Site icon Vistara News

BBK SEASON 10: ಬಿಗ್‌ಬಾಸ್‌ ಮನೆಯಿಂದ ಜೀವನ ಪಾಠ ಕಲಿತೆ; ಸಂಗೀತಾ ಮನದಾಳ

sangeetha

sangeetha

ಬೆಂಗಳೂರು: ದಿಟ್ಟ ಹುಡುಗಿ, ಗಟ್ಟಿ ವ್ಯಕ್ತಿತ್ವದ ಸಂಗೀತಾ ಶೃಂಗೇರಿ ಬಿಗ್‌ಬಾಸ್‌ ಈ ಸೀಸನ್‌ನ (BBK SEASON 10) ಎರಡನೇ ರನ್ನರ್ ಅಪ್ ಆಗಿ ಹೊರಹೊಮ್ಮಿದ್ದಾರೆ. ಮನೆಯೊಳಗೆ ಕಾಣಿಸುತ್ತಿದ್ದ ಹಾಗೆಯೇ ಹೊರಗೂ ಅವರದ್ದು ನೇರ ಮಾತು, ದಿಟ್ಟ ವ್ಯಕ್ತಿತ್ವ. ಜಿಯೊಸಿನಿಮಾಗೆ ಅವರು ನೀಡಿದ ಸಂದರ್ಶನದಲ್ಲಿಯೂ ಆ ನೇರವಂತಿಕೆಯ ಕಿಡಿ ಕಾಣಿಸುತ್ತದೆ. ಅವರ ಜತೆಗಿನ ಸಂದರ್ಶನದ ಪೂರ್ಣಪಾಠ ಇಲ್ಲಿದೆ: https://go.jc.fm/fRhd/gcru6u5j

ತುಂಬಾ ಅಂದ್ರೆ ತುಂಬ ಖುಷಿಯಾಗ್ತಿದೆ. ಬಿಗ್‌ಬಾಸ್ ಕನ್ನಡ 10ನೇ ಸೀಸನ್‌ನ ಸೆಕೆಂಡ್ ರನ್ನರ್ ಅಪ್ ನಾನು. ಇಲ್ಲಿವರೆಗೂ ನನ್ನ ನೋಡ್ತಾನೇ ಬಂದಿದೀರಾ… ಇನ್ಮುಂದೆ ನನ್ನ ಲೈವ್ ನೋಡಕ್ಕಾಗಲ್ಲ. ಹಾಗಾಗಿ ನನ್ನನ್ನು ನೂರ ಹನ್ನೆರಡು ದಿನಗಳವರೆಗೆ ನೇರವಾಗಿ ತೋರಿಸಿ, ಎಲ್ಲಜನರ ಜೊತೆಗೆ ಸಂಪರ್ಕದಲ್ಲಿ ಇರಿಸಿದ್ದಕ್ಕೆ ನಾನು ಜಿಯೊಸಿನಿಮಾಗೆ ಥ್ಯಾಂಕ್ಸ್ ಹೇಳಲೇಬೇಕು. ಈ ಸಲ ಒಂದು ಹೊಸ ಅನಭವ ಇತ್ತು. ಫಿನಾಲೆ ವಾರದಲ್ಲಿ ಆರು ಸ್ಪರ್ಧಿಗಳಿದ್ದರು. ಐದಲ್ಲ. ಆರರಿಂದ ಟಾಪ್‌ 5 ಸೆಲೆಕ್ಟ್ ಆದಾಗಲೂ ಸಾಕಷ್ಟು ಎಕ್ಸೈಟ್‌ಮೆಂಟ್ ಇತ್ತು. ನರ್ವಸ್‌ನೆಸ್ ಕೂಡ ಇತ್ತು. 4ರಿಂದ 3ಬಂದ ನಂತರ ಸುದೀಪ್ ಅವರೇ ಮನೆಯೊಳಗೆ ಬಂದು ನಮ್ಮನ್ನು ಕರೆದುಕೊಂಡು ಹೋದರು. ಇದು ನನ್ನ ಬದುಕಿನಲ್ಲಿಯೇ ಅತ್ಯುತ್ತಮ ಅನುಭವ. ವೇದಿಕೆಯ ಮೇಲೆ ಮೂರು ಬಾಕ್ಸ್‌ಗಳಿದ್ದವು. ಆ ಬಾಕ್ಸ್‌ನಲ್ಲಿ ಒಂದು ರೆಡ್ ಆಗತ್ತೆ ಅಂತ ಹೇಳಿದ್ರು. ಅದು ನನ್ನ ಎಕ್ಸಿಟ್‌, ಸೆಕೆಂಡ್ ರನ್ನರ್ ಅಪ್ ಆಗಿ.
ವಿನ್ನರ್ ಆಗಕ್ಕೆ ಆಗ್ಲಿಲ್ಲ ಅಂತ ಬೇಜಾರಿದೆ. ಆದರೂ ನಾನು ಖುಷಿಯಾಗಿದ್ದೇನೆ. ಯಾಕೆಂದರೆ ಈ ಜರ್ನಿ ಎಷ್ಟು ಅದ್ಭುತವಾಗಿತ್ತು ಅಂದರೆ ನಾನು ತುಂಬ ತುಂಬ ಸ್ಟ್ರಾಂಗ್ ಆಗಿದ್ದೇನೆ ಎಂದು ಸಂಗೀತಾ ಮಾತು ಆರಂಭಿಸಿದರು.

