ಬೆಂಗಳೂರು: ಬಿಗ್‌ಬಾಸ್ ಕನ್ನಡ 10ನೇ (BBK Season 10) ವರ್ಷಾಚರಣೆಯ ಸೀಸನ್‌ಗೆ ಕ್ಷಣಗಣನೆ ಆರಂಭವಾಗಿದೆ. ಕನ್ನಡ ಬಿಗ್ ಬಾಸ್‌ನ ಹೊಸ ಸೀಸನ್ ಇಂದು( ಅ. 8) ಆರಂಭಗೊಳ್ಳುತ್ತಿದೆ. ಈ ಹಿಂದಿನ ಎಪಿಸೋಡ್‌ಗಿಂತ ವಿಭಿನ್ನವಾಗಿರುವ ಈ ಬಾರಿಯ ಬಿಗ್ ಬಾಸ್ ಸ್ಪರ್ಧಿಗಳು ಯಾರು ಎನ್ನುವುದನ್ನು ನೋಡುವುದಕ್ಕೆ ಪ್ರೇಕ್ಷಕರು ಕುತೂಹಲದಿಂದ ಕಾದು ಕೂತಿದ್ದಾರೆ. ಇದೀಗ ಮೂಲಗಳ ಪ್ರಕಾರ ಅಸಲಿ ಪಟ್ಟಿ ಔಟ್ ಆಗಿದೆ.
ಡ್ರೋನ್ ಪ್ರತಾಪ್
ತಾನೊಬ್ಬ ಯುವ ವಿಜ್ಞಾನಿ, ಸಾಕಷ್ಟು ಡ್ರೋನ್‌ಗಳನ್ನು ತಯಾರಿಸಿದ್ದೇನೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಸ್ಫೂರ್ತಿದಾಯಕ ಭಾಷಣ ಮೂಲಕ ಸದ್ದು ಮಾಡಿದ್ದರು. ಪಾಠ ಮಾಡುತ್ತಿದ್ದ ಪ್ರತಾಪ್ ಸುಳ್ಳು ಹೇಳುತ್ತಿದ್ದಾರೆ ಹಾಗೆ ಹೀಗೆ ಎಂದು ಕೆಲವು ವರ್ಷಗಳ ಹಿಂದೆ ಸುದ್ದಿಯಾಗಿತ್ತು. ಅದಾದ ಮೇಲೆ ಪ್ರತಾಪ್ ವೃತ್ತಿಯಲ್ಲಿ ದೊಡ್ಡ ಮಟ್ಟಕ್ಕೆ ಹೆಸರು ಮಾಡಿಕೊಂಡು ಮುಂದೆ ಸಾಗುತ್ತಿದ್ದರು. ಡ್ರೋನ್ ಕೆಲವು ದಿನಗಳ ಹಿಂದೆಯಷ್ಟೇ ಡ್ರೋನಾರ್ಕ್ ಎರೋಸ್ಪೇಸ್ ಎಂಬ ಕಂಪನಿ ಪ್ರಾರಂಭಿಸಿದ್ದರು.
ಕಾರ್ತಿಕ್ ಮಹೇಶ್
ಸುನಿಲ್ ಪುರಾಣಿಕ್ ಪುತ್ರ ಸಾಗರ್ ಪುರಾಣಿಕ್ ನಿರ್ದೇಶನದ ಡೊಳ್ಳು ಚಿತ್ರದಲ್ಲಿ ಕಾರ್ತಿಕ್ ಮಹೇಶ್ ನಾಯಕರಾಗಿ ಅಭಿನಯಿಸಿದ್ದಾರೆ. ‘ಪುಟ್ಟಕ್ಕನ ಮಕ್ಕಳು’ ಧಾರಾವಾಹಿಯಲ್ಲಿ ವಕೀಲ ಚಂದ್ರು ಪಾತ್ರಕ್ಕೆ ಕಾರ್ತಿಕ್ ಬಣ್ಣ ಹಚ್ಚಿದ್ದರು. ಅಂದಹಾಗೆ ‘ಅಕ್ಕ’, ‘ಬಂಗಾರಿ’, ‘ಖುಷಿ’, ‘ಇಂತಿ ನಿಮ್ಮ ಆಶಾ’ ಮುಂತಾದ ಧಾರಾವಾಹಿಗಳಲ್ಲಿ ಕಾರ್ತಿಕ್ ಮಹೇಶ್ ನಟಿಸಿದ್ದರು.
