Site icon Vistara News

BBK Season 10: ನಿಮ್ಮ ಬಣ್ಣ ತೋರಿಸಿದ್ರಿ, ನೀವೇ ಬಿಗ್‌ ಬಾಸ್‌ ಆಗಿಬಿಟ್ರಾ? ಕಿತ್ತಾಡಿದ ಶಿವ-ಸತಿ!

vinay gowda and sangeetha sringeri

ಬೆಂಗಳೂರು: ಬಿಗ್‌ ಬಾಸ್‌ ಸೀಸನ್‌ 10ರ (BBK Season 10) ಎರಡನೇ ದಿನ ಸ್ಪರ್ಧಿಗಳ ಮಧ್ಯೆ ಕಿಡಿ ಹೊತ್ತಿದೆ. ಈಗಾಗಲೇ ನಾಮಿನೇಶನ್‌ ಪ್ರಕ್ರಿಯೆಗಳು ಶುರುವಾಗಿವೆ. ಬಿಗ್‌ ಬಾಸ್‌ ಸೀಸನ್‌ 10ರ ಎರಡನೇ ದಿನ ನಾಮಿನೇಶನ್‌ ಮುಗಿದ ಬಳಿಕ ಶಿವ-ಸತಿ ಪರಸ್ಪರ ಜಗಳವಾಡಿದ್ದಾರೆ. ಹೌದು ಸಂಗೀತಾ ಶೃಂಗೇರಿ ಹಾಗೂ ವಿನಯ್‌ ಗೌಡ ಮಧ್ಯೆ ಮಾತಿನ ಚಕಮಕಿ ನಡೆದಿದೆ. ಸಂಗೀತಾ ಅವರಿಗೆ ಮೊದಲ ದಿನ ಕಡಿಮೆ ಮತ ಬಂದ ಕಾರಣ ಅವರನ್ನು ಅಸಮರ್ಥ ಎಂದು ಪರಿಗಣಿಸಿ ಅವರಿಗೆ ಪ್ರತ್ಯೇಕ ಬಟ್ಟೆಗಳನ್ನು ನೀಡಿ ಇತರೆ ಸದಸ್ಯರಿಂದ ಭಿನ್ನವಾಗಿ ಪರಿಗಣಿಸಲಾಗಿದೆ. ಸಂಗೀತ ಜತೆಗೆ ಇನ್ನೂ ಐದು ಮಂದಿ ಅಸಮರ್ಥರು ಬಿಗ್​ಬಾಸ್ ಮನೆಯಲ್ಲಿದ್ದಾರೆ.

ಆಗಿದ್ದೇನು?

ವಿನಯ್‌ ಗೌಡ ಅವರು ನಾಮಿನೇಶನ್‌ ಪ್ರಕ್ರಿಯೆಯಲ್ಲಿ ಬಿಗ್‌ ಬಾಸ್‌ ರೂಲ್ಸ್‌ ಬ್ರೇಕ್‌ ಮಾಡಿದ ಕಾರಣ ಸಂಗೀತಾ ಅವರನ್ನು ನಾಮಿನೇಟ್‌ ಮಾಡಿದರು. ಅಸಮರ್ಥರು ಬಿಗ್‌ ಬಾಸ್‌ ರೂಲ್ಸ್‌ ಪಾಲಿಸಬೇಕಿತ್ತು. ಅಸಮರ್ಥರಾದವರು ಬಿಗ್‌ ಬಾಸ್‌ ಮನೆಯ ಸೋಫಾ, ಕುರ್ಚಿ ಇತ್ಯಾದಿ ವಸ್ತುಗಳನ್ನು ಬಳಸುವಂತಿರಲಿಲ್ಲ. ಬಿಗ್‌ ಬಾಸ್‌ ನೀಡಿರುವ ಉಡುಪನ್ನೇ ಧರಿಸಬೇಕು. ಅಷ್ಟೇ ಅಲ್ಲದೇ ಬಾತ್‌ ರೂಮ್‌ ತೊಳೆಯುವುದು, ಹಾಸಿಗೆ ಸಿದ್ಧಗೊಳಿಸವುದು ಮಾಡಬೇಕು. ಆದರೆ ಸಂಗೀತಾ ಅವರು ಸೋಫಾ ಮೇಲೆ ಕುಳಿತು ರೂಲ್ಸ್‌ ಬ್ರೇಕ್‌ ಮಾಡಿದ್ದರು, ಇದನ್ನೇ ಕಾರಣವನ್ನು ವಿನಯ್‌ ಹೇಳಿದರು. ನಾಮಿನೇಶನ್‌ ಆದ ಬಳಿಕ ವಿನಯ್‌ ಅವರಿಗೆ ಸಂಗೀತಾ ಚೆನ್ನಾಗಿ ಜಾಡಿಸಿದ್ದಾರೆ.

