ಬೆಂಗಳೂರು: ಕನ್ನಡ ಬಿಗ್ ಬಾಸ್ ಸೀಸನ್ 10 (BBK SEASON 10) ಈಗಾಲೇ 60 ದಿನಗಳನ್ನು ಪೂರೈಸಿ ಮುನ್ನುಗ್ಗುತ್ತಿದೆ. ಹಲವು ಕಾರಣಗಳಿಂದ ಈ ಬಾರಿಯ ಸ್ಪರ್ಧೆ ವಿಶೇಷವೆನಿಸಿದೆ. ಸ್ಪರ್ಧಿಗಳ ವಿವಾದ, ಕೋಪ-ತಾಪ, ಗೆಳೆತನ, ಜಗಳ ಹೀಗೆ ಹಲವು ಕಾರಣಗಳಿಂದ ಸದ್ದು ಮಾಡುತ್ತಿದೆ. ಅದಕ್ಕೆ ತಕ್ಕಂತೆ ಹಲವು ಟಾಸ್ಕ್‌ಗಳು ವೀಕ್ಷಕರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ. ಹೀಗಾಗಿ ಟಿಆರ್‌ಪಿಯಲ್ಲಿ ಬಿಗ್ ಬಾಸ್ ಟಾಪ್‌ನಲ್ಲಿದೆ.
ಬಿಗ್ ಬಾಸ್ ಪ್ರಾಥಮಿಕ ಶಾಲೆ
ಬಿಗ್ ಬಾಸ್ ಮನೆಯಲ್ಲಿ ಎಲ್ಲೆಂದರಲ್ಲಿ ಸಮವಸ್ತ್ರ ಧರಿಸಿದ ಮಕ್ಕಳು, ಕೈಯಲ್ಲಿ ಬೆತ್ತ ಹಿಡಿದ ಟೀಚರ್, ಕರಿ ಹಲಗೆ, ಆಟದ ಸಾಮಗ್ರಿ…ಇದು ಹೊಸ ಪ್ರೋಮೊದಲ್ಲಿ ಕಂಡು ಬಂದ ಅಶಂಗಳು. ಅರೆ! ಬಿಗ್ ಬಾಸ್ ಮನೆಗೆ ಶಾಲೆ ಮಕ್ಕಳು ಯಾಕೆ ಎಂಟ್ರಿ ಕೊಟ್ರು? ಅವರಿಗೆ ಇಲ್ಲೇನು ಕೆಲಸ ಅಂದುಕೊಳ್ಳಬೇಡಿ. ಇದು ಬಿಗ್ ಬಾಸ್ ನೀಡಿರುವ ಹೊಸ ಟಾಸ್ಕ್. ಅದಕ್ಕೆ ಬಿಗ್ ಬಾಸ್ ಪ್ರಾಥಮಿಕ ಶಾಲೆ ಎಂದು ಹೆಸರಿಡಲಾಗಿದೆ. ತನಿಷಾ ಟೀಚರ್ ಆಗಿ ಬದಲಾದರೆ ಉಳಿದವರೆಲ್ಲ ವಿದ್ಯಾರ್ಥಿಗಳು. ಸ್ಪರ್ಧಿಗಳನ್ನು ಮರಳಿ ಬಾಲ್ಯಕ್ಕೆ ಕರೆದೊಯ್ಯುವ ಈ ಟಾಸ್ಕ್‌ನಲ್ಲಿ ಎಲ್ಲೂ ಖುಷಿಯಿಂದ ಭಾಗವಹಿಸಿರುವುದು ಪ್ರೋಮೊದಲ್ಲಿ ಕಂಡುಬಂದಿದೆ.
ಬಿಗ್ ಬಾಸ್ ಜರ್ನಿ ಮುಗಿಸಿದ ಸ್ನೇಹಿತ್ ಗೌಡ
ಬಿಗ್ ಬಾಸ್ ಮನೆಯಲ್ಲಿ ಕ್ಯಾಪ್ಟನ್ ಆಗಿದ್ದ ಸ್ನೇಹಿತ್ ಗೌಡ ಮನೆಯಿಂದ ಹೊರ ಬಂದಿದ್ದಾರೆ (ಡಿಸೆಂಬರ್ 10). ದೊಡ್ಮನೆಯಿಂದ ಹೊರಡುವ ವೇಳೆ ಭಾವುಕರಾಗಿ ಸ್ನೇಹಿತ್ ಕಣ್ಣೀರು ಹಾಕಿದ್ದು, ಈ ವೇಳೆ ಅವರನ್ನು ನೋಡಿ ಅವರ ಸ್ನೇಹಿತೆ ನಮ್ರತಾ ಗೌಡ ಕೂಡ ಕಣ್ಣೀರಿಟಟ್ಟಿರುವ ಪ್ರಸಂಗ ನಡೆಯಿತು.