ಇದನ್ನೂ ಓದಿ: BBK Season 10: ಯಾರ ಕತೆ ಶುರು? ಯಾವ ಕತೆ ಫಿನಿಷ್? ಆಟ ಶುರುವಾಗೋ ಮುಂಚೆ ಡ್ರೋನ್ ಪ್ರತಾಪ್‌ಗೆ ಕಿಚ್ಚ ಖಡಕ್ ಪ್ರಶ್ನೆ!
ರಕ್ಷಕ್ ಬುಲೆಟ್
ಕಳೆದ ವರ್ಷ ಬಿಡುಗಡೆಗೊಂಡ ಶರಣ್ ಹಾಗೂ ನಿಶ್ವಿಕಾ ನಾಯ್ಡು ನಟನೆಯ ಮತ್ತು ಜಡೇಶ್ ಕುಮಾರ್ ಹಂಪಿ ನಿರ್ದೇಶನದ ಗುರು ಶಿಷ್ಯರು ಚಿತ್ರದಲ್ಲಿ ರಕ್ಷಕ್ ಬುಲೆಟ್ ನಟಿಸಿದ್ದರು. ಈ ಚಿತ್ರದಲ್ಲಿ ಬಾಷಾ ಎಂಬ ಪಾತ್ರವನ್ನು ರಕ್ಷಕ್ ನಿರ್ವಹಿಸಿದ್ದರು.
ಕಾಮಿಡಿ ಕಿಲಾಡಿ ಸಂತೋಷ್
ಸಂತೋಷ್ ಮೂಲತಃ ಹಾಸನ ಜಿಲ್ಲೆಯ ಹೊಳೆ ನರಸಿಪುರ ತಾಲೂಕಿನ ಉದ್ದೂರು ಹೊಸಹಳ್ಳಿ. ಸಂತೋಷ್ ಈಗಾಗಲೇ ಕನ್ನಡದ 12 ಸಿನಿಮಾಗಳಲ್ಲಿ ನಟನೆ ಮಾಡಿದ್ದಾರೆ. ಕಲರ್ಸ್ ಕನ್ನಡ ವಾಹಿನಿ ಮಜಾಭಾರತ ಹಾಗೂ ಜೀ ಟಿವಿಯ ಕಾಮಿಡಿ ಕಿಲಾಡಿ ಕಾರ್ಯಕ್ರಮದ ಮೂಲಕ ಸಂತೋಷ್ ಮನೆ ಮಾತಾಗಿದ್ದಾರೆ.
ಸಂಗೀತಾ ಶೃಂಗೇರಿ
ಮಲೆನಾಡಿನ ಶೃಂಗೇರಿ ಮೂಲದ ನಟಿ ಸಂಗೀತಾ ಕಿರುತೆರೆ ಹಾಗೂ ಸಿನಿಮಾಗಳಲ್ಲಿ ಕೆಲಸ ಮಾಡಿದ್ದಾರೆ. ‘ಹರ ಹರ ಮಹಾದೇವ್’ ಧಾರಾವಾಹಿಯ ಮೂಲಕ ಸಂಗೀತಾ ನಟನೆಗಿಳಿದಿದ್ದರು. ‘777 ಚಾರ್ಲಿ’ಯಲ್ಲಿ ನಟಿಸಿದ ಬಳಿಕ ಕನ್ನಡಿಗರ ಮನದಲ್ಲಿ ಮನೆಮಾತಾಗಿದ್ದಾರೆ. ‘ಶಿವಾಜಿ ಸುರತ್ಕಲ್-2’ ಸಿನಿಮಾದಲ್ಲಿ ಯೂ ನಟಿಸಿದ್ದಾರೆ.
ರ‍್ಯಾಪರ್ ಈಶಾನಿ
ಮೂಲತಃ ಮೈಸೂರಿನವರಾಗೊದ್ದು, ದುಬೈನಲ್ಲಿ ನೆಲೆಸಿದ್ದಾರೆ. ಈಗಾಗಲೇ 17 ಇಂಗ್ಲಿಷ್ ಆಲ್ಬಂ ಸಾಂಗ್‌ನಲ್ಲಿ ಹಾಡಿದ್ದಾರೆ. ಕನ್ನಡದಲ್ಲೂ ಈಶಾನಿ ಅವರು ಆಲ್ಬಂಗಳಲ್ಲಿ ಹಾಡಿ ಹೆಜ್ಜೆ ಹಾಕಿದ್ದಾರೆ. ಅವುಗಳಲ್ಲಿ ರೈಟರ್, ಊರ್ಮಿಳಾ, ಫ್ರೀಡಮ್.
