBK Season 10: ಡ್ರೋನ್‌ ಪ್ರತಾಪ್‌ ಮೇಲೆ ಸ್ಪರ್ಧಿಗಳ ದಾದಾಗಿರಿ; ಕೈಗೆ ಚೀಟಿ ಸಿಕ್ಕಿದ್ದೇ ತಪ್ಪಾಯ್ತಾ?

contestant attack on drone prathap for task

ಬೆಂಗಳೂರು: ಮೂರನೇ ವಾರ ಬಿಗ್‌ ಬಾಸ್‌ ಸೀಸನ್‌ 10ರಲ್ಲಿ (BBK Season 10) ಎಲಿಮಿನೇಶನ್‌ ಆಗದೇ ಇರುವುದು ಗೊತ್ತೇ ಇದೆ. ಆದರೆ ಈ ವಾರ ಬಿಗ್‌ ಬಾಸ್‌ ಹೊಸ ಸರ್‌ಪ್ರೈಸ್‌ ಅನ್ನು ಬಿಗ್‌ ಬಾಸ್‌ ಸ್ಪರ್ಧಿಗಳಿಗೆ ನೀಡಿದೆ. ಈ ವಾರ ನಾಮಿನೇಶನ್‌ ಮಾಡಲು ಎಲ್ಲರಿಗೂ ಅಧಿಕಾರ ಬಿಗ್‌ ಬಾಸ್‌ ನೀಡಲಿಲ್ಲ. ಬದಲಿಗೆ ಬಲೂನ್‌ಗಳನ್ನು ಒಡೆದು ನಾಮಿನೇಶನ್‌ ಪಾಸ್‌ಗಳನ್ನು ಹುಡುಕಬೇಕು. ಈ ಟಾಸ್ಕ್‌ನಲ್ಲಿ ಮೊದಲಿಗೆ ಪ್ರತಾಪ್‌ಗೆ ಸಿಕ್ಕಿದಂತಿದೆ. ಆದರೆ ಈ ವೇಳೆ ಸ್ಪರ್ಧಿಗಳು ಡ್ರೋನ್‌ ಪ್ರತಾಪ್‌ ಮೇಲೆ ಅಟ್ಯಾಕ್‌ ಮಾಡಿದ್ದಾರೆ.

ಹೌದು ನಾಮಿನೇಶನ್‌ ಪಾಸ್‌ ಮೊದಲಿಗೆ ಡ್ರೋನ್‌ ಪ್ರತಾಪ್‌ ಕೈಗೆ ಸಿಕ್ಕಿದೆ. ವಿನಯ್‌ ಅವರಿಗೆ ಗೊತ್ತಾದ ಕೂಡಲೇ ʻʻಪಾಸ್‌ ತೋರಿಸು ನಮಗೂ ಪಾಸ್‌ ಹೇಗಿರಬಹುದು ಎಂಬ ಐಡಿಯಾ ಗೊತ್ತಾಗುತ್ತದೆʼʼಎಂದರು. ಆದರೆ ಪ್ರತಾಪ್‌ ತೋರಿಸದ ಕಾರಣ ʻʻವಿನಯ್‌ ಸೇರಿದಂತೆ ತುಕಾಲಿ, ಮೈಕೆಲ್‌ ಪ್ರತಾಪ್‌ ಅವರ ಮೇಲೆ ಬಿದ್ದು ಕುಸ್ತಿ ಮಾಡಿ, ನಮಗೆ ಎರಡು ನಿಮಿಷ ಸಾಕು ನಿನ್ನತ್ರ ಕಿತ್ತುಕೊಳ್ಲುವುದಕ್ಕೆʼʼಎಂದು ಅಟ್ಯಾಕ್‌ ಮಾಡಿದರು. ಇದೀಗ ಈ ಪ್ರೋಮೊವನ್ನು ಕಲರ್ಸ್‌ ಕನ್ನಡ ಹಂಚಿಕೊಂಡಿದೆ.

