Site icon Vistara News

BBK Season 10: ಹೊಸ ಟಾಸ್ಕ್‌ಗಳಿಗೆ ಪ್ರೇಕ್ಷಕರು ಖುಷ್‌; ಕಾರ್ತಿಕ್‌-ವಿನಯ್‌ ಕುಚಿಕು ಫ್ರೆಂಡ್ಸ್!

BBK Season 10 New task

ಬೆಂಗಳೂರು: ಮನೆಯಲ್ಲಿ (BBK season 10) ಕ್ಯಾಪ್ಟನ್‌ ಟಾಸ್ಕ್‌ ಇತ್ತು. ಈ ಬಾರಿ ಓರ್ವ ಮಹಿಳೆ ಕ್ಯಾಪ್ಟನ್ ಆಗಲಿ ಅಂತ ಮನೆಯವರೆಲ್ಲರೂ ಅಂದುಕೊಂಡಿದ್ದರು. ಪುರುಷ ಸ್ಪರ್ಧಿಗಳೆಲ್ಲ ಸೇರಿಕೊಂಡು ಇಬ್ಬರು ಮಹಿಳಾ ಸ್ಪರ್ಧಿಗಳನ್ನು ಆಯ್ಕೆ ಮಾಡಿಕೊಳ್ಳಬೇಕಿತ್ತು. ತನಿಷಾ ಕುಪ್ಪಂಡ, ನಮ್ರತಾ ಗೌಡ ಅವರನ್ನು ಆಯ್ಕೆ ಮಾಡಿದರು. ಒಂದು ತಂಡಕ್ಕೆ ತನಿಷಾ ಕ್ಯಾಪ್ಟನ್. ಮತ್ತೊಂದು ತಂಡಕ್ಕೆ ನಮ್ರತಾ ಕ್ಯಾಪ್ಟನ್. ಎರಡೂ ತಂಡದವರ ಮಧ್ಯೆ ಸಖತ್ ಕಾಂಪಿಟೇಶನ್ ಇತ್ತು. ಆದರೆ ಗೆದ್ದಿದ್ದು ಮಾತ್ರ ʻಉಗ್ರಂʼ ತಂಡ.

ಏನದು ಟಾಸ್ಕ್‌?

ನಮ್ರತಾ ಟೀಂ ನಲ್ಲಿ ರಕ್ಷಕ್‌, ಕಾರ್ತಿಕ್‌, ವಿನಯ್‌, ಸಿರಿ, ಸಂಗೀತಾ, ಭಾಗ್ಯಶ್ರೀ ಇದ್ದರೆ, ತನಿಷಾ ತಂಡದಲ್ಲಿ ʻʻಪ್ರತಾಪ್‌, ಮೈಕಲ್‌, ತುಕಾಲಿ ಸಂತು, ಸ್ನೇಹಿತ್‌, ಇಶಾನಿ, ನೀತು. ಇದ್ದರು. ಈ ವಾರ ಪ್ರತಿ ಟಾಸ್ಕ್‌ನ ಸೋಲು ಹಾಗೂ ಗೆಲುವು ಆಯಾ ತಂಡದ ಮೇಲೆ ನೇರವಾಗಿ ಪರಿಣಾಮ ಬೀಳುತ್ತದೆ. ʻಉಗ್ರಂʼ ನಮ್ರತಾ ತಂಡವಾದರೆ, ʻಭಜರಂಗಿʼ ತಂಡ ತನಿಷಾ ಅವರದ್ದಾಗಿತ್ತು. ಈ ಎರಡು ತಂಡಗಳಿಗೆ ಈಗ ಬಿಗ್‌ ಬಾಸ್‌ ಟಾಸ್ಕ್‌ ಒಂದನ್ನು ನೀಡಿದ್ದರು.

ಅದುವೇ ʻಡಬ್ಬದ ಮೇಲೆ ಹಬ್ಬʼ, ಇದರ ಅನುಸಾರ ಪ್ರತಿ ತಂಡದ ಒಬ್ಬ ಸದಸ್ಯ ಮರದ ಡೊಡ್ಡ ಡಬ್ಬದ ಮೇಲೆ ನಿಲ್ಲಬೇಕು. ಇಬ್ಬರು ಸದಸ್ಯರು ಈ ಡಬ್ಬವನ್ನು ತಮ್ಮ ತಂಡಕ್ಕೆ ಮೀಸಲಿರುವ ದಾರಿಯ ಆರಂಭಿಕ ಸ್ಥಾನದಿಂದ ಅಂತಿಮ ಸ್ಥಾನದತ್ತ ಉರುಳಿಸುತ್ತ ಸಾಗಬೇಕು. ಈ ಸಂದರ್ಭದಲ್ಲಿ ಡಬ್ಬದ ಮೇಲಿರುವ ಸದಸ್ಯ ಕಳೆಗೆ ಬೀಳದಂತೆ ತನ್ನನ್ನು ನೋಡಿಕೊಳ್ಳಬೇಕು. ಹಾದಿಯಲ್ಲಿ ಸಿಗುವ ರಿಂಗ್‌ವನ್ನು ಒಂದು ಎತ್ತಿಕೊಂಡು ಅಂತಿಮ ಸ್ಥಾನದಲ್ಲಿರುವ ಗೆರೆಯನ್ನು ದಾಟಿದ ನಂತರ ನಾಲ್ಕು ರಿಂಗ್‌ವನ್ನು ಮೊದಲು ಕೊಂಡಿಗೆ ಸಿಕ್ಕಿಸುವ ತಂಡ ಗೆಲ್ಲುತ್ತದೆ. ಗೆಲ್ಲುವ ತಂಡ ಎದುರಾಳಿಯ ತಂಡದ ಒಬ್ಬ ಸದಸ್ಯನನ್ನು ಹೊರಗೆ ಹಾಕುವ ಅಧಿಕಾರ ಪಡೆಯುತ್ತದೆ.

