Site icon Vistara News

BBK Season 10: ಕಾರ್ತಿಕ್‌-ಸಂಗೀತಾ ಆತ್ಮೀಯತೆ ಅಂತ್ಯ; ಇವನು ಟಿಶ್ಯೂ ಪೇಪರ್ ಅಷ್ಟೇ ಎಂದ ವರ್ತೂರ್‌!

BBK Season 10 Karthik Sangeetha

ಬೆಂಗಳೂರು: ಬಿಗ್‌ ಬಾಸ್‌ ಸೀಸನ್‌ 10ರಲ್ಲಿ (BBK Season 10:) ಹೈಲೈಟ್‌ ಆಗಿರುವ ಜೋಡಿ ಅಂದರೆ ಅದುವೇ ಸಂಗೀತಾ ಹಾಗೂ ಕಾರ್ತಿಕ್‌. ಆದರೆ ಇದೀಗ ಈ ಜೋಡಿ ಬೇರೆಯಾಗಿದೆ. ನಿನ್ನೆ(ನ.7) ಬೆಳಗ್ಗೆ ಸಂಗೀತಾ ಮತ್ತು ಕಾರ್ತಿಕ್ ಎದ್ದ ಕೂಡಲೇ ಅವರಿಬ್ಬರ ಮಧ್ಯೆ ಮನಸ್ತಾಪ ಹೆಚ್ಚಾಯ್ತು. ಇಬ್ಬರು ಬೇಗ ಎದ್ದಿದ್ದರು. ಸಂಗೀತಾ ಅವರು ಕಾರ್ತಿಕ್‌ ಅವರಿಗೆ ಮೆಲ್ಲ ಮಾತನಾಡಿ ಎಂದು ಹೇಳಿದರು. ಆಗ ಕಾರ್ತಿಕ್‌ ಅವರು ಈ ಅಪ್ಪ-ಅಮ್ಮ.. ಮಕ್ಕಳು ಮಲಗಿರುವಾಗ.. ಮಾತಾಡಬೇಡ, ಮಕ್ಕಳು ಎಚ್ಚರವಾಗುತ್ತಾರೆ ಅಂತಾರಲ್ಲ ಹಾಗಾಯ್ತು’’ ಎಂದರು. ಇದರಿಂದ ಬೇಸರಗೊಂಡ ಸಂಗೀತಾ ಅವರು ಕಾರ್ತಿಕ್‌ ಜತೆ ಸರಿಯಾಗಿ ಮಾತನಾಡಲೇ ಇಲ್ಲ. ಇನ್ನು ವರ್ತೂರ್‌ ಸಂತೋಷ್‌ ಕೂಡ ʻಸಂಗೀತಾ ಸ್ಟ್ರಾಂಗ್ ಇದ್ದಾಳೆ. ಸುಮ್ಮನೆ ಇವನು ಟಿಶ್ಯೂ ಪೇಪರ್ ಅಷ್ಟೇ’’ ಎಂದು ಕಮೆಂಟ್ ಮಾಡಿದ್ದಾರೆ.

ಆ ನಂತರ ಟೀಂ ಮಾಡುವಾಗಲೂ ಇವರ ಈ ಜಗಳ ಮುಂದುವರಿದಿತ್ತು. ಇವರಿಬ್ಬರ ಜಗಳದಿಂದ ತಂಡದ ಮನಸ್ಥಿತಿಯೂ ಹಾಳಾಗಿತ್ತು. ಇಷ್ಟೆಲ್ಲ ಬೇಸರಗೊಂಡ ಸಂಗೀತಾ ಅವರು ಕಳೆದ ನಾಲ್ಕು ವಾರಗಳಿಂದ ವಿನಯ್‌ ಗೌಡ (Vinay Gowda) ಅವರನ್ನು ಮುಖಕ್ಕೆ ಮುಖ ಕೊಟ್ಟು ವಿರೋಧ ಮಾಡುತ್ತಿದ್ದ, ಪವರ್‌ ಫುಲ್‌ ಕಂಟೆಸ್ಟೆಂಟ್‌ ಸಂಗೀತಾ ಶೃಂಗೇರಿ (Sangeeta Shrigeri) ಈಗ ತಾನಿರುವ ಟೀಮ್‌ ಬಿಟ್ಟು ವಿನಯ್‌ ಗೌಡ ಟೀಮ್‌ ಸೇರಲು ಮುಂದಾದರು

