ಬೆಂಗಳೂರು: ʻಬಿಗ್ ಬಾಸ್ ಸೀಸನ್10ʼರ (BBK SEASON 10) ಫಿನಾಲೆ ಜ.27ರಂದು ನಡೆದಿದೆ. ಇಂದು ವಿನ್ನರ್ ಯಾರು ಎಂಬುದು ಘೋಷಣೆ ಆಗಲಿದೆ. ಶನಿವಾರದ ಸಂಚಿಕೆಯಲ್ಲಿ ಸುದೀಪ್ ಅವರು ಆರು ಸ್ಪರ್ಧಿಗಳ ಫ್ಯಾಮಿಲಿ ಜತೆ ಮನಬಿಚ್ಚಿ ಮಾತನಾಡಿದು. ಈ ವೇಳೆ ಡ್ರೋನ್ ಪ್ರತಾಪ್ ಅವರ ತಂದೆ ತಾಯಿ ಭಾವುಕರಾದರು. ʻಬಿಗ್ ಬಾಸ್ ನಮಗೆ ನಮ್ಮ ಮಗನನ್ನು ವಾಪಸ್ಸು ಕೊಟ್ಟಿದ್ದಾರೆ. ಸಾಯುವವರೆಗೂ ನಾವು ಇದಕ್ಕೆ ಚಿರಋಣಿʼಎಂದು ಡ್ರೋನ್ ಪ್ರತಾಪ್ ಅವರ ಅಮ್ಮ ಭಾವುಕರಾದರು.
ಕಿಚ್ಚ ಸುದೀಪ್ ಮೊದಲಿಗೆ ಮಾತು ಆರಂಭಿಸಿ ʻʻಪ್ರತಾಪ್ ಅವರು ಬಿಗ್ ಬಾಸ್ ಮನೆಯೊಳಗೆ ಹೋದಾಗ ಇಡೀ ಕರ್ನಾಟಕ ನೋಡುತ್ತ ಇದ್ದ ರೀತಿ ಬೇರೆ. ಮಾಡಿರುವ ತಪ್ಪನ್ನ ಒಪ್ಪಿಕೊಳ್ಳೋಕೆ ಹಿಂಜರಿಯಬೇಡಿ. ಮಾಡಿರುವ ತಪ್ಪನ್ನ ಒಪ್ಪಿಕೊಳ್ಳಿ, ಆಗಲೇ ಜನ ನಿಮ್ಮನ್ನ ಕ್ಷಮಿಸೋದು. ಯಾಕಂದ್ರೆ, ನೀವು ಮಾಡಿದ್ದು ಅತೀ ದೊಡ್ಡ ತಪ್ಪಾಗಿದ್ದರೆ ಜೈಲಿನಲ್ಲಿರುತ್ತಿದ್ರಿ. ಹೊರಗಡೆ ಇದ್ದೀರಾ ಅಂದ್ಮೇಲೆ ಅದು ಕ್ಷಮಿಸುವಂತಹ ತಪ್ಪು. ಒಪ್ಪಿಕೊಳ್ಳುವುದು ನಿಮಗೆ ಬಿಟ್ಟಿದ್ದು ಎಂದು ನಾನು ಹೇಳಿದ್ದೆʼʼಎಂದರು.
ಡ್ರೋನ್ ಪ್ರತಾಪ್ ಕೂಡ ಈ ಬಗ್ಗೆ ಮಾತನಾಡಿ ʻʻʻಕೆಲವೊಮ್ಮೆ ನನಗೆ ಅನ್ನಿಸಿದೆ. ಜೀವನದಲ್ಲಿ ಒಮ್ಮೆ ನಾವು ಮಾಡಿದ ತಪ್ಪುಗಳು, ನಡೆದ ಘಟನೆಗಳು, ನಮ್ಮನ್ನ ಎಲ್ಲೋ ತೆಗೆದುಕೊಂಡು ಹೋಗಿ ದೂಡಿಬಿಡುತ್ತೆ. ಈ ವೇದಿಕೆ ನನ್ನ ಧನ್ಯವಾದ. ತಂದೆ ತಾಯಿಯನ್ನು ಕಳೆದುಕೊಂಡಿದ್ದ ನನಗೆ ಇಂದು ನನಗೆ ಮತ್ತೆ ಸಿಕ್ಕಿದ್ದಾರೆ. ಈ ವೇದಿಕೆ ಕಾರಣʼʼಎಂದರು.
ಇದನ್ನೂ ಓದಿ: BBK SEASON 10: ಇಂಟರ್‌ವ್ಯೂ ವೇಳೆ ಬರುವ ವಾಲ್ಯೂಮ್ ಇಲ್ಲಿ ಯಾಕಿಲ್ಲ ರಕ್ಷಕ್? ಕಿಚ್ಚ ಗರಂ!
ಇನ್ನು ಡ್ರೋನ್ ಪ್ರತಾಪ್ ಅವರ ತಂದೆ ಕೂಡ ಮಾತನಾಡಿ ʻʻಜನರಿಗೆ ಎಷ್ಟು ಧನ್ಯವಾದ ಹೇಳಿದರೂ ಸಾಕಾಗಲ್ಲ. ಎಲ್ಲೇ ಹೋದರೂ ನೀವು ಡ್ರೋನ್ ಪ್ರತಾಪ್ ಅವರ ತಂದೆನಾ? ಎಂದು ಕೇಳುತ್ತಾರೆ. ಈ ಎಲ್ಲ ಗೌರವ ಇಂದು ಈ ವೇದಿಕೆಯಿಂದ ಸಿಕ್ಕಿದೆ. ಈ ವೇದಿಕೆ ನನ್ನ ಮಗನನ್ನ ಮನುಷ್ಯನನ್ನಾಗಿ ಮಾಡಿತು. ಈ ವೇದಿಕೆ ಸಿಕ್ಕಿಲ್ಲ ಅಂದಿದ್ದರೆ ಆ ಮಟ್ಟಕ್ಕೆ ಹೋಗುತ್ತಿರಲಿಲ್ಲ. ಇಡೀ ಕಲರ್ಸ್ ತಂಡಕ್ಕೆ, ಕರ್ನಾಟಕದ ಜನತೆಗೆ ನಾವು ಚಿರಋಣಿʼʼಎಂದರು.
ಇನ್ನು ಡ್ರೋನ್ ಪ್ರತಾಪ್ ಅವರ ತಾಯಿ ಮಾತನಾಡಿ ʻಸುದೀಪ್ ಅವರೇ ನಿಮ್ಮ ಡೊಡ್ಡ ಅಭಿಮಾನಿ ನಾನು. ಹುಚ್ಚ ಸಿನಿಮಾದಿಂದ ಕೂಡ. ನಾನು ನಿಮ್ಮನ್ನ ಮನೆಯ ದೇವರು ತರಹ ನೋಡ್ತೀನಿ. ನನ್ನ ಮಗನಿಗೆ ನ್ಯಾಯ ಕೊಡಿಸಿದ್ರಿʼʼಎಂದು ಕಣ್ಣೀರಿಟ್ಟರು.