ಬೆಂಗಳೂರು: ಬಿಗ್ ಬಾಸ್ ಸೀಸನ್ 10ರಲ್ಲಿ (BBK Season 10: ) ಎರಡನೇ ವಾರದ ಟಾಸ್ಕ್‌ಗಳು ಮುಗಿದಿದ್ದು ಕ್ಯಾಪ್ಟನ್ ಕೂಡ ಆಯ್ಕೆಯಾಗಿದ್ದಾರೆ. ಈ ವಾರ ರಕ್ಷಕ್ ಬುಲೆಟ್ ಮನೆಯ ಕ್ಯಾಪ್ಟನ್ ಆದರು. ಮನೆಗೆ ಎಂಟ್ರಿ ಕೊಡುತ್ತಲೇ ಅಸಮರ್ಥರ ಗುಂಪಿನಲ್ಲಿದ್ದರು ರಕ್ಷಕ್. ಇದೀಗ ಕ್ಯಾಪ್ಟನ್ ಪಟ್ಟ ಮುಡಿಗೇರಿಸಿಕೊಂಡಿದ್ದಾರೆ.
ಇಶಾನಿ ಬಟ್ಟೆ ಪೀಸ್ ಪೀಸ್!
ಮಾಣಿಕ್ಯ ತಂಡ ಟಾಸ್ಕ್‌ನಲ್ಲಿ ಸೋತ ಕಾರಣ ಒಬ್ಬ ಸ್ಪರ್ಧಿಯನ್ನು ಕಳಪೆ ಎಂದು ಘೋಷಿಸಬೇಕಿತ್ತು. ಹೀಗಾಗಿ ತಂಡ ಇಶಾನಿ ಅವರನ್ನು ಆಯ್ಕೆ ಮಾಡಿದೆ. ಸ್ಪರ್ಧಿಗಳು ಇಶಾನಿ ಮೆಚ್ಚಿನ ಬಟ್ಟೆಯನ್ನು ತುಂಡು ತುಂಡಾಗಿ ಕತ್ತರಿಸಿದರು.
ರಣಶಕ್ತಿ ತಂಡ ವಿನ್!
ಮಾಣಿಕ್ಯ ತಂಡವನ್ನು ಮಣಿಸಿ ರಣಶಕ್ತಿ ತಂಡ ಗೆದ್ದಿತ್ತು. ಆದರೆ, ಎರಡೂ ತಂಡಗಳಿಂದ ಸ್ಪರ್ಧಿಗಳನ್ನು ಕ್ಯಾಪ್ಟನ್ ರೇಸ್‌ಗಿಳಿಸಲು ‘ಬಿಗ್ ಬಾಸ್’ ತೀರ್ಮಾನಿಸಿದರು. ಶಿಕ್ಷೆ ಪಡೆದಿದ್ದ ವಿನಯ್ ಗೌಡ, ಭಾಗ್ಯಶ್ರೀ ಹಾಗೂ ಇಶಾನಿ ಕ್ಯಾಪ್ಟನ್ಸಿ ರೇಸ್‌ನಿಂದ ಹೊರಬಿದ್ದರು. ಇದಾದ ಬಳಿಕ ಎರಡೂ ತಂಡದ ಕ್ಯಾಪ್ಟನ್‌ರಾದ ವಿನಯ್ ಹಾಗೂ ಕಾರ್ತಿಕ್ ಅವರಿಗೆ ಬಿಗ್ ಬಾಸ್ ಒಂದು ಟಾಸ್ಕ್ ನೀಡಿತ್ತು. ಮನೆಯಲ್ಲಿ ಹಲವು ಭಾಗಗಳಲ್ಲಿ ಮುಚ್ಚಿಟ್ಟಿರುವ ಸಿ ಅಕ್ಷರದ ಫಲಕಗಳನ್ನು ಹುಡುಕಬೇಕಿತ್ತು. ಕಾರ್ತಿಕ್‌ಗೆ 3 ಫಲಕ ಲಭಿಸಿದರೆ, ವಿನಯ್‌ಗೆ 2 ಸಿಕ್ಕಿತ್ತು. ಬಳಿಕ ಕ್ಯಾಪ್ಡನ್‌ಗಳು ಕ್ಯಾಪ್ಟನ್ಸಿ ಟಾಸ್ಕ್‌ಗಳಿಗೆ ಆಯ್ಕೆ ಮಾಡಬೇಕಿತ್ತು. ಮಾಣಿಕ್ಯ ತಂಡದಿಂದ ರಕ್ಷಕ್ ಮತ್ತು ಸ್ನೇಹಿತ್, ರಣಶಕ್ತಿ ತಂಡದಿಂದ ಕಾರ್ತಿಕ್, ಸಂಗೀತಾ ಮತ್ತು ಮೈಕಲ್ ಅರ್ಹತೆ ಪಡೆದರು.
ಇದನ್ನೂ ಓದಿ: BBK Season 10: ಕೆಲವು ಸಮರ್ಥರಿಗೆ ‘ನಾಲಾಯಕ್’ ಪಟ್ಟ; ಬಿಗ್ ಬಾಸ್ ಸೀಸನ್ 10ರ ಮೊದಲ ಕ್ಯಾಪ್ಟನ್ ಇವರು!
