Site icon Vistara News

BBK Season 10: ಕಿಚ್ಚ ಫುಲ್‌ ಗರಂ; ಮನೆಯ ಮೇನ್‌ ಗೇಟ್ ಓಪನ್‌ ಮಾಡಿದ್ದೇಕೆ?

Kiccha Full angry

ಬೆಂಗಳೂರು: ಬಿಗ್‌ ಬಾಸ್‌ ಸೀಸನ್‌ 10ರ (BBK Season 10) ಎರಡನೇ ವಾರ ʻವಾರದ ಕತೆ ಕಿಚ್ಚನ ಜತೆʼ ಎಪಿಸೋಡ್‌ಗೆ ತುದಿಗಾಲಲ್ಲಿ ಕಾಯುತ್ತಿದ್ದಾರೆ ಪ್ರೇಕ್ಷಕರು. ಅಷ್ಟೇ ಅಲ್ಲದೇ ಈ ವಾರ ಯಾವ ಸ್ಪರ್ಧಿ ಮನೆಯಿಂದ ಹೊರಗೆ ಹೋಗಲಿದ್ದಾರೆ ಎಂಬುದು ವೀಕ್ಷಕರಿಗೆ ಇರುವ ಕುತೂಹಲ. ಇದೆಲ್ಲದರ ಮಧ್ಯೆ ಕಿಚ್ಚ ಸ್ಪರ್ಧಿಗಳ ಬಗ್ಗೆ ಸಖತ್‌ ಗರಂ ಆಗಿದ್ದಾರೆ. ಬಿಗ್‌ ಬಾಸ್‌ ಮನೆಯ ಮುಖ್ಯದ್ವಾರ ಓಪನ್‌ ಇದೆ ಎಂದು ಸ್ಪರ್ಧಿಗಳನ್ನು ಜಾಡಿಸಿದ್ದಾರೆ ಕಿಚ್ಚ. ಕಲರ್ಸ್‌ ಕನ್ನಡ ಪ್ರೋಮೊ ಹಂಚಿಕೊಂಡಿದೆ.

ಹಿಂದಿನ ವಾರ ಬಿಗ್‌ ಬಾಸ್‌ ಸ್ಪರ್ಧಿಗಳಿಗೆ ಟಾಸ್ಕ್‌ ಆಡಲು ಎರಡು ಕ್ಯಾಪ್ಟನ್‌ ಅವರನ್ನು ಆಯ್ಕೆ ಮಾಡಲು ಸೂಚಿಸಿದ್ದರು. ಆ ನಿಯಮದಂತೆ ಕಾರ್ತಿಕ್‌ ಮಹೇಶ್‌ ಹಾಗೂ ವಿನಯ್‌ ಗೌಡ ಅವರನ್ನು ಸ್ಪರ್ಧಿಗಳು ಆಯ್ಕೆ ಮಾಡಿದ್ದರು. ವಿನಯ್‌ ಅವರ ʻಮಾಣಿಕ್ಯʼ ತಂಡ ಹಾಗೂ ಕಾರ್ತಿಕ್‌ ಅವರ ʻರಣಶಕ್ತಿʼ ತಂಡ ಟಾಸ್ಕ್‌ಗಳನ್ನು ಚೆನ್ನಾಗಿಯೇ ನಿಭಾಯಿಸಿತ್ತು. ಬಳಿಕ ರಣಶಕ್ತಿ ತಂಡ ಮಾಣಿಕ್ಯ ಅವರನ್ನು ಸೋಲಿಸಿ ಗೆದ್ದು ಬೀಗಿತ್ತು. ಆದರೆ ಮ್ಯಾಟರ್‌ ಇದಲ್ಲ. ಕಿಚ್ಚ ಇದೀಗ ಸ್ಪರ್ಧಿಗಳ ಮೇಲೆ ಗರಂ ಆಗಿದ್ದೇ ಬೇರೆ ಕಾರಣಕ್ಕೆ.

