ಬೆಂಗಳೂರು: ಈ ಬಾರಿ ಬಿಗ್ ಬಾಸ್ ಮನೆಯಲ್ಲಿ 17 ಸ್ಪರ್ಧಿಗಳಿದ್ದಾರೆ (BBK Season 10). ಶನಿವಾರಕ್ಕೆ ಅವರ ಜರ್ನಿಯಲ್ಲಿ ಒಂದು ವಾರ ಕಳೆದಿದ್ದು ʻವಾರದ ಕತೆ ಕಿಚ್ಚನ ಜತೆʼ ಸಮಯ ಬಂದಾಗಿದೆ. ಈ ವಾರ ಯಾರು ಹೊರಗೆ ಹೋಗಲಿದ್ದಾರೆ, ಯಾರು ಕಿಚ್ಚನ ಚಪ್ಪಾಳೆ ಪಡೆದುಕೊಳ್ಳಲಿದ್ದಾರೆ ಎಂಬ ಕುತೂಹಲ ಎಲ್ಲೆಡೆ ಇದೆ.
ಡ್ರೋನ್ ಪ್ರತಾಪ್, ತನಿಶಾ, ಸಂಗೀತಾ ಶೃಂಗೇರಿ, ವರ್ತೂರು ಸಂತೋಷ್, ರಕ್ಷಕ್, ಮಹೇಶ್ ಕಾರ್ತಿಕ್ ಸದ್ಯ ಹೋಲ್ಡ್‌ನಲ್ಲಿದ್ದಾರೆ. ಈಗ ಇವರನ್ನು ಬಿಗ್‌ಬಾಸ್ ಮನೆಯೊಳಗೆ ಕಳುಹಿಸಲಾಗಿದ್ದು, ಒಂದು ವಾರದಲ್ಲಿ ತೋರಿಸಲಿರುವ ಪರ್ಫಾರ್ಮೆನ್ಸ್ ಆಧಾರದ ಮೇಲೆ ಯಾರು ಮನೆಯೊಳಗೆ ಮುಂದುವರಿಯಲಿದ್ದಾರೆ ಎಂಬುದು ನಿರ್ಧಾರವಾಗಲಿದೆ. ಈಗಾಗಲೇ ಮನೆಯಲ್ಲಿ ಸಮರ್ಥರು ಹಾಗೂ ಅಸಮರ್ಥರ ಗುಂಪು ಆಗಿದೆ. ಈ ವಾರ ಬಿಗ್ ಬಾಸ್ ಕೊಟ್ಟ ಟಾಸ್ಕ್‌ನಲ್ಲಿ ಅಸಮರ್ಥರೇ ಮೇಲುಗೈ ಸಾಧಿಸಿದ್ದಾರೆ.
ಈ ವಾರ ಎಲಿಮಿನೇಷನ್ ಆಗಲು 8 ಜನ ನಾಮಿನೇಟ್ ಆಗಿದ್ದಾರೆ. ಮೈಕೆಲ್, ತನಿಷಾ, ನೀತು ವನಜಾಕ್ಷಿ, ಸಿರಿ, ಸಂತೋಷ್ ಹಳ್ಳಿಕೆರೆ, ಸ್ನೇಕ್ ಶ್ಯಾಮ್, ಕಾರ್ತಿಕ್, ಡ್ರೋನ್ ಪ್ರತಾಪ್ ಈ ಲಿಸ್ಟ್‌ನಲ್ಲಿದ್ದಾರೆ. ಈ 8 ಜನರಲ್ಲಿ ಯಾರಿಗೆ ಬಿಗ್‌ಬಾಸ್ ಮನೆಯಲ್ಲಿ ಕೊನೆ ದಿನ ಎನ್ನುವುದು ಇಂದು ಗೊತ್ತಾಗಲಿದೆ. ಕತೆ ಶುರುವಾಗುವ ಮುನ್ನವೇ ಮುಗಿಯೋದು ಯಾರ ಪಾಲಿಗೆ ಎಂದು ಈಗಾಗಲೇ ಕಲರ್ಸ್ ಕನ್ನಡ ಪ್ರೋಮೊ ಹಂಚಿಕೊಂಡಿದೆ.
ಇದನ್ನೂ ಓದಿ; BBK Season 10: ನಮ್ರತಾ ಕಣ್ಣೀರಿಗೆ ʻಬಿಗ್ ಬಾಸ್ʼ ಕಾರಣವಾದ್ರಾ? ಕುಟುಂಬದ ಏಳು ಬೀಳು ನೆನೆದ ಸ್ಪರ್ಧಿ!
ಕಲರ್ಸ್ ಕನ್ನಡ ಹೊಸ ಪ್ರೋಮೊ
ಇನ್ನು ಬಿಗ್‌ಬಾಸ್ ಸೀಸನ್-10ರ ಮೊದಲ ವಾರದ ಕಳಪೆ ಪಟ್ಟ ಭಾಗ್ಯಶ್ರೀಗೆ ಸಿಕ್ಕಿದೆ. ಅದೇ ರೀತಿ ಉತ್ತಮ ಸ್ಪರ್ಧಿ ಎನ್ನುವ ಪಟ್ಟ ನಟಿ ತನಿಷಾ ಕುಪ್ಪಂಡಗೆ ಸಿಕ್ಕಿದೆ. ಹಾಗಾಗಿ ತನಿಷಾ ಎಲಿಮಿನೇಟ್ ಆಗುವುದು ಅನುಮಾನ ಎನ್ನಲಾಗುತ್ತಿದೆ.
ಈ ಹಿಂದೆ ಕೆಲ ಸೀಸನ್‌ಗಳಲ್ಲಿ ಆರಂಭದಲ್ಲಿ ಎಲಿಮಿನೇಶನ್ ಇರಲಿಲ್ಲ. ಈ ಬಾರಿ ಏನು ಎಂಬುದು ಇಂದಿನ ಸಂಚಿಕೆಯಲ್ಲಿ ನೋಡಬೇಕು. “ವಾರದ ಕತೆ ಕಿಚ್ಚನ ಜೊತೆ” ರಾತ್ರಿ 9 ಗಂಟೆಗೆ ಆರಂಭವಾಗಲಿದೆ. ಕಲರ್ಸ್ ಕನ್ನಡ ಹಾಗೂ ಜಿಯೋ ಸಿನಿಮಾದಲ್ಲಿ ಬಿಗ್ ಬಾಸ್ ಸೀಸನ್ 10 ನಿರಂತರ ಪ್ರಸಾರ ಕಾಣುತ್ತಿದೆ.