ಬೆಂಗಳೂರು: ಈ ಬಾರಿಯ ಕನ್ನಡ ಬಿಗ್ಬಾಸ್ (BBK SEASON 10) ಪ್ರೇಕ್ಷಕರ ಗಮನ ಸೆಳೆದು ಮುನ್ನುಗ್ಗುತ್ತಿದೆ. ದಿನದಿಂದ ದಿನಕ್ಕೆ ಟಿಆರ್ಪಿ ಏರುತ್ತಲೇ ಇದೆ. ಈ ವಾರ ಸ್ಪರ್ಧಿಗಳ ಮನೆಯವರು ಬಿಗ್ಬಾಸ್ ಮನೆಯೊಳಗೆ ಎಂಟ್ರಿಕೊಟ್ಟು ಒಂದಷ್ಟು ಹೊತ್ತು ಕಳೆದಿದ್ದರು. ಇದೀಗ ಕ್ಯಾಪ್ಟನ್ಸಿ ಆಯ್ಕೆ ಕಸರತ್ತು ನಡೆಯುತ್ತಿದೆ. ಹೊರಬಿದ್ದ ಪ್ರೋಮೊದಲ್ಲಿ ಕ್ಯಾಪ್ಟನ್ಸಿ ಆಯ್ಕೆ ವಿಚಾರದಲ್ಲಿ ಮನೆಯ ವಾತಾವರಣ ಬಿಗುವಿನಿಂದ ಕೂಡಿದ್ದು ಕಂಡುಬಂದಿದೆ.
ಶೋ ಕೊನೆಯ ಹಂತ ತಲುಪಿದೆ. ಈ ಮುಖ್ಯ ಹಂತದಲ್ಲಿ ಕ್ಯಾಪ್ಟನ್ ಆಗುವ ಗೋಲ್ಡನ್ ಚಾನ್ಸ್ ಡ್ರೋನ್ ಪ್ರತಾಪ್ ಕೈ ತಪ್ಪಿದೆ. ಈ ವಾರ ಆಗಮಿಸಿದ ಸ್ಪರ್ಧಿಗಳ ಕುಟುಂಬದ ಸದಸ್ಯರಿಗೆ ಯಾರು ಕ್ಯಾಪ್ಟನ್ ಆಗಬೇಕು ಎಂಬ ಪ್ರಶ್ನೆ ಕೇಳಲಾಗಿತ್ತು. ಅದರಂತೆ ಕುಟುಂಬದವರು ತನಿಷಾ, ಸಂಗೀತಾ ಹಾಗೂ ಪ್ರತಾಪ್ ಅವರನ್ನು ಆಯ್ಕೆ ಮಾಡಿದ್ದರು. ಈ ಮೂವರ ಪೈಕಿ ಒಬ್ಬರನ್ನು ಈಗ ಹೊರಗೆ ಇಡಬೇಕಾಗಿ ಬಂದಿದೆ. ಬಗ್ಗೆ ಬಿಗ್ಬಾಸ್ ಸ್ಪರ್ಧಿಗಳಲ್ಲಿ ಪ್ರಶ್ನಿಸಿದ್ದಾರೆ. ಬಹುತೇಕ ಎಲ್ಲರೂ ಪ್ರತಾಪ್ ಹೆಸರನ್ನು ಸೂಚಿಸಿದ್ದಾರೆ. ಇದರಿಂದ ಅವರು ಕ್ಯಾಪ್ಟನ್ಸಿ ರೇಸ್ನಿಂದ ಹೊರಗುಳಿದಿದ್ದಾರೆ.
ಕಾರಣ ಏನು?