ರಣಶಕ್ತಿಯೇ ಟಾರ್ಗೆಟ್
ಈ ಐವರಲ್ಲಿ ಎಲ್ಲಾ ಸ್ಪರ್ಧಿಗಳು ತಮ್ಮ ಪ್ರಕಾರ ಕ್ಯಾಪ್ಟನ್ ಆಗಲು ಅರ್ಹತೆ ಇಲ್ಲದ ಮೂವರನ್ನು ಸೂಕ್ತ ಕಾರಣಗಳನ್ನ ತಿಳಿಸಿ ಸ್ವಿಮ್ಮಿಂಗ್ ಪೂಲ್‌ಗೆ ತಳ್ಳಬೇಕಿತ್ತು. ಸಂಗೀತಾ ಅವರನ್ನು ವಿನಯ್, ನಮ್ರತಾ, ಇಶಾನಿ ಟಾರ್ಗೆಟ್ ಕೂಡ ಮಾಡಿದರು. ಹೀಗಾಗಿ ಅತಿ ಹೆಚ್ಚು ಬಾರಿ ಸ್ವಿಮ್ಮಿಂಗ್ ಪೂಲ್‌ಗೆ ಸಂಗೀತಾ, ಕಾರ್ತಿಕ್, ಮೈಕಲ್ ಬಿದ್ದರು. ಈ ಮೂವರನ್ನೇ ಮಾಣಿಕ್ಯ ತಂಡ ಟಾರ್ಗೆಟ್ ಮಾಡಿತ್ತು. ಹೀಗಾಗಿ ಸ್ನೇಹಿತ್ ಹಾಗೂ ರಕ್ಷಕ್ ಅತಿ ಕಡಿಮೆ ಬಾರಿ ಸ್ವಿಮ್ಮಿಂಗ್ ಪೂಲ್‌ಗೆ ಬಿದ್ದಿದ್ದರು. ರಕ್ಷಕ್, ಸ್ನೇಹಿತ್ ಕ್ಯಾಪ್ಟನ್ ರೇಸ್‌ಗೆ ಬಂದರು.
ಟಾಸ್ಕ್ ಏನು?
ಆಡುವ ಪ್ರತಿ ಸದಸ್ಯ ಸಿಲಿಂಡರ್ ಆಕಾರಕ್ಕೆ ಸುತ್ತಿರುವ ಹಗ್ಗವನ್ನು ತನ್ನ ಸೊಂಟದ ಮುಂಭಾಗಕ್ಕೆ ಸಿಕ್ಕಿಸಿಕೊಂಡು, ನಂತರ ಹಿಮ್ಮುಖವಾಗಿ ಚಲಿಸಿ, ತನ್ನ ಹಿಂದೆಯಿರುವ ಚೆಂಡುಗಳ ಪೈಕಿ ಏಕಕಾಲಕ್ಕೆ ನಾಲ್ಕು ಚೆಂಡುಗಳನ್ನು ತೆಗೆದುಕೊಂಡು ಸಿಲಿಂಡರ್ ಆಕಾರದ ಪಿರಾಮಿಡ್ ರೀತಿಯಲ್ಲಿ ಜೋಡಿಸಬೇಕು. ಜೋಡಿಸುವಾಗ ಕೆಳಗಿನ ಅಂತಸ್ತಿನಲ್ಲಿ 36 ಚೆಂಡುಗಳು ಕೊನೆಯದಾಗಿ ಒಂದು ಚೆಂಡು ಇರಬೇಕು. ಈ ಟಾಸ್ಕ್‌ನಲ್ಲಿ ರಕ್ಷಕ್ ಗೆದ್ದರು. ಮನೆಯ ಕ್ಯಾಪ್ಟನ್ ಆದರು.
ಬಿಗ್ ಬಾಸ್ ಕಡೆಯಿಂದ ಬಂಪರ್ ಗಿಫ್ಟ್
ಮನೆಯ ಕ್ಯಾಪ್ಟನ್ ಆಗುವ ಪ್ರತಿ ಸದಸ್ಯರಿಗೂ ಅವರ ಪ್ರೀತಿ ಪಾತ್ರರ ಭಾವಚಿತ್ರವನ್ನು ನೀಡಲಾಗುತ್ತದೆ. ಹೀಗೆ ಪ್ರತಿ ಬಾರಿ ಕ್ಯಾಪ್ಟನ್ ಆದವರು ಕ್ಯಾಪ್ಟನ್ ರೂಮ್‌ನಲ್ಲಿ ಈ ಭಾವಚಿತ್ರಗಳನ್ನು ಹಾಕಬೇಕು.
ಬಿಗ್ ಬಾಸ್ ಕಲರ್ಸ್ ಕನ್ನಡದಲ್ಲಿ ಪ್ರತಿ ರಾತ್ರಿ 9.30ಕ್ಕೆ ಪ್ರಸಾರ ಕಾಣುತ್ತಿದೆ. ನೇರಪ್ರಸಾರವನ್ನು ಜಿಯೋ ಸಿನಿಮಾದಲ್ಲಿ ನೋಡಬಹುದು.