ಜೀವನದಲ್ಲಿ ಸುಮಾರು ಸಮಸ್ಯೆಗಳು ಬರುತ್ತವೆ. ಓಡಿ ಹೋಗಬೇಕು ಅನಿಸುತ್ತದೆ. ನಾನು ಈ ಮನೆಯಲ್ಲಿ ಕಲಿತಿರುವ ಒಂದು ಸಂಗತಿ ಏನೆಂದರೆ ಬಿಟ್ಟು ಕೊಡಬೇಡ; ಆಶಾವಾದಿಯಾಗಿರು ಎನ್ನುವುದು. ಈ ಹೋಪ್ ಅನ್ನುವುದನ್ನು ನಾನು ಮುಂದೆಯೂ ಕ್ಯಾರಿ ಮಾಡ್ತೀನಿ. ಈ ಮನೆಯಲ್ಲಿ ಸಾಕಷ್ಟು ಕಲಿತಿದ್ದೀನಿ. ಬದುಕಿನಲ್ಲಿಯೂ ಸಾಕಷ್ಟು ಕಲಿಯುವುದಿದೆ. ನಾನು ಯಾವತ್ತೂ ಸಮಸ್ಯೆಗಳಿಂದ ಓಡಿಹೋಗುವುದಿಲ್ಲ. ಧೈರ್ಯದಿಂದ ಎದುರಿಸುತ್ತೇನೆ ಎಂದು ಆತ್ಮ ವಿಶ್ವಾಸದಿಂದ ಹೇಳಿದ್ದಾರೆ.

ಮನೆಯೊಳಗೆ ಎಲ್ಲರೂ ಅವರವರ ಗೇಮ್‌ ಅನ್ನು ಜೆನ್ಯೂನ್ ಆಗಿಯೇ ಆಡಿದ್ದೇನೆ. ಅದರಲ್ಲಿ ಯಾವ ಅನುಮಾನವೂ ಇಲ್ಲ. ನಾನು ನನ್ನ ಗೇಮ್‌ ಅನ್ನು ಗೇಮ್‌ ಅಂತಷ್ಟೇ ಆಡಿಲ್ಲ, ಅದನ್ನು ಬದುಕಿದ್ದೀನಿ. ಬೇರೆಯವರ ಬಗ್ಗೆ ನಾನು ಕಮೆಂಟ್ ಮಾಡುವುದಿಲ್ಲ. ನನ್ನ ಗೇಮ್ ಬಗ್ಗೆಯಷ್ಟೇ ನಾನು ಹೇಳಬಹುದು. ಯಾಕೆಂದರೆ ಅಲ್ಲಿ ಉಳಿದುಕೊಳ್ಳಬೇಕು ಅಂದರೆ ಎಲ್ಲರೂ ಅವರವರ ವ್ಯಕ್ತಿತ್ವವನ್ನು ತೋರಿಸಿಕೊಳ್ಳಬೇಕಾಗುತ್ತದೆ. ಯಾರಾದರೂ ಫೇಕ್ ಆಗಿರಲು ಸಾಧ್ಯ ಎಂದು ನನಗೆ ಅನಿಸುತ್ತಿಲ್ಲ. ಅದರಲ್ಲಿಯೂ ಓಪನ್ ನಾಮಿನೇಷನ್ ಎಂದು ಬಿಗ್‌ಬಾಸ್ ಮಾಡಿದ್ದು ತುಂಬ ಒಳ್ಳೆಯದು. ಈ ಸೀಸನ್‌ನಲ್ಲಿ ಯಾವಾಗಲೂ ಕನ್ಫೆಷನ್ ರೂಮಿಗೆ ಹೋಗಿ ಗೊತ್ತಾಗದೆ ಇರುವ ಹಾಗೆ ನಾಮಿನೇಷನ್ ನಡೆಯಲೇ ಇಲ್ಲ ಎಂದು ತಿಳಿಸಿದ್ದಾರೆ.

