Site icon Vistara News

BBK SEASON 10: ಈ ವಾರ ಐದು ಮಂದಿ ನಾಮಿನೇಟ್‌; ಮನೆಯಿಂದ ಹೋಗೋದು ಯಾರು?

BBK SEASON 10 five members nominate in this week

ಬೆಂಗಳೂರು: ಬಿಗ್‌ ಬಾಸ್‌ ಸೀಸನ್‌ 10ರ ಫಿನಾಲೆ ಜನವರಿ 27, 28ರಂದು ಫಿನಾಲೆ ನಡೆಯಲಿದೆ ಎಂದು ಹೇಳಲಾಗುತ್ತಿದೆ. ಈ ವಾರ ಐದು ಮಂದಿ ನಾಮಿನೇಟ್‌ ಆಗಿದ್ದಾರೆ. ಮೈಕಲ್ ಅಜಯ್, ಕಾರ್ತಿಕ್, ಡ್ರೋನ್ ಪ್ರತಾಪ್, ತುಕಾಲಿ ಸಂತೋಷ್, ವರ್ತೂರು ಸಂತೋಷ್ (Varthur Santosh) ನಾಮಿನೇಟ್ ಆಗಿದ್ದಾರೆ. ಇವರಲ್ಲಿ ಒಬ್ಬರು ಎಲಿಮಿನೇಟ್ ಆಗಲಿದ್ದಾರೆ. ಇನ್ನು ನಾಮಿನೇಷನ್‌ ಬಗ್ಗೆ ತುಕಾಲಿ ಹಾಗೂ ವರ್ತೂರ್‌ ಸಖತ್‌ ಚರ್ಚೆಗಳನ್ನು ಮಾಡಿದ್ದಾರೆ.

ಮನೆಗೆ ಡ್ರೋನ್‌ ಪ್ರತಾಪ್‌ ಅವರು ಹಿಂತಿರುಗಿದ್ದಾರೆ. ಜತೆಗೆ ಈ ವಾರ ಐದು ಮಂದಿ ನಾಮಿನೇಟ್‌ ಆಗಿದ್ದಾರೆ. ಫೈನಲ್‌ ಸಮೀಪಿಸುತ್ತಿದ್ದಂತೆ ಮನೆಯಲ್ಲಿ ಜಟಾಪಟಿ ಜೋರಾಗಿದೆ. ತುಕಾಲಿ ಸಂತೋಷ್‌ ಅವರು ವಿನಯ್‌, ವರ್ತೂರ್‌ ಅವರ ಮುಂದೆ ಈ ಬಗ್ಗೆ ಮಾತನಾಡಿದ್ದಾರೆ. ತುಕಾಲಿ ಸಂತೋಷ್‌ ಮಾತನಾಡಿ ʻʻಇಲ್ಲಿ ಸುಮ್ಮ ಸುಮ್ಮನೆ ನಾಮಿನೇಟ್‌ ಮಾಡಬಾರದು. ಪ್ರಾಮಾಣಿಕವಾಗಿ ನಾಮಿನೇಟ್ ಮಾಡಬೇಕು. ಇಲ್ಲದಿದ್ದರೆ ಒಬ್ಬರಿಗೆ ಮಾಡುವ ಮೋಸʼʼಎಂದಿದ್ದಾರೆ. ಇದಕ್ಕೆ ವಿನಯ್‌ ಕೂಡ ʻʻಸುಮ್ಮನೆ ಕೋಪ ಆಗ್ತಾನೆ, ಜಿದ್ದಿಗೆ ಬಿದ್ದಿದ್ದಾನೆ, ಹೊಡೆದಾಡ್ತಿದ್ದಾನೆ, ತಮಾಷೆ ಮಾಡ್ತಿದ್ದಾನೆ, ಕೋಪ ಜಾಸ್ತಿ ಅಂತ ಹೇಳಿ ನಾಮಿನೇಟ್ ಮಾಡಿದರೆ ಸೈಲೆಂಟ್ ಆಗಿ ಫಿನಾಲೆಗೆ ಬರುತ್ತಾರೆ. ಇರೋ ವಾರ ಸೈಲೆಂಟ್ ಆಗಿ ಏನಿದೆಯೋ ಅದನ್ನು ಹೇಳಿ ನಾಮಿನೇಟ್ ಮಾಡಬೇಕುʼʼಎಂದು ಮಾತನಾಡಿಕೊಂಡಿದ್ದಾರೆ.