ನಮ್ರತಾ ಗೌಡ
ಪುಟ್ಟಗೌರಿ ಧಾರಾವಾಹಿಯಲ್ಲಿ ಹಿಮಾ ಪಾತ್ರದಲ್ಲಿ ಮಿಂಚಿದ್ದರು.ನಮ್ರತಾ ಗೌಡ ಅವರು ಬಾಲನಟಿಯಾಗಿ ಮೊದಲು ಬಣ್ಣ ಹಚ್ಚಿದ್ದರು.ಕೆಲವು ದಿನಗಳ ಹಿಂದೆ ಹೊಸ ಮನೆಗೆ ಕಾಲಿಟ್ಟಿದ್ದರು. ಇವರ ನೂತನ ಗೃಹ ಪ್ರವೇಶಕ್ಕೆ ನಟಿ ನೇಹಾ ಗೌಡ, ಅನುಪಮಾ ಗೌಡ, ಕವಿತಾ ಗೌಡ, ಕಿಶನ್ ಬಿಳಗಲಿ, ಯಶಸ್ವಿನಿ ಕೆ ಸ್ವಾಮಿ ಮುಂತಾದವರು ಆಗಮಿಸಿದ್ದರು. ನಮ್ರತಾ ಗೌಡ ಅವರು ಸದ್ಯ ಯಾವುದೇ ಧಾರಾವಾಹಿ, ಸಿನಿಮಾಗಳಲ್ಲಿ ನಟಿಸುತ್ತಿಲ್ಲ. ಕೆಲ ದಿನಗಳ ಹಿಂದೆ ಐಶ್ವರ್ಯಾ ಸಿಂಧೋಗಿ ಜೊತೆಗೆ ಬಾಲಿ ಟ್ರಿಪ್ ಮಾಡಿದ್ದರು. ಆ ವೇಳೆ ಅವರು ಬಿಕಿನಿ ಧರಿಸಿದ ಫೋಟೊವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಆ ಫೋಟೊ ಭಾರೀ ಸಂಚಲನ ಮೂಡಿಸಿತ್ತು. ನಮ್ರತಾ 2011ರಲ್ಲಿ ಸ್ಟಾರ್ ಸುವರ್ಣದಲ್ಲಿ ಪ್ರಸಾರವಾದ `ಕೃಷ್ಣ ರುಕ್ಮಿಣಿ’ ಸೀರಿಯಲ್ ಮೂಲಕ ಕಿರುತೆರೆ ಜರ್ನಿ ಆರಂಭಿಸಿದರು. ನಂತರ ಡ್ಯಾನ್ಸ್ ರಿಯಾಲಿಟಿ ಶೋ ಡ್ಯಾನ್ಸಿಂಗ್ ಸ್ಟಾರ್‌ನಲ್ಲಿ ಸ್ಪರ್ಧಿಯಾಗಿದ್ದರು.
ಸ್ನೇಕ್ ಶ್ಯಾಮ್
ಚಿಕ್ಕಂದಿನಿಂದಲೂ ಹಾವು ಹಿಡಿಯುವುದನ್ನು ಕರಗತ ಮಾಡಿಕೊಂಡಿದ್ದಾರೆ. ಮೈಸೂರಿನ ಜನರಿಗೆ ಎಲ್ಲಿಯೇ ಹಾವು ಕಾಣಿಸಲಿ ತಕ್ಷಣಕ್ಕೆ ನೆನಪಿಗೆ ಬರುವುದು ಸ್ನೇಕ್ ಶ್ಯಾಮ್. ಸ್ನೇಕ್ ಶ್ಯಾಮ್ ಅವರ ಮೂಲ ಹೆಸರು ಬಾಲಸುಬ್ರಹ್ಮಣ್ಯ.ಶಾಲಾ ಮಕ್ಕಳಿಗೆ ಹಾವಿನ ಬಗ್ಗೆ ಉಪನ್ಯಾಸ ನೀಡಿ ಅವರಲ್ಲಿರುವ ಆತಂಕವನ್ನು ದೂರ ಮಾಡಿ ಧೈರ್ಯ ತುಂಬುವ ಕೆಲಸವನ್ನು ಕೂಡ ಮಾಡುತ್ತ ಬಂದಿದ್ದಾರೆ. ಈಗಾಗಲೇ ಇವರು ರಾಷ್ಟ್ರ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದ್ದು ನ್ಯಾಷನಲ್ ಜಿಯೋಗ್ರಫಿ ಚಾನೆಲ್ ಇವರ ಸಾಕ್ಷ್ಯ ಚಿತ್ರವನ್ನು ಪ್ರಸಾರ ಮಾಡಿದೆ.