ಫೇಕ್ ಆಗಿ ಇರಲೇ ಇಲ್ಲ

ಎಲ್ಲಕ್ಕಿಂತ ಈ ಸಲದ ಸೀಸನ್‌ ಯಾಕೆ ವಿಭಿನ್ನ ಆಗಿತ್ತು ಅಂದ್ರೆ ಯಾರೂ ಫೇಕ್ ಆಗಿ ಇರಲೇ ಇಲ್ಲ. ಕಳೆದ ಸೀಸನ್‌ನಲ್ಲಿ ಯಾರು ಯಾರಿಗೆ ವೋಟ್ ಮಾಡಿದ್ದಾರೆ ಎಂದು ಗೊತ್ತೇ ಆಗುತ್ತಿರಲಿಲ್ಲ. ಆದರೆ ಈ ಬಾರಿ ಮುಖದ ಮೇಲೇ ಹೇಳುವುದರಿಂದ ನಮಗೂ ಗೊತ್ತಿರುತ್ತಿತ್ತು. ಇವರಿಗೆ ನಾವು ಇಷ್ಟ, ಇವರಿಗೆ ಇಷ್ಟ ಇಲ್ಲ ಅಂತ. ಹಾಗಾಗಿ ಪ್ರೇಕ್ಷಕರಿಗೂ ಐಡಿಯಾ ಇರ್ತಿತ್ತು. ಅಲ್ಲದೆ ಪ್ರತಿ ಸಲ ಟಾಸ್ಕ್ ಕೊಡುವಾಗಲೂ ತುಂಬ ಕ್ರಿಯೇಟೀವ್ ಆಗಿ ವ್ಯಕ್ತಿತ್ವವನ್ನು ಹೈಲೈಟ್ ಮಾಡುವ ರೀತಿಯಲ್ಲಿ ಟಾಸ್ಕ್‌ ಕೊಡುತ್ತಿದ್ದರು. ಒಂದೊಂದು ವಾರ ಆಗುತ್ತಿರುವ ಹಾಗೆ ಎಲ್ಲರ ವ್ಯಕ್ತಿತ್ವದ ಒಂದೊಂದು ಛಾಯೆ ಎದ್ದು ಕಾಣಿಸುತ್ತಿತ್ತು. ಇದೇ ಕಾರಣಕ್ಕೆ ಈ ಸೀಸನ್ ತುಂಬ ವಿಭಿನ್ನವಾಗಿತ್ತು ಅನಿಸುತ್ತದೆ ಎಂದು ಸಂಗೀತ ವಿವರಿಸಿದ್ದಾರೆ.

