ಬಿಗ್‌ಬಾಸ್ ಕನ್ನಡದ (BBK Season 10) ಹತ್ತನೇ ಸೀಸನ್‌ನ ಮೊದಲನೇ ನಾಯಕನಾಗಿ ಸ್ನೇಹಿತ್ ಆಯ್ಕೆಯಾಗಿದ್ದರು. ನಾಯಕನಾದ ಮೇಲೆ ಅವರ ವರ್ತನೆಯೇ ಬದಲಾಗಿದೆ ಎಂದು ಆರಂಭದಲ್ಲಿ ಉಳಿದ ಸ್ಪರ್ಧಿಗಳು ಮಾತಾಡಿಕೊಂಡಿದ್ದರು.
ನಂತರ ಅವರು ತಮ್ಮ ವರ್ತನೆಯನ್ನು ತಿದ್ದಿಕೊಂಡಿದ್ದಾರೆ ಎಂಬ ಮೆಚ್ಚುಗೆಯೂ ವ್ಯಕ್ತವಾಗಿತ್ತು. ಆದರೆ ವಾರವಿಡೀ ಹಲವು ಸಂದರ್ಭಗಳಲ್ಲಿ ಅವರು ಕ್ಯಾಪ್ಟನ್ ಪಾತ್ರವನ್ನು ನಿರ್ವಹಿಸಿದ ಬಗ್ಗೆ ಬೇರೆ ಬೇರೆ ಅಭಿಪ್ರಾಯಗಳು ವ್ಯಕ್ತವಾಗಿದ್ದವು.
ಇದನ್ನೂ ಓದಿ: BBK Season 10: ನಮ್ರತಾ ಬಳಿ ಕಾರ್ತಿಕ್ ಕ್ಷಮೆ; ಮುಗಿದಿಲ್ಲ ಸಂಗೀತಾ-ವಿನಯ್ ಜಟಾಪಟಿ
ಈಗ ಮನೆಮಂದಿಯೆಲ್ಲ ಸೇರಿ ಸ್ನೇಹಿತ್ ಕ್ಯಾಪ್ಟನ್ಸಿಗೆ ಅಂಕಗಳನ್ನು ಕೊಟ್ಟಿದ್ದಾರೆ. ಅಷ್ಟೇ ಅಲ್ಲ, ಸಕಾರಣ ನೀಡಿ ಅವರನ್ನು ಬಿಗ್‌ಬಾಸ್ ಮನೆಯ ಈಜುಕೊಳದಲ್ಲಿ ನೂಕಿದ್ದಾರೆ ಕೂಡ.
ಪ್ರತಿಯೊಬ್ಬರು ನೂಕಿದಾಗಲೂ ನೀರೊಳಗೆ ಬಿದ್ದ ಸ್ನೇಹಿತ್, ಮತ್ತೆ ಎದ್ದುಬಂದು ನಡುಗುತ್ತ ನಿಂತಿದ್ದರು. ಅವರ ಮೈಯಲ್ಲಿ ನಡುಕವಿದ್ದರೆ ಕಣ್ಣೊಳಗೆ ಅಗ್ರೆಸಿವ್‌ನೆಸ್ ಕಾಣಿಸಿತ್ತು. ಸ್ನೇಹಿತ್ ಕ್ಯಾಪ್ಟನ್ಸಿ ಬಗ್ಗೆ ಸ್ಪರ್ಧಿಗಳು ಮಾರ್ಕ್ಸ್ ನೀಡಿ ಅವರ ಕ್ಯಾಪ್ಟನ್ಸಿ ಬಗ್ಗೆ ಅಭಿಪ್ರಾಯ ಹಂಚಿಕೊಂಡರು.
ಕೊನೆಯಲ್ಲಿ ಕ್ಯಾಪ್ಟನ್ಸಿ ಟಾಸ್ಕ್ ಗೆದ್ದಿದ್ದು ಮಾತ್ರ ರಕ್ಷಕ್. ಮುಂದೆ ರಕ್ಷಕ್ ಮನೆಯ ಕ್ಯಾಪ್ಟನ್. ಬಿಗ್‌ಬಾಸ್ ಕನ್ನಡ ಸೀಸನ್ 10 ಕಲರ್ಸ್ ವಾಹಿನಿಯಲ್ಲಿ ಪ್ರತಿರಾತ್ರಿ 9:30ಕ್ಕೆ ಹಾಗೂ ಜಿಯೋ ಸಿನಿಮಾಸ್ನಲ್ಲಿ ಪ್ರತಿದಿನ ಲೈವ್ ಪ್ರಸಾರವಾಗುತ್ತಿದೆ.