Site icon Vistara News

BBK SEASON 10: ಬಿಗ್‌ಬಾಸ್‌ ಮನೆಯೊಳಗೆ ಬಾಕ್ಸಿಂಗ್‌ ಪಂಚ್‌ ಅನ್ನೂ ಮೀರಿಸಿದ ಪಂಚಿಂಗ್ ಡೈಲಾಗ್ಸ್!

vinay prathap

vinay prathap

ಬೆಂಗಳೂರು: ಬಿಗ್‌ಬಾಸ್‌ ಕನ್ನಡ ಸೀಸನ್‌ 10 (BBK SEASON 10) ಫಿನಾಲೆಗೆ ದಿನಗಣನೆ ಆರಂಭವಾಗಿದೆ. ಈ ಬಾರಿ ಯಾರು ಚಾಂಪಿಯನ್‌ ಪಟ್ಟ ಅಲಂಕರಿಸುತ್ತಾರೆ, ಯಾರು ಅಲಂಕರಿಸಬೇಕು ಎನ್ನುವ ಲೆಕ್ಕಾಚಾರ ಜೋರಾಗಿಯೇ ನಡೆಯುತ್ತಿದೆ. ಈ ಮಧ್ಯೆ ವಿನಯ್‌ ಮತ್ತು ಡ್ರೋನ್‌ ಪ್ರತಾಪ್‌ ನಡುವೆ ಮತ್ತೊಮ್ಮೆ ಕಿರಿಕ್‌ ನಡೆದಿದೆ. ಸದ್ಯ ಈ ಕುರಿತಾದ ಪ್ರೋಮೊ ಬಿಡುಗಡೆಯಾಗಿದೆ.

ಬಿಗ್‌ಬಾಸ್‌ ಮನೆಯೊಳಗಿನ ಆರು ಸ್ಪರ್ಧಿಗಳಿಗೆ ತಮ್ಮ ಎದುರಾಳಿಗಳ ಮೇಲಿನ ಆಕ್ರೋಶವನ್ನು ವ್ಯಕ್ತಪಡಿಸುವುದಕ್ಕೆ ಒಂದು ಅವಕಾಶವನ್ನು ನೀಡಿದ್ದಾರೆ. ಎದುರಿಗೆ ಆರು ಪಂಚಿಂಗ್ ಬ್ಯಾಗ್ ಇಟ್ಟು ಅವುಗಳ ಮೇಲೆ ಆರು ಸ್ಪರ್ಧಿಗಳ ಫೋಟೊ ಅಂಟಿಸಲಾಗಿತ್ತು. ಪ್ರತಿ ಸದಸ್ಯರೂ ತಾವು ಆಯ್ಕೆ ಮಾಡಿಕೊಳ್ಳುವ ಒಬ್ಬ ಸ್ಪರ್ಧಿಯ ಎದುರು ನಿಂತುಕೊಂಡು ಆ ಸ್ಪರ್ಧಿಗೆ ಹೇಳಬೇಕೆಂದಿರುವ ಆಕ್ರೋಶದ ಮಾತುಗಳನ್ನು ಹೇಳಿ ಅವರ ಫೋಟೊ ಇರುವ ಬ್ಯಾಗ್‌ಗೆ ಪಂಚ್ ಮಾಡಬೇಕು.

ವಿನಯ್‌ ಅವರು ಸಹಜವಾಗಿಯೇ ಪ್ರತಾಪ್ ಚಿತ್ರವಿರುವ ಬ್ಯಾಗ್ ಎದುರು ನಿಂತಿದ್ದರು. ತಮ್ಮದೇ ಸ್ಟೈಲ್‌ನಲ್ಲಿ ಪ್ರತಾಪ್‌ ಕಡೆಗೆ ಖಡಕ್ ಲುಕ್‌ ಕೊಟ್ಟು, ಸಿನಿಮೀಯವಾಗಿ, ‘ʼಪ್ರತಾಪ್, ನೀನು ನನ್ನ ಬಗ್ಗೆ ಸರಿಯಾಗಿ ಮಾತಾಡುವುದನ್ನು ಕಲಿ. ಇಲ್ಲಾಂದ್ರೆ ಪರಿಣಾಮ ಸರಿಯಾಗಿರಲ್ಲ’ʼ ಎಂದು ಹೇಳಿ ಬಲವಾಗಿ ಪ್ರತಾಪ್ ಫೋಟೊ ಇರುವ ಬ್ಯಾಗ್ ಮೇಲೆ ಪಂಚ್ ಮಾಡಿದ್ದಾರೆ.