ಇದನ್ನೂ ಓದಿ: BBK Season 10: ಇಡೀ ಕರ್ನಾಟಕ ನಮ್ಮಿಬ್ಬರನ್ನು ಲಿಂಕಪ್ ಮಾಡುತ್ತೆ ಅಂದಿದ್ಯಾಕೆ ಸಂಗೀತಾ?

ಭಜರಂಗಿ ಎದುರು ಗೆದ್ದ ಉಗ್ರಂ

ʻಡಬ್ಬದ ಮೇಲೆ ಹಬ್ಬʼ, ಟಾಸ್ಕ್‌ನಲ್ಲಿ ಉಗ್ರಂ ತಂಡ ಅಂದರೆ ಅಮ್ರತಾ ಟೀಂ ವಿನ್‌ ಆಯ್ತು. ನಿಯಮದಂತೆ ಎದುರಾಳಿ ತಂಡದಿಂದ ಮೈಕಲ್‌ ಅವರನ್ನು ಹೊರಗೆ ಹಾಕಿತು. ಇನ್ನೊಂದು ಟಾಸ್ಕ್‌ ಕೂಡ ಬಿಗ್‌ ಬಾಸ್‌ ನೀಡಿತ್ತು. ಈ ಟಾಸ್ಕ್‌ ಮೂಲಕ ತಂಡದಿಂದ ಹೊರಗಿರುವ ಸದಸ್ಯನ್ನು ಒಳಗೆ ಕರೆದುಕೊಳ್ಳಬಹುದು. ಪ್ರತಿ ತಂಡದಿಂದ ಒಬ್ಬ ಸದಸ್ಯ ಉಸ್ತುವಾರಿವಹಿಸಿ, ʻಓ ಮೈ ಸಾಕ್ಸ್‌ ʼ ಟಾಸ್ಕ್‌ನಲ್ಲಿ ತಮಗೆ ಮೀಸಲಿರುವ ಚೌಕಟ್ಟಿನ ಒಳಗೆ ನೆಲದ ಮೇಲೆ ಮೇಲ್ಮುಖವಾಗಿ ಮಲಗಿ ತಮ್ಮ ಪಾದಗಳಿಂದ ನೀರಿನ ಟಬ್ಬನ್ನು ಮೇಲಕ್ಕೆ ಎತ್ತಿಟ್ಟುಕೊಳ್ಳಬೇಕು. ಟಬ್‌ವನ್ನು ಸಂಬಾಳಿಸುತ್ತ ಕಾಲಿನಿಂದ ಸಾಕ್ಸ್‌ ತೆಗೆಯಬೇಕು. ಈ ಟಾಸ್ಕ್‌ನಲ್ಲಿಯೂ ಉಗ್ರಂ ಗೆದ್ದಿದೆ. ಎರಡನೇ ಟಾಸ್ಕ್ ಗೆದ್ದಾಗ ಬುದ್ದಿವಂತ ಎನಿಸಿಕೊಂಡಿರುವ ಸ್ನೇಹಿತ್‌ನನ್ನು ಹೊರಗೆ ಇಟ್ಟರು. ಹೀಗಾಗಿ ಎರಡೂ ಟಾಸ್ಕ್‌ನಲ್ಲಿ ಅಮ್ರತಾ ತಂಡ ಗೆದ್ದಿದೆ.

ಈ ವಾರ ಬಿಗ್‌ ಬಾಸ್‌ನಲ್ಲಿ ಸದಸ್ಯರು ಒಟ್ಟಾಗಿ ಟಾಸ್ಕ್‌ಗಳಲ್ಲಿ ತಲ್ಲೀನನಾರಿದ್ದರು. ವಿನಯ್‌ ಯಾವಾಗಲೂ ಸೀರಿಯೆಸ್‌ ಇದ್ದ ವ್ಯಕ್ತಿ ಈ ವಾರ ಫುಲ್‌ ಮಜವಾಗಿದ್ದರು. ಕಾರ್ತಿಕ್‌ ಕೂಡ ಸಂಗೀತಾ ಹಿಂದೆ ಹೋಗುವುದು ಕಡಿಮೆ ಮಾಡಿದ್ದಾರೆ. ಇವತ್ತಿನ ಟೀಂನ ಎರಡು ಗೆಲುವು ಇಬ್ಬರಲ್ಲೂ ಹೊಸದೊಂದು ಬದಲಾವಣೆ ತಂದಿತ್ತು. ವಿನಯ್ ಮತ್ತು ಕಾರ್ತಿಕ್ ಫುಲ್ ಖುಷಿಯಾಗಿದ್ದರು.

ಬಿಗ್​ಬಾಸ್ ಕನ್ನಡ ಕಲರ್ಸ್ ವಾಹಿನಿಯಲ್ಲಿ ಪ್ರತಿರಾತ್ರಿ 9:30ಕ್ಕೆ ಹಾಗೂ ಜಿಯೋ ಸಿನಿಮಾಸ್​ನಲ್ಲಿ ಪ್ರತಿದಿನ ಲೈವ್ ಪ್ರಸಾರವಾಗುತ್ತಿದೆ.

Exit mobile version