ತಮ್ಮ ಪ್ರತಾಪ್‌ ಬಗ್ಗೆ…

ಪ್ರತಾಪ್ ಮತ್ತು ನನ್ನದು ಅಕ್ಕ ತಮ್ಮನ ಬಾಂಡ್‌ ಎಂದು ಎಲ್ಲರೂ ಹೇಳ್ತಾರೆ. ನಮ್ಮ ನಡುವೆ ತುಂಬ ಆಳವಾದ ಫ್ರೆಂಡ್‌ಶಿಪ್‌ ಮೊದಲಿನಿಂದಲೂ ಇತ್ತು. ಮೊದಲಿನಿಂದಲೂ ಅವನ ನಾನು ಸಪೋರ್ಟ್ ಮಾಡ್ತಾ ಬಂದಿದ್ದೆ. ನಡುವೆ ಕೆಲವು ಕಾಲ ಮನಸ್ತಾಪ ಬಂದಿತ್ತು. ಆದರೆ ಕೊನೆಗೆ ಸರಿಹೋಯ್ತು. ಮನಸ್ತಾಪ ಬಂದರೂ ನಾವು ಸರಿಹೋದೆವು. ಯಾಕೆಂದರೆ ನಮ್ಮ ಬಾಂಡಿಂಗ್ ಹಾಗಿತ್ತು. ಆ ಪ್ರೀತಿ ಯಾವತ್ತೂ ಕಡಿಮೆ ಆಗಿಲ್ಲ. ನನಗೆ ಫ್ರೆಂಡ್‌ಶಿಪ್‌ ಆಗೋದು ತುಂಬ ಕಷ್ಟ. ಈ ಮನೆಯಲ್ಲಿ ಪ್ರಾರಂಭದಲ್ಲಿಯೇ ಕಾರ್ತಿಕ್ ಮತ್ತು ತನಿಷಾ ಜತೆಗೆ ಫ್ರೆಂಡ್‌ಶಿಪ್‌ ಆಯ್ತು. ಸಡನ್ ಆಗಿ ಆದ ಫ್ರೆಂಡ್‌ಶಿಪ್‌ ಅಷ್ಟೇ ಸಡನ್ ಆಗಿ ಹೋಗುವ ಸಾಧ್ಯತೆಯೂ ಇರುತ್ತವೆ. ಹಾಗೇ ಆಯ್ತು. ನನ್ನದು ಮತ್ತು ಅವರದು ಕೆಲವು ಚಕಮಕಿ ನಡೆಯಿತು. ಅದು ಕೊನೆಯವರೆಗೂ ಮುಂದುವರಿಯಿತು. ಅವರ ಕಡೆಯಿಂದ ಸರಿಪಡಿಸಿಕೊಳ್ಳಲು ಪ್ರಯತ್ನಿಸಿದರು. ಆದರೆ ಅದನ್ನು ಒಪ್ಪಿಕೊಳ್ಳಲು ನಾನು ಸಿದ್ಧಳಿಲ್ಲ. ಯಾಕೆಂದರೆ ನಾನು ಅಲ್ಲಿ ಬರೀ ಗೇಮ್ ಆಡ್ತಾ ಇರ್ಲಿಲ್ಲ. ನನಗೆ ಬೇಜಾರಾಯ್ತು, ಹರ್ಟ್‌ ಆಯ್ತು ಅಂದರೆ ಅವರನ್ನು ಮಾತಾಡಿಸಲು ತುಂಬ ಕಷ್ಟವಾಗುತ್ತದೆ. ಅದನ್ನೆಲ್ಲ ಬದಿಗಿಟ್ಟು ಅವರನ್ನು ವಿನ್ನರ್ ಅಂತ ನೋಡಿದಾಗ, ಖಂಡಿತ ಅವರು ಅವ್ರ ಗೇಮ್ ಅನ್ನು ತುಂಬ ಚೆನ್ನಾಗಿ ಆಡಿದಾರೆ. ಅವರಿಗೆ ಕಂಗ್ರಾಜುಲೇಷನ್ಸ್ ಹೇಳ್ತೀನಿ ಎಂದು ಹೇಳಿದ್ದಾರೆ.