ಇದಕ್ಕೆ ಡ್ರೋನ್‌ ಪ್ರತಾಪ್ ಕೊಟ್ಟ ಕೌಂಟರ್ ಇನ್ನೂ ಬಲವಾಗಿತ್ತು! ಹಿಂದೆಲ್ಲ ಹೀಗೆ ತಮ್ಮ ಬಗ್ಗೆ ಆರೋಪ ಬಂದಾಗ ಅವುಗಳಿಗೆ ಉತ್ತರಿಸುವಾಗ ಪ್ರತಾಪ್, ಸಾವಧಾನದಿಂದ ತಮಗೆ ಅನಿಸಿದ್ದನ್ನು ವಿವರಿಸುತ್ತಿದ್ದರು. ಎದುರುಗಡೆಯವರು ಎಷ್ಟೇ ಕಿರುಚಾಡಿದರೂ ತಾಳ್ಮೆ ಕಳೆದುಕೊಳ್ಳದೆ ತಣ್ಣನೆಯ ಧ್ವನಿಯಲ್ಲಿಯೇ ಮಾತನಾಡುತ್ತಿದ್ದರು. ವಿನಯ್ ಜತೆಗಿನ ಜಗಳದಲ್ಲಿ ಕೆಲವೊಮ್ಮೆ ತಾಳ್ಮೆ ಕಳೆದುಕೊಂಡು ಏರುಧ್ವನಿಯಲ್ಲಿ ಕಿರುಚಾಡಿದ್ದೂ ಇತ್ತು. ಆದರೆ ಈಗಿನ ಹಂತದಲ್ಲಿ ಪ್ರತಾಪ್ ಪ್ರತಿಕ್ರಿಯಿಸಿದ್ದು ಅನಿರೀಕ್ಷಿತವಾಗಿತ್ತು. ಈ ಸಲ ಬಹುಶಃ ತಮ್ಮ ಬಿಗ್‌ಬಾಸ್ ಪಯಣದಲ್ಲಿ ಇದೇ ಮೊದಲ ಸಲ ಅವರು ವ್ಯಂಗ್ಯದ ಅಸ್ತ್ರವನ್ನು ಪ್ರಯೋಗಿಸಿದ್ದಾರೆ.

ಕೈಗೆ ಬಾಕ್ಸಿಂಗ್ ಗ್ಲೌಸ್ ತೊಟ್ಟ ಪ್ರತಾಪ್ ಅವರು ವಿನಯ್ ಅವರನ್ನೇ ಇಮಿಟೇಟ್ ಮಾಡಿದ್ದಾರೆ. ʼʼನಿಮ್ಮ ಅರಚಾಟಕ್ಕೆ…. ವೋ ಪ್ರತಾಪ್… ಹೋ ಪ್ರತಾಪ್… ಪ್ರತಾಪ್ ಎಂದರೆ ಇಲ್ಲಿ ಯಾರೂ ಹೆದರಿಕೊಳ್ಳೋರಿಲ್ಲ. ನೀವು ಅತ್ತರೆ ಅದು ಪ್ರೀತಿ… ನಾನು ನನ್ನ ತಂದೆ-ತಾಯಿ ನೆನಪಿಸಿಕೊಂಡು ಅತ್ತರೆ ಅದು ಸಿಂಪತಿ’ʼ ಎಂದು ವ್ಯಂಗ್ಯವಾಗಿ ಹೇಳಿದ್ದಾರೆ.

ಇದನ್ನೂ ಓದಿ: BBK SEASON 10: ಫಿನಾಲೆ ತಲುಪಿರುವ ಸ್ಪರ್ಧಿಗಳಿಗೆ ʻಕಿರಿಕ್ ಕೀರ್ತಿʼ, ʻಜಾಹ್ನವಿʼಯಿಂದ ಪ್ರಶ್ನೆಗಳ ಸುರಿಮಳೆ!

ಆಗ ವಿನಯ್ನೀ ʼʼನೀನು ನನಗೆ ಬುದ್ಧಿವಾದ ಹೇಳಬೇಕಾಗಿಲ್ಲ’ʼ ಎಂದು ತಿರುಗೇಟು ಕೊಟ್ಟಿದ್ದಾರೆ. ಅದಕ್ಕೆ ಪ್ರತಾಪ್, ಭಯವನ್ನು ನಟಿಸುತ್ತ, ʼʼಅಯ್ಯೋ ವಿನಯಣ್ಣ… ಭಯ ಅಣ್ಣ… ನಂಗೆ ಆಗ್ತಾ ಇಲ್ಲ ಅಣ್ಣಾ…ʼʼ ಎಂದು ಮುದುರಿದ ಹಾಗೆ ನಟಿಸಿದ್ದಾರೆ. ʼʼನಿನಗೆ ಹೆದರಿಸೋದಕ್ಕಲ್ಲ ಮರಿ ನಾನು ಹೇಳ್ತಾ ಇರೋದುʼʼ ಎಂದು ವಿನಯ್ ಹೇಳಿದರೆ, ‘ʼಕೇಳಿ ಅಣ್ಣಾ ನಾನ್ಹೇಳ್ತೀನಿ… ಕೇಳಿ… ಕೇಳ್ಬೇಕು ನೀವೀವತ್ತು’ʼ ಎಂದು ಇನ್ನಷ್ಟು ಕೆಣಕಿದ್ದಾರೆ. ಸದ್ಯ ಪ್ರೋಮೊದಲ್ಲಿ ಕಂಡು ಬಂದ ಈ ಝಲಕ್‌ ತುಹೂಲ ಮೂಡಿಸಿದೆ.

ಬಿಗ್​ಬಾಸ್ ಜಿಯೋ ಸಿನಿಮಾಸ್​ನಲ್ಲಿ ಪ್ರತಿದಿನ ಲೈವ್ ಪ್ರಸಾರವಾಗುತ್ತಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಮೆಂಟ್ ಮೂಲಕ ತಿಳಿಸಿ

Exit mobile version