ಬೆಂಗಳೂರು: ಬಿಗ್ ಬಾಸ್ ಸೀಸನ್ 10 (BBK Season 10) ಮೂರನೇ ವಾರ ಪ್ರವೇಶ ಮಾಡಿದೆ. ಸೋಮವಾರ ಈ ಮನೆಗೆ ಚಿತ್ರ ನಟಿ ತಾರಾ ಆಗಮಿಸಿ ಅಲ್ಲಿನ ವಾತಾವರಣವನ್ನು ತಿಳಿಗೊಳಿಸಿದರು. ಆದರೆ, ಇದೇ ದಿನ ನಡೆದ ಕೋರ್ಟ್ ವಿಚಾರಣೆಯಂಥ ಘಟನೆಯಲ್ಲಿ ಸ್ಪರ್ಧಿ ಡ್ರೋನ್ ಪ್ರತಾಪ್ (Drone pratap) ಬಿಕ್ಕಿಬಿಕ್ಕಿ ಅಳುವ ಸನ್ನಿವೇಶ ನಡೆದಿದೆ.
ಡ್ರೋನ್ ಪ್ರತಾಪ್ ಮತ್ತು ವಿನಯ್ ಗೌಡ (Vinay gowda) ಅವರನ್ನು ಎದುರಿನಲ್ಲಿ ಕೂರಿಸಿ ಸಹಸ್ಪರ್ಧಿಗಳು ಪ್ರಶ್ನೆಗಳ ಸುರಿಮಳೆಯನ್ನೇ ಸುರಿಸುತ್ತಾರೆ. ಡ್ರೋನ್ ಪ್ರತಾಪ್ ಒಳಗೊಂದು ಹೊರಗೊಂದು ಎಂಬಂತೆ ದೂಷಿಸುತ್ತಾರೆ.
ಗ್ರೂಪ್ ಟಾಸ್ಕ್ ಮುಗಿದ ಮೇಲೂ, ಕ್ಯಾಪ್ಟನ್‌ಷಿಪ್ ಡಿಸಾಲ್ವ್ ಅದ ಮೇಲೂ ನೀವ್ಯಾಕೆ ನಿಮ್ಮದೇ ಗ್ರೂಪನ್ನು ಉಳಿಸಿಕೊಂಡಿದ್ದೀರಿ ಎಂದು ತನಿಷಾ ವಿನಯ್‌ನನ್ನು ಪ್ರಶ್ನೆ ಮಾಡುತ್ತಾಳೆ. ಅದೇ ವೇಳೆ, ನೀವು ಕ್ಯಾರೆಕ್ಟರನ್ನೇ ಬದಲಿಸಿಕೊಂಡಿದ್ದೀರಿ ಎಂದು ನಮ್ರತಾ ಡ್ರೋನ್ ಪ್ರತಾಪ್‌ನನ್ನು ಪ್ರಶ್ನೆ ಮಾಡುತ್ತಾರೆ.
ಸಹಸ್ಪರ್ಧಿಗಳ ಪ್ರಶ್ನಾ ದಾಳಿಯಿಂದ ಕಂಗೆಟ್ಟ ಡ್ರೋನ್ ಪ್ರತಾಪ್ ಬಿಕ್ಕಿಬಿಕ್ಕಿ ಅಳುತ್ತಾರೆ. ಈ ದೃಶ್ಯಾವಳಿಗಳು ಮಂಗಳವಾರ ರಾತ್ರಿ ಪ್ರಸಾರವಾಗಲಿವೆ.
ಈ ನಡುವೆ, ಮನೆಗೆ ಬಂದ ಚಿತ್ರ ನಟಿ ತಾರಾ ಅವರು ಡ್ರೋನ್ ಪ್ರತಾಪ್‌ನನ್ನು ಪಕ್ಕದಲ್ಲಿ ಕೂರಿಸಿಕೊಂಡು ಸಮಾಧಾನ ಹೇಳುವ ಸನ್ನಿವೇಶವೂ ಪ್ರೊಮೋದಲ್ಲಿ ಬಿತ್ತರಗೊಂಡಿವೆ. ಅವರು ಡ್ರೋನ್ ಪ್ರತಾಪ್ ಅವರನ್ನು ಸಮಾಧಾನ ಮಾಡುತ್ತಾರೆ.
ಹೀಗೆ ಹಲವು ವಿಶೇಷ ಘಟನೆಗಳು ಮನೆಯಲ್ಲಿ ನಡೆದಿದ್ದು ಮಂಗಳವಾರದ ಸಂಚಿಕೆ ಅತ್ಯಂತ ಕುತೂಹಲ ಮೂಡಿಸಿದೆ.
ಇದನ್ನೂ ಓದಿ: BBK Season 10 : ಗೌರೀಶ್ ಅಕ್ಕಿ ಪ್ರಕಾರ ಈ ಬಾರಿ ಬಿಗ್ ಬಾಸ್ ವಿನ್ನರ್ ಇವರೇ..; ಯಾರವರು?