ತಂಡಗಳ ಆಯ್ಕೆ, ಹೊಸ ಅವಕಾಶ

ಈ ವಾರ ಯಾವುದೇ ರೀತಿಯ ತಂಡಗಳನ್ನು ರಚಿಸುವ ಬಗ್ಗೆ ಚಟುವಟಿಕೆ ಇರುವುದಿಲ್ಲ. ಕಳೆದ ವಾರದ ತಂಡಗಳಲ್ಲೇ ಟಾಸ್ಕ್ ಆಡಲು ‘ಬಿಗ್ ಬಾಸ್’ ಅನುಮತಿ ನೀಡಿದ್ದರು. ಆದರೆ ಕ್ಯಾಪ್ಟನ್‌ ಬದಲಿಸಲು ಬಿಗ್‌ ಬಾಸ್‌ ಚಾನ್ಸ್‌ ಕೊಟ್ಟಿದ್ದರು. ಅದರಂತೆ, ವಿನಯ್ ತಂಡದಲ್ಲಿ ವೋಟಿಂಗ್ ಮುಖಾಂತರ ಸಿರಿ ಅವರನ್ನ ಕ್ಯಾಪ್ಟನ್ ಮಾಡಲಾಯಿತು.ಸಂಗೀತಾ ತಂಡದಲ್ಲೂ ವೋಟಿಂಗ್ ಮೂಲಕ ಡ್ರೋನ್ ಪ್ರತಾಪ್‌ನ ಕ್ಯಾಪ್ಟನ್‌ ಆಗಿ ಆಯ್ಕೆ ಮಾಡಲಾಯಿತು. ಇಷಾದ ಬಳಿಕ ಬಿಗ್‌ ಬಾಸ್‌ ಇನ್ನೊಂದು ಹೊಸ ಅವಕಾಶವನ್ನೂ ನೀಡಿದರು. ಇರುವ ತಂಡ ಇಷ್ಟವಿಲ್ಲ ಎಂದು ಯಾರಿಗಾದರೂ ಅನ್ನಿಸಿದ್ದರೆ, ಅವರು ತಂಡದಿಂದ ಚೇಂಜ್ ಆಗಬಹುದು ಎಂದರು ಬಿಗ್‌ ಬಾಸ್‌. ಈ ವೇಳೆ ಶುರುವಾಯ್ತು ಸಂಗೀತಾ ಅವರ ಕಿರಿಕ್‌.

ಇದನ್ನೂ ಓದಿ: BBK Season 10 : ಬಿಗ್‌ ಬಾಸ್‌ನಲ್ಲಿ ಬಿಗ್‌ ಟ್ವಿಸ್ಟ್‌; ವಿನಯ್‌ ಟೀಮ್‌ ಸೇರಲು ಮುಂದಾದ ಸಂಗೀತಾ!

