Site icon Vistara News

BBK Season 10: ನಟಿ ಸಂಗೀತಾ ಎಷ್ಟೇ ಕರೆದರೂ ಬಿಗ್‌ ಬಾಸ್‌ ವೇದಿಕೆಗೆ ʻಚಾರ್ಲಿʼ ಬರಲೇ ಇಲ್ಲ; ಕಾರಣವೇನು?

Charlie BBK Season 10‌

ಜನಪ್ರಿಯ ಟಿವಿ ರಿಯಾಲಿಟಿ ಶೋ ಬಿಗ್​ಬಾಸ್​ ಕನ್ನಡ (BBK Season 10) ಸೀಸನ್‌10 ಅ.8ರಿಂದ ಆರಂಭಗೊಂಡಿದೆ. ಸ್ಪರ್ಧಿಗಳು ಯಾರೆಲ್ಲ ಎಂಬುದು ರಿವೀಲ್‌ ಆಗಿದೆ. ಇನ್ನೂ ಕೆಲವರು ವೇಟಿಂಗ್‌ ಲಿಸ್ಟ್‌ನಲ್ಲಿದ್ದಾರೆ. ಇಷ್ಟಾದರೂ ಪ್ರೇಕ್ಷಕರಿಗೆ ಇರುವ ಒಂದು ಪ್ರಶ್ನೆ ಎಂದರೆ ಚಾರ್ಲಿ ಯಾಕೆ ಇನ್ನೂ ಎಂಟ್ರಿ ಕೊಟ್ಟಿಲ್ಲ ಎಂದು. ಇದೀಗ ಸುದೀಪ್‌ ಈ ಬಗ್ಗೆ ವೇದಿಕೆಯಲ್ಲಿ ಮಾತನಾಡಿದರು. ನಟಿ ಸಂಗೀತಾ ಶೃಂಗೇರಿ ಎಷ್ಟೇ ಕರೆದರೂ ಕೊನೆಗೂ ಚಾರ್ಲಿ ಬರಲೇ ಇಲ್ಲ.

777 ಚಾರ್ಲಿ ನಟಿ ಸಂಗೀತಾ ಶೃಂಗೇರಿ ಅವರಿಗೆ 80ಕ್ಕಿಂತಲೂ ಕಡಿಮೆ ಮತಗಳು ದೊರೆತ ಕಾರಣ ಅವರನ್ನು ವೇಟಿಂಗ್ ರೂಂನಲ್ಲಿ ಇರಿಸಲಾಯಿತು. ಹೊರಡುವುದಕ್ಕೂ ಮುಂಚೆ ಸುದೀಪ್‌ ಅವರು ಚಾರ್ಲಿ ಬಗ್ಗೆ ಪ್ತಸ್ತಾಪಿಸಸಿದರು. ಒಂದು ಸಲ ಚಾರ್ಲಿಯನ್ನು ಜೋರಾಗಿ ಕರೆಯಿರಿ ಎಂದರು. ನಟಿ ಸಂಗೀತಾ ಕೂಡ ‘ಚಾರ್ಲಿ.. ಚಾರ್ಲಿ.. ಟ್ರೀಟ್ ಕೊಡ್ತೀನಿ ಬಾ..’ ಎಂದು ಎಷ್ಟೇ ಕರೆದರೂ ಕೊನೆಗೂ ಬರಲೇ ಇಲ್ಲ. ‘ಬಹುಶಃ ನೀವು ಕರೆದಿದ್ದು ಚಾರ್ಲಿಗೆ ಕೇಳಿರುತ್ತದೆ. ಪರ್ಮಿಷನ್ ತೆಗೆದುಕೊಳ್ಳಲು ಕಾದಿರುತ್ತದೆ. ನಾರ್ತ್ ಇಂಡಿಯಾ ಹೋಗಿದೆ, ಬರುತ್ತೆ’ ಎಂದರು ಸುದೀಪ್. ಈ ಮೂಲಕ ಮುಂದಿನ ದಿನಗಳಲ್ಲಿ ಚಾರ್ಲಿಯ ಎಂಟ್ರಿ ಆಗಬಹುದು ಎಂದು ಹೇಳಲಾಗುತ್ತಿದೆ.

ಚಾರ್ಲಿ ಬಗ್ಗೆ ನಿಮಗೆಷ್ಟು ಗೊತ್ತು?