ಪ್ರತಾಪ್ ಹೆಸರನ್ನು ಆಯ್ಕೆ ಮಾಡಿಕೊಂಡ ಸ್ಪರ್ಧಿಗಳು ಅದಕ್ಕೆ ಕಾರಣಗಳನ್ನೂ ನೀಡಿದ್ದಾರೆ. ʼʼಲೀಡರ್ ಆದ ತಕ್ಷಣ ಪ್ರತಾಪ್ ಪ್ರತಾಪ್ ಕಮಾಂಡೋ ಆಗಿ ಬಿಡುತ್ತಾನೆʼʼ ಎಂದು ವಿನಯ್ ಹೇಳಿದ್ದಾರೆ. ನಮ್ರತಾ ಮಾತನಾಡಿ, ʼʼಪ್ರತಾಪ್ ಕ್ಯಾಪ್ಟನ್ ಆಗಿ ಆಯ್ಕೆಯಾದರೆ ತುಂಬಾ ಸ್ಟ್ರಿಕ್ಟ್ ಆಗಿ ಬಿಡುತ್ತಾರೆʼʼ ಎಂದು ತಿಳಿಸಿದ್ದಾರೆ. ಇತ್ತ ಸಿರಿ ಮತ್ತು ವರ್ತೂರು ಪ್ರಕಾಶ್ ಕಾರಣ ನೀಡಿ, ʼʼಪ್ರತಾಪ್ ಮೂಡ್ ಆಗಾಗ ಬದಲಾಗುತ್ತಿರುತ್ತದೆ. ಅದರ ಪ್ರಕಾರ ಅವರು ಮಾತನಾಡುತ್ತಾರೆʼʼ ಎಂದು ಕಾರಣ ನೀಡಿದ್ದಾರೆ. ಮೈಕಲ್ ಕೂಡ ಪ್ರತಾಪ್ ವಿರುದ್ಧ ಮತ ಚಲಾಯಿಸಿದ್ದಾರೆ. ಇದಕ್ಕೆ ಬೇಸರಗೊಂಡ ಪ್ರತಾಪ್ ಒಂದೇ ಕಾರಣ ಪದೇ ಪದೇ ಹೇಳುವುದು ಸರಿಯಲ್ಲ ಎಂದು ವಿರೋಧ ವ್ಯಕ್ತಪಡಿಸಿದ್ದಾರೆ. ಒಟ್ಟಿನಲ್ಲಿ ಕ್ಯಾಪ್ಟನ್ಸಿ ಆಯ್ಕೆ ವಿಚಾರದಲ್ಲಿ ಮನೆಯೊಳಗೆ ಮತ್ತೆ ಅಸಮಾಧಾನದ ಹೊಗೆ ಏಳುವ ಲಕ್ಷಣ ಗೋಚರಿಸಿದೆ.
ಇದನ್ನೂ ಓದಿ: BBK SEASON 10: ಬಿಗ್ ಬಾಸ್ ಬೇಗ ಮುಗಿಯಲ್ಲ; ಸರ್ಪ್ರೈಸ್ ವೀಕ್ಷಕರಿಗೆ ಸಿಕ್ಕೇ ಬಿಡ್ತು!
ಬಿಗ್ಬಾಸ್ ಮನೆಯಲ್ಲಿ ಪ್ರತಾಪ್ ಅಪ್ಪ-ಅಮ್ಮ
ಇಷ್ಟು ದಿನಗಳ ಕಾಲ ಮನೆಯವರಿಂದ ದೂರವಿದ್ದ ಸ್ಪರ್ಧಿಗಳಿಗೆ ಬಿಗ್ಬಾಸ್ ಕುಟುಂಬದವರೊಂದಿಗೆ ಬೆರೆಯುವ ಅವಕಾಶ ನೀಡಿದ್ದಾರೆ. ಅದರಂತೆ ಮನೆಯೊಳಗೆ ಪ್ರತಾಪ್ ಅಪ್ಪ ಅಮ್ಮ ಬಂದಿದ್ದಾರೆ. ಈ ಹಿಂದೆ ದೀಪಾವಳಿ ಹಬ್ಬದ ಖುಷಿಗಾಗಿ ಬಿಗ್ಬಾಸ್ ಸ್ಪರ್ಧಿಗಳಿಗೆ ಮನೆಯಡುಗೆ ಕೊಟ್ಟು ಕಳಿಸಿದ್ದರು. ಮನೆಯವರಿಂದ ಬಂದ ಪತ್ರಗಳನ್ನೂ ಕೊಟ್ಟಿದ್ದರು. ಆದರೆ ಮನೆಯಡುಗೆ ತಿಂದಷ್ಟು ಸುಲಭವಾಗಿ ಪತ್ರಗಳು ಸ್ಪರ್ಧಿಗಳ ಕೈಗೆ ಸಿಕ್ಕಿರಲಿಲ್ಲ. ಒಂದೊಂದು ಪತ್ರಕ್ಕೂ ಒಂದಿಷ್ಟು ಟಾಸ್ಕ್ಗಳನ್ನು ಕೊಟ್ಟು ಅದರಲ್ಲಿ ಗೆದ್ದವರಿಗೆ ಮಾತ್ರವೇ ಪತ್ರ ಕೊಡುವುದಾಗಿ ಹೇಳಿದ್ದರು. ಆದರೆ ಡ್ರೋನ್ ಪ್ರತಾಪ್ ಪತ್ರವನ್ನು ಪಡೆಯಲು ಸಾಕಷ್ಟು ಪ್ರಯತ್ನ ಮಾಡಿದರು. ಕೊನೆಗೂ ಡ್ರೋನ್ಗೆ ಮಾತ್ರ ಪತ್ರ ಸಿಕ್ಕೇ ಇರಲಿಲ್ಲ. ಈ ಗ್ಗೆ ಅವರು ನೋವು ವ್ಯಕ್ತಪಡಿಸಿದ್ದರು.
ಬಿಗ್ಬಾಸ್ ಜಿಯೋ ಸಿನಿಮಾಸ್ನಲ್ಲಿ ಪ್ರತಿದಿನ ಲೈವ್ ಪ್ರಸಾರವಾಗುತ್ತಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಮೆಂಟ್ ಮೂಲಕ ತಿಳಿಸಿ