ಬಿಗ್ ಬಾಸ್ ಒಟಿಟಿ ಸೀಸನ್-1 ಹಿಟ್ ಆದ ಬಳಿಕ ಇದೀಗ ಬಿಗ್ ಬಾಸ್ ಟೆಲಿವಿಷನ್ (Big Boss Kannada) ಶೋ ಕೂಡ ಭರ್ಜರಿಯಾಗಿ ಸಾಗುತ್ತಿದೆ. ಬಿಗ್ ಬಾಸ್-9 ಡಿಫರೆಂಟ್ ಆಗಿ ಶುರುವಾಗಿದ್ದು, ಸ್ಪರ್ಧಿಗಳು ಗೆಲ್ಲಲೇಬೇಕು ಎಂಬ ಒನ್ ಲೈನ್ ಅಜೆಂಡಾ ಜೊತೆಗೆ ಆಟ ಶುರುಮಾಡಿದ್ದಾರೆ. ಹೀಗಾಗಿಯೇ ಬಿಗ್ ಬಾಸ್ ಮನೆಯಲ್ಲಿ ಸ್ಪರ್ಧಿಗಳ ನಡುವೆ ಕಾಳಗ ಶುರುವಾಗಿದೆ.
ಒಂದು ಕಡೆ ಹೋರಾಟಗಾರರ ಕೂಗು ಹೆಚ್ಚಾದರೆ, ಇನ್ನೊಂದು ಕಡೆ ಗಾಸಿಪ್ ಕೂಡ ಹೆಚ್ಚಾಗುತ್ತಿದೆ. ಚಂದನವನದ ನಟ ಅರುಣ್ ಸಾಗರ್ ಬಿಗ್ ಬಾಸ್ ಮನೆಯಲ್ಲಿ ಕಾಮಿಡಿ ಮಾಡಲು ಮುಂದಾಗುತ್ತಿದ್ದಾರೆ. ಕಾವ್ಯಶ್ರೀ ಗೌಡ & ರೂಪೇಶ್ ಶೆಟ್ಟಿ ಬೆಲ್ಟ್ ನಲ್ಲಿ ಬಂಧಿಯಾಗಿದ್ದಾರೆ. ಈ ಕಾರಣಕ್ಕೆ ಸಾನ್ಯ & ರೂಪೇಶ್ ಕುರಿತಾಗಿ ಗುಸು ಗುಸು ಶುರುವಾಗಿದೆ. ಇಷ್ಟೆಲ್ಲದರ ನಡುವೆ 100 ದಿನಗಳ ಸ್ಪರ್ಧೆ ಮತ್ತಷ್ಟು ಕಲರ್ಫುಲ್ ಆಗೋದು ಪಕ್ಕಾ ಆಗುತ್ತಿದೆ.
ಗೆಲುವೇ ಮಂತ್ರ
ಬಿಗ್ ಬಾಸ್-9 ಅಥವಾ ಬಿಗ್ ಬಾಸ್ ಟೆಲಿವಿಷನ್ ಶೋ ಸ್ಪೆಷಲ್ ಆಗಿದೆ. ಏಕೆಂದರೆ ಬಿಗ್ ಬಾಸ್ ಒಟಿಟಿ ಸೀಸನ್-1ರಿಂದ ಆಯ್ದ ಕೆಲವು ಸ್ಪರ್ಧಿಗಳು ಹಾಗೂ ಈ ಹಿಂದೆ ಸ್ಪರ್ಧಿಸಿದ್ದ ಕೆಲವರು ಬಿಗ್ ಬಾಸ್-9ಗೆ ಎಂಟ್ರಿ ಕೊಟ್ಟಿದ್ದಾರೆ. ಹೀಗಾಗಿ ಸೀನಿಯರ್ಸ್ ಹಾಗೂ ಜೂನಿಯರ್ಸ್ ನಡುವೆ ಫೈಟ್ ಕಂಡುಬರುತ್ತಿದೆ. ಹಾಗೇ ಲವ್ ಸ್ಟೋರಿಗಳು ಕೂಡ ವೀಕ್ಷಕರನ್ನ ಸೆಳೆಯುತ್ತಿದ್ದರೆ, ಸ್ಪರ್ಧಿಗಳು ಮಾತ್ರ ಗೆಲುವಿನ ಮಂತ್ರ ಪಠಿಸುತ್ತಿದ್ದಾರೆ.
ಬಿಗ್ ಬಾಸ್ ಮನೆಯಲ್ಲಿ ಇದೀಗ 18 ಸ್ಪರ್ಧಿಗಳಿದ್ದಾರೆ. ಈ ಪೈಕಿ ಒಟ್ಟು 9 ಮಂದಿ ಜೂನಿಯರ್ಸ್ ಹಾಗೇ 9 ಮಂದಿ ಸೀನಿಯರ್ಸ್. ಇನ್ನೂ 100 ದಿನ ಇವರೆಲ್ಲಾ ಒಟ್ಟಿಗೆ ಇದ್ದು ಗೆಲುವಿಗಾಗಿ ಫೈಟ್ ಮಾಡಬೇಕಿದೆ. ಒಟ್ಟಾರೆ ಹೇಳುವುದಾದರೆ ಬಿಗ್ ಬಾಸ್ ಮನೆಯಲ್ಲಿ ಸಂಗ್ರಾಮದ ಬಿಸಿ ಗಾಳಿ ಬೀಸತೊಡಗಿದೆ. ಗೆಲುವಿನ ನಗೆ ಬೀರಲು ಸ್ಪರ್ಧಿಗಳು ಮಾಸ್ಟರ್ ಪ್ಲ್ಯಾನ್ ಮಾಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಟಾಸ್ಕ್ಗಳು ಕೂಡ ಶುರುವಾಗಲಿದ್ದು, ಕಾಳಗಕ್ಕೆ ರಣಕಹಳೆ ಊದುವುದು ಪಕ್ಕಾ. ಹೀಗಾಗಿ ಬಿಗ್ ಬಾಸ್ ಸೀಸನ್-9 ಕ್ಷಣಕ್ಷಣಕ್ಕೂ ಕುತೂಹಲ ಹೆಚ್ಚಾಗುವಂತೆ ಮಾಡುತ್ತಿದೆ.
ಇದನ್ನೂ ಓದಿ: Bigg Boss Kannada | ಬಿಗ್ ಬಾಸ್ ಕನ್ನಡ ಒಟಿಟಿ ಫೈನಲ್: ಈ 4 ಸ್ಪರ್ಧಿಗಳು ಸೀಸನ್ 9ಕ್ಕೆ ಎಂಟ್ರಿ, ಟಾಪರ್ ಆದ ರೂಪೇಶ್!