ಸ್ನೇಹಿತ್ ಗೌಡ
ನಮ್ಮನೆ ಯುವರಾಣಿ ಧಾರಾವಾಹಿ ಮೂಲಕ ಮನೆ ಮಾತಾದರು.
ತನಿಷಾ ಕುಪ್ಪಂಡ
‘ಮಂಗಳಗೌರಿ ಮದುವೆ’ ಧಾರಾವಾಹಿ ಮೂಲಕ ಮನೆಮಾತಾಗಿದ್ದ ಇವರು ‘ಪೆಂಟಗನ್’ ಸಿನಿಮಾ ಮೂಲಕ ಬೆಳ್ಳಿತೆರೆಗೆ ಎಂಟ್ರಿಕೊಟ್ಟಿದ್ದರು.
ವಿನಯ್ ಗೌಡ
‘ಹರ ಹರ ಮಹಾದೇವ’, ‘ಯಡಿಯೂರು ಸಿದ್ಧಲಿಂಗೇಶ್ವರ’ ಧಾರಾವಾಹಿಗಳಲ್ಲಿ ಅಭಿನಯಿಸಿ ಖ್ಯಾತಿ ಪಡೆದಿದ್ದರು ನಟ ವಿನಯ್ ಗೌಡ.
ನೀತು ವನಜಾಕ್ಷಿ
ನೀತು ವನಜಾಕ್ಷಿ ಹುಟ್ಟಿದ್ದು ಗದಗದ ಮಧ್ಯಮ ವರ್ಗದ ಕುಟುಂಬವೊಂದರಲ್ಲಿ. ಎಲ್ಲ ಟ್ರಾನ್ಸ್ ಜೆಂಡರ್ ಗಳಂತೆ ಇವರು ಗಂಡಾಗಿ ಹುಟ್ಟಿದ್ದು. ಬಾಲ್ಯದ ಹೆಸರು ಮಂಜುನಾಥ್. ಸೂಪರ್ ಕ್ವೀನ್ಸ್’ (Super Queens) ರಿಯಾಲಿಟಿ ಶೋ ಮೂಲಕ ಗುರುತಿಸಿಕೊಂಡಿದ್ದರು. ನಟಿ ನೀತು ವನಜಾಕ್ಷಿ ಅವರು ರಿಯಲ್ ಸ್ಟಾರ್ ಉಪೇಂದ್ರ ನಿರ್ದೇಶನದ ಬಹುನಿರೀಕ್ಷಿತ ಸಿನಿಮಾ UI ಚಿತ್ರದಲ್ಲಿ ನಟಿಸಿದ್ದಾರೆ. ನೀತು ಟ್ಯಾಟೂ ಆರ್ಟಿಸ್ಟ್ ಆಗಿ ಗುರುತಿಸಿಕೊಂಡಿದ್ದಾರೆ. ಇನ್ನೊಂದೆಡೆ ಉತ್ತರ ಕರ್ನಾಟಕ ತಿನಿಸುಗಳ ʻಗಮ ಗಮ’ ಎನ್ನುವ ಹೊಟೇಲ್ ಉದ್ಯಮಿ ಆಗಿದ್ದಾರೆ.
ಗೌರೀಶ್ ಅಕ್ಕಿ
ಕೊಪ್ಪಳ ಜಿಲ್ಲೆಯ ಮುಧೋಳ ಮೂಲದವರು. ಉಪನ್ಯಾಸಕರಾಗಿದ್ದರು. ಬಳಿಕ ಮಾಧ್ಯಮ ಲೋಕಕ್ಕೆ ಎಂಟ್ರಿಕೊಟ್ಟರು. ವರ್ಷಗಳ ಕಾಲ ಸುದ್ದಿವಾಹಿನಿಗಳಲ್ಲಿ ಕೆಲಸ ಮಾಡಿದ ಗೌರೀಶ್ ಅಕ್ಕಿ ನಂತರ ನಿರ್ದೇಶಕರಾದರು.