ಈ ವರ್ಷದ ಅನುಬಂಧ ಅವಾರ್ಡ್‌ನಲ್ಲಿ ಚಾರ್ಲಿ ಎಂಟ್ರಿ ಬಗ್ಗೆ ಘೋಷಣೆ ಮಾಡಲಾಗಿತ್ತು. ಈ ಬಾರಿ ಬಿಗ್‌ ಬಾಸ್‌ಗೆ ಮೊದಲನೇ ಸ್ಪರ್ಧಿಯಾಗಿ ಚಾರ್ಲಿ ಎಂಟ್ರಿ ಕೊಡಲಿದೆ ಎಂದು ಅನೌನ್ಸ್‌ ಕೂಡ ಮಾಡಲಾಗಿತ್ತು. ಆದರೀಗ ಅದು ಸುಳ್ಳಾಗಿದೆ. ರಕ್ಷಿತ್‌ ಶೆಟ್ಟಿ ನಟನೆಯ 777 ಚಾರ್ಲಿ ಸಿನಿಮಾ ಮೂಲಕ ಚಾರ್ಲಿ ನೋಡುಗರಿಗೆ ಪರಿಚಿತವಾದಳು. ನಿರ್ದೇಶಕ ಕಿರಣ್‌ ರಾಜ್‌ ಈ ಚಿತ್ರಕ್ಕಾಗಿ ಚಾರ್ಲಿಯನ್ನು ಅದ್ಭುತವಾಗಿ ತರಬೇತು ಮಾಡಿಸಿದ್ದಾರೆ. ಹಿಂದೆಮ್ಮೊ ಕಿರಣ್‌ ರಾಜ್‌ ಚಾರ್ಲಿ ಬಗ್ಗೆ ಮಾತನಾಡಿ ʻʻಚಾರ್ಲಿಗೆ ಅರ್ಥ ಮಾಡಿಸುವುದು ಸಿಕ್ಕಾಪಟ್ಟೆ ಚಾಲೆಂಜಿಂಗ್‌ ವಿಷಯವಾಗಿತ್ತು. ಅದು ಯಾವುದನ್ನು ಅರ್ಥ ಮಾಡಿಕೊಳ್ಳುತ್ತದೆ, ಯಾವುದು ಅದಕ್ಕೆ ಅರ್ಥವಾಗುವುದಿಲ್ಲ ಎಂಬುದನ್ನು ಮೊದಲು ಅರಿತು ನಂತರ ಅದಕ್ಕೆ ಬೇಕಾದ ಊಟ, ತಿಂಡಿ ಕೊಟ್ಟು ಪುಸಲಾಯಿಸಿ ನಟಿಸುವಂತೆ ಮಾಡುತ್ತಿದ್ದೆವು. ಕೆಲವೊಮ್ಮೆ ಇಡೀ ದಿನ ಒಂದೇ ಒಂದು ಟೇಕ್‌ ಕೂಡ ಆಗುತ್ತಿರಲಿಲ್ಲ’ ಎಂದು ಕಿರಣ್ ರಾಜ್ ಹೇಳಿದ್ದರು.

ಇದನ್ನೂ ಓದಿ: BBK Season 10: ಕೋಟಿ ಕೊಟ್ರೂ ಬಿಗ್‌ಬಾಸ್‌ಗೆ ಹೋಗಲ್ಲ ಎಂದಿದ್ದ ಸಂಗೀತಾ ಶೃಂಗೇರಿ ಅತ್ತಿದ್ದೇಕೆ?