ಇದೀಗ ಪ್ರೇಕ್ಷಕರು ಈ ಬಗ್ಗೆ ಕಮೆಂಟ್‌ ಮಾಡಿ ʻʻಬರ ಬರುತ್ತಾ “ವಾರದ ಕತೆ ” ಏನ್ ಆಗ್ತಿದೆ? ಬಲಿಷ್ಠರು ಅಂತ ಕೊಚ್ಚಿಕೊಳ್ಳುತ್ತಿದ್ದ ಉಗ್ರಂ ಸೊಕ್ಕಡಗಿಸಿ ಭಜರಂಗಿ ಟೀಮ್ ಜಯಶಾಲಿಯಾದ್ರೂ. ಬಾಯಿ ಮಾತಿಗೂ ಅಭಿನಂದನೆ ಇಲ್ಲ.. ಉಗ್ರಂ ಟೀಮ್ ನಡೆದುಕೊಂಡ ಜಯದ ರಣ ಕೇಕೆಯ ಬಗ್ಗೆಯೂ ಮಾತಿಲ್ಲ. ಮನೆ ದಿನಸಿ ಬಗ್ಗೆ ವಿನಯ್ ತಂದ ಹೊಸ ರೂಲ್ಸ್ ಬಗ್ಗೆನೂ ಮಾತಿಲ್ಲ!! ಇದಕ್ಕಿಂತ ಸೋಮವಾರ ದಿಂದ ಶುಕ್ರವಾರ ಎಪಿಸೋಡ್ ನೋಡಿದ್ರೆ ಸಾಕು ಎಂದು ಅನ್ನಿಸಿದೆʼʼಎಂದು ಕಮೆಂಟ್‌ ಮಾಡಿದ್ದಾರೆ. ʻʻನಿನ್ನೆ ಪಂಚಾಯತಿಯಲ್ಲಿ ತುಕಾಲಿ ಬಿಟ್ಟ್ರೆ ಬೇರೆ ಏನು ಇಲ್ಲʼʼಎಂದು ಮತ್ತೊಬ್ಬರು ಕಮೆಂಟ್‌ ಮಾಡಿದರು. ʻʻಮನುಷ್ಯತ್ವ ಇದಿಯಾ ಅವರಿಗೆ. ಇಡೀ ಕರ್ನಾಟಕದ ಜನತೆ ನಮ್ಮನ್ನು ನೋಡ್ತಾ ಇರ್ತಾರೆ. ನಾವು ಹೇಗೆ ವರ್ತಿಸಬೇಕು ಸಾಮಾನ್ಯ ಜ್ಞಾನ ಕೂಡ ಇಲ್ವಲ್ಲ ಅವರಿಗೆ! ಅಲ್ಲ ಒಬ್ಬ ವ್ಯಕ್ತಿನ ತೇಜೋವಧೆ ಮಾಡೋದು ಎಷ್ಟು ಮಟ್ಟಿಗೆ ಸರಿ ?ಎಂದು ಮತ್ತೊಬ್ಬರು ಕಮೆಂಟ್‌ ಮಾಡಿದ್ದಾರೆ.

ಇದನ್ನೂ ಓದಿ: BBK Season 10: ಪ್ರತಾಪ್‌ಗೆ ಗೂಬೆ ಎಂದಿದಕ್ಕೆ ರಕ್ಷಕ್‌ಗೆ ಕಿಚ್ಚನ ಸ್ಪೆಷಲ್ ಟ್ರೀಟ್‌ಮೆಂಟ್!

ʻʻಪಾಸ್ ಹುಡುಕಿ ಎಂದು ಹೇಳಿದರೆ ಪ್ರತಾಪ್‌ಗೆ ಸಿಕ್ಕಿದ ಪಾಸ್ ಹೇಗಿದೆ ಅಂತ ನೋಡಲು ಹುಚ್ಚು ನಾಯಿಯ ಹಾಗೆ ಅವರ ಮೇಲೆ ಬಿದ್ದಿದ್ದಾರೆ. ಬಲೂನ್ ಒಡೆದು ಹುಡುಕಲು ಆಗಲ್ಲ ದಾದಾಗಿರಿ ಚೆನ್ನಾಗಿ ಮಾಡ್ತಾರೆʼʼಎಂದು ಡ್ರೋನ್‌ ಪ್ರತಾಪ್‌ ಪರ ನೆಟ್ಟಿಗರು ಕಮೆಂಟ್‌ ಮಾಡಿದ್ದಾರೆ.

ಬಿಗ್​ಬಾಸ್ ಕನ್ನಡ ಕಲರ್ಸ್ ವಾಹಿನಿಯಲ್ಲಿ ಪ್ರತಿರಾತ್ರಿ 9:30ಕ್ಕೆ ಹಾಗೂ ಜಿಯೋ ಸಿನಿಮಾಸ್​ನಲ್ಲಿ ಪ್ರತಿದಿನ ಲೈವ್ ಪ್ರಸಾರವಾಗುತ್ತಿದೆ.

Exit mobile version