ಶುರುವಾಯ್ತು ಸಂಗೀತಾ ಕಿರಿಕ್‌

ವಿನಯ್‌ ಗೌಡ (Vinay Gowda) ಅವರನ್ನು ಮುಖಕ್ಕೆ ಮುಖ ಕೊಟ್ಟು ವಿರೋಧ ಮಾಡುತ್ತಿದ್ದ, ಪವರ್‌ ಫುಲ್‌ ಕಂಟೆಸ್ಟೆಂಟ್‌ ಸಂಗೀತಾ ಶೃಂಗೇರಿ (Sangeeta Shrigeri) ಈಗ ತಾನಿರುವ ಟೀಮ್‌ ಬಿಟ್ಟು ವಿನಯ್‌ ಗೌಡ ಟೀಮ್‌ ಸೇರಲು ಮುಂದಾದರು ಈ ನಡುವೆ, ಟೀಮ್‌ಗಳ ಒಳಗೆ ಚರ್ಚೆ ನಡೆಯುತ್ತಿದ್ದಾಗ ಸಂಗೀತ ʻನಾನು ಆ ಕಡೆ ಟೀಮ್‌ಗೆ ಹೋಗಬೇಕು ಅಂತ ಇದ್ದೀನಿʼʼ ಎಂದು ಹೇಳುತ್ತಾರೆ. ಈ ಮಾತು ಕೇಳಿ ಕಾರ್ತಿಕ್‌ ಟೀಮ್‌ಗೆ ಆಘಾತವಾಗುತ್ತದೆ. ಆದರೆ, ಕಾರ್ತಿಕ್‌ ಮಾತ್ರ ʻಅವಳಿಗೆ ಇಲ್ಲಿ ಇರೋಕೆ ಇಂಟ್ರೆಸ್ಟ್‌ ಇಲ್ಲ ಅನಿಸ್ತಿದೆ.. ಕಳಿಸಿಬಿಡ್ರಿʼʼ ಅನ್ನುತ್ತಾರೆ.ʻನನ್ನ ಟೀಮ್‌ ನನ್ನನ್ನು ರೆಸ್ಪೆಕ್ಟ್‌ ಮಾಡ್ತಿಲ್ಲ. ಈ ಟೀಮ್‌ನಲ್ಲಿ ನಾನು ಯಾಕಿರಬೇಕುʼʼ ಎಂದು ಸಂಗೀತ ಕೇಳುತ್ತಾರೆ. ನಮ್ಮ ಟೀಮ್‌ನಲ್ಲಿ ಇಷ್ಟು ಯುನಿಟಿ ಇದೆ, ಯಾಕೆ ಹೀಗೆ ಮಾಡ್ತೀರಿ ಅಂತ ಕೆಲವರು ಕೇಳುತ್ತಾರೆ. ಆಗ ಸಂಗೀತ: ನಮ್ಮ ಟೀಮ್‌ನಲ್ಲಿ ಎಷ್ಟು ಯುನಿಟ್‌ ಇದೆ ಎನ್ನುವುದು ಕಳೆದ ವಾರ ಕಳಪೆ ಮತ್ತು ಉತ್ತಮ ಕೊಟ್ಟಾಗಲೇ ಗೊತ್ತಾಗಿದೆ ಎಂದು ಹೇಳಿದರು. (ಕಳೆದ ವಾರ ವಿನಯ್‌ ಟೀಮ್‌ ಕಳಪೆಯನ್ನು ಒಂದು ಗ್ರೂಪ್‌ ಆಗಿ ಸಂಗೀತಾಗೆ ನೀಡಿ ಆಕೆಯನ್ನು ಜೈಲುಪಾಲು ಮಾಡಿತ್ತು). ಆಗ ಕಾರ್ತಿಕ್‌ ಮಹೇಶ್‌, ಕಳಪೆ ಮತ್ತು ಉತ್ತಮ ಕೊಡುವುದು ಅವರವರ ವೈಯಕ್ತಿಕ ವಿಚಾರ ಎನ್ನುತ್ತಾರೆ. ಆಗ ಭಾಗ್ಯ ಶ್ರೀ ಅವರು ಯಾಕಪ್ಪಾ ಈ ರೀತಿ ಎಲ್ಲ ಎಂದು ಕೇಳುತ್ತಾಳೆ. ಆಗ ಸಂಗೀತಾ- ನಾನು ಏನು ಮಾತನಾಡಿದರೂ ಕಾರ್ತಿಕ್‌ಗೆ ಪ್ರಾಬ್ಲಂ ಆಗ್ತಾ ಇದೆ ಎನ್ನುತ್ತಾಳೆ. ಆಗ ಕಾರ್ತಿಕ್‌- ನಾವು ಮಾಡಿದ್ದೆಲ್ಲ ರಾಂಗ್‌ ಆಗಿಯೇ ಕಾಣಿಸುತ್ತಿದೆ ನಿಮಗೆ, ನಾವು ಏನು ಮಾಡ್ಲಿಕಾಗ್ತದೆ ಎನ್ನುತ್ತಾಳೆ. ನಂಗಿಲ್ಲಿ ಇರೋಕೇ ಇಷ್ಟ ಇಲ್ಲ ಎನ್ನುವುದು ಸಂಗೀತಾ ಸ್ಪಷ್ಟ ನುಡಿ.

ಬಳಿಕ ಪ್ರತಾಪ್‌ ಅವರು ಸಂಗೀತಾ ಅವರನ್ನು ಕನ್ವಿನ್ಸ್‌ ಮಾಡಿದರು. ‘’ನನಗೆ ಅಲ್ಲಿಗೆ ಹೋಗಬೇಕು ಅಂತಲ್ಲ. ಆದರೆ, ಪ್ರತಾಪ್‌ ನನ್ನನ್ನ ಕನ್ವಿನ್ಸ್ ಮಾಡ್ತಾನಾ ಅಂತ ನೋಡಿದ್ದು’’ ಎಂದು ಸಂಗೀತಾ ಸ್ಪಷ್ಟಪಡಿಸಿದರು.