ಚಾರ್ಲಿಯನ್ನು ತಂದು ಅದಕ್ಕಾಗಿ ಆಫೀಸ್‌ ಪಕ್ಕ ಒಂದು ಮನೆ ಮಾಡಿದ್ದೆವು. ಟ್ರೇನರ್‌ ಪ್ರಮೋದ್‌ ಬಿ. ಸಿ. ಅದಕ್ಕೆ ಟ್ರೇನಿಂಗ್‌ ಮಾಡುತ್ತಿದ್ದರು. ನಮ್ಮ ಸಿನಿಮಾ ತಂಡದ ಜತೆ ಟ್ರೇನರ್‌ ಕೂಡ ನಾಲ್ಕು ವರ್ಷ ಜರ್ನಿ ಮಾಡಿದ್ದಾರೆ’ ಎಂದಿದ್ದರು. ಪ್ರಮೋದ್‌ ಅವರ ಬಳಿ ಕಿರಣ್‌ ರಾಜ್‌ ನಾಯಿಯ ಬಗ್ಗೆ ಪ್ರಸ್ತಾಪಿಸಿದ್ದರು. ನಾಲ್ಕೈದು ಸುತ್ತಿನ ಮಾತುಕತೆ ಬಳಿಕ ಪ್ರಮೋದ್ ಅವರೇ ಈ ಸಿನಿಮಾಕ್ಕೆ ಡಾಗ್‌ ಟ್ರೈನರ್ ಎಂದು ಸೆಲೆಕ್ಟ್ ಮಾಡುತ್ತಾರೆ. ಸಾಕಷ್ಟು ನಾಯಿಗಳನ್ನು ಹುಡುಕಿದರೂ ಸಿನಿಮಾಕ್ಕೆ ಬೇಕಾಗುವಂತಹ ಶ್ವಾನ ಸಿಗೋದಿಲ್ಲ. ಕೊನೇಗೆ ಸಿಕ್ಕಿದ್ದು ಚಾರ್ಲಿ. ಸ್ನೇಹಿತರೊಬ್ಬರು ಈ ನಾಯಿ ಬಗ್ಗೆ ಪ್ರಮೋದ್ ಅವರಿಗೆ ಹೇಳುತ್ತಾರೆ. ಆಗ ಇದು ತರಲೆ ನಾಯಿ ಮರಿ. ಮನೆಯವರಿಗೆ ಇದರ ಉಪಟಳ ಸಾಕಾಗಿ ಯಾರಾದರೂ ಸಾಕುವರಿದ್ದರೆ ಕೊಡಲು ಮುಂದಾಗಿರುತ್ತಾರೆ. ಅಷ್ಟೋತ್ತಿಗೆ ಪ್ರಮೋದ್ ಕೂಡ ಹುಡುಕುತ್ತಿದ್ದ ನಾಯಿಯ ಲಕ್ಷಣಗಳೆಲ್ಲ ಇದರಲ್ಲೇ ಇತ್ತು. ಯಾರಿಗೂ ಬೇಡದ ಈ ನಾಯಿ ಮುಂದೆ 777 ಚಾರ್ಲಿಯಂಥಾ ಪ್ಯಾನ್‌ ಇಂಡಿಯಾ ಸಿನಿಮಾಗೆ ಹೀರೋ ಆಗುತ್ತದೆ. ಚಾರ್ಲಿ ಬಹಳ ತಿಂಡಿಪೋತಿ ಆಗಿತ್ತಂತೆ. ಇದನ್ನು ಇಟ್ಟುಕೊಂಡು ಪ್ರಮೋದ್ ಸತತ ನಾಲ್ಕು ವರ್ಷ ಈ ನಾಯಿಯನ್ನು ಟ್ರೈನ್ ಮಾಡುತ್ತಾರೆ.

ಇದನ್ನೂ ಓದಿ: BBK Season 10: ಇವರೇ ನೋಡಿ ಬಿಗ್‌ಬಾಸ್‌ ಸ್ಪರ್ಧಿಗಳು

ನಿಯಮ ಏನು ಹೇಳುತ್ತದೆ?

ಬಿಗ್‌ಬಾಸ್‌ ಹೊಸ ನಿಯಮದ ಪ್ರಕಾರ ವೀಕ್ಷಕರಿಂದ ಶೇ. 80ಕ್ಕೂ ಹೆಚ್ಚು ಮತಗಳನ್ನು ಗಳಿಸಿದ ಸ್ಪರ್ಧಿಗಳಿಗೆ ಬಿಗ್​ಬಾಸ್ ಮನೆಯ ಒಳಕ್ಕೆ ‌ ನೇರ ಹೋಗುವ ಅವಕಾಶ ಇದೆ. ಶೇ. 40ಕ್ಕೂ ಕಡಿಮೆ ಮತಗಳು ಬಂದವರು ವಾಪಸ್ ತಮ್ಮ ಮನೆಗೆ ಹೋಗಬೇಕಿತ್ತು. ಶೇ. 80ಕ್ಕಿಂತಲೂ ಕಡಿಮೆ, ಶೇ. 40ಕ್ಕಿಂತಲೂ ಹೆಚ್ಚು ಮತಗಳು ಬಂದವರು ಬಿಗ್​ಬಾಸ್​ನಿರ್ಣಯಕ್ಕೆ ಕಾಯಬೇಕು.

ವೇಟಿಂಗ್‌ ಲಿಸ್ಟ್‌ನಲ್ಲಿ ಯಾರ್ಯಾರು?

ಡ್ರೋನ್‌ ಪ್ರತಾಪ್, ತನಿಶಾ ಕುಪ್ಪಂದ, ಸಂಗೀತಾ ಶೃಂಗೇರಿ, ವರ್ತೂರು ಸಂತೋಷ್, ರಕ್ಷಕ್, ಮಹೇಶ್ ಕಾರ್ತಿಕ್ ಸದ್ಯ ಹೋಲ್ಡ್‌ನಲ್ಲಿದ್ದಾರೆ. ಈಗ ಇವರನ್ನು ಬಿಗ್‌ಬಾಸ್‌ ಮನೆಯೊಳಗೆ ಕಳುಹಿಸಲಾಗಿದ್ದು, ಒಂದು ವಾರದಲ್ಲಿ ತೋರಿಸಲಿರುವ ಪರ್ಫಾರ್ಮೆನ್ಸ್‌ ಆಧಾರದ ಮೇಲೆ ಯಾರು ಮನೆಯೊಳಗೆ ಮುಂದುವರಿಯಲಿದ್ದಾರೆ ಎಂಬುದು ನಿರ್ಧಾರವಾಗಲಿದೆ.

Exit mobile version