Site icon Vistara News

BBK Season 10: ಯಾರು ಇನ್, ಯಾರು ಔಟ್? ಸ್ಪರ್ಧಿಗಳನ್ನು ಡಿಸೈಡ್‌ ಮಾಡೋದು ಪ್ರೇಕ್ಷಕರು! ಹೊಸ ಪ್ರೋಮೊ ಔಟ್‌!

BBK Season 10

ಬೆಂಗಳೂರು: ಪ್ರೇಕ್ಷಕರು ಕಾತುರದಿಂದ ಕಾಯುತ್ತಿರುವ ಬಿಗ್‌ ಬಾಸ್‌ (BBK Season 10) ಇಂದು(ಅ.9) ಸಂಜೆ ಲಾಂಚ್‌ ಆಗುತ್ತಿದೆ. ಈಗಾಗಲೇ ಕಲರ್ಸ್‌ ಕನ್ನಡ ಈ ಬಾರಿ ಏನೆಲ್ಲ ವಿಶೇಷತೆಗಳಿವೆ ಎಂಬುದನ್ನು ಪ್ರೋಮೊ ಮೂಲಕ ಸುಳಿವು ಬಿಟ್ಟುಕೊಟ್ಟಿದೆ. 16 ಸ್ಪರ್ಧಿಗಳು ಎಂಟ್ರಿ ಕೊಡುತ್ತಾರೆ ಎಂದು ಹೇಳಲಾಗಿತ್ತು. ಆದರೀಗ ಆದರೆ, ಈ ಬಾರಿ ಹತ್ತು ಮಂದಿ ಸ್ಪರ್ಧಿಗಳು ಇರಲಿದ್ದಾರೆ ಎಂಬ ಬಗ್ಗೆ ಸುದೀಪ್ ಸುಳಿವು ಬಿಟ್ಟುಕೊಟ್ಟಿದ್ದಾರೆ. ಪ್ರೋಮೊದಲ್ಲಿ ಸುದೀಪ್‌ ʻಒಂದು ಮನೆ ಒಬ್ಬ ರಾವಣ ಮತ್ತು ಹತ್ತು ತಲೆ ಎಂದು ಹೇಳಿದ್ದಾರೆʼ. ಅಂದರೆ ಈ ಬಾರಿ ಹತ್ತು ಮಂದಿ ಬಿಗ್ ಬಾಗ್ ಮನೆಯೊಳಗೆ ಹೋಗುವುದು ಪಕ್ಕಾ ಆಗಿದೆ.

ಈ ಬಾರಿ ಬಿಗ್‌ ಬಾಸ್‌ ಸ್ಪರ್ಧಿಗಳು ಯಾರು ಎಂಬ ನಿರ್ಧಾರ ಕೂಡ ಪ್ರೇಕ್ಷಕರದ್ದು. ಇದನ್ನೂ ಕೂಡ ವಿಡಿಯೊದಲ್ಲಿಯೇ ಹಂಚಿಕೊಂಡಿದೆ ಕಲರ್ಸ್‌ ಕನ್ನಡ. ಮನೆಯೊಳಗೆ ಯಾರು ಹೋಗಬೇಕು, ಯಾರು ಹೋಗಬಾರದು ಎಂಬುದನ್ನು ಜನರೇ ಡಿಸೈಡ್‌ ಮಾಡುತ್ತಾರೆ. ಅದು ಕೂಡ ವೋಟಿಂಗ್‌ ಮೂಲಕ. ಪ್ರೋಮೊದಲ್ಲಿ ಪ್ರೇಕ್ಷಕರ ಕೈಯಲ್ಲಿ ವೋಟಿಂಗ್‌ ಮಿಷನ್ ಇರುವುದು ಮತ್ತು ಜನ ವೋಟ್ ಮಾಡುತ್ತಿರುವುದನ್ನು ತೋರಿಸಲಾಗಿದೆ. ಈ ಮುಂಚಿನ ಬಿಗ್‌ ಬಾಸ್‌ನಲ್ಲಿ ವಿಜೇತರುಗಳಾದ ನಟಿ ಶೃತಿ, ಪ್ರಥಮ್, ರ‍್ಯಾಪರ್ ಚಂದನ್ ಶೆಟ್ಟಿ ಮತ್ತು ಹಾಸ್ಯ ನಟ ಮಂಜು ಪಾವಗಡ ವೇದಿಕೆ ಮೇಲೆ ಕಾಣಿಸಿಕೊಂಡಿದ್ದಾರೆ.

