Site icon Vistara News

BBK Season 10: ನಾವೇನೂ ಭಿಕಾರಿಗಳಾ?ವಿನಯ್‌ಗೆ ತಿರುಗೇಟು ಕೊಟ್ಟ ತನಿಷಾ; ಮುಂದೇನಾಯ್ತು ಈ ಆಟ?

Tanisha Vinay war Bbk 10

ಬೆಂಗಳೂರು: ಬಿಗ್‌ ಬಾಸ್‌ ಸೀಸನ್‌ 10ರ (BBK Season 10) ಎರಡನೇ ವಾರ ಬಿಗ್‌ ಬಾಸ್‌ ಭರ್ಜರಿ ಟಾಸ್ಕ್‌ಗಳನ್ನೇ ನೀಡುತ್ತಿದ್ದಾರೆ. ಅಷ್ಟೇ ಅಲ್ಲದೇ ಈ ವಾರ ಯಾವುದೇ ತಂಡ ಸೋತರೂ ಅದರಲ್ಲಿ ಒಬ್ಬರು ಶಿಕ್ಷಗೆ ಗುರಿಯಾಗುತ್ತಾರೆ. ಹೀಗಾಗಿ ಸ್ಪರ್ಧಿಗಳ ಮಧ್ಯೆ ಸ್ಪರ್ಧೆ ಜೋರಾಗಿಯೇ ನಡೆಯುತ್ತಿದೆ. ಇದೀಗ ಹೊಸ ಪ್ರೋಮೊವನ್ನು ಕಲರ್ಸ್‌ ಕನ್ನಡ ವಾಹಿನಿ ಹಂಚಿಕೊಂಡಿದೆ. ವಿನಯ್‌ ಹಾಗೂ ತನಿಷಾ ನಡುವೆ ವಾರ್‌ ನಡೆದಿದೆ.

ಬಿಗ್‌ ಬಾಸ್‌ ತಂಡಗಳಿಗೆ ಟಾಸ್ಕ್‌ ಒಂದನ್ನು ನೀಡಿದೆ. ವೇಗ ಹಾಗೂ ತಂತ್ರಗಾರಿಕೆಯನ್ನು ಬಳಸಿ ಆಡುವ ಟಾಸ್ಕ್‌ ಬಿಗ್‌ ಬಾಸ್‌ ನೀಡಿತ್ತು. ಬಿಗ್‌ ಬಾಸ್‌ ಹೇಳಿದ ನಂಬರ್‌ ಬಾಕ್ಸ್‌ನಲ್ಲಿ ಸ್ಪರ್ಧಿಗಳು ಓಡಿ ಹೋಗಿ ಕುಳಿತುಕೊಳ್ಳಬೇಕು. ಯಾರು ಬಾಕ್ಸ್‌ ಮೇಲೆ ಜಾಸ್ತಿ ಜನ ಇರುತ್ತಾರೋ ಅವರು ವಿನ್‌. ಈ ವೇಳೆ ಕ್ಯಾಪ್ಟನ್‌ ವಿನಯ್‌ ಹಾಗೂ ತನಿಷಾ ನಡುವೆ ಬೆಂಕಿ ಹತ್ತಿಕೊಂಡಿದೆ. ಎಲ್ಲರೂ ಒಮ್ಮತದಿಂದ ಪಾಯಿಂಟ್‌ ವಿಚಾರಕ್ಕೆ ಮಾತನಾಡುವಾಗ ವಿನಯ್‌ ಸ್ವಲ್ಪ ಖಾರವಾಗಿಯೇ ಮಾತನಾಡಿದ್ದಾರೆ ʻʻಡಿಸ್ಕಷನ್ ಮಾಡುವಾಗ ಬೇಡದೇ ಇದ್ದವರ ಮಾತುಗಳನ್ನು ಕೇಳಬೇಡಿʼʼಎಂದರು. ಈ ಮಾತುಗಳಿಂದ ಕೋಪಿತರಾದ ತನಿಷಾ ʻʻಬೇಡದೆ ಇದ್ದವರು ಯಾರೂ ಇಲ್ಲ ಇಲ್ಲಿ. ಬೇಡದೆ ಇದ್ದವರು ಅನ್ನೋಕೆ ನಾವೇನು ಭಿಕಾರಿಗಳಾ?ʼʼಎಂದು ಖಡಕ್‌ ಆಗಿಯೇ ಪ್ರತಿಕ್ರಿಯಿಸಿದ್ದಾರೆ.

ಇದೀಗ ಈ ಪ್ರೋಮೊಗೆ ನೆಟ್ಟಿಗರು ʻʻಇವತ್ತು ರಣಶಕ್ತಿ ಟೀಮ್ ಗೆಲ್ಬೇಕುʼʼಎಂದು ಕಮೆಂಟ್‌ ಮಾಡಿದ್ದಾರೆ. ವಿನಯ್ ರೌಡಿ ತರ ಆಡೋದು ಸರಿಯಿಲ್ಲ ಎಂದು ಇನ್ನೊಬ್ಬರು ಕಮೆಂಟ್‌ ಮಾಡಿದ್ದಾರೆ. ʻʻಸಂಗೀತ ಅವರ ನಡವಳಿಕೆ ಇತ್ತೀಚೆಗೆ ಇಷ್ಟ ಆಗ್ತಿಲ್ಲʼʼ ಎಂದು ಮತ್ತೊಬ್ಬರು ಕಮೆಂಟ್‌ ಮಾಡಿದ್ದಾರೆ.

ಇದನ್ನೂ ಓದಿ: BBK Season 10: ʻಥ್ರೆಟ್‌ ಆಗ್ತಿದೆʼ ಎಂದ ಸಂಗೀತಾ; ʻನಾನು ಮಿಮಿಕ್ರಿ ಆರ್ಟಿಸ್ಟ್ ಅಲ್ಲ ಡ್ರೋನ್‌ʼ ಎಂದ ವಿನಯ್‌!

ಕಾರ್ತಿಕ್ ಮಹೇಶ್ ನೇತೃತ್ವದ ‘ರಣಶಕ್ತಿ’ ತಂಡದಲ್ಲಿ ಸಂಗೀತಾ ಶೃಂಗೇರಿ, ತನಿಷಾ ಕುಪ್ಪಂಡ, ಡ್ರೋನ್ ಪ್ರತಾಪ್, ವರ್ತೂರು ಸಂತೋಷ್, ಸಿರಿ, ಭಾಗ್ಯಶ್ರೀ, ನೀತು ಇದ್ದರು. ವಿನಯ್ ಗೌಡ ತಂಡ ‘ಮಾಣಿಕ್ಯ’ ತಂಡಕ್ಕೆ ನಮ್ರತಾ ಗೌಡ, ಸ್ನೇಹಿತ್ ಗೌಡ, ಗೌರೀಶ್ ಅಕ್ಕಿ, ಮೈಕಲ್, ರಕ್ಷಕ್ ಬುಲೆಟ್, ತುಕಾಲಿ ಸಂತು ಮತ್ತು ಇಶಾನಿ ಇದ್ದರು.

Exit mobile version