Site icon Vistara News

Big Boss Kannada | ಮಾಡಿದ್ದು ಉಣ್ಣೋ ಮಹರಾಯ; ಅರ್ಜುನ್‌-ರೂಪೇಶ್‌ ಚಪಾತಿ ಗಲಾಟೆ!

Big Boss Kannada

ಬೆಂಗಳೂರು: ಮಾಡಿದ್ದುಣ್ಣೋ ಮಹರಾಯ ಎಂಬ ಹಳೇ ಗಾದೆಯನ್ನು ನಾವು ಕೇಳಿದ್ದೇವೆ. ಇದರರ್ಥ ಮಾಡಿದ ತಪ್ಪನ್ನು ಆತನೇ ಅನುಭವಿಸಬೇಕು ಎಂದು. ಆದರೆ, ಬಿಗ್‌ ಬಾಸ್‌ ಮನೆಯಲ್ಲಿ (Big Boss Kannada) ಹೊಸ ಗಾದೆ ಹುಟ್ಟಿಕೊಂಡಿದೆ. ಇನ್ನೊಬ್ಬರು ಕಷ್ಟಪಟ್ಟು “ಮಾಡಿದ್ದು ಉಣ್ಣು ಮಹರಾಯ” ಎಂದು ಬದಲಾಗಿದೆ. ಇದೀಗ ರೂಪೇಶ್‌ ಶೆಟ್ಟಿ ಹಾಗೂ ಅರ್ಜುನ್‌ ಮಧ್ಯೆ ಚಪಾತಿ ವಿಷಯಕ್ಕೆ ದೊಡ್ಡ ವಾರ್‌ ಆಗಿದೆ.

ಚಪಾತಿ ತಿನ್ನುವುದಕ್ಕೆ ಆಗಲಿಲ್ಲ ಎಂದು ರೂಪೇಶ್‌ ಶೆಟ್ಟಿ ಅದನ್ನು ಕಸದ ಬುಟ್ಟಿಗೆ ಎಸೆದಿದ್ದರು. ಇದು ಅರ್ಜುನ್‌ ಗಮನಕ್ಕೆ ಬಂದಿದ್ದು, ʻʻಅವರು ಕಷ್ಟಪಟ್ಟು ಅಡುಗೆ ಮಾಡಿರುತ್ತಾರೆ. ಯಾಕೆ ಕಸದ ಬುಟ್ಟಿಗೆ ಹಾಕಿದ್ದೀರಿ? ಎಷ್ಟೋ ಜನ ಬಡವರು ಊಟ ಇಲ್ಲದೆ ಒದ್ದಾಡುತ್ತಿದ್ದಾರೆʼʼ ಎಂದು ರೂಪೇಶ್‌ಗೆ ಕಿವಿ ಮಾತು ಹೇಳಿದ್ದಾರೆ.

ಈ ಮಾತು ರೂಪೇಶ್‌ಗೆ ಕೋಪ ತರಿಸಿದ್ದು ʻʻನಿಮ್ಮ ಈ ಮಾತು ಹಿಂದಕ್ಕೆ ತೆಗೆದುಕೊಳ್ಳಿ, ಮಾಡಿದ್ದು ತಪ್ಪು ಎಂದು ತಿಳಿದಿದೆʼʼ ಎಂದಿದ್ದಾರೆ. ಆಗ ಮಾತಿಗೆ ಮಾತು ಬೆಳೆದಿದ್ದು, ರೂಪೇಶ್‌ ಏಕವಚನದಲ್ಲಿ ಅರ್ಜುನ್‌ ಬಗ್ಗೆ ಮಾತನಾಡಿದ್ದಾರೆ. ಇದು ಅರ್ಜುನ್‌ ಪಿತ್ತ ನೆತ್ತಿಗೇರಲು ಕಾರಣವಾಗಿದೆ. ಗಲಾಟೆ ಆರಂಭವಾಗಿದೆ. ಆಗ ಉಳಿದ ಸ್ಪರ್ಧಿಗಳು ತಡೆಯಲು ಮುಂದಾಗಿದ್ದಾರೆ.

ಇದನ್ನೂ ಓದಿ | Bigg Boss Kannada | ಹಾಸಿಗೆ ಇದ್ದಷ್ಟು ಕಾಸು ಚಾಚು ಅಂದ್ರು ಸೋನು: ಜಾಗರಣೆ ಮಾಡ್ತಿರೋದ್ಯಾಕೆ?

ರೂಪೇಶ್‌ ಸಹ ಧ್ವನಿ ಏರಿಸಿದ್ದು ʻʻನಾನು 5000 ಆಹಾರ ಕಿಟ್‌ ವಿತರಣೆ ಮಾಡಿದ್ದೇನೆ. ನನ್ನನ್ನು ನೆಗೆಟಿವ್‌ ಮಾಡುವ ಉದ್ದೇಶದಿಂದ ಹೀಗೆ ಮಾತನಾಡುತ್ತಿದ್ದಾರೆʼʼ ಎಂದರು. ಸಾನ್ಯ ಈ ಬಗ್ಗೆ ರೂಪೇಶ್‌ ಬಳಿ ʻʻಅರ್ಜುನ್‌ ಅವರು ರಾಜಕಾರಣಿ, ಅವರು ನಿಮ್ಮನ್ನು ಬೇಕೆಂದೇ ಕೆಣಕುತ್ತಿದ್ದಾರೆʼʼ ಎಂದು ಸಮಾಧಾನಪಡಿಸಿದ್ದಾರೆ.

ಇನ್ನು ಸೋನು ಗೌಡ ಅವರು ಈ ಗಲಾಟೆಗೆ ಬೇರೆಯದ್ದೇ ಆಯಾಮ ನೀಡಿದ್ದು, ಅರ್ಜುನ್‌ ಜತೆ ಸ್ಪರ್ಧಿಗಳು ಪಾಸಿಟಿವ್‌ ಆಗಿ ಮಾತನಾಡಿದರೆ, ರೂಪೇಶ್‌ ಬಳಿ ಹೋಗಿ ಇನ್ನೊಂದು ರೀತಿ ಮಾತನಾಡುತ್ತಾರೆ. ಇವರೆಲ್ಲ ಫೇಕ್‌ ಸ್ಪರ್ಧಿಗಳು ಎಂದು ಆರ್ಯವರ್ಧನ್‌ ಗುರೂಜಿ ಮುಂದೆ ಹೇಳಿಕೊಂಡಿದ್ದಾರೆ.

ಇದನ್ನೂ ಓದಿ | Bigg Boss Kannada | ವಿಸ್ತಾರ ನ್ಯೂಸ್‌ ಜತೆ ಕಿರಣ್‌ ಯೋಗೇಶ್ವರ್‌ ಎಕ್ಸ್‌ಕ್ಲೂಸಿವ್‌ ಮಾತು!

Exit mobile version