ಬೆಂಗಳೂರು: ಬಿಗ್ ಬಾಸ್ ಸೀಸನ್ 10ರ (BBK SEASON 10) 15ನೇ ವಾರ ಮಿಡ್ ನೈಟ್ ಎಲಿಮಿನೇಷನ್‌ನಿಂದಾಗಿ ತನಿಷಾ ಔಟ್ ಆಗಿದ್ದು ಗೊತ್ತೇ ಇದೆ. ಇದೀಗ ನಮ್ರತಾ ʻಬಿಗ್ ಬಾಸ್ʼ ಮನೆಯಿಂದ ಹೊರಬಿದ್ದಿದ್ದಾರೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಕಿಚ್ಚನ ಚಪ್ಪಾಳೆ, ಉತ್ತಮ ಗಿಟ್ಟಿಸಿಕೊಳ್ಳುವ ಮೂಲಕ ನಮ್ರತಾ ಮೋಡಿ ಮಾಡಿದ್ದರು. ಆದರೆ ಕೆಲವು ದಿನಗಳ ಹಿಂದೆ ಕಾರ್ತಿಕ್ ಜತೆಗಿನ ಒಡನಾಟ ಸಾಕಷ್ಟು ಚರ್ಚೆಯಲ್ಲಿತ್ತು. ಇದು ನಮ್ರತಾ ಅವರಿಗೆ ನೆಗೆಟಿವ್ ಆಯ್ತು ಕೂಡ.
ಬಿಗ್ ಬಾಸ್ ಮಾಜಿ ಸ್ಪರ್ಧಿಗಳು ಮನೆಯೊಳಗೆ ಕಾಲಿಟ್ಟ ಬಳಿಕ ಟ್ರೋಲ್ ವಿಷ್ಯ ನಮ್ರತಾ ತಿಳಿದು ಕಣ್ಣೀರಿಟ್ಟಿದ್ದರು. ಕೆಲವು ದಿನಗಳಿಂದ ಕಾರ್ತಿಕ್ ಹಾಗೂ ನಮ್ರತಾ ಕ್ಲೋಸ್ ಆಗಿದ್ದಾರೆ. ಸ್ನೇಹಿತ್ ಇದ್ದಾಗ ನಮ್ರತಾ ಅವರು ಸ್ನೇಹಿತ್ ಜತೆ ಕ್ಲೋಸ್ ಆಗಿದ್ದರು. ಸ್ನೇಹಿತ್ ಮತ್ತೆ ಮನೆಯೊಳಗೆ ಬಂದಾಗ ನಮ್ರತಾ ಅವರಿಗೆ ಕಿವಿಮಾತು ಹೇಳಿದ್ದರು.‘ನೀವು ಮಾಡೋದೆಲ್ಲ ಹೊರಗೆ ಕೆಟ್ಟದಾಗಿ ಕಾಣುತ್ತಿದೆ. ನಿಮ್ಮ ಪರವಾಗಿ ನಾನು ಫೈಟ್ ಮಾಡುತ್ತಾ ಇದ್ದೀನಿ’ ಎಂದಿದ್ದಾರೆ ಸ್ನೇಹಿತ್. ಇದಾದ ಬಳಿಕ ನಮ್ರತಾ ಕಣ್ಣೀರಿಟ್ಟಿದ್ದರು.
