ಬೆಂಗಳೂರು: ಬಿಗ್ ಬಾಸ್ (BBK SEASON 10) ಮನೆಯಲ್ಲಿ ಈ ವಾರ ಕಳಪೆ ಮತ್ತು ಉತ್ತಮ ಪಟ್ಟವನ್ನು ಸ್ಪರ್ಧಿಗಳು ನೀಡಿದ್ದಾರೆ. ಈ ವಾರ ವರ್ತೂರ್ ಸಂತು ಕಳಪೆ ಪಟ್ಟ ಪಡೆದು ಜೈಲಿಗೆ ಸೇರಿದರೆ, ತುಕಾಲಿ ಸಂತು ಅವರು ಅತ್ಯುತ್ತಮರಾಗಿ ಹೊರಹೊಮ್ಮಿದರು. ಈ ವಾರ ಎರಡನೇ ಬಾರಿ ನೀತು ಕ್ಯಾಪ್ಟನ್ ಆದರು. ಈ ವಾರ ಕೂಡ ಉತ್ತಮ ಮತ್ತು ಕಳಪೆಯನ್ನು ವಿನಯ್ ತಂಡ ಚರ್ಚಿಸಿಯೇ ನೀಡಿದೆ.
ಸಂಗೀತಾ ಅವರು “ವರ್ತೂರು ಸಂತೋಷ್ ಅವರು ಮನೆಯಲ್ಲಿ ಇನ್ವಾಲ್ಮೆಂಟ್ ತೋರಿಸ್ತಿಲ್ಲ” ಎಂದು ಹೇಳಿದ್ದಾರೆ. ಮೈಕಲ್ ಅವರು, “ತುಕಾಲಿ ಸ್ಟಾರ್ ಅವರಿಗೆ ಗಾಯ ಆದಾಗ ಸಂಗೀತಾ ಹೂ ಕಿತ್ತುಕೊಂಡರು” ಎಂದರು. ತನಿಷಾ ಅವರು “ಚೆನ್ನಾಗಿ ಆಟ ಆಡಿರೋದಿಕ್ಕೆ ಕಾರ್ತಿಕ್ಗೆ ಉತ್ತಮ ಕೊಡ್ತೀನಿ” ಎಂದಿದ್ದಾರೆ. ಸಂಗೀತಾ ಅವರು “ಇಡೀ ವಾರ ಚೆನ್ನಾಗಿ ಆಟ ಆಡಿರೋದಿಕ್ಕೆ ನಾನು ಕಾರ್ತಿಕ್ಗೆ ಉತ್ತಮ ಕೊಡ್ತೀನಿ” ಎಂದಿದ್ದಾರೆ.
ನಮ್ರತಾ ಗೌಡ, ವಿನಯ್ ಗೌಡ, ಸ್ನೇಹಿತ್ ಅವರು ಮಾತಾಡಿಕೊಂಡು ಕಳಪೆ, ಉತ್ತಮ ಕೊಟ್ಟಿದ್ದಾರೆ. ಈ ಬಗ್ಗೆ ಈ ಮೂವರ ಮಧ್ಯೆ ಚರ್ಚೆಗಳೂ ಆದವು. ಈ ಬಗ್ಗೆ ಸ್ನೇಹಿತ್ ಮಾತನಾಡಿ ʻʻನಾವೇ ಪ್ರತಾಪ್ನನ್ನು ಹೀರೊ ಮಾಡಿದ್ವಿ, ಕಾರ್ತಿಕ್ಗೆ ಉತ್ತಮ ಕೊಟ್ಟಿಲ್ಲ ಅಂದರೆ ಅವನನ್ನು ಜನರಿಗೆ ಅನುಕಂಪ ಬರುತ್ತದೆ” ಎಂದು ಸ್ನೇಹಿತ್ ಹೇಳಿದ್ದಾರೆ. ಇನ್ನು ವಿನಯ್ ಅವರು “ನನಗೆ ಬೇರೆ ಟಾರ್ಗೆಟ್ ಇದೆ” ಎಂದಿದ್ದಾರೆ. ಕಳಪೆ ಆದ ಬಳಿಕ ಸಂಗೀತಾ ಅವರು ಮೈಕಲ್ ಬಗ್ಗೆ ಅಸಮಾಧಾನಗೊಂಡರು.
ಜೈಲಿಗೆ ಹೋಗಿದ್ದ ವರ್ತೂರು ಸಂತೋಷ್ ಅವರು ಇತಿಹಾಸ ಸೃಷ್ಟಿ ಮಾಡಬೇಕು ಎಂದು ಅಲ್ಲಿಂದ ಎಸ್ಕೇಪ್ ಆದರು. ಒಂದು ನಿಮಿಷಗಳ ಕಾಲ ಹೊರಗಡೆ ಇದ್ದ ಸಂತೋಷ್ಗೆ ಸಂತು ಅವರು, “ಶಿಕ್ಷೆ ನಿಮಗೆ ತಮಾಷೆನಾ ಎಂದು ಕೇಳಿದ್ರೆ ಏನು ಮಾಡ್ತೀರಿ?” ಎಂದು ಹೇಳಿದ್ದರು. ಆಗ ಸಂತೋಷ್ ಅವರು ಭಯ ಬಿದ್ದು ಮತ್ತೆ ಜೈಲಿನೊಳಗಡೆ ಹೋಗಿದ್ದಾರೆ.
ಇದನ್ನೂ ಓದಿ: BBK SEASON 10: ಗುಂಪುಗಾರಿಕೆಯ ವಿರುದ್ಧ ಸಿಡಿದೆದ್ದ ಪ್ರತಾಪ್; ಸ್ನೇಹಿತ್ಗೆ ಸಂಗೀತಾ, ನಮ್ರತಾ, ವಿನಯ್ ಸಾಥ್!
12 ಜನರ ಪೈಕಿ ಮೈಕೆಲ್, ಕಾರ್ತಿಕ್ ಹಾಗೂ ವರ್ತೂರು ಸಂತೋಷ್ ಮಾತ್ರ ನಾಮಿನೇಟ್ ಆಗಿಲ್ಲ. ಉಳಿದ ಎಲ್ಲಾ ಸ್ಪರ್ಧಿಗಳ ಮೇಲೆ ನಾಮಿನೇಷನ್ ಒಳಗಾಗಿದ್ದಾರೆ. ನೀತು ಹೊರ ಹೋಗಬಹುದು ಎಂದು ಎಲ್ಲರೂ ಭಾವಿಸಿದ್ದರು. ಆದರೆ, ಅವರು ಈ ವಾರ ಕ್ಯಾಪ್ಟನ್ ಆಗಿದ್ದಾರೆ. ಸ್ನೇಹಿತ್ ಔಟ್ ಆದರೆ ಬೆಸ್ಟ್ ಎಂದಿದ್ದಾರೆ ಪ್ರೇಕ್ಷಕರು.
ಬಿಗ್ಬಾಸ್ ಜಿಯೋ ಸಿನಿಮಾಸ್ನಲ್ಲಿ ಪ್ರತಿದಿನ ಲೈವ್ ಪ್ರಸಾರವಾಗುತ್ತಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