Site icon Vistara News

BBK SEASON 10: ಬಿಗ್‌ಬಾಸ್‌ ಫಿನಾಲೆ ಟಿಕೆಟ್‌ ಯಾರಿಗೆ?

final

final

ಬೆಂಗಳೂರು: ಹಲವು ವಿಶೇಷತೆಗಳೊಂದಿಗೆ ಆರಂಭವಾದ ಬಿಗ್‌ಬಾಸ್‌ ಕನ್ನಡ ಸೀಸನ್‌ 10 (BBK SEASON 10) ರೋಚಕ ಘಟ್ಟ ತಲುಪಿದೆ. ಇನ್ನು ಕೆಲವೇ ದಿನಗಳಲ್ಲಿ ಸ್ಪರ್ಧೆಯ ಫಿನಾಲೆ ನಡೆಯಲಿದೆ. ಇದೀಗ ಕೊನೆಯ ಹಂತಕ್ಕೆ ಬಂದಿರುವ ಈ ಸ್ಪರ್ಧೆಯ ಫಿನಾಲೆ ಹಂತಕ್ಕೆ ತಲುಪಲಿರುವ ಸ್ಪರ್ಧಿಗಳ ಆಯ್ಕೆ ನಡೆಸುವ ನಿಟ್ಟಿನಲ್ಲಿ ಟಾಸ್ಕ್‌ ನೀಡಲಾಗಿದೆ. ಸದ್ಯ ಈ ಪ್ರೋಮೊ ರಿಲೀಸ್‌ ಆಗಿದ್ದು ವೀಕ್ಷಕರ ಗಮನ ಸೆಳೆದಿದೆ.

ಈ ಬಾರಿಯ ಟಾಸ್ಕ್‌ನಲ್ಲಿ ಗೆದ್ದು ವಾರದ ಕೊನೆಯಲ್ಲಿ ಅತೀ ಹೆಚ್ಚು ಅಂಕಗಳನ್ನು ಗಳಿಸುವ ಸ್ಪರ್ಧಿ ಫಿನಾಲೆ ವಾರಕ್ಕೆ ನೇರವಾಗಿ ಟಿಕೆಟ್‌ ಪಡೆಯುತ್ತಾರೆ ಎಂದು ಬಿಗ್‌ಬಾಸ್‌ ತಿಳಿಸಿದ್ದಾರೆ. ಇದನ್ನು ʼಟಿಕೆಟ್‌ ಟು ಫಿನಾಲೆʼ ಎಂದು ಕರೆಯಲಾಗಿದ್ದು, ತುಕಾಲಿ ಸಂತು, ತನಿಷಾ ಕುಪ್ಪುಂಡ, ಕಾರ್ತಿಕ್‌ ಮಹೇಶ್‌, ವರ್ತೂರ್‌ ಸಂತೋಷ್‌, ನಮ್ರತಾ ಗೌಡ, ವಿನಯ್‌ ಗೌಡ, ಡ್ರೋನ್‌ ಪ್ರತಾಪ್‌ ಮತ್ತು ಸಂಗೀತಾ ಶೃಂಗೇರಿ ಪೈಕಿ ಯಾರು ನೇರವಾಗಿ ಟಿಕೆಟ್‌ ಪಡೆಯುತ್ತಾರೆ ಎನ್ನುವ ಕುತೂಹಲ ಮೂಡಿಸಿದೆ.