ವಿನಯ್ ನಾನು ಈ ಮೊದಲು ಒಂದು ಧಾರಾವಾಹಿಯಲ್ಲಿ ನಟಿಸಿದ್ದೆವು. ಅಲ್ಲಿಯೂ ನನಗೂ ಅವರಿಗೂ ಸುಮಾರು ಗಲಾಟೆಗಳು ನಡೆದಿದ್ದವು. ಆದರೆ ಅವ್ರು ಸಹಜವಾಗಿ ಒಳ್ಳೆಯವರು. ಒಳ್ಳೆಯ ವ್ಯಕ್ತಿತ್ವದವರು. ಸ್ವಲ್ಪ ಗಲಾಟೆಗಳು ಆಗ್ತವೆ. ನಾನೂ ಸ್ವಲ್ಪ ನೇರ ವ್ಯಕ್ತಿತ್ವದವಳು. ಮುಖದ ಮೇಲೇ ಹೇಳುತ್ತೇನೆ. ಹಾಗಾಗಿಯೇ ಸ್ವಲ್ಪ ಗಲಾಟೆಗಳು ನಡೆಯುತ್ತಿತ್ತು. ಅದೇ ರೀತಿ ಮನೆಯಲ್ಲಿಯೂ ಗಲಾಟೆಗಳು ಆಗಿವೆ. ಆದರೆ ಪ್ರಾಮಾಣಿಕವಾಗಿ ಹೇಳಬೇಕು ಅಂದರೆ, ಪರಸ್ಪರರ ಬಗ್ಗೆ ನಮಗೆ ಗೌರವ ಇದೆ. ಅದು ಯಾವತ್ತೂ ಇರುತ್ತದೆ ಎಂದು ಭಾವಿಸುತ್ತೇನೆ ಎಂದು ಸಂಗೀತಾ ಅಭಿಪ್ರಾಯ ಪಟ್ಟಿದ್ದಾರೆ.

ಮುಂದಿನ ದಿನಗಳಲ್ಲಿ ಫ್ರೆಂಡ್‌ಶಿಪ್‌ ಮುಂದುವರಿಯುವ ಬಗ್ಗೆ…

ಮುಂದಿನ ದಿನಗಳಲ್ಲಿ ಫ್ರೆಂಡ್‌ಶಿಪ್‌ ಹೇಗೆ ಮುಂದುವರಿಯುತ್ತದೆ ಎಂದು ಹೇಳುವುದು ಕಷ್ಟ. ಯಾಕೆಂದರೆ ನಾನು ಈಗಷ್ಟೇ ನೂರ ಹನ್ನೆರಡು ದಿನಗಳನ್ನು ಕಳೆದು ಹೊರಗೆ ಬರ್ತಿದೀನಿ. ಮನೆಯವರನ್ನು, ಸ್ನೇಹಿತರನ್ನು, ಜನರನ್ನು ಭೇಟಿಯಾಗಬೇಕು. ಹೊರಗೆ ಏನು ನಡೆಯತ್ತಿದೆ ಎಂದು ತಿಳಿದುಕೊಳ್ಳಬೇಕು. ಮನೆಯೊಳಗೆ ಒಂದು ಗೇಮ್ ಆಡ್ತಿದ್ವಿ ಅಂದುಕೊಂಡು, ಅಲ್ಲಿನ ಪ್ರೆಸ್ಟ್ರೇಷನ್, ಕೋಪ, ಸಿಟ್ಟು ಎಲ್ಲವನ್ನೂ ಅಲ್ಲೇ ಬಿಟ್ಟು ಹೊರಗೆ ಹೊಸ ಜೀವನ ಶುರುವಾಗಬಹುದು. ನೋಡಬೇಕು.