ʻʻನನ್ನನ್ನ ಮನೆಗೆ ಕರ್ಕೊಂಡ್ ಹೋಗಿ. ಇಲ್ಲಿರೋದು ನನಗೆ ಇಷ್ಟ ಆಗ್ತಿಲ್ಲ. ಏನು ಆಗ್ತಾ ಇದೆ ಅಂತ ನನಗೆ ಗೊತ್ತಿಲ್ಲ. ನಾನು ಇಲ್ಲಿ ಯಾರಿಗೂ ಅಟ್ಯಾಚ್ಡ್ ಆಗಿಲ್ಲ. ಕಾರ್ತಿಕ್ ಜತೆ ನಾನು ನಿಮ್ಮಷ್ಟೂ ಅಟ್ಯಾಚ್ಡ್ ಆಗಿಲ್ಲ. ಕಾರ್ತಿಕ್ ನನ್ನ ಕೈಹಿಡಿದುಕೊಳ್ಳುತ್ತಾರೆ ಅಷ್ಟೇ. ಅದು ಪ್ರಾಂಕ್ ಅಷ್ಟೇ. ನನಗೆ ನನ್ನ ಕ್ಯಾರೆಕ್ಟರ್‌ನ ರಿಸ್ಕ್ ಮಾಡಿಕೊಳ್ಳಲು ಇಷ್ಟವಿಲ್ಲ. ನನಗೆ ಇಲ್ಲಿರೋಕೆ ಇಷ್ಟವಿಲ್ಲ. ಕಾರ್ತಿಕ್ ಜಸ್ಟ್ ಫ್ರೆಂಡ್ ಅಷ್ಟೇ. ಅವನು ನನಗೆ ಅನ್‌ಕಮ್ಫರ್ಟಬಲ್ ಫೀಲ್ ಮಾಡಿಲ್ಲ. ನಾವು ಪ್ರಾಂಕ್ ಮಾಡಿದ್ವಿ ಅಷ್ಟೇ. ಕಾರ್ತಿಕ್‌ಗೆ ಹೊರಗಡೆ ಹುಡುಗಿ ಇದ್ದಾರೆ. ನಾನು ಅಂತಹ ಫೂಲಾ?ʼʼಎಂದು ಮಾತನಾಡಿದ್ದರು. ಅಷ್ಟೇ ಅಲ್ಲದೇ ಸ್ನೇಹಿತ್ ಜೊತೆಗೆ ಮಾತನಾಡುವಾಗ, ‘’ನೀವು ನನಗೆ ಡೀಮೋಟಿವೇಟ್ ಮಾಡಿದ್ರಿ. ಆಚೆ ಹೋದ್ಮೇಲೆ ನಿಮ್ಮ ಬಳಿ ನಾನು ಮಾತನಾಡುವುದಿಲ್ಲ. ಆಚೆ ಹೋದ್ಮೇಲೆ ನಿಮ್ಮ ಯಾರ ಮುಖವನ್ನೂ ನಾನು ನೋಡಲ್ಲ’’ ಎಂದು ಸ್ನೇಹಿತ್‌ಗೆ ನಮ್ರತಾ ಹೇಳಿದ್ದರು. ಇದೀಗ ನಮ್ರತಾ ಆಚೆ ಬಂದಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ: BBK SEASON 10: ಜೋರು ಧ್ವನಿ, ಸ್ನೇಹದ ಖನಿ ತನಿಷಾ ಕುಪ್ಪಂಡ ಬಿಗ್‌ಬಾಸ್ ಜರ್ನಿ ಹೇಗಿತ್ತು?
ಈ ಬಹು ನಿರೀಕ್ಷಿತ ಶೋಗೆ ಮೊದಲ ಸ್ಪರ್ಧಿಯಾಗಿ ನಮ್ರತಾ ಆಗಮಿಸಿದ್ದರು. ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ‘ನಾಗಿಣಿ 2’ ಧಾರಾವಾಹಿ ಮೂಲಕ ನಮ್ರತಾ ಗೌಡ ಜನಪ್ರಿಯರಾಗಿದ್ದಾರೆ. ‘ಪುಟ್ಟಗೌರಿ’ ಧಾರಾವಾಹಿಯಲ್ಲಿ ಹಿಮಾ ಪಾತ್ರದಲ್ಲಿ ಮಿಂಚಿದ್ದರು. ನಮ್ರತಾ 2011ರಲ್ಲಿ ಸ್ಟಾರ್ ಸುವರ್ಣದಲ್ಲಿ ಪ್ರಸಾರವಾದ `ಕೃಷ್ಣ ರುಕ್ಮಿಣಿ’ ಸೀರಿಯಲ್ ಮೂಲಕ ಕಿರುತೆರೆ ಜರ್ನಿ ಆರಂಭಿಸಿದರು. ನಂತರ ಡ್ಯಾನ್ಸ್ ರಿಯಾಲಿಟಿ ಶೋ ಡ್ಯಾನ್ಸಿಂಗ್ ಸ್ಟಾರ್‌ನಲ್ಲಿ ಸ್ಪರ್ಧಿಯಾಗಿದ್ದರು.
ಬಿಗ್‌ಬಾಸ್ ಜಿಯೋ ಸಿನಿಮಾಸ್ನಲ್ಲಿ ಪ್ರತಿದಿನ ಲೈವ್ ಪ್ರಸಾರವಾಗುತ್ತಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಮೆಂಟ್ ಮೂಲಕ ತಿಳಿಸಿ