ನಾಮಿನೇಟ್‌ ಮಾಡಿದ ಸ್ಪರ್ಧಿಗಳು

ಈ ವಾರದ ನಾಮಿನೇಷನ್‌ ಪ್ರಕ್ರಿಯೆಯನ್ನು ಬಿಗ್‌ಬಾಸ್‌ ವಿಶಿಷ್ಟವಾಗಿ ನಡೆಸಿದ್ದಾರೆ. ಸಂಗೀತಾ ಶೃಂಗೇರಿ ಹೊರತು ಪಡಿಸಿ ಎಲ್ಲ ಸ್ಪರ್ಧಿಗಳ ಎದೆಯ ಮೇಲೆ ಹೃದಯಾಕಾರದ ಬೋರ್ಡ್‌ ಅನ್ನು ನೇತುಹಾಕಲಾಗುತ್ತದೆ. ಎಲ್ಲ ಸ್ಪರ್ಧಿಗಳೂ ತಾವು ನಾಮಿನೇಷನ್ ಮಾಡಲು ಇಚ್ಛಿಸುವ ಇಬ್ಬರು ಸ್ಪರ್ಧಿಗಳ ಹೆಸರು ಹೇಳಿ ಅವರ ಕತ್ತಿನಲ್ಲಿ ತೂಗು ಹಾಕಿದ್ದ ಬೋರ್ಡ್‌ಗೆ ಚೂರಿ ಹಾಕುವ ಚಟುವಟಿಕೆ ನೀಡಲಾಗಿದೆ. ಅದರಂತೆ ಕಾರ್ತಿಕ್‌ ಅವರು ವರ್ತೂರು ಸಂತೋಷ್ ಮತ್ತು ತನಿಷಾ ಅವರ ಹೆಸರನ್ನು ಸೂಚಿಸಿ ಚೂರಿ ಹಾಕಿದ್ದಾರೆ. ಇತ್ತ ತನಿಷಾ ಅವರು ನಮ್ರತಾ ಅವರ ಹೆಸರು ಹೇಳಿದ್ದಾರೆ. ವಿನಯ್‌ ಮತ್ತು ಪ್ರತಾಪ್ ಫೈಟ್‌ನ ಪರಿಣಾಮ ಈ ಚಟುವಟಿಕೆಯಲ್ಲಿಯೂ ಮುಂದುವರಿದಿದ್ದು, ಅವರಿಬ್ಬರು ಪರಸ್ಪರ ಚೂರಿ ಹಾಕಿಕೊಂಡಿದ್ದಾರೆ.

ಭಾವುಕರಾದ ವಿನಯ್‌

ಕಳೆದೆರಡು ವಾರಗಳಿಂದ ವಿನಯ್‌ ಗೌಡ ಸೈಲೆಂಟ್‌ ಆಗಿದ್ದಾರೆ. ಅಗ್ರೆಸ್ಸಿವ್ ಆಗಿ ಆಡುವುದನ್ನು ಬಿಟ್ಟು ತುಂಬ ಶಾಂತ ರೀತಿಯಲ್ಲಿ ವರ್ತಿಸುತ್ತಿದ್ದಾರೆ. ಆದರೆ ಶನಿವಾರದ ವೀಕೆಂಡ್‌ ಪಂಚಾಯಿತಿಯಲ್ಲಿ ಡ್ರೋನ್‌ ಪ್ರತಾಪ್‌ ಅವರು ವಿನಯ್‌ ಬಗ್ಗೆ ʻʻಯಾರೆಲ್ಲ ವಿನಯ್‌ ಅವರ ಜತೆಯಲ್ಲಿ ಇದ್ದರೋ ಅವರೆಲ್ಲ ಮನೆಗೆ ಹೋದರುʼʼ ಎಂಬ ಹೇಳಿಕೆ ನೀಡಿದ್ದಾರೆ. ಈ ಹೇಳಿಕೆ ವಿನಯ್‌ ಅವರಿಗೆ ಕೋಪ ತರಿಸುವಂತೆ ಮಾಡಿತ್ತು.

