Site icon Vistara News

BBK Season 10: ಮನೆಯ ಹೀರೊ, ವಿಲನ್, ಖಾಲಿ ಡಬ್ಬಾ ಯಾರ‍್ಯಾರು?

bigg boss 10 contestant

ಬೆಂಗಳೂರು: ʻಬಿಗ್ ಬಾಸ್‌’ ಕನ್ನಡ ಸೀಸನ್ 10ರ (BBK Season 10) ಮೊದಲ ವಾರದ ಎಲಿಮಿನೇಷನ್ ಪ್ರಕ್ರಿಯೆ ಮುಗಿದಿದ್ದು, ಮನೆಯ ಹಿರಿಯ ಸದಸ್ಯರಾಗಿದ್ದ ‘ಸ್ನೇಕ್’ ಶ್ಯಾಮ್‌ ಅವರು ಶೋನಿಂದ ಹೊರಬಿದ್ದಿದ್ದಾರೆ. ಇದರ ಜತೆ ಮನೆಯಲ್ಲಿ ಹೀರೊ, ವಿಲನ್, ಖಾಲಿ ಡಬ್ಬಾ ಯಾರು? ಎಂಬ ಪ್ರಕ್ರಿಯೆ ಕೂಡ ನಡೆಯಿತು. ಇದರಲ್ಲಿ ತಮ್ಮ ಅಭಿಪ್ರಾಯಗಳನ್ನು ಸದಸ್ಯರು ಹಂಚಿಕೊಂಡರು.

ಏಳು ವೋಟ್‌ ಪಡೆದು ಸಂಗೀತಾ ಅವರು ಹೀರೊ ಆದರು. 5 ವೋಟ್‌ ವಿಲನ್‌ ಜತೆ ಕಾಲಿ ಡಬ್ಬ ಕೂಡ ವೋಟ್‌ಅನ್ನು ವಿನಯ್‌ ಪಡೆದುಕೊಂಡರು. ಅದರಲ್ಲಿ ನೀತು ಕೂಡ ಖಾಲಿ ಡಬ್ಬಾ ವೋಟ್‌ ಪಡೆದರು. ಜತೆಗೆ ಐದು ವಿಲನ್‌, ಹಾಗೂ ಕಾಲಿ ಡಬ್ಬಾ ವೋಟ್‌ವನ್ನು ತುಕಾಲಿ ಸಂತೋಷ್‌ ಪಡೆದರು. ಹೆಚ್ಚಾಗಿ ತುಕಾಲಿ ಸಂತೋಷ್‌ ಅವರನ್ನೇ ವಿಲನ್‌ ಎಂದು ಸ್ಪರ್ಧಿಗಳು ಹೇಳಿದರು. ʻʻಅವರ ಒಂದು ಹಾಸ್ಯದಿಂದ ಮನೆಯಲ್ಲಿ ಹಲವು ಮಂದಿಗೆ ಬೇಸರ ತರಿಸಿದೆʼ ಎಂಬ ಕಾರಣವನ್ನು ಹೆಚ್ಚಾಗಿ ಹಂಚಿಕೊಂಡರು. ʻಸೌಂಡ್‌ ಮಾಡ್ತಿದ್ದಾರೆ ಎಂದು ಸಂತು ಅಂದುಕೊಂಡಿದ್ದಾರೆ ಆದರೆ ಅವರು ಕಾಲಿ ಡಬ್ಬಾʼ ಎಂದು ಕಾರ್ತಿಕ್‌ ಹೇಳಿದರು.

ವಿನಯ್ ಅವರು ಕಾರ್ತಿಕ್​ಗೆ ಹೀರೊ, ತುಕಾಲಿ ಸಂತು ವಿಲನ್, ನೀತು ಖಾಲಿ ಡಬ್ಬಾ ಎಂದರು. ಕ್ಯಾಪ್ಟನ್ ಸ್ನೇಹಿತ್, ತನಿಷಾಗೆ ಹೀರೋ, ಸಂತು ವಿಲನ್, ಸ್ನೇಕ್ ಶ್ಯಾಮ್ ಡಬ್ಬಾ ಎಂದು ಸ್ಟಿಕ್ಕರ್ ನೀಡಿದರು. ಬಳಿಕ ಬಂದ ಕಾರ್ತಿಕ್, ಸಂಗೀತ ಹೀರೊ ಎಂದು, ವಿನಯ್ ವಿಲನ್, ಸಂತು ಡಬ್ಬಾ ಎಂದರು. ಸಿರಿ, ಕಾರ್ತಿಕ್ ಹೀರೊ, ತುಕಾಲಿ ಸಂತೋಶ್ ವಿಲನ್, ಸ್ನೇಕ್ ಶ್ಯಾಮ್ ಖಾಲಿ ಡಬ್ಬಾ ಎಂದರು. ವಿನಯ್​ಗೆ ನಾಯಕ ಪಟ್ಟ, ಸ್ನೇಹಿತ್ ವಿಲನ್, ತುಕಾಲಿ ಸಂತು ಡಬ್ಬಾ ಎಂದು ಸ್ಟಿಕ್ಕರ್ ಕೊಟ್ಟವರು ಮೈಕಲ್.