ಗೆದ್ದು ಬೀಗಿದ ಪ್ರತಾಪ್‌ ಟೀಮ್‌

ಡ್ರೋನ್ ಪ್ರತಾಪ್ ಸ್ಟ್ರಾಟೆಜಿಯಂತೆ ಮೊದಲೆರಡು ಆಟಗಳಲ್ಲಿ ಗೆಲುವು ಸಾಧಿಸಿದರು. ತಂಡದಲ್ಲಿ ಒಗ್ಗಟು ಮೂಡಲಾರಂಭಿಸಿತು. ಭಿನ್ನಾಭಿಪ್ರಾಯ ಹೋಯಿತು. ಇದಾದ ಬಳಿಕ ಸಂಗೀತಾ ಹಾಗೂ ಕಾರ್ತಿಕ್‌ ಒಬ್ಬರೊಗೊಬ್ಬರು ಮಾತನಾಡಿಕೊಂಡರು.

ಇದನ್ನೂ ಓದಿ: BBK Season 10: ಇದಕ್ಕಿದ್ದಂತೆ ಸ್ನೇಹಿತ್ ರೆಬೆಲ್ ಆಗೋಕೆ ಕಾರಣವೇನು?

ಗೆಳೆತನಕ್ಕೆ ಅಂತ್ಯ ಹಾಡಿದ ಸಂಗೀತಾ

ಟಾಸ್ಕ್ ಎಲ್ಲ ಮುಗಿದ ಬಳಿಕ, ಸಂಗೀತಾ ಹಾಗೂ ಕಾರ್ತಿಕ್ ಪ್ರತ್ಯೇಕವಾಗಿ ಕೂತು ಮಾತನಾಡಿ ತಮ್ಮ ನಡುವಿನ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳುವ ಪ್ರಯತ್ನ ಮಾಡಿದರು. ಆಗ ಸಂಗೀತಾ ಮಾತನಾಡಿ ʻʻನಾನು ಪ್ರತಾಪ್‌ ಸುಮಾರು ವಿಷಯಗಳನ್ನು ಮಾತನಾಡಿದೆವು. ನನ್ನನ್ನು ಕನ್ವಿನ್ಸ್‌ ಮಾಡಿದ. ನೀನು ಇಷ್ಟು ದಿನ ನನ್ನನ್ನು ಆತ್ಮೀಯವಾಗಿ ನಡೆಸಿಕೊಂಡಿದ್ದೀಯ, ಆದರೆ ನಾವಿನ್ನು ಒಟ್ಟಿಗೆ ಹೀಗೆಯೇ ಮುಂದುವರಿಯುವುದು ಬೇಡ, ನೀನು ನನಗಾಗಿ ಸಾಕಷ್ಟು ಮಾಡಿದ್ದೀಯ ಆದರೆ ಇದು ಇಲ್ಲಿಗೆ ಸಾಕು. ನಿಮ್ಮ ಮೇಲೆ ತುಂಬ ರೆಸ್ಪೆಕ್ಟ್‌ ಇದೆ. ಜೈಲಿಗೆ ಹೋದಾಗ ಕೂಡ ನನ್ನ ಜತೆ ಇದ್ದೀರಿʼʼ ಎಂದು ನೇರವಾಗಿ ಹೇಳಿ ಹಗ್‌ ಮಾಡಿದರು. ಸಂಗೀತಾ ಅವರಿಗಾಗಿ ವಿನಯ್​ ವಿರುದ್ಧ ಕಾರ್ತಿಕ್ ಹೋರಾಡಿದ್ದರು. ಹಲವರ ವಿರೋಧ ಕಟ್ಟಿಕೊಂಡು ಸಂಗೀತಾರನ್ನು ಬೆಂಬಲಿಸಿದ್ದರು.

ಬಿಗ್​ಬಾಸ್ ಜಿಯೋ ಸಿನಿಮಾಸ್​ನಲ್ಲಿ ಪ್ರತಿದಿನ ಲೈವ್ ಪ್ರಸಾರವಾಗುತ್ತಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version