ʻಯಾರು ಯಾವ ಪುಸ್ತಕ ಬರೆದರೆ ಸೂಕ್ತ’ ಎಂಬ ಚಟುವಟಿಕೆಯನ್ನ ಕಿಚ್ಚ ಸುದೀಪ್‌ ನೀಡಿದ್ದರು. ಬೇರೆಯವರನ್ನ ತುಳಿದು ಬೆಳೆಯೋದು ಹೇಗೆ?’’ ಎಂಬ ಹೆಸರಿನ ಪುಸ್ತಕವನ್ನು ವಿನಯ್‌ ಅವರಿಗೆ ಪ್ರತಾಪ್‌ ನೀಡಿದ್ದರು. ಬಳಿಕ ಕಾರಣವನ್ನು ನೀಡಿ ʻʻಯಾರೆಲ್ಲ ವಿನಯ್‌ ಅವರ ಜತೆಯಲ್ಲಿ ಇದ್ದರೋ ಅವರೆಲ್ಲಾ ಮನೆಗೆ ಹೋದರು. ಮನೆಗೆ ಹೋದವರೆಲ್ಲರ ಬೆಡ್‌ಶೀಟ್‌ ವಿನಯ್‌ ಅವರ ಬೆಡ್‌ಗೆ ಸೇರುತ್ತಿದೆ. ಜತೆಯಲ್ಲಿದ್ದವರ ಸರಿ ತಪ್ಪುಗಳನ್ನ ವಿನಯ್‌ ಹೇಳಲಿಲ್ಲ’’ ಎಂದು ಡ್ರೋನ್ ಪ್ರತಾಪ್‌ ಹೇಳಿದ್ದರು. ಡ್ರೋನ್ ಪ್ರತಾಪ್ ಅವರ ಈ ಮಾತನ್ನ ಕೇಳಿ ವಿನಯ್ ಸುಮ್ಮನಾಗಿದ್ದರು.

ಇದನ್ನೂ ಓದಿ: BBK SEASON 10:  ಎಲ್ಲರಿಗೂ ಮಂಕು ಬೂದಿ ಎರಚಿಕೊಂಡು ಇಲ್ಲೇ ಇದ್ದಾನೆ; ಪ್ರತಾಪ್‌ ಮೇಲೆ ವಿನಯ್‌ ಕೆಂಡ!

ಆದರೆ ಶನಿವಾರದ ಎಪಿಸೋಡ್​ ಬಳಿಕ ವಿನಯ್ ಈ ವಿಷಯದ ಬಗ್ಗೆ ಪ್ರತಾಪ್ ಅವರಿಗೆ ಪ್ರಶ್ನೆ ಮಾಡಿದರು. ಪ್ರತಾಪ್, ‘ʼನಾನು ಈ ಮನೆಯಲ್ಲಿ ಏನು ನೋಡಿದ್ದೇನೆಯೋ ಅದನ್ನು ಹೇಳಿದ್ದೇನೆ’ʼ ಎಂದರು. ʻಈ ಜಗಳ ಆದ ನಂತರ ಸುದೀಪ್‌ ಈ ಬಗ್ಗೆ ಪ್ರಸ್ತಾವನೆ ಮಾಡಿದರು. ʻʻಇವರ ಜತೆ ಇದ್ದು, ತುಳಿದು ನಾನು ಮುಂದೆ ಹೋದೆ ಎನ್ನುವ ಪ್ರತಾಪ್‌ ಮಾತು ಸರಿಯಿರಲಿಲ್ಲʼʼ ಎಂದು ಸುದೀಪ್‌ ಮುಂದೆ ವಿನಯ್‌ ಹೇಳಿದರು. ಅಷ್ಟೇ ಅಲ್ಲ ಈ ರೀತಿಯ ಮಾತುಗಳನ್ನು ಹೇಳಿದಾಗ ನೋವಾಗುತ್ತದೆ ಎಂದು ಭಾವುಕರಾದರು.

ಬಿಗ್​ಬಾಸ್ ಜಿಯೋ ಸಿನಿಮಾಸ್​ನಲ್ಲಿ ಪ್ರತಿದಿನ ಲೈವ್ ಪ್ರಸಾರವಾಗುತ್ತಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಮೆಂಟ್ ಮೂಲಕ ತಿಳಿಸಿ

Exit mobile version