Site icon Vistara News

BBK SEASON 10: ಪರಸ್ಪರ ಮಸಿ ಬಳಿದುಕೊಂಡ ಸ್ಪರ್ಧಿಗಳು; ಬಿಗ್‌ಬಾಸ್‌ ಮನೆಯಲ್ಲಿ ಕಾವೇರಿದ ವಾತಾವರಣ

biggboss 19

biggboss 19

ಬೆಂಗಳೂರು: ಹಲವು ವಿಶೇಷತೆಗಳೊಂದಿಗೆ ಆರಂಭವಾದ ಬಿಗ್‌ಬಾಸ್‌ ಕನ್ನಡ ಸೀಸನ್‌ 10 (BBK SEASON 10) ಕುತೂಹಲಕರ ಘಟ್ಟ ತಲುಪಿದೆ. ಬಿಗ್‌ಬಾಸ್‌ ಮನೆಯಲ್ಲಿ ಸ್ಪರ್ಧಿಗಳು ಈಗಾಗಲೇ 60ಕ್ಕಿಂತಲೂ ಹೆಚ್ಚು ದಿನ ಕಳೆದಿದ್ದಾರೆ. ದಿನದಿಂದ ದಿನಕ್ಕೆ ಸ್ಪರ್ಧೆಯ ಕಾವು ಹೆಚ್ಚಾಗುತ್ತಿದೆ. ಇದೀಗ ಹೊರ ಬಿದ್ದಿರುವ ಪ್ರೋಮೊದಲ್ಲಿ ಸ್ಪರ್ಧಿಗಳು ಪರಸ್ಪರ ಮಸಿ ಬಳಿದುಕೊಂಡಿರುವುದು ಕಂಡು ಬಂದಿದೆ. ಕಳೆದ ವಾರ ಪ್ರಾಥಮಿಕ ಶಾಲೆಯ ಟಾಸ್ಕ್‌ನಲ್ಲಿ ಸ್ಪರ್ಧಿಗಳನ್ನು ಬಾಲ್ಯಕ್ಕೆ ಕರೆದೊಯ್ದಿದ್ದ ಬಿಗ್‌ಬಾಸ್‌ ಈ ಬಾರಿ ಗಂಭೀರ ಟಾಸ್ಕ್‌ ಕೊಟ್ಟಿದ್ದಾರೆ.

ಈ ವಾರದ ನಾಮಿನೇಷನ್‌ ಪ್ರಕ್ರಿಯೆ ಕಿಚ್ಚು ಹಚ್ಚುವಂತಿದೆ. ಅಂದೆ ನಾಮಿನೇಟ್‌ ಆಗುವ ವ್ಯಕ್ತಿಯನ್ನು ಕುರ್ಚಿ ಮೇಲೆ ಕೂರಿಸಿ ಅವರ ಮೇಲೆ ಮಸಿ ನೀರನ್ನು ಎರೆಯಬೇಕು. ʼʼಕುರ್ಚಿಯಲ್ಲಿ ಕುಳಿತಿರುವ ಸದಸ್ಯ ನಾಮಿನೇಟ್‌ ಆಗಬೇಕು ಎಂದು ಬಯಸಿದರೆ ನಾಮಿನೇಟೆಡ್‌ ಎನ್ನುವ ಫಲಕವನ್ನು ಎತ್ತಿ ಹಿಡಿಯಬೇಕು. ಬಳಿಕ ಅದಕ್ಕೆ ಸೂಕ್ತ ಕಾರಣ ನೀಡಿ ಅವರ ಮೇಲೆ ಮಸಿ ನೀರನ್ನು ಸುರಿಯಬೇಕುʼʼ ಎಂದು ಬಿಗ್‌ಬಾಸ್‌ ಸೂಚಿಸಿದ್ದಾರೆ.