ತುಕಾಲಿ ಸಂತು ಮುಂದೆ ಬಂದು ವರ್ತೂರು ಸಂತೋಶ್​ಗೆ ಹೀರೊ ಎಂದು, ಕಾರ್ತಿಕ್ ವಿಲನ್, ವಿನಯ್ ಡಬ್ಬಾ ಎಂದು ಸ್ಟಿಕ್ಕರ್ ನೀಡಿದರು. ಸಂಗೀತ ಅವರು ಕಾರ್ತಿಕ್​ಗೆ ಹೀರೊ, ವಿನಯ್ ವಿಲನ್, ಸ್ನೇಕ್ ಶ್ಯಾಮ್ ಅವರಿಗೆ ಖಾಲಿ ಡಬ್ಬಾ ಸ್ಟಿಕ್ಕರ್ ನೀಡಿದರು. ಇನ್ನು ಭಾಗ್ಯಶ್ರೀ ಅವರು ಡ್ರೋನ್ ಪ್ರತಾಪ್ ಹೀರೋ, ವಿನಯ್ ವಿಲನ್, ನೀತು ಖಾಲಿ ಡಬ್ಬಾ ಎಂದರು. ಇಶಾನಿ ಮುಂದೆ ಬಂದು ವಿನಯ್ ಹೀರೊ, ತುಕಾಲಿ ಸಂತೋಶ್ ವಿಲನ್, ಸ್ನೇಕ್ ಶ್ಯಾಮ್ ಖಾಲಿ ಡಬ್ಬಾ ಎಂದರು. ಗೌರೀಶ್ ಅಕ್ಕಿ ಅವರ ಪ್ರಕಾರ ಸಂಗೀತ ಹೀರೋ, ವಿನಯ್ ವಿಲನ್, ನೀತು ಖಾಲಿ ಡಬ್ಬಾ. ತನಿಷಾ ಪ್ರಕಾರ ಸಂಗೀತ ಹೀರೋ, ಭಾಗ್ಯಶ್ರೀ ವಿಲನ್, ಸ್ನೇಕ್ ಶ್ಯಾಮ್ ಖಾಲಿ ಡಬ್ಬಾ. ನಮ್ರತಾ ಹೀರೊ, ಸಂತೋಶ್ ವಿಲನ್, ಮೈಖಲ್ ಖಾಲಿ ಡಬ್ಬಾ ಎಂದು ಮತ ಹಾಕಿದ್ದು ಡ್ರೋನ್ ಪ್ರತಾಪ್. ಇನ್ನು ನೀತು ಬಂದು ಸಂಗೀತ ಅವರಿಗೆ ಹೀರೊ, ವಿನಯ್ ಅವರಿಗೆ ವಿಲನ್ ಹಾಗೂ ಗೌರೀಶ್ ಅವರಿಗೆ ಖಾಲಿ ಡಬ್ಬಾ ಸ್ಟಿಕ್ಕರ್ ನೀಡಿದರು. ನಮ್ರತಾ ಅವರು ವಿನಯ್ ಅವರಿಗೆ ಹೀರೋ, ಸಂತು ಅವರಿಗೆ ವಿಲನ್, ಗೌರೀಶ್ ಅಕ್ಕಿ ಅವರಿಗೆ ಡಬ್ಬಾ ಎಂದರು. ಸ್ನೇಕ್ ಶ್ಯಾಮ್ ಅವರು ಸಂಗೀತ ಅವರು ಹೀರೋ, ಸ್ನೇಹಿತ್ ವಿಲನ್, ತುಕಾಲಿ ಸಂತು ಡಬ್ಬಾ ಎಂದರು. ರಕ್ಷಕ್ ಪ್ರಕಾರ ಸಂಗೀತ ಹೀರೊ, ಸ್ನೇಹಿತ್ ವಿಲನ್, ಶ್ಯಾಮ್ ಡಬ್ಬಾ ಕೊನೆಯದಾಗಿ ಮತ ಹಾಕಿದ ವರ್ತೂರು, ಸಂಗೀತ ಹೀರೋ, ಶ್ಯಾಮ್ ವಿಲನ್, ರಕ್ಷಕ್ ಡಬ್ಬಾ ಎಂದರು.