ಇದನ್ನೂ ಓದಿ: BBK SEASON 10: ನಮ್ರತಾ ಬಗೆಗಿನ ಆಕರ್ಷಣೆ ನೈಜ! ನ್ಯಾಯವಾಗಿ ಆಡಿದ್ದೇ ಹಿನ್ನಡೆಯಾಯ್ತು!
ನಮ್ರತಾ ಜತೆ ಹೆಚ್ಚು ಕ್ಲೋಸ್ ಆಗಿದ್ದ ಸ್ನೇಹಿತ್, ವಿನಯ್, ಮೈಕಲ್ ಜತೆಗೂ ಆತ್ಮೀಯರಾಗಿದ್ದರು. ಅವರು ಹೊರಡುವ ವೇಳೆ ನಮ್ರತಾ ಕಣ್ಣೀರು ಹಾಕಿದ್ದು, ಅವರನ್ನು ಸ್ನೇಹಿತ್ ಸಮಾಧಾನ ಮಾಡಿದರು. ಹೊರಡುವಾಗ ವಿನಯ್ಗೆ ಗೆದ್ದು ಬನ್ನಿ ಬ್ರೋ ಎಂದು ಹೇಳುತ್ತಾ ಭಾವುಕರಾಗಿ ಸ್ನೇಹಿತ್ ಮನೆಯಿಂದ ಆಚೆ ಬಂದರು. ನಮ್ರತಾ ಜತೆ ಸುತ್ತಾಡಿದ್ದು ಬಿಟ್ಟರೆ ಸ್ನೇಹಿತ್ ಆಟದ ವಿಚಾರದಲ್ಲಿ ಬಹಳಷ್ಟು ಕಡೆ ಎಡವಿದ್ದರು. ಸ್ನೇಹಿತ್ ನಿರ್ಧಾರದಿಂದ ಕ್ಯಾಪ್ಟನ್ ಆಗಿ ಮುಂದೆ ಬರಬೇಕಿದ್ದ ಕಡೆಯಲ್ಲಾ ಎಡವಿದ್ದೇ ಜಾಸ್ತಿ. ಡ್ರೋನ್ ಪ್ರತಾಪ್, ಸಂಗೀತಾ ಕಣ್ಣಿಗೆ ಆದ ಪೆಟ್ಟಿಗೆ ಪರೋಕ್ಷವಾಗಿ ಸ್ನೇಹಿತ್ ಕಾರಣರಾದರು. ಟಾಸ್ಕ್ ನಿಲ್ಲಿಸುವ ಅಧಿಕಾರ ಕೈಯಲ್ಲಿದ್ರೂ, ಮಾತನಾಡುವ ಗೋಜಿಗೆ ಸ್ನೇಹಿತ್ ಹೋಗಲಿಲ್ಲ. ಹೀಗಾಗಿ ಪ್ರೇಕ್ಷಕರು ಕೂಡ ಅಸಮಾಧಾನ ಹೊರಹಾಕಿದ್ದರು. ಇವು ಸ್ನೇಹಿತ್ ಆಟಕ್ಕೆ ಬಿಗ್ ಬಾಸ್ ಬ್ರೇಕ್ ಹಾಕಲು ಕಾರಣವಾಗಿದೆ. ಸದ್ಯ ಸ್ನೇಹಿತ್ ಎಲಿಮಿನೇಷನ್‌ನಿಂದ ವಿನಯ್ ಮತ್ತು ಟೀಂಗೆ ಆಘಾತವಾಗಿದೆ. ಇನ್ನು ಈ ವಾರದ ನಾಮಿನೇಷನ್ ಪಟ್ಟಿಯಲ್ಲಿ ಸಂಗೀತಾ, ಪ್ರತಾಪ್, ಸಿರಿ, ಪವಿ, ಮೈಕಲ್, ವಿನಯ್, ತನಿಷಾ ಇದ್ದಾರೆ. ಈ ವಾರ ಯಾರ ಬಿಗ್ ಬಾಸ್ ಜರ್ನಿ ಅಂತ್ಯವಾಗುತ್ತದೆ ಎನ್ನುವ ಕುತೂಹಲ ಮೂಡಿದೆ.
ಬಿಗ್ಬಾಸ್ ಜಿಯೋ ಸಿನಿಮಾಸ್ನಲ್ಲಿ ಪ್ರತಿದಿನ ಲೈವ್ ಪ್ರಸಾರವಾಗುತ್ತಿದೆ.