ನೀವೇ ಬಿಗ್‌ ಬಾಸ್‌ ಆಗಿಬಿಟ್ರಾ?

ಸಂಗೀತಾ ಅವರು ವಿನಯ್‌ಗೆ ʻʻರೂಲ್ಸ್‌ ಬ್ರೇಕ್‌ ಮಾಡಿದ್ದಕ್ಕೇ ನಾಮಿನೇಟ್‌ ಮಾಡಿದ ಸ್ಪರ್ಧಿ ನೀವು. ಇಲ್ಲೇ ಎಷ್ಟೋ ಜನ ವಾಶ್‌ ರೂಮ್‌ ಹೋಗಿ ರೂಲ್ಸ್‌ ಬ್ರೇಕ್‌ ಮಾಡಿದ್ದಾರೆ. ಅದೆಲ್ಲ ಬಿಗ್‌ ಬಾಸ್‌ ರೂಲ್ಸ್‌ ಬ್ರೇಕ್‌ ಅಲ್ವಾ? ನಾನು ತಪ್ಪು ಮಾಡಿದ್ರೆ ಬಿಗ್ ಬಾಸ್ ನಮಗೆ ಶಿಕ್ಷೆ ಕೊಡುತ್ತಾರೆ. ನೀವೇ ಬಿಗ್ ಬಾಸ್ ಆಗಿಬಿಟ್ರಲ್ವಾ? ನೀವು ನಿಮ್ಮ ಬಣ್ಣವನ್ನು ತೋರಿಸಿದ್ದೀರಿʼʼಎಂದು ಕೆಂಡಾಮಂಡಲವಾದರು ಸಂಗೀತಾ ಶೃಂಗೇರಿ.

ಇದನ್ನೂ ಓದಿ: BBK Season 10: ಬಿಗ್‌ಬಾಸ್‌ ಮನೆಯೊಳಗೆ ಹೋಗಿದ್ಯಾಕೆ?; ಹೀಗಂದಿದ್ದಾರೆ ಪ್ರದೀಪ್‌ ಈಶ್ವರ್‌

ಉಳಿದ ಸ್ಪರ್ಧಿಗಳು ಕೂಡ ಸಂಗೀತಾ ಅವರಿಗೆ ತೀರಾ ವೈಯಕ್ತಿಕವಾಗಿ ತೆಗೆದುಕೊಳ್ಳಬೇಡಿ ಎಂದರು. ಈ ಜಗಳ ಮಧ್ಯೆ ಕಾರ್ತಿಕ್‌ ಗೌಡ ಕೂಡ ಮೂಗು ತೋರಿಸಿದರು.

ಈ ವಾರ ನಾಮಿನೇಟ್ ಆದವರು ಯಾರು?

ಆರು ಅಸಮರ್ಥರಿಗೆ ನಾಮಿನೇಶನ್‌ ಮಾಡುವ ಅಧಿಕಾರ ಬಿಗ್‌ ಬಾಸ್‌ ನೀಡಿರಲಿಲ್ಲ. ಹನ್ನೊಂದು ಸಮರ್ಥರಷ್ಟೇ ನಾಮಿನೇಶನ್‌ ಮಾಡಬೇಕಿತ್ತು. ಅಸಮರ್ಥರಲ್ಲಿ ಅತಿ ಹೆಚ್ಚು ಬಾರಿ ನಾಮಿನೇಟ್‌ ಆದವರು, ಡ್ರೋನ್‌ ಪ್ರತಾಪ್‌, ಸಂತೋಷ್‌ , ಕಾರ್ತಿಕ್‌ ಮಹೇಶ್‌, ತನಿಷಾ ಕುಪ್ಪುಂಡ. ನಾಮಿನೇಶನ್‌ನ ಎರಡನೇ ಹಂತದ ಸಮರ್ಥರ ವಿಭಾಗದಲ್ಲಿ ಸ್ನೇಕ್‌ ಶ್ಯಾಮ್‌, ಮೈಕಲ್‌, ನೀತು, ಸಿರಿ ನಾಮಿನೇಟ್ ಆದರು.

Exit mobile version