ಫನ್‌ ಫ್ರೈಡೆ ಟಾಸ್ಕ್‌ಗಳು ಇಷ್ಟ

ಜಿಯೊಸಿನಿಮಾ ಫನ್‌ ಫ್ರೈಡೆ ಟಾಸ್ಕ್‌ಗಳು ನನಗೆ ಇಷ್ಟ. ಕೆಲವು ಇಟ್ಟಿಗೆಗಳನ್ನು ಇಟ್ಟುಕೊಂಡು ಪಾಸ್ ಮಾಡಿಕೊಂಡು ಹೋಗುವ ಟಾಸ್ಕ್‌ ನಂಗೆ ತುಂಬ ಇಷ್ಟವಾಗಿತ್ತು. ಅದರಲ್ಲಿ ನಾನು ಗೆದ್ದಿದ್ದೇನೆ ಕೂಡ. ಪ್ರತಿ ಸಲ ಜಿಯೊಸಿನಿಮಾ ಟಾಸ್ಕ್‌ಗೆ ಕಾಯುತ್ತಿದ್ದೆವು. ಮ್ಯೂಸಿಕಲ್ ಪಾಟ್‌ ಕೂಡ ಇಷ್ಟವಾಗಿತ್ತು. ಅದರಲ್ಲಿ ನಾನು ಪೌಲ್ ಮಾಡಿದೆ. ಆದರೆ ಹೇಳಲಿಲ್ಲ. ಆದರೂ ನಾನೇ ಒಪ್ಪಿಕೊಂಡು ಹೊರಗೆ ಬಂದಿದ್ದೆ. ಬಿಗ್‌ಬಾಸ್‌ ಮನೆ ನಾನು ತುಂಬ ಅಂದ್ರೆ ತುಂಬ ನೊಂದುಕೊಂಡಿದ್ದ ಜಾಗ. ಯಾವಾಗ ಹೊರಗಡೆ ಬರ್ತೀನೋ ಅಂತ ಕಾಯ್ತಿದ್ದೆ. ಯಾಕೆಂದರೆ ಕೊನೆಯ ಕೆಲವು ವಾರಗಳನ್ನು ಬಿಟ್ಟರೆ ಉಳಿದೆಲ್ಲ ದಿನಗಳಲ್ಲಿ ಇಡೀ ಮನೆಯೇ ನನ್ನ ವಿರುದ್ಧವಿತ್ತು. ಎಲ್ಲರ ಎದುರಿನಲ್ಲಿಯೂ ನಾನು ಪ್ರೂವ್ ಮಾಡಿಕೊಳ್ಳಬೇಕಾಗುತ್ತಿತ್ತು. ಈಗ ಆ ಬಾತ್‌ರೂಮ್‌ ಏರಿಯಾ ಮತ್ತು ಟ್ರಿಯನ್ನು ಮಿಸ್ ಮಾಡ್ಕೋತೀನಿ. ಎಲ್ಲದಕ್ಕಿಂತ ಹೆಚ್ಚಾಗಿ ಮಿರರ್ ಅನ್ನು ಮಿಸ್ ಮಾಡ್ಕೋತೀನಿ. ನನ್ನ ಅರ್ಧ ಜರ್ನಿ ನಾನು ಅದರ ಜತೆಗೇ ಕಳೆದಿದ್ದೇನೆ. ಅಲ್ಲಿರುವ ದೇವಿ ವಿಗ್ರಹವನ್ನು ಮಿಸ್ ಮಾಡ್ಕೋತೀನಿ. ಅದರಿಂದ ತುಂಬ ಶಕ್ತಿ ಪಡೆದುಕೊಂಡಿದ್ದೇನೆ ಎಂದು ಸಂಗೀತಾ ಭಾವುಕರಾದರು.

ಇದನ್ನೂ ಓದಿ: BBK SEASON 10: ʻವಿಟಿʼಯಲ್ಲಿ ಕಾಣಿಸಿಲ್ಲ ಇಶಾನಿ, ರಕ್ಷಕ್‌; ಕಿರಿಕ್‌ಗೆ ತಕ್ಕ ಶಾಸ್ತಿ ಇದು ಅಂದ್ರು ವೀಕ್ಷಕರು!

ನನಗೆ ಬಿಗ್‌ಬಾಸ್‌ ಮನೆಯ ಧ್ವನಿಯ ಮೇಲೆ ಎಷ್ಟು ಕ್ರಶ್ ಇತ್ತು ಎಂದರೆ ಕೊನೆಯ ಗಳಿಗೆಯಲ್ಲಿಯೂ ಅವರಿಗೆ ಏನಾದ್ರೂ ಮಾತಾಡಿ ಬಿಗ್‌ಬಾಸ್ ಎಂದು ಕೇಳಿಕೊಳ್ಳುತ್ತಿದ್ದೆ. ಅಲ್ಲದೆ ನಾನು ಯಾವಾಗ ಕುಗ್ಗಿದ್ದೆನೋ ಆಗೆಲ್ಲ ಬಿಗ್‌ಬಾಸ್ ನನಗೆ ಅಕ್ಷರಶಃ ತುಂಬ ಸಪೋರ್ಟ್‌ ಮಾಡಿದ್ದಾರೆ. ನನ್ನ ಇಡೀ ಜರ್ನಿಯಲ್ಲಿ ಅವರ ಸಪೋರ್ಟ್‌ ತುಂಬ ಇದೆ. ಅದನ್ನು ನಾನು ಎಂದೆಂದಿಗೂ ಮರೆಯಲ್ಲ ಎಂದು ಸಂಗೀತಾ ಹೇಳಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಮೆಂಟ್ ಮೂಲಕ ತಿಳಿಸಿ

Exit mobile version