Site icon Vistara News

BBK SEASON 10:  ಇಂದು ʻಬಿಗ್‌ ಬಾಸ್‌ʼ ಟ್ರೋಫಿಗೆ ಮುತ್ತಿಡೋದು ಒಬ್ಬರಲ್ಲ, ʻಇಬ್ಬರುʼ!

BBK 10 And Bigg Boss 17 Finale at a time who will be the winner

ಬೆಂಗಳೂರು: ಜ.28ರಂದು ಭಾನುವಾರ `ಬಿಗ್‌ ಬಾಸ್‌ ಕನ್ನಡ ಸೀಸನ್‌’ 10 (BBK SEASON 10) ಅಂತ್ಯ ಹಾಡುತ್ತಿದೆ. ಜತೆಗೆ ಹಿಂದಿ ಬಿಗ್​ ಬಾಸ್​ನ 17ನೇ ಸೀಸನ್​ ಕೂಡ ಮುಕ್ತಾಯ ಆಗುತ್ತಿದೆ. ಇಂದು (ಜನವರಿ 28) ಈ ಎರಡೂ ಶೋಗಳಿಗೆ ಫಿನಾಲೆ ನಡೆಯುತ್ತಿದೆ. ಒಂದೇ ಸಮಯಕ್ಕೆ ಕನ್ನಡ ಬಿಗ್​ ಬಾಸ್​ನಲ್ಲಿ ಒಬ್ಬರು ಮತ್ತೊಬ್ಬರು ಹಿಂದಿ ಬಿಗ್​ ಬಾಸ್​ನಲ್ಲಿ (Bigg boss 17)​ ಟ್ರೋಫಿ ಎತ್ತಲಿದ್ದಾರೆ. ಇಂದೇ ಯಾರು `ವಿನ್ನರ್‌’ ಎಂಬುದು ಪ್ರೇಕ್ಷಕರಿಗೆ ಗೊತ್ತಾಗಲಿದೆ.

`ಕನ್ನಡ ಬಿಗ್‌ ಬಾ’ಸ್‌ನಲ್ಲಿ ಈಗಾಗಲೇ ತುಕಾಲಿ ಸಂತೋಷ್‌ ಔಟ್‌ ಆಗಿದ್ದಾರೆ. ಉಳಿದರುವುದು ಸಂಗೀತಾ ಶೃಂಗೇರಿ, ಡ್ರೋನ್​ ಪ್ರತಾಪ್​, ವರ್ತೂರು ಸಂತೋಷ್​, ವಿನಯ್​ ಗೌಡ ಹಾಗೂ ಕಾರ್ತಿಕ್​ ಮಹೇಶ್.​ ಈ ಐವರಲ್ಲಿ ಒಬ್ಬರು ಟ್ರೋಫಿಗೆ ಮುತ್ತಿಡಲಿದ್ದಾರೆ. ಯಾರು ಆಗುತ್ತಾರೋ? ಯಾರಿಗೆ ಟ್ರೋಫಿ ಒಲಿಯುತ್ತೋ? ಎಂದು ಪ್ರೇಕ್ಷಕರು ಕಾದಿದ್ದಾರೆ ‘ಜಿಯೋ ಸಿನಿಮಾ’ ಒಟಿಟಿ ಮತ್ತು ‘ಕಲರ್ಸ್​ ಕನ್ನಡ’ದಲ್ಲಿ ಸಂಜೆ 7.30ಕ್ಕೆ ಫಿನಾಲೆ ಪ್ರಸಾರ ಆರಂಭ ಆಗಲಿದೆ.

ಇನ್ನು ಹಿಂದಿ ಬಿಗ್‌ ಬಾಸ್‌ ಸೀಸನ್‌ 17ರಲ್ಲಿ ಅಂಕಿತಾ ಲೋಖಂಡೆ, ಮುನಾವರ್​ ಫಾರೂಕಿ, ಮನ್ನಾರಾ ಚೋಪ್ರಾ, ಅಭಿಷೇಕ್​ ಕುಮಾರ್​, ಅರುಣ್​ ಮಶೆಟ್ಟಿ ಅವರು ಟಾಪ್​ 5 ಸ್ಥಾನವನ್ನು ತಲುಪಿದ್ದಾರೆ. ಅಕ್ಟೋಬರ್​ 16ರಂದು ‘ಬಿಗ್​ ಬಾಸ್​ ಹಿಂದಿ ಸೀಸನ್​ 17’ ಆರಂಭ ಆಗಿತ್ತು.

