Site icon Vistara News

BBK Season 10:  3 ದಿನಗಳಲ್ಲಿ ಬಿಗ್ ಬಾಸ್ ಶುರು; ಸಂಭಾವ್ಯ ಸ್ಪರ್ಧಿಗಳ ಪಟ್ಟಿ ಔಟ್‌!

BBK Season 10 contestants tentative list

ಬೆಂಗಳೂರು: ಬಿಗ್‌ ಬಾಸ್‌ ಹತ್ತನೇ (Bigg Boss Kannada 10) ಸೀಸನ್‌ ಗ್ರ್ಯಾಂಡ್‌ ಪ್ರೀಮಿಯರ್‌ ಅಕ್ಟೋಬರ್ 8ರ ಸಂಜೆ 6ಕ್ಕೆ ನಡೆಯಲಿದೆ. 100 ದಿನದ ಬಿಗ್‌ ಬಾಸ್‌ ಹತ್ತನೇ ಸೀಸನ್‌ ಆಟವು ಅ.9ರಿಂದ ಪ್ರತಿ ರಾತ್ರಿ 9:30ಕ್ಕೆ ನಡೆಯಲಿದೆ. ಈ ಬಾರಿ ಯಾರೆಲ್ಲಾ ಸ್ಪರ್ಧಿಗಳು (bigg boss kannada contestants) ಬರಬಹುದು ಎಂಬ ಕುತೂಹಲ ಮನೆ ಮಾಡಿದೆ. ಇದೀಗ ಕೆಲವು ಹೆಸರುಗಳು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ.

ದೊಡ್ಮನೆಗೆ ಆಟಕ್ಕೆ ಮೊದಲ ಸ್ಪರ್ಧಿಯಾಗಿ ‘777 ಚಾರ್ಲಿ’ ಎಂಟ್ರಿ ಕೊಡುವ ವಿಚಾರ ಅಧಿಕೃತವಾಗಿ ಹೊರಬಿದ್ದಿದೆ. ನಟ ಸುನೀಲ್ ರಾವ್, ಭವ್ಯಾ ಗೌಡ(Bhavya Gowda), ರಘು ಮುಖರ್ಜಿ, ಪ್ರಕಾಶ್ ತುಮ್ಮಿನಾಡು, ರಂಜನಿ ರಾಘವನ್, ಹುಲಿ ಕಾರ್ತಿಕ್, ನಮ್ರತಾ ಗೌಡ, ಚಂದ್ರಪ್ರಭ, ಅಗ್ನಿಸಾಕ್ಷಿ ಖ್ಯಾತಿಯ ರಾಜೇಶ್ ಧ್ರುವ (Rajesh Dhruva), ‘ಕೆಜಿಎಫ್’ ನಟಿ ರೂಪಾ ರಾಯಪ್ಪ, ಮಿಮಿಕ್ರಿ ಗೋಪಿ, ಕ್ರಿಕೆಟರ್ ವಿನಯ್ ಕುಮಾರ್, ಪೋಷಕ ನಟಿ ಸ್ವಾತಿ, ರಕ್ಷಕ್ ಬುಲೆಟ್ ಪ್ರಕಾಶ್, ರ‍್ಯಾಪರ್ ಇಶಾನಿ ಸೇರಿದಂತೆ ಹಲವರು ಬಿಗ್ ಬಾಸ್ ಸ್ಪರ್ಧಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ಒಳ್ಳೆ ಉಡುಗೊರೆಗಳು ಸಿಗುತ್ತವೆ

ಬಿಗ್ ಬಾಸ್‌ನಲ್ಲಿ ಈ ಬಾರಿ ಊಹೆಗೂ ಮೀರಿದ ವಿಶೇಷತೆಗಳು ಇದೆ. ಕಿಚ್ಚ ಸುದೀಪ್ ನೇತೃತ್ವದಲ್ಲಿ ಸುದ್ದಿಗೋಷ್ಠಿಯೂ ನಡೆದಿದ್ದು, ವಿಶೇಷತೆಗಳನ್ನೆಲ್ಲಾ ಹೇಳಿ ಆಗಿದೆ. ಬಿಗ್‌ಬಾಸ್‌ನಲ್ಲಿ ಯಾವುದೇ ಮುಚ್ಚು ಮರೆ ಇರುವುದಿಲ್ಲ. ಎಲ್ಲವನ್ನು ಲೈವ್‌ನಲ್ಲಿಯೇ ನೋಡಬಹುದಾಗಿದೆ. ಅದರಲ್ಲೂ ಎಷ್ಟೋ ಮಿಸ್ಸಾಗುವಂತಹ ಕಂಟೆಂಟ್‌ಗಳು ಜಿಯೋ ಸಿನಿಮಾದಲ್ಲಿ ಸಿಗಲಿದೆ.

