Site icon Vistara News

BBK SEASON 10: ಫೈನಲ್‌ ವೇದಿಕೆ ತಲುಪಲು ಅರ್ಹತೆ ಇಲ್ಲದವರ ಹೆಸರು ಸೂಚಿಸಿದ ಸ್ಪರ್ಧಿಗಳು

biggboss

biggboss

ಬೆಂಗಳೂರು: ಹಲವು ವಿಶೇಷತೆಗಳೊಂದಿಗೆ ಆರಂಭವಾದ ಬಿಗ್‌ಬಾಸ್‌ ಕನ್ನಡ ಸೀಸನ್‌ 10 (BBK SEASON 10) ಕೊನೆಯ ಹಂತಕ್ಕೆ ತಲುಪಿದೆ. ಇನ್ನೇನು ಕೆಲವೇ ದಿನಗಳಲ್ಲಿ ಫೈನಲ್‌ ನಡೆದು ಚಾಂಪಿಯನ್‌ ಯಾರಾಗುತ್ತಾರೆ ಎನ್ನುವ ಕುತೂಹಲಕ್ಕೆ ತೆರೆ ಬೀಳಲಿದೆ. ಇದೀಗ ಈ ವಾರದ ನಾಮಿನೇಷನ್‌ ಪ್ರಕ್ರಿಯೆ ಆರಂಭವಾಗಿದೆ. ಯಾರು, ಯಾರನ್ನು ನಾಮಿನೇಟ್‌ ಮಾಡಿದರು ಎನ್ನುವುದು ಹೊರ ಬಿದ್ದಿರುವ ಹೊಸ ಪ್ರೋಮೊದಲ್ಲಿ ಕಂಡು ಬಂದಿದೆ.

ತನಿಷಾ ಅವರು ನಮ್ರತಾ ಹೆಸರನ್ನು ಸೂಚಿಸಿದರು. ಅದಕ್ಕೆ ಅವರ ಕಾರಣವನ್ನೂ ನೀಡಿ,‌ ʼʼಮತ್ತೆ ನಮ್ರತಾ ಕಂಫರ್ಟ್‌ ಝೋನ್‌ಗೆ ಸೇರ್ಪಡೆಯಾಗುತ್ತಿದ್ದಾರೆʼʼ ಎಂದು ಹೇಳಿದರು.

ಕಾರ್ತಿಕ್‌ ಸೂಚಿಸಿದ್ದು ತನಿಷಾ ಹೆಸರನ್ನು. ʼʼಕೆಲವೊಂದು ಬಾರಿ ತನಿಷಾ ಮಾತನಾಡುವ ವಿಷಯಗಳಲ್ಲಿ ಕ್ಲಾರಿಟಿ ಇರೋದಿಲ್ಲʼʼ ಎಂದು ಕಾರ್ತಿಕ್‌ ತಿಳಿಸಿದರು.

ಡ್ರೋನ್‌ ಪ್ರತಾಪ್‌ ಹೆಸರನ್ನು ಸೂಚಿಸಿದವರು ವಿನಯ್‌ ಗೌಡ. ʼʼಪ್ರತಾಪ್‌ ಬೇಡದ ವಿಷಯಗಳಲ್ಲಿ ಮೂಗು ತೂರಿಸುತ್ತಾರೆ. ತನ್ನನ್ನು ತಾನು ಬಲಿ ಪಶು ಎಂದು ಬಿಂಬಿಸಲು ಯತ್ನಿಸುತ್ತಿದ್ದಾರೆʼʼ ಎಂದು ವಿನಯ್‌ ಗೌಡ ಹೇಳಿದರು.

ಇನ್ನು ಡ್ರೋನ್‌ ಪ್ರತಾಪ್‌ ನಾಮಿನೇಟ್‌ ಮಾಡಿದ್ದು ವಿನಯ್‌ ಗೌಡ ಅವರನ್ನು. ʼʼವಿನಯ್‌ ಅವರ ನಾಲಗೆಗೆ ಲಗಾಮು ಬೀಳದ ಹೊರತು ಅವರಿಗೆ ಮನೆಯಲ್ಲಿ ಇರಲು ಅರ್ಹತೆ ಇಲ್ಲʼʼ ಎಂದು ಕಾರಣ ನೀಡಿದರು. ಒಟ್ಟಿನಲ್ಲಿ ನಾಮಿನೇಷನ್‌ ವಿಚಾರದಲ್ಲಿ ಮತ್ತೊಮ್ಮೆ ಮನೆಯೊಳಗೆ ಅಸಮಾಧಾನ ಹೊಗೆಯಾಡುವ ಎಲ್ಲ ಲಕ್ಷಣ ಕಂಡು ಬಂದಿದೆ.