ಇದನ್ನೂ ಓದಿ: BBK SEASON 10: ಮಗನನ್ನು ವಾಪಸ್ ಕೊಟ್ಟಿದ್ದೀರಾ, ʻಬಿಗ್‌ ಬಾಸ್‌ʼಗೆ ಋಣಿ ಎಂದು ಕಣ್ಣೀರಿಟ್ಟ ಡ್ರೋನ್‌ ಪ್ರತಾಪ್‌ ತಂದೆ-ತಾಯಿ!

ಈಗಾಗಲೇ ಕಾಮಿಡಿಯನ್, ಲಾಕಪ್ ಶೋನ ವಿಜೇತ ಮುನ್ನಾವರ್ ಫಾರೂಕಿ ಬಗ್ಗೆ ಒಳ್ಳೆ ಒಪಿನಿಯನ್ ಕ್ರಿಯೆಟ್ ಆಗಿದ್ದು, ವೋಟಿಂಗ್ ರಿಸಲ್ಟ್ ಕೂಡ ಅವರ ಪರವಾಗಿದೆ ಎನ್ನಲಾಗುತ್ತಿದೆ. ಮೊದಲ ರನ್ನರ್ ಅಪ್ ಸ್ಥಾನಕ್ಕಾಗಿ ಅಭಿಷೇಕ್ ಕುಮಾರ್ ಮತ್ತು ಅಂಕಿತಾ ಲೋಖಂಡೆ ನಡುವೆ ತೀವ್ರ ಗುದ್ದಾಟ ನಡೆಯುತ್ತಿದೆ ಎನ್ನಲಾಗುತ್ತಿದೆ.ಬಿಗ್ ಬಾಸ್ 17ರ ಅಂತಿಮ ಸಂಚಿಕೆಯನ್ನು ಜಿಯೋ ಸಿನಿಮಾ ಅಪ್ಲಿಕೇಶನ್‌ನಲ್ಲಿ ಲೈವ್-ಸ್ಟ್ರೀಮ್ ಮಾಡಲಾಗುತ್ತದೆ. ಕಲರ್ಸ್ ಟಿವಿಯಲ್ಲಿ ನೇರ ಪ್ರಸಾರ ಕೂಡ ಇರುತ್ತದೆ.ಒರ್ರಿ ಈ ಹಿಂದೆ ಬಿಗ್ ಬಾಸ್ 17 ರಲ್ಲಿ ವಿಶೇಷ ಸ್ಪರ್ಧಿಯಾಗಿ ಕಾಣಿಸಿಕೊಂಡಿದ್ದರು.

ಇದನ್ನೂ ಓದಿ: Bigg Boss 17: ಅಂಕಿತಾ ಲೋಖಂಡೆ ಹಿಂದಿಕ್ಕಿ ವೋಟಿಂಗ್ ರಿಸಲ್ಟ್‌ನಲ್ಲಿ ಮುಂದೆ ಬಂದ್ರಾ ಮುನಾವರ್ ಫಾರುಕಿ?

ಬಿಗ್ ಬಾಸ್ 17ರ ಸಂಚಿಕೆಯಲ್ಲಿ ಒಟ್ಟು 21 ಸ್ಪರ್ಧಿಗಳಿದ್ದರು. ಅವನೀತ್ ಕೌರ್ ಮತ್ತು ಜಾಕ್ವೆಲಿನ್ ಫರ್ನಾಂಡೀಸ್ ಸೇರಿದಂತೆ ಹಲವಾರು ಸೆಲೆಬ್ರಿಟಿಗಳು ಮುನಾವರ್ ಫಾರುಕಿಯ ಬೆಂಬಲಕ್ಕೆ ಬಂದಿದ್ದಾರೆ. ಇತರ ನಾಲ್ಕು ಫೈನಲಿಸ್ಟ್‌ಗಳಿಗಿಂತ ಮುನ್ನಾವರ್ ಫಾರೂಕಿ ಐದು ಪಟ್ಟು ಹೆಚ್ಚಿನ ಮತ ಪಡೆದಿದ್ದಾರೆ. ಹೀಗಾಗಿ ಅವರು ಬಿಗ್ ಬಾಸ್ 17 ಅನ್ನು ಸುಲಭವಾಗಿ ಗೆಲ್ಲುತ್ತಾರೆ ಎಂದು ವರದಿಯಾಗಿದೆ. ಅಭಿಷೇಕ್ ಕುಮಾರ್ ಅವರು ಅಂಕಿತಾ ಲೋಖಂಡೆ ಅವರನ್ನು ಸೋಲಿಸಿ BB 17ರ ಮೊದಲ ರನ್ನರ್ ಅಪ್ ಆಗುವ ಸಾಧ್ಯತೆಯಿದೆ.

Exit mobile version