ಇದನ್ನೂ ಓದಿ: BBK Season 10: ಬಿಗ್‌ ಬಾಸ್‌ ಯಾವನಿಗ್ ಬೇಕ್‌ ಗುರು ಅನಿಸಿದೆ ಎಂದ ಕಿಚ್ಚ ಸುದೀಪ್‌; ಬ್ರೇಕ್‌ ತಗೋಳ್ತಾರಾ?

ಇದರ ಜತೆಗೆ ಉಡುಗೊರೆಗಳು ಸಿಗುತ್ತವೆ. ಟಿವಿಯಲ್ಲಿ ನಡೆಯುವ ಬಿಗ್ ಬಾಸ್ ಶೋ ನೋಡಿ, ಜಿಯೋ ಸಿನಿಮಾದಲ್ಲಿ ಕೇಳುವ ಪ್ರಶ್ನೆಗಳಿಗೆ ಸರಿಯಾದ ಉತ್ತರ ನೀಡಿದವರಿಗೆ ಬಹುಮಾನಗಳು ಇರಲಿವೆ. ಅದರಲ್ಲೂ ಪ್ರತಿ ದಿನ ಕೂಡ ಬಹುಮಾನ ಸಿಗಲಿದೆ.

ಈ ಹಿಂದಿನ ಬಾರಿಯಂತೆ ಈ ಬಾರಿಯೂ ಜನಪ್ರಿಯ ಟಿವಿ, ಸಿನಿಮಾ ತಾರೆಯರ ಜತೆಗೆ ಸೋಷಿಯಲ್ ಮೀಡಿಯಾ ಸೆಲೆಬ್ರಿಟಿಗಳು ಸಹ ಬಿಗ್​ಬಾಸ್ ಮನೆ ಸೇರಲಿದ್ದಾರೆ. ಇದು ಹತ್ತನೇ ಸೀಸನ್ ಆಗಿರುವ ಕಾರಣ ಭಿನ್ನವಾಗಿ, ಅದ್ಧೂರಿಯಾಗಿ ಬಿಗ್​ಬಾಸ್ ರಿಯಾಲಿಟಿ ಶೋ ಇರಲಿದೆ ಎನ್ನಲಾಗುತ್ತಿದೆ. ಸಾಮಾನ್ಯರೂ ಈ ಬಾರಿ ಬಿಗ್​ಬಾಸ್ ಮನೆ ಸೇರುವ ಸಾಧ್ಯತೆ ಇದೆ. ಮನೆಯೊಳಗಿನ ಕ್ಯಾಮೆರಾದ ಬದಲಿಗೆ ಪ್ರೋಮೊನಲ್ಲಿ ರಸ್ತೆಯಲ್ಲಿನ ಕ್ಯಾಮೆರಾಗಳನ್ನು ತೋರಿಸಲಾಗಿದೆ.

ರಸ್ತೆಯಲ್ಲಿ, ಕಟ್ಟಡಗಳಿಗೆ ಅಳವಡಿಸಿರುವ ಸಿಸಿಟಿವಿ ಕ್ಯಾಮೆರಾಗಳನ್ನು ತೋರಿಸಿ, ರಸ್ತೆಯಲ್ಲಿ ಓಡಾಡುವ ವ್ಯಕ್ತಿಗಳ ದೃಶ್ಯಗಳನ್ನು ಸೆರೆ ಹಿಡಿದು ಪ್ರೋಮೊದಲ್ಲಿ ತೋರಿಸಲಾಗಿದೆ. ಈ ಮೂಲಕ ನೋಡುಗರಿಗೆ ಭಾರಿ ಕುತೂಹಲ ಹುಟ್ಟುಹಾಕಿದೆ. ಇನ್ನು ಈ ಬಾರಿ ಯಾವ ಯಾವ ಸ್ಪರ್ಧಿಗಳು ಬಿಗ್​ಬಾಸ್ ಮನೆ ಸೇರಲಿದ್ದಾರೆ ಎಂಬ ಕುತೂಹಲ ನೋಡುಗರಿಗೆ ಹೆಚ್ಚಾಗಿದೆ.

Exit mobile version