ʻʻವಿನಯ್‌ ಹಾಗೂ ಕಾರ್ತಿಕ್‌ ಅವರನ್ನು ಬಿಟ್ಟು ಸೋಫಾ ಹಿಂದೆ ಎಲ್ಲ ಸ್ಪರ್ಧಿಗಳು ನಿಲ್ಲಬೇಕು ಎಂದರು ಕಿಚ್ಚ. ಎರಡು ಟೀಂ ಲೀಡರ್‌ ಅವರನ್ನು ಆಯ್ಕೆ ಮಾಡಿ ಎಂದಾಗ, ನೀವೆಲ್ಲ ಇವರಿಬ್ಬರನ್ನು ಆಯ್ಕೆ ಮಾಡಿದ್ರಿ. ಅದಕ್ಕೆ 20 ಸೆಕೆಂಡ್‌ ಕೂಡ ತೆಗೆದುಕೊಂಡಿಲ್ಲ. ನಾನ್‌ ಯಾಕೆ ಕ್ಯಾಪ್ಟನ್‌ ಆಗಬಾರದು ಎಂದು ಯಾರಿಗೂ ಅನ್ನಿಸಿಲ್ವಾ?ʼʼಎಂದು ಕಿಚ್ಚ ಗರಂ ಆದರು. ಆಗ ಇಶಾನಿ ʻʻನಮ್ಮ ಮೇಲೆ ನಂಬಿಕೆ ಇಲ್ಲ ಅಂತʼʼಎಂದರು. ಸಂಗೀತಾ ಅವರು ಈ ಬಗ್ಗೆ ಮಾತನಾಡಿʻʻನಾನು ಏನಾದರು ಹೇಳಿದರೆ ನನ್ನ ವಿರುದ್ಧ ಎಲ್ಲ ಆಗಿ ಬಿಡುತ್ತಾರೆʼʼಎಂದರು. ಇದಾದ ಕೂಡಲೇ ಕಿಚ್ಚ ಗರಂ ಆಗಿ ʻʻಆ ಭಯ ಇರೋರು ಯಾಕಿದ್ದೀರಾ ಒಳಗಡೆ?ನಾನು ನೋಡಿದ್ದು ನನಗೆ ಇಷ್ಟ ಆಗಿಲ್ಲ. ಹೀಗೆ ಇರ್ತೀರಾ ಅಂದರೆ ಈ ಕ್ಷಣಕ್ಕೆ ನಾನು ಬಾಗಿಲು ಓಪನ್‌ ಮಾಡ್ತೀನಿ. ಖಂಡಿತ ಇರಬೇಡಿ. ಗೇಟ್‌ ಓಪನ್‌ ಪ್ಲೀಸ್‌ʼʼಎಂದು ಮನೆಯ ಬಾಗಿಲು ಓಪನ್‌ ಮಾಡಿಸಿಯೇ ಬಿಟ್ಟರು.

ಕಲರ್ಸ್‌ ಕನ್ನಡ ಪ್ರೋಮೊ

ಇದನ್ನೂ ಓದಿ: BBK Season 10: ಮುಂದಿನ ಪೋಸ್ಟ್ ಗೌರೀಶ್ ಸೆಲ್ಫಿ ಜತೆ ಎಂದ ಪತ್ನಿ; ಹೊರಗೆ ಬರ್ತಾರಾ?

ರೋಚಕ ವಾರದ ಸಾರಾಂಶ ತಿಳಿಯುವ ಸಮಯ ಬಂದಾಗಿದೆ. ಈ ವಾರ (BBK Season 10) ತುಕಾಲಿ ಸಂತು, ಭಾಗ್ಯಶ್ರೀ, ಗೌರೀಶ್‌ ಅಕ್ಕಿ, ಕಾರ್ತಿಕ್‌ ಮಹೇಶ್‌, ಸಂಗೀತಾ ಹಾಗೂ ತನಿಷಾ ನಾಮಿನೇಟ್‌ ಆಗಿದ್ದಾರೆ. ಈ ವಾರ ಮನೆಯಿಂದ ಯಾರು ಹೊರ ಬರಲಿದ್ದಾರೆ ಎಂಬ ಕುತೂಹಲ ವೀಕ್ಷಕರಲ್ಲಿ ಹೆಚ್ಚಾಗಿದೆ. ಆದರೆ ಗೌರೀಶ್‌ ಅಕ್ಕಿ ಅವರ ಪತ್ನಿ ಮಾಲತಿ ಅವರು “ಮುಂದಿನ ಪೋಸ್ಟ್ ಗೌರೀಶ್ ಸೆಲ್ಫಿ ಜತೆʼʼ ಎಂದು ಪೋಸ್ಟ್‌ ಹಂಚಿಕೊಂಡಿದ್ದಾರೆ. ಇದೀಗ ನೆಟ್ಟಿಗರು ಈ ವಾರ ಗೌರೀಶ್‌ ಅವರು ಔಟ್‌ ಆಗುವುದು ಕನ್‌ಫರ್ಮ್‌ ಎಂದು ಹೇಳುತ್ತಿದ್ದಾರೆ.

ಬಿಗ್‌ಬಾಸ್ ಕನ್ನಡ 24 ಗಂಟೆ ನೇರಪ್ರಸಾರವನ್ನು ಜಿಯೋ ಸಿನಿಮಾದಲ್ಲಿ ವೀಕ್ಷಿಸಬಹುದು. ಪ್ರತಿದಿನದ ಎಪಿಸೋಡ್‌ಗಳನ್ನು ಕಲರ್ಸ್‌ಕನ್ನಡದಲ್ಲಿ ಪ್ರತಿದಿನ ರಾತ್ರಿ 9.30ಗೆ ಪ್ರಸಾರ ಕಾಣುತ್ತಿದೆ.

Exit mobile version