ಇದೆಲ್ಲ ಆದ ಬಳಿಕ ಕಿಚ್ಚ ಸುದೀಪ್‌ ʻʻಮನೆಯಲ್ಲಿ ಇದೆಲ್ಲ ಹೀಗೆ ಇರತ್ತಾ? ಕಾಲಿ ಡಬ್ಬಾ ಮುಂದೆ ಸೌಂಡ್‌ ಮಾಡಬಹುದು, ವಿಲನ್‌ ಆದವರು ಹೀರೊ ಕೂಡ ಆಗಬಹುದು. ವಿಲನ್‌ ಅನ್ನಿಸಿಕೊಂಡವರು ಹೀರೊ ಆಗಬಹುದಾ ಆಗಬಹುದುʼʼಎಂದರು.

ಇದನ್ನೂ ಓದಿ: BBK Season 10 : ಬಿಗ್ ಬಾಸ್ ಮನೆಯಿಂದ ಹೊರಬಿದ್ದ ಸ್ನೇಕ್ ಶ್ಯಾಮ್

ಮನೆಯಿಂದ ಹೊರಬಿದ್ದ ಸ್ನೇಕ್‌ ಶ್ಯಾಮ್‌

ನಾಮಿನೇಷನ್ ಪಟ್ಟಿಯಲ್ಲಿ ಸ್ನೇಕ್ ಶ್ಯಾಮ್, ಮೈಕಲ್ ಅಜಯ್, ಸಿರಿ, ನೀತು,ಡ್ರೋಣ್ ಪ್ರತಾಪ್, ಇವರೆಲ್ಲ ಇದ್ದರು. ಇವರಲ್ಲಿ ಮೊದಲು ಸೇಫ್‌ ಆಗಿದ್ದು ನೀತು ಅವರು. ನಂತರ ಉಳಿದಿದ್ದು, ಮೈಕಲ್, ಸಿರಿ ಮತ್ತು ಸ್ನೇಕ್‌ ಶ್ಯಾಮ್‌ ಅವರು.

ಐವತ್ತೆಂಟು ಸಾವಿರ ಹಾವುಗಳನ್ನು ಹಿಡಿದು ಸುರಕ್ಷಿತ ಸ್ಥಳಕ್ಕೆ ಬಿಟ್ಟ ಖ್ಯಾತಿ ಹೊಂದಿದ್ದ ಶ್ಯಾಮ್ ಅವರನ್ನು ಜನರು ಹೋಲ್ಡ್ ನಲ್ಲಿಟ್ಟಿದ್ದರು. ಬಿಗ್ ಬಾಸ್ ಅವರನ್ನು ಉಳಿದ ಹೋಲ್ಡ್ ಸ್ಪರ್ಧಿಗಳ ಜೊತೆಗೆ ಮನೆಯೊಳಗೆ ಕಳಿಸಿದ್ದರು. ‘ಒಂದು ವಾರ ನಿಮ್ಮ ಪರ್ಫಾರ್ಮೆನ್ಸ್ ನೋಡಿ ಮುಂದಿನ ನಿರ್ಧಾರ ತಿಳಿಸಲಾಗುತ್ತದೆ’ ಎಂದೂ ಆಸಮಯದಲ್ಲಿ ಕಿಚ್ಚ ಸುದೀಪ್ ಹೇಳಿದ್ದರು. ಹೋಗುವಾಗ ಇಂಟ್ರೆಸ್ಟಿಂಗ್ ಕಂಟೆಸ್ಟೆಂಟ್ ಆಗಿಯೇ ಕಾಣಿಸಿದ್ದ ಶ್ಯಾಮ್, ಬಿಗ್ ಬಾಸ್ ಮನೆಯೊಳಗೆ ಸದ್ದು ಮಾಡಿದ್ದು ಕಡಿಮೆ. ಇಂದಿನ ಎಪಿಸೋಡ್‌ನಲ್ಲಿಯೂ ಉಳಿದ ಸ್ಪರ್ಧಿಗಳಲ್ಲಿ ಹೆಚ್ಚಿನ ಜನರು ಶ್ಯಾಮ್ ಅವರೇ ಹೊರಗೆ ಹೋಗಬೇಕು ಎಂದು ಅಭಿಪ್ರಾಯಪಟ್ಟರು. ಇದೀಗ ಅವರು ಮೊದಲ ವಾರವೇ ಬಿಗ್ ಬಾಸ್ ಮನೆಯಿಂದ ಹೊರಗೆ ಬಿದ್ದಿದ್ದಾರೆ.

Exit mobile version