ಈ ಬಾರಿ 10ನೇ ಸೀಸನ್ ಆಗಿರುವುದರಿಂದ ತುಂಬಾ ಸ್ಪೆಷಲ್ ಎಂದು ಕಲರ್ಸ್ ಕನ್ನಡ ಹೇಳಿದೆ. ಇಂದು ಬಿಗ್‌ ಬಾಸ್‌ ಮನೆಗೆ ಯಾರೆಲ್ಲ ಸ್ಪರ್ಧಿಗಳು ಇರಲಿದ್ದಾರೆ ಎಂಬುದು ರಿವೀಲ್‌ ಆಗಲಿದೆ. .‘777 ಚಾರ್ಲಿ’ ಸಿನಿಮಾದ ಚಾರ್ಲಿ ಈ ಬಾರಿ ಬಿಗ್ ಬಾಸ್ ಮನೆಗೆ ಮೊದಲ ಸ್ಪರ್ಧಿಯಾಗಿ ಎಂಟ್ರಿ ಕೊಡುತ್ತಿರುವುದಂತೂ ಪಕ್ಕಾ ಆಗಿದೆ. ಮೂಲಗಳ ಪ್ರಕಾರ ಉರಗ ಸಂರಕ್ಷಕ ಸ್ನೇಕ್ ಶ್ಯಾಮ್ ಈ ಬಾರಿ ಬಿಗ್‌ಬಾಸ್ ಮನೆಗೆ ಹೋಗುತ್ತಿದ್ದಾರೆ. ಇದೀಗ ಮತ್ತೊಂದಿಷ್ಟು ಹೆಸರುಗಳು ಸೋಷಿಯಲ್‌ ಮೀಡಿಯಾದಲ್ಲಿ ಚರ್ಚೆಯಾಗುತ್ತಿವೆ.

ಇದನ್ನೂ ಓದಿ: BBK Season 10: ಬುಲೆಟ್ ಪ್ರಕಾಶ್ ಪುತ್ರ, ರ‍್ಯಾಪರ್ ಈಶಾನಿ ಒಳಗೊಂಡ ಲಿಸ್ಟ್‌ ಔಟ್‌; ಬಿಗ್‌ ಬಾಸ್‌ಗೆ ಯಾರೆಲ್ಲ ಎಂಟ್ರಿ?

ಇದೀಗ ಬುಲೆಟ್ ಪ್ರಕಾಶ್ ಪುತ್ರ ರಕ್ಷಕ್ ಕೂಡ ಬಿಗ್‌ಬಾಸ್ ಮನೆಗೆ ಈ ಬಾರಿ ಎಂಟ್ರಿ ಕೊಡಲಿದ್ದಾರೆ ಎನ್ನಲಾಗುತ್ತಿದೆ. ಅಷ್ಟೇ ಅಲ್ಲದೇ ನಾಗಿಣಿ ಧಾರಾವಾಹಿ ಖ್ಯಾತಿಯ ನಟಿ ನಮ್ರತಾ ಗೌಡ ,’ಹರ ಹರ ಮಹಾದೇವ್’ ಧಾರಾವಾಹಿ ನಟ ವಿನಯ್ ಗೌಡ, ಮಂಗಳಮುಖಿ ನೀತು ವನಜಾಕ್ಷಿ ಕೂಡ ಈ ಬಾರಿ ಬಿಗ್‌ಬಾಸ್ ಶೋಗೆ ಸ್ಪರ್ಧಿಯಾಗಿ ಹೋಗಿದ್ದಾರೆ ಎನ್ನುವ ಚರ್ಚೆ ನಡೆಯುತ್ತಿದೆ. ನಿರೂಪಕ ಗೌರೀಶ್ ಅಕ್ಕಿ, ಬಿಗ್‌ಬಾಸ್ ಮಿನಿ ಸೀಸನ್ ಸ್ಪರ್ಧಿ ತ್ರಿವಿಕ್ರಮ್, ರ‍್ಯಾಪರ್ ಈಶಾನಿ ಸೇರಿದಂತೆ ಕೆಲವರು ಬಿಗ್‌ಬಾಸ್‌ ಮನೆಗೆ ಹೋಗುತ್ತಾರೆ ಎನ್ನಲಾಗುತ್ತಿದೆ. ಆದರೆ ಈ ಬಗ್ಗೆ ಅಧಿಕೃತ ಮಾಹಿತಿ ಸಿಕ್ಕಿಲ್ಲ.

Exit mobile version