ಬೆಂಗಳೂರು: ನಾಲ್ಕು ದಿನಗಳ ಹಿಂದೆಯಷ್ಟೇ ಬಿಗ್ ಬಾಸ್ ಸೀಸನ್ 10 (BBK Season 10) ಶುರುವಾಗಿದೆ. ಇದೀಗ ಬಿಗ್ ಬಾಸ್ ಸೀಸನ್ 4ರ ವಿಜೇತ ಒಳ್ಳೆ ಹುಡುಗ ಪ್ರಥಮ್ ಎಂಟ್ರಿ ಕೊಟ್ಟಿದ್ದಾರೆ. ಲಾರ್ಡ್ ಪ್ರಥಮ್ ಆಗಿ ಇನ್ ಚಾರ್ಚ್ ತೆಗೆದುಕೊಂಡಿದ್ದಾರೆ. ಇದೀಗ ಪ್ರಥಮ್ ಬರುತ್ತಲೇ ʻʻನಾನು ನಿಮ್ಮ ಜತೆ ಬಿಗ್ ಬಾಸ್ ಆಟ ಆಡೋಕೆ ಬಂದಿಲ್ಲ. ಟಾಸ್ಕ್ ಮಾಡಿಸೋಕೆ ಬಂದಿದ್ದೇನೆʼʼಎಂದು ತುಕಾಲಿ ಸಂತೋಷ್‌ಗೆ ವಾರ್ನಿಂಗ್ ಕೊಡವಂತಿದೆ. ಇದೀಗ ಈ ಪ್ರೋಮೊವನ್ನು ಕಲರ್ಸ್ ಕನ್ನಡ ವಾಹಿನಿ ಶೇರ್ ಮಾಡಿಕೊಂಡಿದೆ.
ಪ್ರೋಮೊದಲ್ಲಿ ಪ್ರಥಮ್ ಸಖತ್ ಸ್ಟ್ರಿಕ್ಟ್ ಆಗಿ ಬಂದಿದ್ದಾರೆ. ʻʻತಲೆ ಬಗ್ಗಿಸಿ. ಗುರಾಯಿಸಬೇಡಿ. ಎಲ್ಲರೂ ಒಂದ ಸಲ ಜೋರಾಗಿ ಚಪ್ಪಾಳೆ ಹೊಡೀರಿ. ಈ ಚಪ್ಪಾಳೆ ಯಾಕೆ ಅಂದರೆ ನಾನು ಈ ಸೀಸನ್‌ಗೆ ಬಂದಿದ್ದೀನಿ. ನನಗೆ ಚಪ್ಪಾಳೆ ಇದುʼʼಎಂದು ಹೇಳಿದ್ದಾರೆ. ಉಳಿದ ಎಲ್ಲ ಸ್ಪರ್ಧಿಗಳು ಕೂಡ ‘ನ್ಯಾಯ ಅಂದರೆ ಪ್ರಥಮ್, ಪ್ರಥಮ್ ಅಂದರೆ ನ್ಯಾಯ’ ಎಂದು ಹೇಳಿದ್ದಾರೆ.
ಪ್ರಥಮ್ ಬಂದ ಕೂಡಲೇ ಬಿಗ್ ಬಾಸ್ ಪ್ರೇಕ್ಷಕರು ಕಮೆಂಟ್ ಮಾಡಿ ʻʻಈ ಸೀಸನ್ ನಿಜವಾಗ್ಲೂ ಹಬ್ಬಾನೆʼʼಎಂದು ಬರೆದುಕೊಂಡಿದ್ದಾರೆ. ಇನ್ನೊಬ್ಬರು ʻʻಈ ಬಿಗ್ ಬಾಸ್ ಹುಚ್ಚು ಹಿಡಿಸಿದ್ದೆ ಈ ಲಾರ್ಡ್ ಪ್ರಥಮ್ʼʼಎಂದು ಬರೆದುಕೊಂಡಿದ್ದಾರೆ. ʻಪ್ರಥಮ್ ಅಂದ್ರೆ ನ್ಯಾಯ, ನ್ಯಾಯ ಅಂದ್ರೆ ಪ್ರಥಮ್ʼʼಎಂದು ಇನ್ನೊಬ್ಬರು ಕಮೆಂಟ್ ಮಾಡಿದ್ದಾರೆ.
ಮತ್ತೊಬ್ಬರು ʻʻಕಳೆದ ಎಲ್ಲಾ ಸೀಸನ್ “ಬಿಗ್ ಬಾಸ್” ಅಲ್ಲಿ ಒಂದು ಗಂಭೀರ್ಯ ಇತ್ತು. ಮಾತು ಬೆಳ್ಳಿ ಮೌನ ಬಂಗಾರ ಎನ್ನುವ ಹಾಗೆ. ಎಷ್ಟು ಬೇಕೋ ಅಷ್ಟೇ ಮಾತನಾಡುತ್ತ, ಗಂಭೀರವಾಗಿ ಇದ್ದ ಬಿಗ್ ಬಾಸ್ ಈ ಬಾರಿ ತಮಾಷೆ ಮಾಡಿದಲ್ಲದೆ ಟಾಸ್ಕ್ ನಡೆಯುವಾಗ ಸಹ ಸ್ಪರ್ಧಿಗಳ ಜತೆಗೆ ಅದರಲ್ಲಿಯೂ ನಮ್ರತಾ ಕಣ್ಣೀರು ಹಾಕಿದ್ದಾಗ ಅತಿಯಾಗಿ ಸಮಾಧಾನ ಪಡಿಸಿದ ರೀತಿ ಇದೆಲ್ಲ ಅತೀ ಎಂದೇ ಅನಿಸಿತು!! “ಬಿಗ್ ಬಾಸ್” ಎಂದರೆ ಗಂಭೀರವಾಗಿ ಅರ್ಥಗರ್ಭಿತವಾಗಿ ಮಾತನಾಡುತ್ತಾರೆ ಎನ್ನುವುದು ಇಷ್ಟರವರೆಗಿನ ಅಭಿಪ್ರಾಯ ಅದು ಇನ್ನು ಮುಂದಕ್ಕೆ ಹಾಗೆ ಇರಲಿ ಯಾವುದೇ ಬದಲಾವಣೆ ಬೇಡʼʼಎಂತಲೂ ಕಮೆಂಟ್ ಮಾಡಿದ್ದಾರೆ.
ಇದನ್ನೂ ಓದಿ: BBK Season 10: ನಮ್ರತಾ ಸ್ಮೈಲ್‌ಗೆ ಬಿಗ್ ಬಾಸೇ ಫಿದಾ; ನಾಚಿದ ಸ್ಪರ್ಧಿ ಫಸ್ಟ್ ಫ್ಲರ್ಟ್ ಬಗ್ಗೆ ಬಾಯ್ಬಿಟ್ಟಳು!
ಪ್ರಥಮ್‌ಗೂ ಮುಂಚೆ ಶಾಸಕರಾದ ಪ್ರದೀಪ್ ಈಶ್ವರ್ ಮನೆಗೆ ಎಂಟ್ರಿ ಕೊಟ್ಟಿದ್ದರು. ಇದು ಭಾರೀ ಚರ್ಚೆ ಹುಟ್ಟು ಹಾಕಿತ್ತು. ಅತಿಥಿಯಾಗಿ ದೊಡ್ಮನೆ ಪ್ರವೇಶಿಸಿದ್ದ ಪ್ರದೀಪ್ ಈಶ್ವರ್ ಕೆಲ ಗಂಟೆ ಮನೆಯಲ್ಲಿದ್ದು ಹೊರಬಂದಿದ್ದರು.