ಅದರಂತೆ ಡ್ರೋನ್‌ ಪ್ರತಾಪ್‌ ಮೇಲೆ ಮಸಿ ನೀರನ್ನು ಸುರಿಯಲಾಯಿತು. ಇದಕ್ಕೆ ವಿನಯ್‌ ಕಾರಣ ನೀಡಿ, ʼʼಪ್ರತಾಪ್‌ ಇದೀಗ ಇದ್ದಕ್ಕಿದ್ದಂತೆ ಹಳ್ಳಿ ಹುಡುಗ ಎನ್ನುವ ಫ್ಲೇವರ್‌ ಇಟ್ಟುಕೊಂಡು ಆಟ ಆಡುತ್ತಿದ್ದಾರೆʼʼ ಎಂದು ಆರೋಪಿಸಿದ್ದಾರೆ. ಇನ್ನು ಕಾರ್ತಿಕ್‌ ಅವರನ್ನು ನಾಮಿನೇಟ್‌ ಮಾಡಿದ ಮೈಕಲ್‌ ಅದಕ್ಕೆ ಕಾರಣ ನೀಡಿ, ʼʼಕಾರ್ತಿಕ್‌ ಫೇಕ್‌ ಫ್ರೆಂಡ್‌ಶಿಪ್‌ನಲ್ಲಿ ಲಾಕ್‌ ಆಗಿದ್ದಾರೆʼʼ ಎಂದು ಹೇಳಿದ್ದಾರೆ. ಇನ್ನು ಮೈಕಲ್‌ ಅವರನ್ನು ನಾಮಿನೇಟ್‌ ಮಾಡಿದ ಕಾರ್ತಿಕ್‌, ʼʼಮೈಕಲ್‌ಗೆ ಸೂಕ್ತ ಕಾರಣ ನೀಡಲು ಬರುತ್ತಿಲ್ಲ. ಇಂತಹ ವ್ಯಕ್ತಿಗಳು ಬಿಗ್‌ಬಾಸ್‌ನಲ್ಲಿ ಇರಲು ಅರ್ಹರಲ್ಲʼʼ ಎಂದು ಹೇಳಿ ಮಸಿ ನೀರು ಸುರಿದಿದ್ದಾರೆ. ಸದ್ಯ ಹೊರಬಂದಿರುವ ಈ ಪ್ರೋಮೊ ನಾಮಿನೇಷನ್‌ ವಿಚಾರದಲ್ಲಿ ಮನೆಯೊಳಗೆ ದೊಡ್ಡ ಕೋಲಾಹಲವೇ ನಡೆಯುವ ಸೂಚನೆ ನೀಡಿದೆ.

ಇದನ್ನೂ ಓದಿ: BBK SEASON 10: ʻಬಿಗ್‌ಬಾಸ್‌ʼ ಈಗ ನ್ಯೂಸ್‌ ರೂಮ್; ಜೋರಾಗಿದೆ ಡಿಸ್ಕಷನ್‌!

ಮನೆಯಿಂದ ಹೊರಬಂದ ಪವಿ ಪೂವಪ್ಪ

ವೈಲ್ಡ್‌ ಕಾರ್ಡ್‌ ಮೂಲಕ ಬಿಗ್‌ಬಾಸ್‌ ಮನೆಯೊಳಗೆ ಆಗಮಿಸಿದ್ದ ಮಾಡೆಲ್‌ ಪವಿ ಪೂವಪ್ಪ ಮೂರೇ ವಾರಕ್ಕೆ ಆಟ ಮುಗಿಸಿದ್ದಾರೆ. ಕಳೆದ ವಾರ ಅವು ದೊಡ್ಮನೆಯಿಂದ ಹೊರಬಂದಿದ್ದಾರೆ. ಈ ಮೂರು ವಾರಗಳಲ್ಲಿ ಒಂದು ವಾರ ಬಿಟ್ಟು ಉಳಿದ ವಾರಗಳಲ್ಲಿ ಪವಿ ಪೂವಪ್ಪ ನಾಮಿನೇಟ್‌ ಆಗಿದ್ದರು. ಪವಿ ಪೂವಪ್ಪ ಕೊಡಗು ಮೂಲದ ರೂಪದರ್ಶಿ ಆಗಿದ್ದು, ಬೋಲ್ಡ್ ಫೋಟೋಶೂಟ್ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಗಮನ ಸೆಳೆದಿದ್ದಾರೆ. ಇವರು ಬಿಗ್‌ ಬಾಸ್‌ಗೆ ಎಂಟ್ರಿ ನೀಡುತ್ತಲೇ ಅವರ ಬೋಲ್ಡ್‌ ಫೋಟೊಗಳು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದ್ದವು. ಪಾನಿಕುಟ್ಟೀರ ಪವಿತ್ರ ಪೂವಪ್ಪ ಇವರ ಪೂರ್ತಿ ಹೆಸರು ಆಗಿದ್ದು, 10 ವರ್ಷಗಳಿಂದ ಮಾಡೆಲಿಂಗ್ ಮಾಡುತ್ತಿದ್ದಾರೆ. ಉನ್ನತ ಬ್ರ್ಯಾಂಡ್‌ಗಳಿಗೆ ಮಾಡೆಲಿಂಗ್‌ ಮಾಡಿರುವ ಇವರು, ಸನ್‌ಲೈಫ್‌ನಲ್ಲಿ ಪ್ರಸಾರವಾಗುವ ದೂರದರ್ಶನ ರಿಯಾಲಿಟಿ ಶೋ “ಸೊಪ್ಪನ ಸುಂದರಿ” ಯ ಸ್ಪರ್ಧಿಗಳಲ್ಲಿ ಒಬ್ಬರಾಗಿದ್ದಾರೆ.

ಬಿಗ್​ಬಾಸ್ ಜಿಯೋ ಸಿನಿಮಾಸ್​ನಲ್ಲಿ ಪ್ರತಿದಿನ ಲೈವ್ ಪ್ರಸಾರವಾಗುತ್ತಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಮೆಂಟ್ ಮೂಲಕ ತಿಳಿಸಿ

Exit mobile version