ಇದನ್ನೂ ಓದಿ: BBK SEASON 10: ಮೂರನೇ ಬಾರಿಗೆ ಮಹಿಳಾ ಸ್ಪರ್ಧಿಯೇ ʻಕ್ಯಾಪ್ಟನ್ʼ; ತುಕಾಲಿಗೆ ಸೋಲು!

ತುಕಾಲಿ ಕೂಡ ಗೆಲುವಿನ ಬಗ್ಗೆ ಮಾತನಾಡಿದ್ದಾರೆ. ʻʻಚಿಂತೆ ಮಾಡದೇ ಮುನ್ನುಗ್ಗಬೇಕು. ನಾವು ಜೀವನದಲ್ಲಿ ಎಲ್ಲಿಯೂ ಗೆದ್ದೇ ಇಲ್ಲ. ಏನೇ ಇಲ್ಲದಿದ್ದರೂ ಜೀವನವನ್ನು ತಟಸ್ಥವಾಗಿ ನಡೆಸಬಹುದು. ಚಿಂತೆ ತಗೋಬಾರದು, ಯಾರನ್ನೂ ನಂಬಬಾರದು. ಯಾರು ಏನೇ ಅಂದ್ರೂ ತಲೆ ಕೆಡಿಸಿಕೊಳ್ಳಬಾರದು”ಎಂದಿದ್ದಾರೆ.

ಮೂರನೇ ಬಾರಿಗೆ ಮಹಿಳಾ ಸ್ಪರ್ಧಿಯೇ ಕ್ಯಾಪ್ಟನ್

‘ಬಿಗ್ ಬಾಸ್‌’ ಮನೆಯಲ್ಲಿ ಸತತವಾಗಿ ಕಳೆದ 3 ವಾರಗಳಿಂದ ಮಹಿಳಾ ಸ್ಪರ್ಧಿಗಳು ಕ್ಯಾಪ್ಟನ್ ಆಗುತ್ತಿದ್ದಾರೆ. ನಮ್ರತಾ, ತನಿಷಾ ಬಳಿಕ ಸಂಗೀತಾ ಈಗ ಕ್ಯಾಪ್ಟನ್ ಆಗಿದ್ದಾರೆ. ಮನೆಯಲ್ಲಿ ಕ್ಯಾಪ್ಟನ್ಸಿ ಹುದ್ದೆಗೆ ಭಾರಿ ಪೈಪೋಟಿಗಳು ಆಗುತ್ತಿವೆ. ಕ್ಯಾಪ್ಟನ್‌ ಆದರೆ ಒಂದು ಸಪರೇಟ್‌ ರೂಮ್‌, ಇಡೀ ವಾರ ನಿಯಮಗಳನ್ನು ಜಾರಿಗೊಳಿಸುವ ಅಧಿಕಾರದ ಜತೆಗೆ ಒಂದು ವಾರ ನಾಮಿನೇಷನ್​ನಿಂದ ಬಚಾವಾಗುವ ಸೌಕರ್ಯ ಸಿಗುತ್ತದೆ. ಹಾಗಾಗಿ ಕ್ಯಾಪ್ಟನ್ ಆಗಲು ಎಲ್ಲರೂ ಪ್ರಯತ್ನಿಸಿದ್ದರು.

ಬಿಗ್​ಬಾಸ್ ಜಿಯೋ ಸಿನಿಮಾಸ್​ನಲ್ಲಿ ಪ್ರತಿದಿನ ಲೈವ್ ಪ್ರಸಾರವಾಗುತ್ತಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಮೆಂಟ್ ಮೂಲಕ ತಿಳಿಸಿ

Exit mobile version