ʻಮೈ ಡಾರ್ಲಿಂಗ್’ ಚಿತ್ರವನ್ನ ಗೌರೀಶ್ ಅಕ್ಕಿ ನಿರ್ದೇಶನ ಮಾಡಿದರು. ‘ಕೆಂಗುಲಾಬಿ’ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದರು. ‘ಚಾರ್ಮಿನಾರ್’, ‘ಲೂಸಿಯಾ’, ‘ಸಿಪಾಯಿ’, ‘3000’ ಮುಂತಾದ ಚಿತ್ರಗಳಲ್ಲಿ ಗೌರೀಶ್ ಅಕ್ಕಿ ಕಾಣಿಸಿಕೊಂಡಿದ್ದಾರೆ. ಸದ್ಯ ಪತ್ರಿಕೋದ್ಯಮಕ್ಕೆ ಸಂಬಂಧಿಸಿದಂತೆ ಆಲ್ಮಾ ಮೀಡಿಯಾ ಸ್ಕೂಲ್ ನಡೆಸುತ್ತಿದ್ದಾರೆ.
ಇದನ್ನೂ ಓದಿ: BBK Season 10: ಯಾರು ಇನ್, ಯಾರು ಔಟ್? ಸ್ಪರ್ಧಿಗಳನ್ನು ಡಿಸೈಡ್ ಮಾಡೋದು ಪ್ರೇಕ್ಷಕರು! ಹೊಸ ಪ್ರೋಮೊ ಔಟ್!
ಚಾರ್ಲಿ
ಈ ಬಾರಿ ಬಿಗ್ ಬಾಸ್‌ಗೆ ಚಾರ್ಲಿ ಎಂಟ್ರಿ ಕೊಡುತ್ತಿರುವುದು ಪಕ್ಕಾ ಆಗಿದೆ. ರಕ್ಷಿತ್ ಶೆಟ್ಟಿ ನಟನೆಯ 777 ಚಾರ್ಲಿ ಸಿನಿಮಾ ಮೂಲಕ ಚಾರ್ಲಿ ನೋಡುಗರಿಗೆ ಪರಿಚಿತವಾದಳು. ನಿರ್ದೇಶಕ ಕಿರಣ್ ರಾಜ್ ಈ ಚಿತ್ರಕ್ಕಾಗಿ ಚಾರ್ಲಿಯನ್ನುಅದ್ಭುತವಾಗಿ ತರಬೇತು ಮಾಡಿಸಿದ್ದಾರೆ. ಹಿಂದೆಮ್ಮೊ ಕಿರಣ್ ರಾಜ್ ಚಾರ್ಲಿ ಬಗ್ಗೆ ಮಾತನಾಡಿ ʻʻಚಾರ್ಲಿಗೆ ಅರ್ಥ ಮಾಡಿಸುವುದು ಸಿಕ್ಕಾಪಟ್ಟೆ ಚಾಲೆಂಜಿಂಗ್ ವಿಷಯವಾಗಿತ್ತು. ಅದು ಯಾವುದನ್ನು ಅರ್ಥ ಮಾಡಿಕೊಳ್ಳುತ್ತದೆ, ಯಾವುದು ಅದಕ್ಕೆ ಅರ್ಥವಾಗುವುದಿಲ್ಲಎಂಬುದನ್ನು ಮೊದಲು ಅರಿತು ನಂತರ ಅದಕ್ಕೆ ಬೇಕಾದ ಊಟ, ತಿಂಡಿ ಕೊಟ್ಟು ಪುಸಲಾಯಿಸಿ ನಟಿಸುವಂತೆ ಮಾಡುತ್ತಿದ್ದೆವು. ಕೆಲವೊಮ್ಮೆ ಇಡೀ ದಿನ ಒಂದೇ ಒಂದು ಟೇಕ್ ಕೂಡ ಆಗುತ್ತಿರಲಿಲ್ಲ’ ಎಂದು ಕಿರಣ್ ರಾಜ್ ಹೇಳಿದ್ದರು. ಚಾರ್ಲಿಯನ್ನು ತಂದು ಅದಕ್ಕಾಗಿ ಆಫೀಸ್ ಪಕ್ಕ ಒಂದು ಮನೆ ಮಾಡಿದ್ದೆವು. ಟ್ರೇನರ್ ಪ್ರಮೋದ್ ಬಿ. ಸಿ. ಅದಕ್ಕೆ ಟ್ರೇನಿಂಗ್ ಮಾಡುತ್ತಿದ್ದರು. ನಮ್ಮ ಸಿನಿಮಾ ತಂಡದ ಜತೆ ಟ್ರೇನರ್ ಕೂಡ ನಾಲ್ಕು ವರ್ಷ ಜರ್ನಿ ಮಾಡಿದ್ದಾರೆ’ ಎಂದಿದ್ದರು. ಪ್ರಮೋದ್ ಅವರ ಬಳಿ ಕಿರಣ್ ರಾಜ್ ನಾಯಿಯ ಬಗ್ಗೆ ಪ್ರಸ್ತಾಪಿಸಿದ್ದರು. ನಾಲ್ಕೈದು ಸುತ್ತಿನ ಮಾತುಕತೆ ಬಳಿಕ ಪ್ರಮೋದ್ ಅವರೇ ಈ ಸಿನಿಮಾಕ್ಕೆ ಡಾಗ್ ಟ್ರೈನರ್ ಎಂದು ಸೆಲೆಕ್ಟ್ ಮಾಡುತ್ತಾರೆ. ಸಾಕಷ್ಟು ನಾಯಿಗಳನ್ನು ಹುಡುಕಿದರೂ ಸಿನಿಮಾಕ್ಕೆ ಬೇಕಾಗುವಂತಹ ಶ್ವಾನ ಸಿಗೋದಿಲ್ಲ. ಕೊನೇಗೆ ಸಿಕ್ಕಿದ್ದು ಚಾರ್ಲಿ. ಸ್ನೇಹಿತರೊಬ್ಬರು ಈ ನಾಯಿ ಬಗ್ಗೆ ಪ್ರಮೋದ್ ಅವರಿಗೆ ಹೇಳುತ್ತಾರೆ. ಆಗ ಇದು ತರಲೆ ನಾಯಿ ಮರಿ. ಮನೆಯವರಿಗೆ ಇದರ ಉಪಟಳ ಸಾಕಾಗಿ ಯಾರಾದರೂ ಸಾಕುವರಿದ್ದರೆ ಕೊಡಲು ಮುಂದಾಗಿರುತ್ತಾರೆ. ಅಷ್ಟೋತ್ತಿಗೆ ಪ್ರಮೋದ್ ಕೂಡ ಹುಡುಕುತ್ತಿದ್ದ ನಾಯಿಯ ಲಕ್ಷಣಗಳೆಲ್ಲ ಇದರಲ್ಲೇ ಿತ್ತು. ಯಾರಿಗೂ ಬೇಡದ ಈ ನಾಯಿ ಮುಂದೆ 777 ಚಾರ್ಲಿಯಂಥಾ ಪ್ಯಾನ್ ಇಂಡಿಯಾ ಸಿನಿಮಾಗೆ ಹೀರೋ ಆಗುತ್ತದೆ. ಚಾರ್ಲಿ ಬಹಳ ತಿಂಡಿಪೋತಿ ಆಗಿತ್ತಂತೆ. ಇದನ್ನು ಇಟ್ಟುಕೊಂಡು ಪ್ರಮೋದ್ ಸತತ ನಾಲ್ಕು ವರ್ಷ ಈ ನಾಯಿಯನ್ನು ಟ್ರೈನ್ ಮಾಡುತ್ತಾರೆ.
ಈ ಹೆಸರುಗಳ ಜತೆಗೆ ನಟಿ ಭಾಗ್ಯಶ್ರೀ ಮತ್ತು ವರ್ತೂರು ಸಂತೋಷ್ (ಹಳ್ಳಿಕಾರ್ ಇದೆ. ಇದುವರೆಗೆ ಬಿಗ್ ಬಾಸ್ ಯಾವುದೇ ಅಧಿಕೃತ ಪಟ್ಟಿ ಬಿಡುಗಡೆ ಮಾಡಿಲ್ಲ. ಬಿಗ್ ಬಾಸ್ ಕನ್ನಡವನ್ನು ಜಿಯೋ ಸಿನಿಮಾದಲ್ಲಿ 24ಗಂಟೆ ನೇರಪ್ರಸಾರವನ್ನು ವೀಕ್ಷಿಸಬಹುದು.