Site icon Vistara News

BBK Season 10: ಭಾಗ್ಯಶ್ರೀ ಔಟ್‌ ಅಂದ್ರೂ ತೆರೆಯಲಿಲ್ಲ ಬಾಗಿಲು; ಸುದೀಪ್ ಕೊಟ್ಟರು ಟ್ವಿಸ್ಟ್!

Bhagyashree bigg boss Kannada

ಬೆಂಗಳೂರು: ಬಿಗ್‌ ಬಾಸ್‌ ಸೀಸನ್‌ 10ರ (BBK Season 10) ಮೂರನೇ ವಾರ ಎಲಿಮಿನೇಶನ್‌ ನಡೆದಿಲ್ಲ. ಶನಿವಾರದ ಎಪಿಸೋಡ್​ನಲ್ಲಿ ಕಾರ್ತಿಕ್ ಸೇರಿದಂತೆ ಕೆಲವರು ನಾಮಿನೇಷನ್​ನಿಂದ ಸೇಫ್ ಆಗಿರುವ ವಿಷಯ ಘೋಷಿಸಿದ್ದ ಸುದೀಪ್, ಭಾನುವಾರದ ಎಪಿಸೋಡ್​ ಅನ್ನು ತಮಾಷೆಯಾಗಿ ಪ್ರಾರಂಭಿಸಿದರು. ಈ ವಾರ 8 ಸ್ಪರ್ಧಿಗಳು ಎಲಿಮಿನೇಶನ್‌ಗೆ ನಾಮಿನೇಟ್ ಆಗಿದ್ದರು. ಭಾಗ್ಯಶ್ರೀ, ಕಾರ್ತಿಕ್ ಮಹೇಶ್, ತನಿಷಾ ಕುಪ್ಪಂಡ, ಪ್ರತಾಪ್, ವಿನಯ್ ಗೌಡ, ಈಶಾನಿ, ನೀತು ವನಜಾಕ್ಷಿ, ಸ್ನೇಹಿತ್, ಮೈಕಲ್ ಅಜಯ್ ಮುಂತಾದವರು ಈ ಬಾರಿ ನಾಮಿನೇಟ್ ಆಗಿದ್ದರು. ಒಂದು ವೇಳೆ ನಾಮಿನೇಶನ್‌ನಂತೆ ನಡೆದಿದ್ದರೆ ಭಾಗ್ಯಶ್ರೀ ಅವರು ಮನೆಯಿಂದ ಹೊರಗಡೆ ಹೋಗುತ್ತಿದ್ದರು.

ಸುದೀಪ್‌ ಅವರು ಭಾನುವಾರದ ಸಂಚಿಕೆಯನ್ನು ತುಂಬ ತಮಾಷೆಯಾಗಿಯೇ ನಡೆಸಿಕೊಟ್ಟರು. ಮೊದಲಿಗೆ ಮೈಕಲ್​ರನ್ನು ಎಲಿಮಿನೇಷನ್​ನಿಂದ ಪಾರು ಮಾಡಿದರು. ಬಳಿಕ ಸ್ನೇಹಿತ್​ರನ್ನು ಪಾರು ಮಾಡಿದರು. ಹೀಗೆ ಮಾಡುತ್ತಾ ಕೊನೆಗೆ ಉಳಿದಿದ್ದು ಭಾಗ್ಯಶ್ರೀ ಹಾಗೂ ಇಶಾನಿ. ಭಾಗ್ಯಶ್ರೀ ಅವರಿಗೆ ಬ್ಯಾಡ್​ಲಕ್ ಹೇಳಿದ ಸುದೀಪ್, ನೀವು ಬಿಗ್​ಬಾಸ್​ ಮನೆಯಿಂದ ಈ ವಾರ ಎಲಿಮಿನೇಟ್ ಆಗಿದ್ದೀರಿ ಎಂದರು.

ಅಷ್ಟೇ ಅಲ್ಲದೇ ಹೊರಡುವ ಮುನ್ನ ಮೂರು ಸ್ಪರ್ಧಿಗಳನ್ನು ನೇರವಾಗಿ ನಾಮಿನೇಟ್‌ ಮಾಡಿ ಎಂದರು ಕಿಚ್ಚ. ಹೀಗಾಗಿ ಭಾಗ್ಯಶ್ರೀ ಅವರು ಮೈಕಲ್‌, ಇಶಾನಿ ಹಾಗೂ ಪ್ರತಾಪ್‌ ಅವರನ್ನು ನಾಮಿನೇಟ್‌ ಮಾಡಿದರು. ಇದಾದ ಕೂಡಲೇ ಮನೆಯ ಬಾಗಿಲು ತೆರೆದಿಲ್ಲ. ʻʻಭಾಗ್ಯಶ್ರೀ ಅವರೇ ಈ ವಾರ ನೀವು ಬಿಗ್​ಬಾಸ್ ಮನೆಯಿಂದ ಹೊರಗೆ ಹೋಗುತ್ತಿಲ್ಲ. ದಸರಾ ಸಮಯದಲ್ಲಿ ಪ್ರೇಕ್ಷಕ ಪ್ರಭುಗಳು ಈ ಬೇಡಿಕೆ ಇಟ್ಟಿದ್ದರು ಹಾಗಾಗಿ ನಾವದನ್ನು ಈಡೇರಿಸುತ್ತಿದ್ದೀವಿ. ನೀವು ಈ ವಾರ ಹೊರಗೆ ಹೋಗುತ್ತಿಲ್ಲ” ಎಂದರು ಕಿಚ್ಚ.

ಇದನ್ನೂ ಓದಿ: BBK Season 10: ಪ್ರತಾಪ್‌ಗೆ ಗೂಬೆ ಎಂದಿದಕ್ಕೆ ರಕ್ಷಕ್‌ಗೆ ಕಿಚ್ಚನ ಸ್ಪೆಷಲ್ ಟ್ರೀಟ್‌ಮೆಂಟ್!

ಇನ್ನು ಬಿಗ್‌ ಬಾಸ್‌ ಸೀಸನ್‌ಗಳಲ್ಲಿ ಒಂದೊಂದು ವಾರ ಒಂದೊಂದು ಎಲಿಮಿನೇಶನ್ ಆಗಿ, ಒಬ್ಬೊಬ್ಬರು ಮನೆಯಿಂದ ಹೊರಗಡೆ ಹೋಗುತ್ತಾರೆ. ಇನ್ನೊಂದು ವಾರ ಡಬಲ್ ಎಲಿಮಿನೇಶನ್ ಕೂಡ ಇರುತ್ತದೆ. ಇನ್ನೊಮ್ಮೆ ವೈಲ್ಡ್ ಕಾರ್ಡ್ ಎಂಟ್ರಿ ಆಗುತ್ತದೆ.

ಬಿಗ್​ಬಾಸ್ ಕನ್ನಡ ಕಲರ್ಸ್ ವಾಹಿನಿಯಲ್ಲಿ ಪ್ರತಿರಾತ್ರಿ 9:30ಕ್ಕೆ ಹಾಗೂ ಜಿಯೋ ಸಿನಿಮಾಸ್​ನಲ್ಲಿ ಪ್ರತಿದಿನ ಲೈವ್ ಪ್ರಸಾರವಾಗುತ್ತಿದೆ.

Exit mobile version