Site icon Vistara News

BBK SEASON 10: ಗೆಟ್ ಔಟ್ ಎಂದು ವಾರದ ಪಂಚಾಯ್ತಿ ಶುರು ಮಾಡಿದ ಕಿಚ್ಚ!

BBK SEASON 10 kichcha sudeep

ಬೆಂಗಳೂರು: ಬಿಗ್‌ ಬಾಸ್‌ ಸೀಸನ್‌ 10ರ (BBK SEASON 10) ಹತ್ತನೇ ವಾರ ಮನೆಯಲ್ಲಿ ಸ್ಕೂಲ್‌ ಟಾಸ್ಕ್‌ನಿಂದಾಗಿ ಖುಷಿಯ ವಾತಾವರಣ ನಿರ್ಮಾಣವಾಗಿತ್ತು. ತಮಗೆ ಕೊಟ್ಟಿದ್ದ ಪಾತ್ರವನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ಆದರೀಗ ಕಿಚ್ಚ ಸ್ಪರ್ಧಿಗಳ ನಡುವಳಿಕೆಗೆ ಗರಂ ಆಗಿದ್ದಾರೆ. ಗೆಟ್ ಔಟ್ ಎಂತಲೇ ವಾರದ ಪಂಚಾಯ್ತಿ ಶುರು ಮಾಡಿದ್ದಾರೆ ಕಿಚ್ಚ.

ಆಗಿದ್ದೇನು?

ಕಿಚ್ಚ ಸುದೀಪ್‌ ವೇದಿಕೆ ಬಂದರೂ ವಿನಯ್‌ ಹಾಗೂ ಪ್ರತಾಪ್‌ ಬಂದಿರಲಿಲ್ಲ. ಆಗ ಕಿಚ್ಚ ಸುದೀಪ್‌ ಗರಂ ಆಗಿದ್ದಾರೆ. ʻʻಫಸ್ಟ್‌ ಟೈಮ್‌ ಬಝರ್‌ ಹಾಕಿದ್ದಾಗಿನಿಂದಲೂ ನೋಡುತ್ತಲೇ ಇದ್ದೇನೆ. ಮಲಗೇ ಇದ್ದೀರಾ. ಪ್ರತಾಪ್‌ ನಿಮ್ಮ ಮೈಕ್‌ ಎಲ್ಲಿ?ಪ್ರತಾಪ್‌ ಸೀರಿಯೆಸ್‌ನೆಸ್‌ ಇದೆ ಎಂತಲೇ ಅನ್ನಿಸ್ತಾ ಇಲ್ಲವಲ್ಲ?ವಿನಯ್‌, ಮೈಕಲ್‌, ಒಂದು ವೇದಿಕೆ ಸಿಕ್ಕಿದ ಮೇಲೆ ಮರ್ಯಾದೆ ಸಿಕ್ಕಾಗ ಮೊದಲು ನೀವು ಮಾಡೋದು ಮರ್ಯಾದೆ ತೆಗೆಯುವ ಕೆಲಸ ಅಲ್ಲವಾ?ತೆಗಿಸ್ತೀನಿ ಮುಖ್ಯದ್ವಾರ! ಗೆಟ್ ಔಟ್ʼʼಎಂದು ಅವಾಜ್‌ ಹಾಕಿದರು ಕಿಚ್ಚ.

ಕಳೆದ ಸಂಚಿಕೆಯಲ್ಲಿ ಕಿಚ್ಚ ಸುದೀಪ್ ಅವರೇ ತಮ್ಮ ಕೈಯಾರೆ ಮಾಡಿದ ಅಡುಗೆಯನ್ನ ಬಿಗ್ ಬಾಸ್ ಸ್ಪರ್ಧಿಗಳಿಗೆ ಕಳುಹಿಸಿದ್ದರು. ಲೆಟರ್ ಬರೆದು ಅವರು ಯಾವ ರೀತಿ ಚೇಂಜ್ ಆಗಬೇಕು ಯಾವ ರೀತಿ ಆಟವನ್ನು ಆಡಬೇಕು ಎಂಬುದನ್ನು ಕೂಡ ಕಳುಹಿಸಿದ್ದರು ಜತೆಗೆ ಎಲ್ಲರಿಗೂ ಇಷ್ಟವಾಗುವ ಅಡುಗೆ ಮಾಡಿ ಕಳುಹಿಸಿ ಎಲ್ಲರ ಖುಷಿಗೆ ಕಾರಣರಾಗಿದ್ದರು ಆದರೆ ಸ್ಪರ್ಧಿಗಳು ಇಂದು ಕಿಚ್ಚ ಅವರಿಗೆ ಬೇಸರ ತರುವಂತೆ ಮಾಡಿದ್ದಾರೆ.

ಇದನ್ನೂ ಓದಿ: BBK SEASON 10: ತುಕಾಲಿ ಚಡ್ಡಿ ಉದುರಿತು; ಕಾರ್ತಿಕ್-ನಮ್ರತಾಗೆ ಹುಡುಗಾಟ, ಸಂತೋಷ್‌ಗೆ ಪ್ರಾಣಸಂಕಟ!

ಸಿರಿ, ಪವಿ ಪೂವಪ್ಪ, ಮೈಕಲ್ , ವಿನಯ್ ಗೌಡ , ಸಂಗೀತಾ ಹಾಗೂ ಪ್ರತಾಪ್ ನಾಮಿನೇಟ್ ಆಗಿದ್ದಾರೆ‌. ಈ ಆರು ಮಂದಿಯಲ್ಲಿ ಯಾರು ಇಂದು ದೊಡ್ಮನೆಯಲ್ಲಿ ತಮ್ಮ ಜರ್ನಿ ಮುಗಿಸಿ ಹೊರಗೆ ಹೋಗ್ತಾರೆ ಎಂದು ವೀಕ್ಷಕರು ಕಾಯುತ್ತಿದ್ದಾರೆ. ವಿನಯ್ ಮೈಕಲ್ ಹಾಗೂ ಪ್ರತಾಪ್ ಸಂಗೀತ ಇವರು ಮನೆಯಲ್ಲಿ ಉಳಿದುಕೊಳ್ಳುವ ಸಾಧ್ಯತೆ ಹೆಚ್ಚಿದೆ. ಯಾಕೆಂದರೆ ಕೊಡುವ ಟಾಸ್ಕ್‌ಗಳಲ್ಲಿ ಚನ್ನಾಗಿ ಪ್ರದರ್ಶನವನ್ನು ನೀಡುತ್ತಾರೆ.

ಆದರೆ ಪವಿ ಪೂವಪ್ಪ ಈ ವಾರ ಆಟವನ್ನು ಚೆನ್ನಾಗಿ ನಿಭಾಯಿಸಿರಲಿಲ್ಲ. ಹಾಗೇ ಮೈಕಲ್‌ ಕೂಡ ಬಹಳ ಅಗ್ರೆಸಿವ್‌ ಆದ ಕಾರಣ ಈ ಇಬ್ಬರೂ ಸ್ಪರ್ಧಿಗಳು ಮನೆಯಿಂದ ಹೊರಗೆ ಹೋಹಬಹುದು ಎಂದು ವೀಕ್ಷಕರು ಕಮೆಂಟ್‌ ಮಾಡಿದ್ದಾರೆ.

Exit mobile version