ಕಳೆದ ವಾರ ಹೊರ ಬಂದಿದ್ದ ಮೈಕಲ್‌

ಕಳೆದ ವಾರ ಮೈಕಲ್ ಅಜಯ್ ಬಿಗ್‌ಬಾಸ್‌ ಮನೆಯಿಂದ ಹೊರ ಬಂದಿದ್ದರು. ಕಾರ್ತಿಕ್ ಮಹೇಶ್‌, ವರ್ತೂರು ಸಂತೋಷ್, ಮೈಕಲ್, ತುಕಾಲಿ ಸಂತು, ಡ್ರೋನ್ ಪ್ರತಾಪ್ ನಾಮಿನೇಟ್ ಆಗಿದ್ದರು. ಕೊನೆಯಲ್ಲಿ ಮೈಕಲ್ ತಮ್ಮ ಆಟವನ್ನು ಅಂತ್ಯಗೊಳಿಸಬೇಕಾಯಿತು. ವೀಕ್ಷಕರಿಂದ ಕಡಿಮೆ ವೋಟ್​ ಪಡೆದ ಮೈಕಲ್ ಅವರನ್ನು ಶೋನಿಂದ ಎಲಿಮಿನೇಟ್ ಮಾಡಲಾಯಿತು.

ಇದನ್ನೂ ಓದಿ: BBK SEASON 10:  ಎಲ್ಲರಿಗೂ ಮಂಕು ಬೂದಿ ಎರಚಿಕೊಂಡು ಇಲ್ಲೇ ಇದ್ದಾನೆ; ಪ್ರತಾಪ್‌ ಮೇಲೆ ವಿನಯ್‌ ಕೆಂಡ!

ಮಾಡೆಲ್ ಆಗಿ ಬಿಗ್ ಬಾಸ್ ಮನೆಗೆ ಕಾಲಿಟ್ಟ ಮೈಕಲ್ ಕನ್ನಡ ಕಲಿತು ಕನ್ನಡದ ಕಂದ ಎನಿಸಿಕೊಂಡಿದ್ದರು. ಶೋದಿಂದಾಗಿಯೇ ಕನ್ನಡ ಕಲಿತೆ ಎಂಬುದಾಗಿ ಹೆಮ್ಮೆಯಿಂದ ಹೇಳಿಕೊಂಡಿದ್ದ ಮೈಕಲ್​ ಇಶಾನಿ ಜತೆಗಿನ ಸಲುಗೆಯಿಂದಾಗಿ ಇನ್ನಷ್ಟು ಖ್ಯಾತಿ ಪಡೆದುಕೊಂಡಿದ್ದರು. ಮೊದಲ 6 ವಾರಗಳ ಕಾಲ ಮೈಕಲ್ ಉತ್ತಮವಾಗಿ ಆಡಿದ್ದರು. ಆದರೆ ಇತ್ತೀಚಿನ ದಿನಗಳಲ್ಲಿ ಮೈಕಲ್ ವರ್ತನೆ ಬದಲಾಗಿತ್ತು. ಬಿಗ್ ಬಾಸ್ ಆದೇಶಕ್ಕೆ ಮತ್ತು ಕ್ಯಾಪ್ಟನ್ ಸೂಚನೆಗೆ ಗೌರವ ಕೊಡದೇ ಧಿಮಾಕಿನ ವರ್ತನೆ ತೋರಿದ್ದರು. ಇದೇ ಕಾರಣಕ್ಕೆ ಶನಿವಾರ ಎಪಿಸೋಡ್‌ನಲ್ಲಿ ಸುದೀಪ್ ಬೆಂಡೆತ್ತಿದ್ದರು. ನನಗೆ ರೂಲ್ಸ್ ಫಾಲೋ ಮಾಡಿ ಅಭ್ಯಾಸ ಇಲ್ಲ ಎಂದು ಹೇಳಿ ಮೈಕಲ್ ಆಟಕ್ಕೆ ಬಿಗ್‌ಬಾಸ್‌ ಬ್ರೇಕ್ ಹಾಕಿದ್ದಾರೆ. ಈ ಮೂಲಕ ವಿನಯ್‌ ಟೀಮ್‌ನಲ್ಲಿ ಗುರುತಿಸಿಕೊಂಡಿದ್ದ ಮತ್ತೊಬ್ಬರು ಹೊರ ಬಂದಂತಾಗಿದೆ. ಎಲಿಮಿನೇಟ್ ಆಗಿ ಮನೆಯಿಂದ ಆಚೆ ಹೋಗುವಾಗ ಮೈಕಲ್‌ಗೆ ಬಿಗ್‌ಬಾಸ್ ಒಂದು ಅಧಿಕಾರ ಕೊಟ್ಟಿದ್ದರು. ಮುಂದಿನ ವಾರ ಟಾಸ್ಕ್‌ಗಳಲ್ಲಿ ಒಬ್ಬರಿಗೆ ಅಡ್ವಾಂಟೇಜ್‌ ನೀಡಬಹುದು ಎಂದು ಹೇಳಿದರು. ಮೈಕಲ್ ತಕ್ಷಣ ವಿನಯ್ ಹೆಸರು ಸೂಚಿಸಿದ್ದರು.

ಬಿಗ್​ಬಾಸ್ ಜಿಯೋ ಸಿನಿಮಾಸ್​ನಲ್ಲಿ ಪ್ರತಿದಿನ ಲೈವ್ ಪ್ರಸಾರವಾಗುತ್ತಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಮೆಂಟ್ ಮೂಲಕ ತಿಳಿಸಿ

Exit mobile version